ದೇಶ-ವಿದೇಶ
ಜಲ್ಲಿಕಲ್ಲು ಸಾಗಿಸುತ್ತಿದ್ದ ಲಾರಿ ಕಾರಿನ ಮೇಲೆ ಉರುಳಿ ಒಂದೇ ಕುಟುಂಬದ 7 ಜನ ಸಾವು
ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ ಜಲ್ಲಿಕಲ್ಲು ಸಾಗಿಸುತ್ತಿದ್ದ ಲಾರಿ ಕಾರಿನ ಮೇಲೆ ಉರುಳಿ ಒಂದೇ ಕುಟುಂಬದ ಏಳು ಜನ ಮೃತಪಟ್ಟಿದ್ದಾರೆ. ಅತಿ ವೇಗವಾಗಿ ಬರುತ್ತಿದ್ದ ಲಾರಿ ಚಾಲಕನ ನಿಯಂತ್ರಣ ಕಳೆದುಕೊಂಡು ಪಕ್ಕದಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಉರುಳಿದೆ. ಲಾರಿಯಲ್ಲಿದ್ದ ಜಲ್ಲಿಕಲ್ಲು ಕಾರಿನ ಮೇಲೆ ಬಿದ್ದಿದೆ. ಲಾರಿ ಮತ್ತು ಮತ್ತು ಜಲ್ಲಿಕಲ್ಲುಗಳ ಅಡಿಯಲ್ಲಿ ಸಿಲುಕಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಅಪಘಾತದ ತೀವ್ರತೆಗೆ 5 ಅಡಿ ಉದ್ದದ ಕಾರು 2 ಅಡಿ ಆಗಿ ಹೋಗಿದೆ.
ರಸಗೊಬ್ಬರಕ್ಕಾಗಿ ಎರಡು ದಿನ ರಾತ್ರಿ ಹಗಲು ಸರತಿಯಲ್ಲಿದ್ದ ಮಹಿಳೆ ಸಾವು
ಮಧ್ಯಪ್ರದೇಶದ ಗುನಾ ಜಿಲ್ಲೆಯಲ್ಲಿ ರಸಗೊಬ್ಬರ ಪಡೆಯಲು ವಿತರಣಾ ಕೇಂದ್ರದ ಎದುರು ಸತತ ಎರಡು ದಿನ ಸರತಿ ಸಾಲಿನಲ್ಲಿ ನಿಂತಿದ್ದ ರೈತ ಮಹಿಳೆ ಮೃತಪಟ್ಟಿದ್ದಾರೆ. ಭ್ರೂಯಾ ಬಾಯಿ ಮೃತ ಮಹಿಳೆ ಎಂದು ಗುರುತಿಸಲಾಗಿದೆ. ಮಂಗಳವಾರದಿಂದ ಅವರು ಬಿಸಿಲು-ಗಾಳಿಯಲ್ಲಿ ರಸಗೊಬ್ಬರಕ್ಕಾಗಿ ಕಾಯುತ್ತಿದ್ದರು. ಇದು ದೇಶದಲ್ಲಿನ
ಡಿಸೆಂಬರ್ 4-5ರಂದು ಭಾರತಕ್ಕೆ ಭೇಟಿ ನೀಡಲಿರುವ ರಷ್ಯಾ ಅಧ್ಯಕ್ಷ ಪುಟಿನ್
ಮಾಸ್ಕೊ: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಡಿಸೆಂಬರ್ 4 ಮತ್ತು5ರಂದು ಭಾರತಕ್ಕೆ ಭೇಟಿ ನೀಡಲಿದ್ದಾರೆ. ಭಾರತ- ರಷ್ಯಾ 23ನೇ ದ್ವಿಪಕ್ಷೀಯ ವಾರ್ಷಿಕ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪುಟಿನ್ ಎರಡು ದಿನಗಳ ಕಾಲ ಭಾರತಕ್ಕೆ ಭೇಟಿ ನೀಡಲಿದ್ದು, ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುವ ಸಾಧ್ಯತೆ
ಕಾಸಾಗ್ರಾಂಡ್ ಪ್ರಾಫಿಟ್ ಶೇರ್: ಉದ್ಯೋಗಿಗಳಿಗೆ ಒಂದು ವಾರ ಲಂಡನ್ ಪ್ರವಾಸ
ಚೆನ್ನೈ ಮೂಲದ ರಿಯಲ್ ಎಸ್ಟೇಟ್ ಕಂಪನಿ ಕಾಸಾಗ್ರಾಂಡ್ ತನ್ನ ಉದ್ಯೋಗಿಗಳಿಗೆ ನೀಡುವ ವಾರ್ಷಿಕ ಪ್ರಾಫಿಟ್ ಶೇರ್ ಬೋನಾಂಜಾ ಸ್ಕೀಮ್‌ನಡಿ 1,000 ಉದ್ಯೋಗಿಗಳನ್ನು ಲಂಡನ್‌ಗೆ ಒಂದು ವಾರದ ಪ್ರವಾಸಕ್ಕೆ ಕಳಿಸುತ್ತಿರುವುದಾಗಿ ಪ್ರಕಟಿಸಿದೆ. ಹಲವು ಸಂಸ್ಥೆಗಳು , ಕಂಪೆನಿಗಳು ನಾನಾ ರೂಪಗಳಲ್ಲಿ ವಾರ್ಷಿಕ ಬೋನಸ್
10,000 ಕ್ಯಾಲೊರಿ ಜಂಕ್ ಫುಡ್ ತಿಂದ ಫಿಟ್ನೇಸ್ ಕೋಚ್ ಸಾವು
ರಷ್ಯಾದ ಫಿಟ್ನೆಸ್ ಕೋಚ್ ಹಾಗೂ ಇನ್ ಫ್ಲ್ಯೂಯೆನ್ಸರ್ ತೂಕ ಇಳಿಕೆ ಕಾರ್ಯಕ್ರಮದಲ್ಲಿ ಜಂಕ್ ಫುಡ್ ತಿನ್ನುವ ಸ್ಪರ್ಧೆ ನಂತರ ರಾತ್ರಿ ಮಲಗಿದ್ದಾಗ ಚಿರನಿದ್ರೆಗೆ ಜಾರಿದ್ದಾರೆ. 30 ವರ್ಷದ ರಷ್ಯಾದ ಫಿಟ್ನೆಸ್ ಕೋಚ್ ಡಿಮಿಟ್ರಿ ನ್ಯೂಯಾಜಿನ್ ರಷ್ಯಾದ ಓರೆನ್ ಬರ್ಗ್ ನಗರದಲ್ಲಿ ಜಂಕ್
ಶ್ರೀಲಂಕಾದಲ್ಲಿ ಭೀಕರ ಮಳೆ, ಭೂಕುಸಿತಕ್ಕೆ 56 ಮಂದಿ ಬಲಿ
ಶ್ರೀಲಂಕಾದಲ್ಲಿ ನಿರಂತರವಾಗಿ ಧಾರಾಕಾರ ಮಳೆ ಸುರಿಯುತ್ತಿದ್ದು, ಹಲವೆಡೆ ಪ್ರವಾಹ, ಅಲ್ಲಲ್ಲಿ ಭೂಕುಸಿತಗಳುಂಟಾಗಿ 56 ಮಂದಿ ಮೃತಪಟ್ಟಿದ್ದಾರೆ. ಜನಜೀವನ ದುಸ್ತರವಾಗಿ ಪರಿಣಮಿಸಿದೆ. ನಿರಂತರ ಮಳೆಯಿಂದಾಗಿ ಎಲ್ಲೆಡೆ ನೀರು ಆವರಿಸಿದ್ದು, 600ಕ್ಕೂ ಹೆಚ್ಚು ಮನೆಗಳು ತೀವ್ರ ಹಾನಿಗೊಂಡಿವೆ. ಶುಕ್ರವಾರ ಎಲ್ಲಾ ಸರ್ಕಾರಿ ಕಚೇರಿಗಳು ಮತ್ತು
ಪಾಕಿಸ್ತಾನದ ಮೂರೂ ಸೇನೆಗಳ ಮೇಲೆ ಅಸೀಮ್ ಮುನೀರ್ ಗೆ ಪರಮಾಧಿಕಾರ!
ಇಸ್ಲಮಾಬಾದ್: ವಾಯುಸೇನೆ, ನೌಕಾಪಡೆ ಹಾಗೂ ಭೂಸೇನೆ ಸೇರಿದಂತೆ ಎಲ್ಲಾ ಮೂರು ಮಾದರಿಯ ಸೇನೆ ಹಾಗೂ ಅಣ್ವಸ್ತ್ರ ಪರಮಾಧಿಕಾರವನ್ನು ಸೇನಾ ಮುಖ್ಯಸ್ಥ ಅಸೀಮ್ ಮುನೀರ್ ಗೆ ನೀಡಲಾಗಿದೆ. ಸಂವಿಧಾನದ 27ನೇ ವಿಧಿಯನ್ನು ಪರಿಷ್ಕರಿಸಿ ಇದೇ ಮೊದಲ ಬಾರಿಗೆ ಪಾಕಿಸ್ತಾನದ ಎಲ್ಲಾ ಮಾದರಿಯ ಸೇನೆ
9 ಭಾಷೆಗಳಲ್ಲಿ ಸಂವಿಧಾನದ ಡಿಜಿಟಲ್ ಆವೃತ್ತಿ ಬಿಡುಗಡೆಗೊಳಿಸಿದ ರಾಷ್ಟ್ರಪತಿ
ನವದೆಹಲಿ: 75ನೇ ಸಂವಿಧಾನ ದಿನದ ಅಂಗವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು 9 ಭಾಷೆಗಳಲ್ಲಿ ಭಾರತದ ಸಂವಿಧಾನದ ಡಿಜಿಟಲ್ ಆವೃತ್ತಿ ಬಿಡುಗಡೆಗೊಳಿಸಿದ್ದಾರೆ. ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಮುರ್ಮು ಮಲಯಾಳಂ, ಮರಾಠಿ, ನೇಪಾಳಿ, ಪಂಜಾಬಿ, ಬೋಡೋ, ಕಾಶ್ಮೀರಿ, ತೆಲುಗು, ಒಡಿಯಾ
ಹಾಂಕಾಂಗ್ ಬಹುಮಹಡಿ ಕಟ್ಟಡದಲ್ಲಿ ಅಗ್ನಿ ದುರಂತ: 44 ಮಂದಿ ಬಲಿ, 279 ಮಂದಿ ನಾಪತ್ತೆ!
ಹಾಂಕಾಂಗ್ ನ 7 ಅಂತಸ್ತುಗಳ ಬಹುಮಹಡಿ ಕಟ್ಟಡದಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ 44 ಮಂದಿ ಮೃತಪಟ್ಟು 279 ಮಂದಿ ನಾಪತ್ತೆಯಾಗಿರುವ ಘಟನೆ ಬುಧವಾರ ತಡರಾತ್ರಿ ಸಂಭವಿಸಿದೆ. ನ್ಯೂ ಟೆರಿಟರಿಗಳ ಉಪನಗರವಾದ ತೈ ಪೋ ಜಿಲ್ಲೆಯ ವಸತಿ ಸಮುಚ್ಚಯದಲ್ಲಿ ಭಾರತೀಯ ಕಾಲಮಾನ
ಆಧಾರ್ ಇದ್ದರೆ ನುಸುಳುಕೋರರನ್ನೂ ಮತದಾರರೆಂದು ಪರಿಗಣಿಸಬೇಕೇ: ಸುಪ್ರೀಂ ಪ್ರಶ್ನೆ
ಆಧಾರ್ ಹೊಂದಿದ್ದಾರೆ ಎಂದ ಮಾತ್ರಕ್ಕೆ ನುಸುಳುಕೋರರನ್ನೂ ದೇಶದ ಮತದಾರರೆಂದು ಪರಿಗಣಿಸಬೇಕೇ ಎಂದು ಸುಪ್ರೀಂಕೋರ್ಟ್ ಪ್ರಶ್ನಿಸಿದೆ. ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ ವಿರೋಧಿಸಿ ಹಲವು ಅರ್ಜಿಗಳು ಸುಪ್ರೀಂಕೋರ್ಟ್‌ಗೆ ಸಲ್ಲಿಕೆಯಾಗಿವೆ. ಈ ಸಂಬಂಧ ಹಿರಿಯ ವಕೀಲ ಕಪಿಲ್ ಸಿಬಲ್, ಎಲ್ಲರ ಬಳಿ ಆಧಾರ್ ಕಾರ್ಡ್




