Menu

63,000 ಕೋಟಿ ವೆಚ್ಚದಲ್ಲಿ 26 ರಾಫೆಲ್ ಯುದ್ಧ ವಿಮಾನ ಖರೀದಿಗೆ ಕೇಂದ್ರ ಅಸ್ತು

ನವದೆಹಲಿ: ಸಮುದ್ರದಲ್ಲಿ ಕಣ್ಗಾವಲು ಇಡುವ ಉದ್ದೇಶದಿಂದ 26 ರಾಫೆಲ್ ಎಂ ಯುದ್ಧ ವಿಮಾನಗಳ ಖರೀದಿಗೆ 63 ಸಾವಿರ ಕೋಟಿ ರೂ. ವಿನಿಯೋಗಿಸಲು ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಭಾರತದ ನೌಕಾಪಡೆಗೆ ಬಲ ತುಂಬಲು ಕೇಂದ್ರ ಅತೀ ದೊಡ್ಡ ಮೊತ್ತ ವಿನಿಯೋಗಿಸಲು ತೀರ್ಮಾನಿಸಲಾಗಿದ್ದು, ಮಾಸಾಂತ್ಯದಲ್ಲಿ ಫ್ರಾನ್ಸ್ ರಕ್ಷಣಾ ಸಚಿವರೊಂದಿಗೆ ರಾಫೆಲ್ ಖರೀದಿ ಕುರಿತು ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆ ಇದೆ. ರಾಫೆಲ್ ಯುದ್ಧ ವಿಮಾನಗಳ ಪೂರ್ಣ ಪ್ಯಾಕೇಜ್ ಗೆ ಒಪ್ಪಂದ ಮಾಡಿಕೊಳ್ಳಲಾಗುವುದು.

ಚಿನ್ನಾಭರಣ ದರೋಡೆ ಪ್ರಕರಣದಲ್ಲಿ ಮತ್ತೆ ಐವರು ಅರೆಸ್ಟ್‌

ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ವಿ ಕೋಟ ನಾಕಿನೇರಿ ಘಾಟ್ ಬಳಿ ಚೆನ್ನೈನಿಂದ ಕೆಜಿಎಫ್‍ಗೆ ತರುತ್ತಿದ್ದ ಚಿನ್ನಾಭರಣವನ್ನು ದರೋಡೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಜಿಎಫ್‌ ಪೊಲೀಸರು ಮತ್ತೆ ಐದು ಮಂದಿಯನ್ನು ಬಂಧಿಸಿದ್ದಾರೆ. ಮೂರುವರೆ ಕೋಟಿ ರೂ. ಮೌಲ್ಯದ 3.5 ಕೆಜಿ ಚಿನ್ನಾಭರಣ ದೋಚಿದ್ದ

ಡಿಜಿಟಲ್ ಹೆಚ್ಚು ಬಳಕೆಯಿಂದ ನಿದ್ರಾಹೀನತೆ ಸಮಸ್ಯೆ: ವಾಕೇಫಿ ಸಮೀಕ್ಷೆ ವರದಿ

ಬೆಂಗಳೂರು: D2C ನಿದ್ರೆ ಮತ್ತು ಗೃಹಪರಿಹಾರಗಳನ್ನು ಒದಗಿಸುವ Wakefit.co, ತನ್ನ ಇನ್-ಹೌಸ್ ವಾರ್ಷಿಕ ಸರ್ವೇಕ್ಷಣೆ ಗ್ರೇಟ್ ಇಂಡಿಯನ್ ಸ್ಲೀಪ್ ಸ್ಕೋರ್ ಕಾರ್ಡ್ (GISS) 2025ದ 8ನೆ ಆವೃತ್ತಿಯನ್ನು ಪ್ರಸ್ತುತಪಡಿಸಿ ಭಾರತದ ಬದಲಾಗುತ್ತಿರುವ ನಿದ್ರಾ ಪ್ರವೃತ್ತಿಗಳ ಕುರಿತು ಮಾಹಿತಿ-ಚಾಲಿತ ದೃಷ್ಟಿಕೋನ ಒದಗಿಸಿದೆ. ಇತ್ತೀಚಿನ

ಮದುವೆಗೆ ಕೆಲವೇ ದಿನಗಳಿರುವಾಗ ಮಗಳ ಭಾವಿ ಪತಿಯೊಂದಿಗೆ ತಾಯಿ ಪರಾರಿ

ಅಲಿಘಡದ ಮಂಡ್ರಾಕ್ ಪ್ರದೇಶದಲ್ಲಿ ಭಾವಿ ಅಳಿಯನೊಂದಿಗೆ 40 ವರ್ಷದ ಮಹಿಳೆಯೊಬ್ಬರು ಓಡಿ ಹೋಗಿರುವ ಪ್ರಕರಣ ನಡೆದಿದೆ. ಮಗಳ ವಿವಾಹ ಏಪ್ರಿಲ್ 16 ರಂದು ನಡೆಯಬೇಕಿತ್ತು. ಮದುವೆಗೆ ಕೆಲವೇ ದಿನಗಳಿರುವಾಗ ತಾಯಿಯು 2.5 ಲಕ್ಷ ರೂ. ನಗದು ಮತ್ತು ಆಭರಣಗಳನ್ನು ತೆಗೆದುಕೊಂಡು ಮಗಳ

ರಿಪೋ ದರ ಕಡಿತಗೊಳಿಸಿದ ಆರ್‌ಬಿಐ

ಭಾರತೀಯ ರಿಸರ್ವ್ ಬ್ಯಾಂಕ್ ರಿಪೋ ದರಗಳನ್ನು 25 ಮೂಲಾಂಕಗಳಷ್ಟು ಕಡಿತಗೊಳಿಸಿದೆ. ಆರ್​​ಬಿಐ ಮಾನಿಟರಿ ಪಾಲಿಸಿ ಕಮಿಟಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಆರ್​​ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಹೇಳಿದ್ದಾರೆ. ರಿಪೋ ದರವನ್ನು ಶೇ. 6.25ರಿಂದ ಶೇ 6ಕ್ಕೆ ಇಳಿಸಿರುವುದಾಗಿ ಮಾಹಿತಿ

ಭಾರತಕ್ಕೆ ಇನ್ನಷ್ಟು ಗೋಡೆಗಳು, ದ್ವೇಷ ಬೇಕಿಲ್ಲ, ಸೇತುವೆಗಳು, ಆಶಾವಾದ ಬೇಕು: ಸಿಎಂ ಸಿದ್ದರಾಮಯ್ಯ

ಭಾರತಕ್ಕೆ ಇನ್ನಷ್ಟು ಗೋಡೆಗಳ ಅವಶ್ಯಕತೆಯಿಲ್ಲ. ಅದಕ್ಕೆ ಬೇಕಿರುವುದು ಸೇತುವೆಗಳು. ಭಾರತಕ್ಕೆ ಇನ್ನಷ್ಟು ದ್ವೇಷವಲ್ಲ,  ಇನ್ನಷ್ಟು ಆಶಾವಾದದ ಅಗತ್ಯವಿದೆ. ವ್ಯಕ್ತಿತ್ವವನ್ನು ದ್ವೇಷದ ಮೇಲೆ ಕಟ್ಟಲಾಗುವುದಿಲ್ಲ, ಈ ದೇಶವನ್ನು ಒಗ್ಗಟ್ಟು, ಪ್ರೀತಿ ಮತ್ತು ಸತ್ಯದ ಆಧಾರದ ಮೇಲೆ ಕಟ್ಟಬೇಕು ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದನ್ನು

ತಮಿಳುನಾಡು ರಾಜ್ಯಪಾಲ ರವಿ ಕಾರ್ಯವೈಖರಿ ಕಾನೂನು ಬಾಹಿರವೆಂದು ಸುಪ್ರೀಂ ತರಾಟೆ

ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ಅವರು 10 ಪ್ರಮುಖ ಮಸೂದೆಗಳಿಗೆ ಒಪ್ಪಿಗೆ ನೀಡುವುದನ್ನು ತಡೆಹಿಡಿ ಯುವ ನಿರ್ಧಾರ ಕೈಗೊಂಡಿರುವುದು ಕಾನೂನುಬಾಹಿರ ಮತ್ತು ಅನಿಯಂತ್ರಿತ ಎಂದು ಸುಪ್ರೀಂಕೋರ್ಟ್‌ ಮಹತ್ವದ ತೀರ್ಪು ನೀಡಿದೆ. ಒಪ್ಪಿಗೆ ನೀಡದೆ ರಾಜ್ಯಪಾಲರು ಮಸೂದೆಗಳನ್ನು ರಾಷ್ಟ್ರಪತಿಗಳಿಗೆ ಕಾಯ್ದಿರಿಸಲು ಸಾಧ್ಯವಿಲ್ಲ ಎಂದು

ಜನಾಕ್ರೋಶ ಯಾತ್ರೆ ಪ್ರಹಸನ: ರಾಜ್ಯ ಬಿಜೆಪಿ ನಾಯಕರಿಗೆ ಮೋದಿ ಕಪಾಳಮೋಕ್ಷ

ಪ್ರಧಾನಿ ನರೇಂದ್ರ ಮೋದಿಯವರು ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ ಬೆಲೆಯನ್ನು ಹೆಚ್ಚಿಸುವ ಮೂಲಕ ಜನಾಕ್ರೋಶ ಯಾತ್ರೆ ಎಂಬ ಪ್ರಹಸನವನ್ನು ಶುರುಮಾಡಿರುವ ರಾಜ್ಯದ ಬಿಜೆಪಿ ನಾಯಕರಿಗೆ ಮುಟ್ಟಿ ನೋಡಿಕೊಳ್ಳು ವಂತೆ ಕಪಾಳಮೋಕ್ಷ ಮಾಡಿದ್ದಾರೆ. ಈ ಸಂಬಂಧ ಮಾಧ್ಯಮ ಪ್ರಕಟಣೆ ನೀಡಿರುವ ಸಿಎಂ, ಬೆಲೆ

ಕೃಷ್ಣಾ -ಕಾವೇರಿ ಜಲಹಂಚಿಕೆಯಲ್ಲಿ ರಾಜ್ಯವೆಂದೂ ನೀರುಗಂಟಿಯೇ…!

ಕರ್ನಾಟಕದ ಜನತೆಯ ಪಾಲಿಗೆ ಆಲಮಟ್ಟಿ, ತುಂಗಭದ್ರಾ, ಕೆಆರ್‌ಎಸ್ ಅಣೆಕಟ್ಟುಗಳು ಕಾಮಧೇನುವಲ್ಲ, ಕಲ್ಪ ವೃಕ್ಷವೂ ಆಗಿಲ್ಲ. ಏಕೆಂದರೆ ನದಿದಂಡೆ ಮೇಲಿನ ಭಾಗದಲ್ಲಿರುವ ರಾಜ್ಯಕ್ಕೆ ಇದುವರೆಗೆ ಸಿಕ್ಕಿದ್ದು ಬೊಗಸೆ ನೀರು. ಆದರೆ ಆಂಧ್ರ ಮತ್ತು ತಮಿಳುನಾಡಿಗೆ ದೊರೆತಿದ್ದು ಹಂಡೆಯಷ್ಟು.. ಕೃಷ್ಣಾ – ಕಾವೇರಿ ನದಿ

ಅಕ್ಕಿ ರಫ್ತು ಮೇಲೆ ಹೊಸ ಸುಂಕ ನಿಯಮ ಮೇ 1ರಿಂದ ಜಾರಿಗೆ ಕೇಂದ್ರದ ಆದೇಶ

ಚಂಡೀಗಢ: ಕೇಂದ್ರ ಸರ್ಕಾರ ಮೇ 1ರಿಂದ ಅಕ್ಕಿ ರಫ್ತಿನ ಮೇಲೆ ಹೊಸ ಸುಂಕ ನಿಯಮವನ್ನು ಜಾರಿಗೆ ತರಲಿದೆ. ಸಂಸ್ಕರಣಾ ವಿಧಾನ, ವೈವಿಧ್ಯತೆ ಮತ್ತು ಜಿಐ ಟ್ಯಾಗಿಂಗ್ ಆಧಾರದ ಮೇಲೆ ಅಕ್ಕಿಯನ್ನು ವರ್ಗೀಕರಿಸಲು ಈ ಆಡಳಿತವು ಪ್ರಯತ್ನಿಸುತ್ತದೆ. ಇದು ಭಾರತೀಯ ಅಕ್ಕಿಯ ಜಾಗತಿಕ