Menu

ಪಾಕಿಸ್ತಾನದ ಮೂರೂ ಸೇನೆಗಳ ಮೇಲೆ ಅಸೀಮ್ ಮುನೀರ್ ಗೆ ಪರಮಾಧಿಕಾರ!

ಇಸ್ಲಮಾಬಾದ್: ವಾಯುಸೇನೆ, ನೌಕಾಪಡೆ ಹಾಗೂ ಭೂಸೇನೆ ಸೇರಿದಂತೆ ಎಲ್ಲಾ ಮೂರು ಮಾದರಿಯ ಸೇನೆ ಹಾಗೂ ಅಣ್ವಸ್ತ್ರ ಪರಮಾಧಿಕಾರವನ್ನು ಸೇನಾ ಮುಖ್ಯಸ್ಥ ಅಸೀಮ್ ಮುನೀರ್ ಗೆ ನೀಡಲಾಗಿದೆ. ಸಂವಿಧಾನದ 27ನೇ ವಿಧಿಯನ್ನು ಪರಿಷ್ಕರಿಸಿ ಇದೇ ಮೊದಲ ಬಾರಿಗೆ ಪಾಕಿಸ್ತಾನದ ಎಲ್ಲಾ ಮಾದರಿಯ ಸೇನೆ ಒಳಗೊಂಡ ಚೀಫ್ ಡಿಫೆನ್ಸ್ ಫೋರ್ಸಸ್ (ಸಿಡಿಎಫ್) ರಚಿಸಲಾಗಿದ್ದು, ಇದರ ಮುಖ್ಯಸ್ಥರಾಗಿ ಆಸೀಮ್ ಮುನೀರ್ ಅವರನ್ನು ನೇಮಕ ಮಾಡಲಾಗಿದೆ. ಆಸೀಮ್ ಮುನೀರ್ ಇದೀಗ ಸೇನೆಯ ಪರಮಾಧಿಕಾರ ಹೊಂದಿದ್ದು, ವಾಯುಸೇನೆ,

9 ಭಾಷೆಗಳಲ್ಲಿ ಸಂವಿಧಾನದ ಡಿಜಿಟಲ್ ಆವೃತ್ತಿ ಬಿಡುಗಡೆಗೊಳಿಸಿದ ರಾಷ್ಟ್ರಪತಿ

ನವದೆಹಲಿ: 75ನೇ ಸಂವಿಧಾನ ದಿನದ ಅಂಗವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು 9 ಭಾಷೆಗಳಲ್ಲಿ ಭಾರತದ ಸಂವಿಧಾನದ ಡಿಜಿಟಲ್ ಆವೃತ್ತಿ ಬಿಡುಗಡೆಗೊಳಿಸಿದ್ದಾರೆ. ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಮುರ್ಮು ಮಲಯಾಳಂ, ಮರಾಠಿ, ನೇಪಾಳಿ, ಪಂಜಾಬಿ, ಬೋಡೋ, ಕಾಶ್ಮೀರಿ, ತೆಲುಗು, ಒಡಿಯಾ

ಹಾಂಕಾಂಗ್ ಬಹುಮಹಡಿ ಕಟ್ಟಡದಲ್ಲಿ ಅಗ್ನಿ ದುರಂತ: 44 ಮಂದಿ ಬಲಿ, 279 ಮಂದಿ ನಾಪತ್ತೆ!

ಹಾಂಕಾಂಗ್ ನ 7 ಅಂತಸ್ತುಗಳ ಬಹುಮಹಡಿ ಕಟ್ಟಡದಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ 44 ಮಂದಿ ಮೃತಪಟ್ಟು 279 ಮಂದಿ ನಾಪತ್ತೆಯಾಗಿರುವ ಘಟನೆ ಬುಧವಾರ ತಡರಾತ್ರಿ ಸಂಭವಿಸಿದೆ. ನ್ಯೂ ಟೆರಿಟರಿಗಳ ಉಪನಗರವಾದ ತೈ ಪೋ ಜಿಲ್ಲೆಯ ವಸತಿ ಸಮುಚ್ಚಯದಲ್ಲಿ ಭಾರತೀಯ ಕಾಲಮಾನ

ಆಧಾರ್‌ ಇದ್ದರೆ ನುಸುಳುಕೋರರನ್ನೂ ಮತದಾರರೆಂದು ಪರಿಗಣಿಸಬೇಕೇ: ಸುಪ್ರೀಂ ಪ್ರಶ್ನೆ

ಆಧಾರ್‌ ಹೊಂದಿದ್ದಾರೆ ಎಂದ ಮಾತ್ರಕ್ಕೆ ನುಸುಳುಕೋರರನ್ನೂ ದೇಶದ ಮತದಾರರೆಂದು ಪರಿಗಣಿಸಬೇಕೇ ಎಂದು ಸುಪ್ರೀಂಕೋರ್ಟ್​ ಪ್ರಶ್ನಿಸಿದೆ. ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ ವಿರೋಧಿಸಿ ಹಲವು ಅರ್ಜಿಗಳು ಸುಪ್ರೀಂಕೋರ್ಟ್‌ಗೆ ಸಲ್ಲಿಕೆಯಾಗಿವೆ. ಈ ಸಂಬಂಧ ಹಿರಿಯ ವಕೀಲ ಕಪಿಲ್ ಸಿಬಲ್, ಎಲ್ಲರ ಬಳಿ ಆಧಾರ್ ಕಾರ್ಡ್​

ಸೂಟ್‌ಕೇಸ್‌ನಲ್ಲಿ ಥಾಣೆಯ ಯುವತಿ ಶವ: ಲಿವ್ಇನ್ ಪಾರ್ಟ್‌ನರ್ ಅರೆಸ್ಟ್‌

ಥಾಣೆಯ ದೇಸಾಯಿ ಗ್ರಾಮದಲ್ಲಿ ತೊರೆಯೊಂದರ ಸಮೀಪ ಸೂಟ್‌ಕೇಸ್‌ನಲ್ಲಿ ಯುವತಿಯ ಶವ ಪತ್ತೆಯಾಗಿದ್ದು, ಅವರನ್ನು ಕೊಲೆ ಮಾಡಿದ ಆರೋಪದಡಿ ಲಿವ್-ಇನ್ ಪಾರ್ಟನರ್‌ನನ್ನು ಪೊಲೀಸರು ಬಂಧಿಸಿದ್ದಾರೆ. ವಾರದ ಹಿಂದೆ ಇಬ್ಬರ ನಡುವೆ ಜಗಳ ನಡೆದಿದ್ದು, ಅದಾದ ಮರುದಿನ ಆರೋಪಿಯು ಯುವತಿಯನ್ನು ಕೊಂದು ಶವವನ್ನು ಸೂಟ್‌ಕೇಸ್‌ನಲ್ಲಿ

ವೈಟ್‌ಹೌಸ್‌ ಬಳಿ ಗುಂಡಿನ ದಾಳಿ: ಇಬ್ಬರು ಭದ್ರತಾ ಸಿಬ್ಬಂದಿಗೆ ಗಾಯ

ಅಮೆರಿಕದ ಶ್ವೇತಭವನ ಸಮೀಪ ನಡೆದ ಗುಂಡಿನ ದಾಳಿ ನಡೆದಿದ್ದು, ಘಟನೆಯಲ್ಲಿ ರಾಷ್ಟ್ರೀಯ ಭದ್ರತಾ ಪಡೆಯ ಇಬ್ಬರು ಸಿಬ್ಬಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಈ ದಾಳಿಯ ಬಳಿಕ ವಾಷಿಂಗ್ಟನ್‌ನಲ್ಲಿ ಬಿಗಿ ಭದ್ರತೆ ಕೈಗೊಂಡು 500 ಹೆಚ್ಚುವರಿ ರಾಷ್ಟ್ರೀಯ ಗಾರ್ಡ್ ಸಿಬ್ಬಂದಿ ನಿಯೋಜಿಸುವಂತೆ ಟ್ರಂಪ್ ಸೂಚಿಸಿದ್ದಾರೆ.

ಕೆಂಪುಕೋಟೆ ಬಳಿ‌ ಕಾರು ಸ್ಫೋಟ ಮತ್ತೊಬ್ಬನ ಬಂಧನ

ನವದೆಹಲಿ: ಕೆಂಪುಕೋಟೆ ಬಳಿ‌ ಸಂಭವಿಸಿದ್ದ ಕಾರು ಬಾಂಬ್ ಸ್ಫೋಟ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ಅಧಿಕಾರಿಗಳು ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದು,ಈ ಮೂಲಕ ಬಂಧಿತ ಆರೋಪಿಗಳ ಸಂಖ್ಯೆ ಏಳಕ್ಕೆ ಏರಿಕೆ ಆಗಿದೆ. ಕಾರು ಸ್ಪೋಟ ಸಂಭವಿಸುವ ಮುನ್ನ ಉಮರ್ ನಬಿಗೆ

ಕುಡಿದು ಬಂದಳೆಂದು ಪತ್ನಿಯ ಕೊಲೆಗೈದ ಕುಡುಕ

ಪತ್ನಿ ಕುಡಿದು ಮನೆಗೆ ಬಂದಿದ್ದಾಳೆಂದು ಸಿಟ್ಟಿಗೆದ್ದ ಕುಡುಕ ಪತಿ ಆಕೆಯನ್ನು ಕೊಲೆ ಮಾಡಿರುವ ಘಟನೆ ಜಾರ್ಖಂಡ್​ನ ರಾಮಗಢ ದಾತಮ್ ಬಾಡಿ ಝರಿಯಾದಲ್ಲಿ ನಡೆದಿದೆ. ಪತ್ನಿ ಶಿಲ್ಪಿ ದೇವಿಯನ್ನು ಕೊಲೆಗೈದ ಪತಿ ಉಪೇಂದ್ರ ಪರ್ಹಿಯಾ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಶಿಲ್ಪಿ ದೇವಿಯ ಮೃತದೇಹವನ್ನು

ರಾಮಮಂದಿರದ ಮೇಲೆ ಕೇಸರಿ ಧ್ವಜರೋಹಣ ಮಾಡಿದ ಪ್ರಧಾನಿ ಮೋದಿ!

ಅಯೋಧ್ಯೆಯ ರಾಮಮಂದಿರ ದೇವಸ್ಥಾನ ಕಾಮಗಾರಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ರಾಮಮಂದಿರದ ಗೋಪುರದ ಮೇಲೆ ಧ್ವಜಾರೋಹಣ ನೆರವೇರಿಸಿದರು. 22 ಅಡಿ ಎತ್ತರದ ಕೇಸರಿ ಧ್ವಜವನ್ನು ಹಾರಿಸಿ, ಸಾಧುಗಳು, ಗಣ್ಯರು ಮತ್ತು ರಾಮ ಜನ್ಮಭೂಮಿ ಟ್ರಸ್ಟ್ ಸದಸ್ಯರ ಸಮ್ಮುಖದಲ್ಲಿ ಧಾರ್ಮಿಕ

12,000 ವರ್ಷದ ನಂತರ ಸ್ಫೋಟಿಸಿದ ಇಥಿಯೋಪಿಯಾ ಜ್ವಾಲಾಮುಖಿ: ದೆಹಲಿ ತಲುಪಿದ ಬೂದಿ!

ಇಥಿಯೋಪಿಯಾದಲ್ಲಿ 12,000 ವರ್ಷಗಳ ನಂತರ ಜ್ವಾಲಾಮುಖಿ ಸ್ಫೋಟಗೊಂಡಿದ್ದು, ಇದರ ಬೂದಿ ಭಾರತ ಪ್ರವೇಶಿಸಿದೆ. ಹೈಲಿ ಗೊಬ್ಬಿ ಜ್ವಾಲಾಮುಖಿ 12 ಸಾವಿರ ವರ್ಷಗಳ ನಂತರ ಸ್ಫೋಟಗೊಂಡಿದ್ದು, ಮತ್ತೊಮ್ಮೆ ಚಟುವಟಿಕೆ ಆರಂಭಗೊಂಡಿದ್ದು, ಭಾರೀ ಪ್ರಮಾಣದ ಬೂದಿ ಹಲವು ದೇಶಗಳಿಗೆ ವ್ಯಾಪಿಸುತ್ತಿದೆ. ಜ್ವಾಲಾಮುಖಿ ಸ್ಫೋಟದಿಂದ ಈ