ದೇಶ-ವಿದೇಶ
ವಿಮಾನ ಪ್ರಯಾಣಿಕರಿಗೆ ಪೂರ್ಣ ಮರುಪಾವತಿ, ವಸತಿ, ಊಟ: ಇಂಡಿಗೊ ಘೋಷಣೆ
ವಿಮಾನ ಹಾರಾಟ ರದ್ದಿನಿಂದ ದೇಶಾದ್ಯಂತ ಸಿಲುಕಿರುವ ಸಾವಿರಾರು ಪ್ರಯಾಣಿಕರಿಗೆ ಪರಿಹಾರವಾಗಿ ಟಿಕೆಟ್ ದರ ಪೂರ್ಣ ಮರುಪಾವತಿ, ವಸತಿ ಹಾಗೂ ಭೋಜನ ವ್ಯವಸ್ಥೆಯನ್ನು ಇಂಡಿಗೋ ವಿಮಾನ ಸಂಸ್ಥೆ ಘೋಷಿಸಿದೆ. ಡಿಸೆಂಬರ್ 5ರಿಂದ 15ರವರೆಗೆ ದೆಹಲಿ ವಿಮಾನ ನಿಲ್ದಾಣದಿಂದ ಎಲ್ಲಾ ದೇಶೀಯ ನಿರ್ಗಮನಗಳನ್ನ ರಾತ್ರಿ 11:59ರವರೆಗೆ ರದ್ದುಗೊಳಿಸಲಾಗಿದೆ ಎಂದು ವಿಮಾನಯಾನ ಸಂಸ್ಥೆ ದೃಢಪಡಿಸಿದೆ. ವಿಮಾನಯಾನ ರದ್ದುಗೊಳಿಸಿದ್ದರಿಂದ ಪ್ರಯಾಣಿಕರಿಗೆ ಆಗಿರುವ ಅನಾನುಕೂಲದ ಬಗ್ಗೆ ಪ್ರಯಾಣಿಕರ ಬಳಿ “ಗಂಭೀರ ಕ್ಷಮೆಯಾಚಿಸಿದೆ” ಎಂದು ಪ್ರಕಟಣೆಯಲ್ಲಿ ಘೋಷಿಸಿರುವ ಇಂಡಿಗೋ
ಮದುವೆ ವಯಸ್ಸಾಗದಿದ್ರೂ ಲಿವ್ ಇನ್ ರಿಲೇಷನ್‌ಶಿಪ್ ಒಕೆ ಎಂದ ರಾಜಸ್ಥಾನ ಹೈಕೋರ್ಟ್
ಕಾನೂನುಬದ್ಧ ವಯಸ್ಸನ್ನು ತಲುಪದಿದ್ದರೂ ಪರಸ್ಪರ ಒಪ್ಪಿಗೆಯಿಂದ ಲಿವ್-ಇನ್ ಸಂಬಂಧದಲ್ಲಿರಲು ಯುವಕ ಯುವತಿ ಅರ್ಹರಾಗಿರುತ್ತಾರೆ, ಅವರ ಸಾಂವಿಧಾನಿಕ ಹಕ್ಕುಗಳನ್ನು ಮೊಟಕುಗೊಳಿಸಲಾಗುವುದಿಲ್ಲ ಎಂದು ರಾಜಸ್ಥಾನ ಹೈಕೋರ್ಟ್ ಹೇಳಿದೆ. ಕೋಟಾದ 18 ವರ್ಷದ ಯುವತಿ ಮತ್ತು 19 ವರ್ಷದ ಯುವಕ ರಕ್ಷಣೆ ಕೋರಿ ಸಲ್ಲಿಸಿದ ಅರ್ಜಿಯ
ಭಯೋತ್ಪಾದನೆ ವಿರುದ್ಧ ಹೋರಾಟಕ್ಕೆ ರಷ್ಯಾ ಸಹಕಾರ: ಪ್ರಧಾನಿ ಮೋದಿ
ನಾಗರಿಕರ ಮೇಲಿನ ಭಯೋತ್ಪಾದನಾ ದಾಳಿ ಮಾನವೀಯತೆಗೆ ವಿರುದ್ಧವಾಗಿದ್ದು, ಜಾಗತಿಕ ಪಿಡುಗು ಆಗಿರುವ ಭಯೋತ್ಪಾದನೆ ವಿರುದ್ಧ ಹೋರಾಟಕ್ಕೆ ಭಾರತದ ಜೊತೆ ರಷ್ಯಾ ಕೈ ಜೋಡಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ದೆಹಲಿಯ ಹೈದರಾಬಾದ್ ಹೌಸ್ ನಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್
ಸಿಬ್ಬಂದಿ ಸಮಸ್ಯೆ: ಸಾವಿರಕ್ಕೂ ಹೆಚ್ಚು ಇಂಡಿಗೊ ವಿಮಾನ ಹಾರಾಟ ರದ್ದು
ಸಿಬ್ಬಂದಿ ಸಮಸ್ಯೆಯಿಂದ 1000ಕ್ಕೂ ಹೆಚ್ಚು ಇಂಡಿಗೊ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ. ಇದಕ್ಕಾಗಿ ಇಂಡಿಗೋ ಸಂಸ್ಥೆ ಪ್ರಯಾಣಿಕರಲ್ಲಿ ಕ್ಷಮೆ ಯಾಚಿಸಿ, ಫೆಬ್ರವರಿ ವೇಳೆಗೆ ಸಮಸ್ಯೆ ಸರಿಪಡಿಸುವುದಾಗಿ ಭರವಸೆ ನೀಡಿದೆ. ಇಂಡಿಗೋ ಡಿಜಿಸಿಎಗೆ ಮಾಹಿತಿ ನೀಡಿದ್ದು, ಸದ್ಯದಲ್ಲೇ ಸಮಸ್ಯೆಗೆ ಪರಿಹಾರ ಸಿಗದಿರಬಹುದು. ಆದರೆ
ಗಂಡನಿದ್ದರೂ ಅಕ್ರಮ ಸಂಬಂಧ: ಮಕ್ಕಳನ್ನು ಮೋರಿಗೆಸೆದ ಪ್ರಿಯಕರ, ರಕ್ಷಿಸಿದ ಝೆಪ್ಟೊ ಡೆಲಿವರಿ ಬಾಯ್
ಗಂಡನಿದ್ದರೂ ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯೆ ಪ್ರಿಯಕರ ಆಕೆಯ ಇಬ್ಬರು ಮಕ್ಕಳನ್ನು ಮೋರಿಗೆ ಎಸೆದ ಘಟನೆ ನೋಯ್ಡಾದ ಸೆಕ್ಟರ್ 142 ರ ಬಳಿ ನಡೆದಿದೆ. ಸ್ಥಳಕ್ಕೆ ಡೆಲಿವರಿ ನೀಡುವುದಕ್ಕೆ ಬಂದಿದ್ದ ಝೆಪ್ಟೊ ಡೆಲಿವರಿ ಬಾಯ್ ಮಕ್ಕಳ ಕೂಗಾಟ ಕೇಳಿ ಮೋರಿ ಬಳಿ
1.2 ಲಕ್ಷ ರೈಲ್ವೆ ಹುದ್ದೆಗಳಿಗೆ ನೇಮಕಾತಿ: ಕೇಂದ್ರ ಸಚಿವ ಅಶ್ವಿನ್ ವೈಭವ್
2024-25ನೇ ಸಾಲಿನಿಂದ ರೈಲ್ವೆ ಇಲಾಖೆಯಲ್ಲಿ 1.2 ಲಕ್ಷ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಭವ್ ತಿಳಿಸಿದ್ದಾರೆ. ದೆಹಲಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಗುರುವಾರ ಲೋಕಸಭೆಯಲ್ಲಿ ಉತ್ತರ ನೀಡಿದ ಅವರು, ಕಳೆದ 11 ವರ್ಷಗಳಲ್ಲಿ ರೈಲ್ವೆ
ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ: ಬಿಎಲ್‌ಒಗಳ ಸುರಕ್ಷತೆ ರಾಜ್ಯ ಸರ್ಕಾರಗಳ ಜವಾಬ್ದಾರಿಯೆಂದ ಸುಪ್ರೀಂ
ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ(SIR) ಪ್ರಕ್ರಿಯೆಯಲ್ಲಿ ತೊಡಗಿದ್ದ ಬಿಎಲ್‌ಒಗಳ ಸಾವಿನ ಕುರಿತು ಸುಪ್ರೀಂಕೋರ್ಟ್ ಕಳವಳ ವ್ಯಕ್ತಪಡಿಸಿದ್ದು, ಬಿಎಲ್‌ಒಗಳ ಸುರಕ್ಷತೆ ಮತ್ತು ಕೆಲಸದ ಹೊರೆ ನಿರ್ವಹಣೆ ಖಚಿತಪಡಿಸಿಕೊಳ್ಳುವುದು ರಾಜ್ಯ ಸರ್ಕಾರಗಳ ಜವಾಬ್ದಾರಿ ಎಂದು ಹೇಳಿದೆ. ಅವರ ಕೆಲಸದ ಹೊರೆ ಕಡಿಮೆ ಮಾಡಲು ನಿರ್ದೇಶನ
ಪೆಟ್ರೋಲ್, ಡೀಸೆಲ್ ನಂತರ ಶತಕದತ್ತ ದಾಪುಗಾಲಿಟ್ಟ ರೂಪಾಯಿ ಮೌಲ್ಯ!
ಮುಂಬೈ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಆಡಳಿತದಲ್ಲಿ ಪೆಟ್ರೋಲ್, ಡೀಸೆಲ್ ದರ ಶತಕದ ದಾಟಿದ ನಂತರ ಇದೀಗ ಡಾಲರ್ ಎದುರು ರೂಪಾಯಿ ಮೌಲ್ಯ ಶತಕದ ದಾಟುವ ಹಾದಿಯಲ್ಲಿದೆ. ಕಳೆದ 8 ವರ್ಷಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ದರ 100
ಇಂದು ಸಂಜೆ ಭಾರತಕ್ಕೆ ಬಂದಿಳಿಯಲಿರುವ ರಷ್ಯಾ ಅಧ್ಯಕ್ಷ ಪುಟಿನ್!
ನವದೆಹಲಿ: ಎರಡು ದಿನಗಳ ಭಾರತ ಪ್ರವಾಸಕ್ಕಾಗಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಇಂದು ಸಂಜೆ ನವದೆಹಲಿಗೆ ಬಂದಿಳಿಯಲಿದ್ದಾರೆ. ಪುಟಿನ್ ಭಾರತಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಬಹುಸ್ತರದ ಭದ್ರತಾ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ. ಭದ್ರತೆಯ ದೃಷ್ಟಿಯಿಂದ ಪುಟಿನ್ ಪ್ರವಾಸದ
ತನಗಿಂತ ಅಂದವಿದೆಯೆಂದು 6 ವರ್ಷದ ಮಗು ಕೊಂದ ಸೈಕೋ ಲೇಡಿ, ಈ ಹಿಂದೆ ಮಗ ಸೇರಿದಂತೆ 3 ಮಕ್ಕಳ ಕೊಲೆ
ತನಗಿಂತ ಸುಂದರವಾಗಿ ಕಾಣುತ್ತಿರುವ ಕಾರಣಕ್ಕೆ 6 ವರ್ಷದ ಮುದ್ದು ಸೊಸೆಯನ್ನು ಮಹಿಳೆಯೊಬ್ಬಳು ನೀರಿನ ಟಬ್‌ನಲ್ಲಿ ಮುಳುಗಿಸಿ ಸಾಯಿಸಿರುವ ಘಟನೆ ಹರಿಯಾಣದ ಪಾಣಿಪತ್‌ನಲ್ಲಿ ನಡೆದಿದೆ. ಈ ಪ್ರಕರಣ ವಿಚಾರಣೆ ನಡೆಸಿದ ಪೊಲೀಸರಿಗೆ ಬೆಚ್ಚಿ ಬೀಳಿಸುವ ಮಾಹಿತಿ ಲಭಿಸಿದೆ. ಆರೋಪಿ ಪೂನಂ ಈ ಮೊದಲು




