Menu

ರಷ್ಯಾದಿಂದ ಉಕ್ರೇನ್ ಮೇಲೆ  ಶಬ್ಧಕ್ಕಿಂತ 10 ಪಟ್ಟು ವೇಗದ ಹೈಪರ್ ಸಾನಿಕ್ ಕ್ಷಿಪಣಿ ದಾಳಿ!

ಉಕ್ರೇನ್ ಮೇಲೆ ಇದೇ ಮೊದಲ ಬಾರಿ ರಷ್ಯಾ ಶಬ್ದಕ್ಕಿಂತ 10 ಪಟ್ಟು ವೇಗದ ಹೈಪರ್ ಸಾನಿಕ್ ಓರ್ಶೊನಿಕ್ ಕ್ಷಿಪಣಿ ದಾಳಿ ನಡೆಸಿದೆ. ಶುಕ್ರವಾರ ರಾತ್ರಿ ರಷ್ಯಾ ಡ್ರೋಣ್ ಹಾಗೂ ಡ್ರೋಣ್ ಮೂಲಕ ಕ್ಷಿಪಣಿಗಳ ದಾಳಿ ನಡೆಸಿದೆ. ಕೀವ್ ನಲ್ಲಿ ದಾಳಿಯಲ್ಲಿ ಕನಿಷ್ಠ 4 ಮಂದಿ ಮೃತಪಟ್ಟಿದ್ದು, 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ನಿವಾಸದ ಮೇಲೆ ಉಕ್ರೇನ್ ನಡೆಸಿದ ದಾಳಿಗೆ ಪ್ರತೀಕಾರವಾಗಿ ಈ ದಾಳಿ

ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಇಂದಿನಿಂದ ಆನ್‌ಲೈನ್‌ನಲ್ಲೇ ಟಿಕೆಟ್‌

ತಿರುಪತಿ ವೆಂಕಟೇಶ್ವರ ದೇವಸ್ಥಾನದಲ್ಲಿ ದರ್ಶನಕ್ಕಾಗಿ ಟಿಕೆಟ್‌ಗಳ ಆಫ್‌ಲೈನ್ ಮಾರಾಟ ನಿಲ್ಲಿಸಲಾಗುವುದು, ಇಂದಿನಿಂದ ಆನ್‌ಲೈನ್‌ನಲ್ಲಿ ಲಭ್ಯವಿದೆ ಎಂದು ಟಿಟಿಡಿ ತಿಳಿಸಿದೆ. ಬೆಳಿಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಬುಕಿಂಗ್ ಮಾಡಬಹುದು. ಈ ವ್ಯವಸ್ಥೆಯು 1 ತಿಂಗಳ ಪ್ರಾಯೋಗಿಕ ಅವಧಿಗೆ ಜಾರಿಯಲ್ಲಿರುತ್ತದೆ ಎಂದು ಹೇಳಿದೆ. ಈ

ರಾತ್ರಿ ಇಲಿ ಪಾಷಾಣ ಆರ್ಡರ್‌ ಮಾಡಿದ ಮಹಿಳೆ: ಜೀವವುಳಿಸಿದ ಡೆಲಿವರಿ ಬಾಯ್‌

ತಮಿಳುನಾಡಿನಲ್ಲಿ ರಾತ್ರಿ ಮಹಿಳೆಯೊಬ್ಬರು ಇಲಿ ಪಾಷಾಣ ಆರ್ಡರ್‌ ಮಾಡಿದ್ದು, ಡೆಲಿವರಿ ಬಾಯ್‌ಗೆ ಮಹಿಳೆ ಸಂಕಷ್ಟದಲ್ಲಿದ್ದಾಳೆಂದು ಅರಿವಾಗಿ ಸಮಯ ಪ್ರಜ್ಞೆಯಿಂದ ಆಕೆಯ ಜೀವವುಳಿಸಿದ್ದಾನೆ. ಬಳಿಕ ಆತ ವೀಡಿಯೊ ಮಡಿ ಈ ವಿಷಯ ಹಂಚಿಕೊಂಡಿದ್ದು, ಎಲ್ಲೆಡೆ ವೈರಲ್‌ ಆಗಿಆತನ ಬಗ್ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಕನ್ನಡ ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಲಿಕೆ ಕಡ್ಡಾಯ ಮಸೂದೆ ವಾಪಸ್‌ ಪಡೆಯಿರಿ: ಪಿಣರಾಯಿಗೆ ಸಿಎಂ ಸಿದ್ದರಾಮಯ್ಯ ಆಗ್ರಹ

ಕೇರಳದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಲಿಕೆಯನ್ನು ಕಡ್ಡಾಯಗೊಳಿಸುವ ಕೇರಳ ಸರ್ಕಾರದ ಪ್ರಸ್ತಾಪಿತ ಮಲೆಯಾಳಿ ಭಾಷಾ ಮಸೂದೆ-2025 ಸಂವಿಧಾನ ಖಾತರಿ ಮಾಡಿರುವ ಭಾಷಾ ಸ್ವಾತಂತ್ರ್ಯದ ಮೇಲಿನ ಪ್ರಹಾರವಾಗಿದೆ ಎಂದು ಹೇಳಲು ವಿಷಾದಿಸುವೆ. ಮಸೂದೆ ವಾಪಸ್‌ ಪಡೆಯಿರಿ ಎಂದು  ಮುಖ್ಯಮಂತ್ರಿ

ಇಡಿ ಮೇಲೆ ಮಮತಾ ರೇಡ್‌: ದಾಳಿ ವೇಳೆ ನುಗ್ಗಿ “ಐಪ್ಯಾಕ್‌” ಕಡತಗಳನ್ನು ಹೊತ್ತೊಯ್ದ ದೀದಿ

ಚುನಾವಣಾ ತಂತ್ರಗಾರಿಕೆ ಸಂಸ್ಥೆ ‘ಐ ಪ್ಯಾಕ್‌’ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕೋಲ್ಕತಾದಲ್ಲಿರುವ ಐಪ್ಯಾಕ್‌ ಮುಖ್ಯಸ್ಥನ ಮನೆಯ ಮೇಲೆ ದಾಳಿ ನಡೆದಾಗ ಅಲ್ಲಿಗೆ ನುಗ್ಗಿದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ದಾಖಲೆಗಳನ್ನು ಎತ್ತಿಕೊಂಡು

ಏಪ್ರಿಲ್ ನಿಂದ ದೇಶದ ಜನಗಣತಿ ಪ್ರಾರಂಭ

ನವದೆಹಲಿ:ಕಳೆದ 2011ರ ಬಳಿಕ ಇದೇ ಮೊದಲ ಬಾರಿಗೆ ದೇಶದ ಜನಗಣತಿಯು ಬರುವ ಏಪ್ರಿಲ್ ತಿಂಗಳಲ್ಲಿ ಪ್ರಾರಂಭಿಸಲಾಗುತ್ತದೆ. 2027ರ ಮೊದಲ ಹಂತದ ಜನಗಣತಿ ಕಾರ್ಯ ಏಪ್ರಿಲ್ ನಿಂದ ಸೆಪ್ಟೆಂಬ‌ರ್ ತಿಂಗಳವರೆಗೆ ನಡೆಸಲಾಗುತ್ತದೆ. ಈ ಬಾರಿ ಎರಡು ಹಂತದಲ್ಲಿ ಗಣತಿ ನಡೆಯಲಿದ್ದು 2026ರ ಏಪ್ರಿಲ್

ಭಾರತದ ಮೇಲೆ ಶೇ.500ರಷ್ಟು ಸುಂಕ ಹೇರಿಕೆ ಮಸೂದೆಗೆ ಟ್ರಂಪ್ ಸಹಮತ

ನ್ಯೂಯಾರ್ಕ್: ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುತ್ತಿರುವ ಭಾರತದ ಮೇಲೆ ಶೇ.500ರಷ್ಟು ಸುಂಕ ವಿಧಿಸುವ ಮಸೂದೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಮ್ಮತಿ ಸೂಚಿಸಿದ್ದಾರೆ. ಹಲವಾರು ಬಾರಿ ಎಚ್ಚರಿಕೆ ನಡುವೆಯೂ ರಷ್ಯಾದಿಂದ ತೈಲ ಖರೀದಿ ಮುಂದುವರಿಸಿರುವ ಏಷ್ಯಾದ ರಾಷ್ಟ್ರಗಳಾದ ಭಾರತ, ಚೀನಾ ಮತ್ತು

ಅಧಿಕಾರಕ್ಕಾಗಿ ಒಂದಾಗಿದ್ದ ಬಿಜೆಪಿ-ಕಾಂಗ್ರೆಸ್ ಮೈತ್ರಿ ಮುರಿದುಬಿತ್ತು!

ರಾಜಕೀಯ ವೈರಿ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಅಧಿಕಾರ ಹಿಡಿಲು ಮೈತ್ರಿ ಮಾಡಿಕೊಂಡಿದ್ದು, ಮಿತ್ರಪಕ್ಷಗಳ ವಿರೋಧದ ಬೆನ್ನಲ್ಲೇ ಮೈತ್ರಿಯಿಂದ ಹಿಂದೆ ಸರಿದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಥಾಣೆ ಜಿಲ್ಲೆಯ ಅಂಬೆರ್ನಾಥ್ ಮುನ್ಸಿಪಾಲ್ ಕೌನ್ಸಿಲ್ ನಲ್ಲಿ ಅಧಿಕಾರ ಹಿಡಿಯಲು ಬಿಜೆಪಿ ಮತ್ತು

ಭಾನುವಾರ ಕೇಂದ್ರ ಬಜೆಟ್‌ ಮಂಡಿಸಲಿರುವ ನಿರ್ಮಲಾ ಸೀತಾರಾಮನ್‌!

ಫೆಬ್ರವರಿ 1 ಭಾನುವಾರದಂದು 2026-27ನೇ ಸಾಲಿನ ಬಜೆಟ್‌ ಮಂಡಿಸುವ ಮೂಲಕ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಲಿದ್ದಾರೆ. ಫೆಬ್ರವರಿ ೧ರಂದು ಬಜೆಟ್‌ ಮಂಡನೆಗೆ ಕೇಂದ್ರ ಸರ್ಕಾರ ದಿನಾಂಕ ನಿಗದಿಪಡಿಸಿದ್ದು, ಜನವರಿ 29ರಂದು ಆರ್ಥಿಕ ಸಮೀಕ್ಷೆ ವರದಿ

ದೇಶದಲ್ಲಿ ಪಾಡೆಲ್ ವಿಸ್ತರಣೆಗೆ ಮಹತ್ವದ ಹೆಜ್ಜೆಯಿಟ್ಟ ಎಂಎಸ್ ಧೋನಿ

ಕ್ರಿಕೆಟ್ ದಿಗ್ಗಜ ಮಹೇಂದ್ರ ಸಿಂಗ್ ಧೋನಿ ಅವರು ಪಾಡೆಲ್ ಕ್ಷೇತ್ರದಲ್ಲಿ ತಮ್ಮ ಹೂಡಿಕೆಯನ್ನು ಮತ್ತಷ್ಟು ವಿಸ್ತರಿಸಿದ್ದು, ‘7ಪ್ಯಾಡೆಲ್ ಎಂಎಸ್ ಧೋನಿ’ ಅನ್ನು ದೇಶದ ಪ್ರಮುಖ ಪಾಡೆಲ್ ಇಕೋಸಿಸ್ಟಮ್ ಆಗಿರುವ ಪಾಡೆಲ್ ಪಾರ್ಕ್ ಇಂಡಿಯಾದೊಂದಿಗೆ ವಿಲೀನಗೊಳಿಸಿದ್ದಾರೆ. ಆಗಸ್ಟ್ 2024ರಿಂದ JSW ಸ್ಪೋರ್ಟ್ಸ್‌ನ ಸ್ಥಾಪಕ