ದೇಶ-ವಿದೇಶ
ನಿವೃತ್ತ ಉದ್ಯೋಗಿಗಳಿಗೆ ಬೆಳ್ಳಿ ಪದಕದ ಹೆಸರಲ್ಲಿ ತಾಮ್ರ ನೀಡಿದ ರೈಲ್ವೆ ಇಲಾಖೆ
ಪಶ್ಚಿಮ ಮಧ್ಯ ರೈಲ್ವೆ ವಲಯದಲ್ಲಿ ಹಲವು ದಶಕ ಕೆಲಸ ಮಾಡಿ ನಿವೃತ್ತರಾದ ನೌಕರರಿಗೆ ರೈಲ್ವೆ ಇಲಾಖೆಯು ವಿದಾಯದ ವೇಳೆ ಚಿನ್ನಲೇಪಿತ ಬೆಳ್ಳಿಯ ಪದಕವೆಂದು ಹೇಳಿ ಕೊಟ್ಟಿರುವುದು ತಾಮ್ರದ ಮೇಲೆ ಬೆಳ್ಳಿ ಲೇಪನ ಮಾಡಿದ ಪದಕವೆಂಬುದು ಬೆಳಕಿಗೆ ಬಂದಿದೆ. ಈ ನಕಲಿ ಬೆಳ್ಳಿ ಪದಕಗಳನ್ನು 2023 ರಿಂದ 2025 ರ ನಡುವೆ ನಿವೃತ್ತರಾದ ನೌಕರರಿಗೆ ವಿತರಿಸಲಾಗಿದೆ. ಎರಡು ತಿಂಗಳ ಹಿಂದೆ ಹಗರಣ ಬೆಳಕಿಗೆ ಬಂದಿದ್ದು, ಕಳೆದ ಡಿಸೆಂಬರ್‌ನಲ್ಲಿ ದೂರುಗಳು ದಾಖಲಾಗಿವೆ. ಕಳೆದ
PSLV- C62 ನೌಕೆ ಸಮುದ್ರದಲ್ಲಿ ಪತನ, ಸ್ಪೇನ್ ಉಪಗ್ರಹ ಮಾತ್ರ ಸುರಕ್ಷಿತ
ನಿಗದಿಗೊಳಿಸಿದ್ದ ಕಕ್ಷೆ ಸೇರಲು ವಿಫಲವಾಗಿ ಪಥ ಬದಲಿಸಿದ್ದ ಭಾರತೀಯ ಬಾಹ್ಯಕಾಶ ಸಂಸ್ಥೆಯ ಪಿಎಸ್ ಎಲ್ ವಿ ಸಿ 62 ನೌಕೆ ದಕ್ಷಿಣ ಹಿಂದೂ ಮಹಾಸಾಗರ ಪ್ರದೇಶದಲ್ಲಿ ಪತನಗೊಂಡಿದ್ದು, ಸ್ಪೇನ್ ನ ಉಪಗ್ರಹ ಹೊರತುಪಡಿಸಿ ಉಳಿದ ಎಲ್ಲಾ 15 ಉಪಗ್ರಹಗಳು ಹೊತ್ತಿ ಉರಿದು ಹೋಗಿವೆ.
ಶಬರಿಮಲೆಯಿಂದ 100 ಕಿ.ಮೀ. ದೂರದಲ್ಲಿ ವಾಹನ ತಡೆದು ಕರ್ನಾಟಕದ ಭಕ್ತರಿಗೆ ಲಾಠಿ ಏಟು
ಮಕರ ಸಂಕ್ರಮಣದ ಜ್ಯೋತಿ ದರ್ಶನಕ್ಕೆ ತೆರಳಿದ್ದ ರಾಜ್ಯದ ಸಾವಿರಾರು ಭಕ್ತರ ವಾಹನಗಳನ್ನು ಕೇರಳ ಪೊಲೀಸರು ತಡೆ ಹಿಡಿದಿದ್ದು, ಪ್ರತಿಭಟಿಸಿದ ರಾಜ್ಯದ ಭಕ್ತರ ಮೇಲೆ ಲಾಠಿಪ್ರಹಾರ ನಡೆಸಿದ್ದಾರೆ. ಚಿಕ್ಕಮಗಳೂರು, ಶಿವಮೊಗ್ಗ, ಬಾಗಲಕೋಟೆ ಸೇರಿದಂತೆ ರಾಜ್ಯಾದ್ಯಂತ 5000ಕ್ಕೂ ಅಧಿಕ ಭಕ್ತರು ಖಾಸಗಿ ವಾಹನಗಳ ಮೂಲಕ
ನಾಯಿ ಕಚ್ಚಿದರೆ ರಾಜ್ಯ ಸರ್ಕಾರವೇ ಪರಿಹಾರ ನೀಡಬೇಕು: ಸುಪ್ರೀಂಕೋರ್ಟ್
ನವದೆಹಲಿ: ಪ್ರತಿ ನಾಯಿ ಕಡಿತದಿಂದ ಗಾಯಗೊಂಡಲ್ಲಿ ಅಥವಾ ಮೃತಪಟ್ಟಲ್ಲಿ ಆಯಾ ರಾಜ್ಯ ಸರ್ಕಾರಗಳು ದುಬಾರಿ ಪರಿಹಾರವನ್ನು ತೆರಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ. ಬೀದಿ ನಾಯಿಗಳ ಕುರಿತು ಪ್ರಕರಣದ ವಿಚಾರಣೆಯು ಮಂಗಳವಾರ ನ್ಯಾ. ವಿಕ್ರಂನಾಥ್, ನ್ಯಾ. ಸಂದೀಪ್ ಮೆಹ್ತಾ ಮತ್ತು ನ್ಯಾ.
ಇರಾನ್ ನಲ್ಲಿ ಹಿಂಸಾಚಾರ: 2000ಕ್ಕೂ ಅಧಿಕ ಜನರ ಸಾವು
ಕಳೆದೆರಡು ವಾರಗಳಿಂದ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಗೆ ಇರಾನ್ ನಲ್ಲಿ ಇದುವರೆಗೆ ಕನಿಷ್ಠ 2000 ಜನರು ಬಲಿಯಾಗಿದ್ದಾರೆ. ಭದ್ರತಾ ಸಿಬ್ಬಂದಿ ಮತ್ತು ನಾಗರಿಕರ ನಡುವಿನ ಸಂಘರ್ಷದ ಲಾಭ ಪಡೆದ ಉಗ್ರರು ಹಿಂಸಾಚಾರ ನಡೆಸುತ್ತಿದ್ದಾರೆ ಎಂದು ಇರಾನ್ ಅಧಿಕಾರಿಗಳು ಆರೋಪಿಸಿದ್ದಾರೆ. ಮೃತಪಟ್ಟವರಲ್ಲಿ ಭದ್ರತಾ ಸಿಬ್ಬಂದಿಯೂ
`10 ನಿಮಿಷದಲ್ಲಿ ಡೆಲಿವರಿ’ ವ್ಯವಸ್ಥೆ ಕೈಬಿಟ್ಟ ಬ್ಲಿಂಕಿಟ್, ಸ್ವಿಗ್ಗಿ
ಕೇಂದ್ರ ಸರ್ಕಾರದ ಸೂಚನೆ ಮೇರೆಗೆ 10 ನಿಮಿಷದಲ್ಲಿ ಮನೆ ಮನೆಗೆ ವಸ್ತುಗಳನ್ನು ಡೆಲಿವರಿ ಮಾಡುವ ವ್ಯವಸ್ಥೆಯನ್ನು ಬ್ಲಿಂಕಿಟ್ ಮತ್ತು ಸ್ವಿಗ್ಗಿ ಕೈಬಿಟ್ಟಿದೆ. ಉದ್ಯೋಗ ಮತ್ತು ಸಾಮಾಜಿಕ ಭದ್ರತೆಗೆ ಒತ್ತಾಯಿಸಿ ಡಿಸೆಂಬರ್ 31ರಂದು ಸ್ವಿಗ್ಗಿ, ಜೊಮ್ಯಾಟೋ, ಜಿಪ್ಟೊ, ಫ್ಲಿಪ್ ಕಾರ್ಟ್, ಬ್ಲಿಂಕಿಟ್ ಸೇರಿ
ಜನವರಿ 20ಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ನಿತಿನ್ ನಬಿನ್ ಪ್ರಮಾಣ ವಚನ?
ನವದೆಹಲಿ: ದೀರ್ಘ ಸಮಯದಿಂದ ನೆನೆಗುದಿಗೆ ಬಿದ್ದಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಕಾರ್ಯಕಾರಿ ಅಧ್ಯಕ್ಷ ನಿತಿನ್ ನಬಿನ್ (Nitin Nabin) ನೇಮಕಗೊಳ್ಳುವ ಸಾಧ್ಯತೆ ಇದ್ದು, ಜೆಪಿ ನಡ್ಡಾ ಅವರಿಂದ ತೆರವಾದ ಸ್ಥಾನ ತುಂಬಲಿರುವ ನಿತಿನ್ ನಬಿನ್ ಜನವರಿ 20ರಂದು ಅಧಿಕಾರ
ಮಾಜಿ ಉಪರಾಷ್ಟ್ರಪತಿ ಜಗದೀಪ್ ಧನಕರ್ ಆಸ್ಪತ್ರೆಗೆ ದಾಖಲು
ಮಾಜಿ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರ ಆರೋಗ್ಯದಲ್ಲಿ ತೊಂದರೆಯಾಗಿದ್ದು, ನವದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್)ಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜನವರಿ 10 ರಂದು ಶೌಚಾಲಯಕ್ಕೆ ಹೋದಾಗ ಅವರು ಎರಡು ಬಾರಿ ಪ್ರಜ್ಞಾಹೀನರಾಗಿದ್ದರು ಎಂದು ತಿಳಿದು ಬಂದಿದೆ.
ಆರ್ಕೆಸ್ಟ್ರಾ ಡಾನ್ಸರ್ ಮೇಲೆ ಗ್ಯಾಂಗ್ ರೇಪ್: ಆರೋಪಿಯ ಮೊಬೈಲ್‌ನಿಂದ ಪೊಲೀಸ್‌ಗೆ ಕರೆ ಮಾಡಿದ ಸಂತ್ರಸ್ತೆ
ಆರ್ಕೆಸ್ಟ್ರಾ ನರ್ತಕಿಯನ್ನು ಅಪಹರಿಸಿದ ದುಷ್ಕರ್ಮಿಗಳ ಗುಂಪು ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಕುಡಿದ ಮತ್ತಿನಲ್ಲಿದ್ದ ಆರೋಪಿಯ ಫೋನ್ ಬಳಸಿ ಸಂತ್ರಸ್ತೆ 112 ತುರ್ತು ಸಂಖ್ಯೆಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಪೊಲೀಸರು ಬಂದು ಆಕೆಯನ್ನು ರಕ್ಷಿಸಿ ಒಬ್ಬ
ಇರಾನ್ ಜೊತೆ ವ್ಯಾಪಾರ ಮಾಡುವವರಿಗೆ ಶೇ.25 ಸುಂಕ: ಟ್ರಂಪ್
ಇರಾನ್ನೊಂದಿಗೆ ವ್ಯಾಪಾರ ಮಾಡುವ ದೇಶಗಳ ಮೇಲೆ ಶೇ.25ರಷ್ಟು ಸುಂಕ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಸಾಮಾಜಿಕ ಮಾಧ್ಯಮ ವೇದಿಕೆಯಾದ ಟ್ರುತ್ ಸೋಶಿಯಲ್ನಲ್ಲಿ ಪೋಸ್ಟ್ ಮಾಡಿದ್ದು, ಈ ಕ್ರಮವು ತಕ್ಷಣವೇ ಜಾರಿಗೆ ಬರಲಿದೆ ಮತ್ತು ತಿದ್ದುಪಡಿ ಮಾಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.




