ಬೆಂಗಳೂರು
ಮಳೆ ಬಂದರೆ ಅಂಡರ್‌ಪಾಸ್ ಬಂದ್ ಇದು “ಬ್ರಾಂಡ್ ಬೆಂಗಳೂರು”: ಆರ್ ಅಶೋಕ
ಉತ್ತರಹಳ್ಳಿ ನ್ಯಾಯಾಂಗ ಬಡಾವಣೆಯಲ್ಲಿ ನಿರ್ಮಾಣವಾದ ಅಂಡರ್‌ಪಾಸ್ ಸ್ವಲ್ಪ ಮಳೆಯಾದರೂ ನೀರಿನಿಂದ ತುಂಬಿ ವಾಹನ ಸಂಚಾರವೇ ಸ್ಥಗಿತಗೊಳ್ಳುತ್ತಿರುವುದು ಕಾಂಗ್ರೆಸ್ ಸರ್ಕಾರದ ದೂರದೃಷ್ಟಿಯಿಲ್ಲದ ಯೋಜನೆಗಳಿಗೆ ಸ್ಪಷ್ಟ ಸಾಕ್ಷಿ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ ಕುಟುಕಿದ್ದಾರೆ. “ನಾನು ಟನಲ್ ಮಾಡುತ್ತೇನೆ, ಬ್ರಾಂಡ್ ಬೆಂಗಳೂರು ನಿರ್ಮಿಸುತ್ತೇನೆ” ಎಂದು ಹೇಳುವ @DKShivakumar ಅವರೇ, ನಿಮ್ಮ ಟನಲ್ ಯೋಜನೆಗಳ ಭವಿಷ್ಯವೂ ಇದೇನಾ ಎಂದು ಜನತೆಗೆ ಸ್ಪಷ್ಟಪಡಿಸಿ. ಕಮಿಷನ್ ರಾಜಕಾರಣಕ್ಕೆ ಆದ್ಯತೆ ನೀಡಿ, ಜನರ ಸುರಕ್ಷತೆ ಮತ್ತು ಸುಗಮ
ಜೈಲಿನಲ್ಲಿ ದರ್ಶನ್ ಆತ್ಮಹತ್ಯೆ ಯತ್ನ: ಕೇವಲ ವದಂತಿ ಎಂದ ಗೃಹ ಸಚಿವ ಪರಮೇಶ್ವರ್
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಯಾಗಿ ಜೈಲು ಸೇರಿರುವ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ವದಂತಿಯನ್ನು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅಧಿಕೃತವಾಗಿ ನಿರಾಕರಿಸಿದ್ದಾರೆ. ದರ್ಶನ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ವದಂತಿ ಗಮನಕ್ಕೆ ಬಂದ
ಕೋರಮಂಗಲದಲ್ಲಿ ಬಿಎಂಟಿಸಿ ಬಸ್‌ಗೆ ಯುವಕ ಬಲಿ
ಬೆಂಗಳೂರಿನ ಕೋರಮಂಗಲದಲ್ಲಿ ಶುಕ್ರವಾರ ರಾತ್ರಿ ನಡೆದ ನಡೆದ ಬಿಎಂಟಿಸಿ ಬಸ್ ಅಪಘಾತದಲ್ಲಿ ಡೆಲಿವರಿ ಬಾಯ್ ಸ್ಥಳದಲ್ಲೇ ಮೃತಪಟ್ಟಿದ್ದು, ಯಶವಂತಪುರ ಸರ್ಕಲ್‌ನಲ್ಲಿ ಶನಿವಾರ ನಡೆದ ಅಪಘಾತದಲ್ಲಿ ಮಹಿಳೆ ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಕೋರಮಂಗಲದ ನೆಕ್ಸಸ್ ಮಾಲ್ ಬಳಿ ಅಪಘಾತ ಸಂಭವಿಸಿದ್ದು, ಆಂಧ್ರಪ್ರದೇಶ
ಬೆಂಗಳೂರಿನಲ್ಲಿ ಸ್ನೇಹಿತನ ಮನೆ ದರೋಡೆ ಮಾಡಿಸಿದ್ದ ಮೇಸ್ತ್ರಿ ಅರೆಸ್ಟ್
ಸ್ನೇಹಿತನ ಮನೆಯಲ್ಲೇ ಚಿನ್ನಾಬರಣ ಮತ್ತು ಹಣ ದರೋಡೆ ಮಾಡಿಸಿದ್ದ ಮೇಸ್ತ್ರಿಯೊಬ್ಬನನ್ನು ಚಿಕ್ಕಜಾಲದ ಹುಣಸಮಾರನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಗುರುಪ್ರಸಾದ್ ಬಂಧಿತ ಆರೋಪಿ. ತನ್ನ ಬಳಿ ಕೆಲಸ ಮಾಡಿಕೊಂಡಿದ್ದ ಇಬ್ಬರಿಗೆ ಸ್ನೇಹಿತ ಸುದರ್ಶನ್ ಎಂಬಾತನ ಮನೆ ಕಳವು ಮಾಡಲು ತರಬೇತಿ ನೀಡಿದ್ದ. ಏಪ್ರಿಲ್ 18ರಂದು
ಬೇರೆಯವರ ಹೆಸರಲ್ಲಿ ಬುಕ್ ಆಗಿದ್ದ ಲಾಡ್ಜ್ ರೂಂಗೆ ಬಂದಿದ್ದಾತ ಶವವಾಗಿ ಪತ್ತೆ
ಬೆಂಗಳೂರಿನ ಮಡಿವಾಳದ ಮಾರುತಿ ನಗರದಲ್ಲಿರುವ ಖಾಸಗಿ ಲಾಡ್ಜ್‌ನಲ್ಲಿ ತಮಿಳುನಾಡಿನ ವ್ಯಕ್ತಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಪುಳಿಯಂಪಟ್ಟಿ ನಿವಾಸಿ ಮುರಳಿ ಅಲಿಯಾಸ್ ಮಧು (38) ಎಂದು ಗುರುತಿಸಲಾಗಿದೆ. ಬುಧವಾರ ರಾತ್ರಿ ಲಾಡ್ಜ್ ರೂಂನ ಹಾಸಿಗೆಯ ಮೇಲೆ ಅಸ್ವಸ್ಥ ಸ್ಥಿತಿಯಲ್ಲಿ ಬಿದ್ದುಕೊಂಡು ಮೃತಪಟ್ಟಿದ್ದಾನೆ. ಪ್ರಕರಣದ ತನಿಖೆ
ಏರ್‌ಟೆಲ್ ನಿಂದ ಭಾರತದಲ್ಲಿ ಮುಂದಿನ ಹಂತದ 5G ತಂತ್ರಜ್ಞಾನ ಜಾರಿ
ಭಾರತೀಯ ಗ್ರಾಹಕರಿಗೆ ಅತ್ಯಾಧುನಿಕ ಜಾಗತಿಕ 5G ತಂತ್ರಜ್ಞಾನವನ್ನು ನೇರ ಅನುಭವಿಸಲು ಅವಕಾಶ ನೀಡಿದ ಭಾರ್ತಿ ಏರ್‌ಟೆಲ್ ಇದುವರೆಗೆ ಮುಖ್ಯವಾಗಿ ಅಮೆರಿಕಾ, ಯುನೈಟೆಡ್ ಕಿಂಗ್‌ಡಮ್ ಮತ್ತು ಸಿಂಗಾಪುರದಂತಹ ದೂರಸಂಪರ್ಕ ಮಾರುಕಟ್ಟೆಗಳಲ್ಲಿ ಮಾತ್ರ ಕಾಣಿಸಿಕೊಂಡಿದ್ದ ಅತ್ಯಾಧುನಿಕ 5G ತಂತ್ರಜ್ಞಾನ ಸಾಮರ್ಥ್ಯವನ್ನು ಈಗ ಭಾರತೀಯ ಮೊಬೈಲ್
ಜಿಬಿಎ ಚುನಾವಣೆ: ಗಡುವು ಆಗಸ್ಟ್ 31ರವರೆಗೆ ವಿಸ್ತರಿಸಿದ ಸುಪ್ರೀಂಕೋರ್ಟ್
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಸಂಬಂಧ ಸುಪ್ರೀಂಕೋರ್ಟ್ ಜೂನ್ 30ರವರೆಗೆ ನೀಡಿದ್ದ ಗಡುವನ್ನು ಆಗಸ್ಟ್ 31ರವರೆಗೆ ವಿಸ್ತರಿಸಿದೆ. ರಾಜ್ಯ ಸರ್ಕಾರ ಮತ್ತು ರಾಜ್ಯ ಚುನಾವಣಾ ಆಯೋಗದ ಮನವಿಯಂತೆ ಕೋರ್ಟ್ ಈ ಕ್ರಮ ಕೈಗೊಂಡಿದೆ. ಇದೇ ಅಂತಿಮ ಅವಕಾಶ. ಮತ್ತಷ್ಟು ವಿಸ್ತರಣೆ ನೀಡಲಾಗುವುದಿಲ್ಲ
ಆಭರಣ ಖರೀದಿಸುವುದಾಗಿ ಉದ್ಯಮಿಯಿಂದ ಮೂರು ಕೋಟಿ ರೂ. ಮೌಲ್ಯದ ಚಿನ್ನ ದೋಚಿದ ವಂಚಕರು
ಬೆಂಗಳೂರಿನ ಮಲ್ಲೇಶ್ವರಂನ ಸಂಪಿಗೆ ರಸ್ತೆಯಲ್ಲಿ ಹೋಲ್‌ಸೇಲ್ ದರದಲ್ಲಿ ಚಿನ್ನ ಖರೀದಿಸುವುದಾಗಿ ನಂಬಿಸಿ ಮೂರು ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಉದ್ಯಮಿಗೆ ವಂಚಿಸಿರುವ ಘಟನೆ ನಡೆದಿದೆ. ವಂಚಕರು ಒಂದು ಕೆಜಿ 850 ಗ್ರಾಂ ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದಾರೆ. ನಗರ್ತ ಪೇಟೆಯಲ್ಲಿರುವ ‘ಮೆಹ್ತಾ ಜ್ಯುವೆಲ್ಲರಿ’
ಅಮೆರಿಕದಿಂದ ಜೀವಂತ ಗುಂಡುಗಳನ್ನು ತಂದಿದ್ದಾತ ಬೆಂಗಳೂರಿನಲ್ಲಿ ಅರೆಸ್ಟ್
ವಿದೇಶದಿಂದ ಅಕ್ರಮವಾಗಿ ರಿವಾಲ್ವಾರ್‌ನ ಏಳು ಜೀವಂತ ಗುಂಡುಗಳನ್ನು ತಂದಿದ್ದ ಆರೋಪದಡಿ ಅನಿವಾಸಿ ಭಾರತೀಯನೊಬ್ಬನನ್ನು ಬೆಂಗಳೂರು ಜೆ.ಸಿ.ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರ್.ಟಿ.ನಗರದ ಮುತ್ತಾವರ್ ಅರ್ಮಾನ್ ಬಂಧಿತ. ಆರೋಪಿಯಿಂದ ರೂಗರ್ ಕಂಪನಿಯ ಏಳು ಜೀವಂತ ಗುಂಡುಗಳ ಮ್ಯಾಗ್ಜಿನ್ ಜಪ್ತಿ ಮಾಡಲಾಗಿದೆ. ಸ್ನೇಹಿತನ ಜತೆ
ಮನೆ ಲೀಸ್ ಆಫರ್ ಮುಂದಿಟ್ಟು ಗ್ರಾಹಕರಿಗೆ 200 ಕೋಟಿ ರೂ. ವಂಚನೆ
ಬೆಂಗಳೂರಿನಲ್ಲಿ ಮನೆ ಲೀಸ್ಗೆ ನೀಡುವುದಾಗಿ ಗ್ರಾಹಕರಿಗೆ ಭರ್ಜರಿ ಆಫರ್‌ಗಳನ್ನು ನೀಡುವ ಮೂಲಕ ಕಂಪೆನಿಯೊಂದು 200 ಕೋಟಿ ರೂ.ಗೂ ಅಧಿಕ ಹಣ ವಂಚಿಸಿರುವ ಪ್ರಕರಣ ಬಹಿರಂಗವಾಗಿದೆ. ಜಾನ್ಸ್ ಅಸೆಟ್ ಹೆಸರಿನ ಮಿಡಿಯೇಟರ್ ಕಂಪನಿಯು 300ಕ್ಕೂ ಹೆಚ್ಚು ಜನರಿಗೆ ವಂಚಿಸಿದ್ದು, ಮಾಲೀಕ ಪರಾರಿಯಾಗಿದ್ದಾನೆ. ಕಂಪನಿ




