Menu

ಖಾಸಗಿ ಸೈಬರ್ ಕೆಫೆಗಳಿಗೂ ಇ-ಖಾತಾ ಹಂಚಿಕೆಗೆ ಬಿಬಿಎಂಪಿ ಅವಕಾಶ

ಬೆಂಗಳೂರು ಒನ್ ಕೇಂದ್ರಗಳಲ್ಲಿ ಇ-ಖಾತಾ ಪಡೆಯಲು ಅವಕಾಶ ನೀಡಿದ್ದ ಬಿಬಿಎಂಪಿ, ಇ-ಖಾತಾ ಪಡೆಯಲು ಆಸ್ತಿ ಋಣಭಾರ ರಾಹಿತ್ಯ ಪ್ರಮಾಣ ಪತ್ರ ಬೇಡ ಎಂದು ಆದೇಶ ಹೊರಡಿಸಿದೆ. ಮತ್ತೊಂದೆಡೆ ಖಾಸಗಿ ಸೈಬರ್ ಕೆಫೆಗಳಿಗೂ ಇ-ಖಾತಾ ಹಂಚಿಕೆಗೆ ಅವಕಾಶ ನೀಡಲು ಹೊರಟಿದೆ.

ಬೆಂಗಳೂರಿನಲ್ಲಿ ಆಸ್ತಿಗಳಿಗೆ ಇ-ಖಾತಾ ಕಡ್ಡಾಯ ಎಂದಿರುವ ಪಾಲಿಕೆ ಇ-ಖಾತಾ ಹಂಚಿಕೆಗೆ ಎಷ್ಟೇ ಯೋಜನೆ ರೂಪಿಸಿದರೂ ಒಂದಿಲ್ಲೊಂದು ಸಮಸ್ಯೆ ಎದುರಾಗುತ್ತಿದೆ. ಇದೀಗ ಖಾಸಗಿ ಸೈಬರ್ ಕೆಫೆಗಳಲ್ಲೂ ಇ-ಖಾತಾ ಹಂಚಿಕೆಗೆ ಅವಕಾಶ ನೀಡಲು ಹೊರಟಿದೆ.

ಸದ್ಯ ಬೆಂಗಳೂರು ಒನ್ ಸೆಂಟರ್ ಗಳಲ್ಲಿ ಇ-ಖಾತಾ ಪಡೆಯಲು 45 ರೂಪಾಯಿ ಶುಲ್ಕ ನಿಗದಿಪಡಿಸಿದ್ದ ಪಾಲಿಕೆ, ಇದೀಗ ಸೈಬರ್ ಕೆಫೆಗಳಲ್ಲೂ ಇದೇ ಮೊತ್ತದಲ್ಲಿ ಇ-ಖಾತಾ ಹಂಚಿಕೆಗೆ ಗ್ರೀನ್ ಸಿಗ್ನಲ್ ಕೊಡಲು ಹೊರಟಿದೆ.

Related Posts

Leave a Reply

Your email address will not be published. Required fields are marked *