ಮೇ 4ರಂದು ಬದರೀನಾಥ ಬಾಗಿಲು ಓಪನ್
ಋಷಿಕೇಶ: ಹಿಂದೂಗಳೀಗೆ ಅತಿ ಪವಿತ್ರ ಯಾತ್ರಾಸ್ಥಳವಾಗಿರುವ ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿರುವ ಬದರಿನಾಥ ಧಾಮದ ಬಾಗಿಲು ಮೇ 4 ರಂದು ಬೆಳಗ್ಗೆ 6 ಗಂಟೆಗೆ ಭಕ್ತರ ದರ್ಶನಕ್ಕೆ ತೆರೆಯಲಿದೆ. ಬಸಂತ್ ಪಂಚಮಿಯ ಶುಭ ಸಂದರ್ಭದಲ್ಲಿ ತೆಹ್ರಿ ಜಿಲ್ಲೆಯ ನರೇಂದ್ರ ನಗರದ ಅರಮನೆಯಲ್ಲಿ ನಡೆದ ಸರಳ ಧಾರ್ಮಿಕ ಕಾರ್ಯಕ್ರಮದಲ್ಲಿ ಪೂಜೆ ಹಾಗೂ ಪ್ರಾರ್ಥನೆ ನಂತರ ಪಂಚಾಂಗ ಲೆಕ್ಕಾಚಾರದ ಮೂಲಕ ಬದರಿನಾಥ ಧಾಮದ ಬಾಗಿಲು ತೆರೆಯುವ ದಿನಾಂಕವನ್ನು ನಿರ್ಧರಿಸಲಾಯಿತು. ಇದೇ ಸಮಯದಲ್ಲಿ ಗಡು ಘಡ(ಪವಿತ್ರ
ರಿಯಲ್ ಎಸ್ಟೇಟ್ ಗೆ ಎಚ್ಎಂಟಿ ಅರಣ್ಯ ಭೂಮಿ ಬಿಡಬೇಕೆ: ಎಚ್ ಡಿಕೆಗೆ ಈಶ್ವರ ಖಂಡ್ರೆ ತಿರುಗೇಟು
ಬೆಂಗಳೂರು, ಫೆ.3: ಕುದುರೇಮುಖ ಕಬ್ಬಿಣದ ಅದಿರು ಕಂಪನಿ ವಿಚಾರದಲ್ಲಿ ಕೆಐಓಸಿಎಲ್ ತಪ್ಪು ಮುಚ್ಚಿಕೊಳ್ಳಲು ಕರ್ನಾಟಕ ಸರ್ಕಾರದ ಮೇಲೆ ಎಚ್.ಡಿ. ಕುಮಾರಸ್ವಾಮಿ ಮಿಥ್ಯಾರೋಪ ಮಾಡುತ್ತಿದ್ದಾರೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿರುಗೇಟು ನೀಡಿದ್ದಾರೆ. ಬೆಂಗಳೂರಿನಲ್ಲಿಂದು ಮಾತನಾಡಿದ
ಟ್ರಂಪ್ ತೆರಿಗೆ ಅಬ್ಬರಕ್ಕೆ ಪಾತಾಳಕ್ಕೆ ಕುಸಿದ ಭಾರತದ ರೂಪಾಯಿ!
ಹೊಸ ತೆರಿಗೆ ಪದ್ಧತಿ ಜಾರಿ ಘೋಷಿಸುವ ಮೂಲಕ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವ್ಯಾಪಾರ ಸಮರ ಸಾರಿದ ಬೆನ್ನಲ್ಲೇ ಷೇರು ಮಾರುಕಟ್ಟೆಯಲ್ಲಿ ತಲ್ಲಣ ಉಂಟಾಗಿದ್ದು, ಭಾರತದ ರೂಪಾಯಿ ಮೌಲ್ಯ ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ ಕುಸಿದಿದೆ. ಸೋಮವಾರ ಷೇರು ಮಾರುಕಟ್ಟೆ ಆರಂಭಗೊಳ್ಳುತ್ತಿದ್ದಂತೆ ರೂಪಾಯಿ
ಮೈಕ್ರೊ ಫೈನಾನ್ಸ್ ಗಳಿಂದ ಬಡವರ ಮೇಲಿನ ದೌರ್ಜನ್ಯ ತಡೆಯಲು ಸುಗ್ರೀವಾಜ್ಞೆ: ಡಿಕೆ ಶಿವಕುಮಾರ್
ಬೆಂಗಳೂರು: ಬಡವರ ರಕ್ಷಣೆ ನಮ್ಮ ಸರ್ಕಾರದ ಕರ್ತವ್ಯ. ಸಾಲ ವಸೂಲಿ ಹೆಸರಲ್ಲಿ ಮೈಕ್ರೊಫೈನಾನ್ಸ್ ಗಳಿಂದ ಬಡವರಿಗೆ ಆಗುತ್ತಿರುವ ಕಿರುಕುಳ ತಪ್ಪಿಸಲು ನಮ್ಮ ಸರ್ಕಾರ ಸುಗ್ರೀವಾಜ್ಞೆ ರೂಪಿಸಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು. ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್
ಲೋಕಸಭೆಯಲ್ಲಿ ಕುಂಭಮೇಳ ದುರಂತ ಪ್ರತಿಧ್ವನಿ: ಕೋಲಾಹಲ
ಕುಂಭಮೇಳದಲ್ಲಿ ಇತ್ತೀಚೆಗೆ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ 30 ಮಂದಿ ಮೃತಪಟ್ಟ ಘಟನೆ ಸೋಮವಾರ ಪ್ರತಿಪಕ್ಷಗಳು ಪ್ರಸ್ತಾಪಿಸಿದ್ದರಿಂದ ಲೋಕಸಭೆಯಲ್ಲಿ ಕೋಲಾಹಲ ಸೃಷ್ಟಿಯಾಯಿತು. ಬಜೆಟ್ ಅಧಿವೇಶನ ಸೋಮವಾರ ಆರಂಭಗೊಳ್ಳುತ್ತಿದ್ದಂತೆ ಪ್ರತಿಪಕ್ಷಗಳು ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಸಂಭವಿಸಿದ ದುರಂತದ ಬಗ್ಗೆ
ಕಾವೇರಿ ನೀರಿಗಾಗಿ ಬೆಂಗಳೂರಿನಲ್ಲಿ 58 ಸಾವಿರ ಜನ ಅರ್ಜಿ ಸಲ್ಲಿಕೆ!
ಬೆಂಗಳೂರಿನ 110 ಹಳ್ಳಿಗಳಿಗೆ ಕಾವೇರಿ 5ನೇ ಹಂತದ ಕುಡಿಯುವ ನೀರು ಸರಬರಾಜಿಗೆ ಚಾಲನೆ ಸಿಕ್ಕ ಬಳಿಕ ನಮಗೂ ಕಾವೇರಿ ಕುಡಿಯುವ ನೀರಿನ ಸಂಪರ್ಕ ಮಾಡಿಕೊಡಿ ಎಂದು 58 ಸಾವಿರ ಜನರು ಬೆಂಗಳೂರು ಜಲಮಂಡಳಿಗೆ ಅರ್ಜಿ ಸಲ್ಲಿಸಿದ್ದಾರೆ. ಕಳೆದ ವರ್ಷ ಬರಗಾಲ ಆವರಿಸಿ
ಕೆಲಸಗಾರರ ಉತ್ಪಾದಕತೆಗಿಂತ ಮಾನವ ಸಂಬಂಧಗಳ ಉತ್ಪಾದಕತೆ ಹೆಚ್ಚಲಿ
‘ಎಷ್ಟೊತ್ತು ಹೆಂಡತಿಯ ಮುಖವನ್ನೆ ನೋಡುತ್ತಾ ಕೂರುತ್ತೀರಿ’ ಎಂದರೆ ಸಹಧರ್ಮಿಣಿಯನ್ನು ಅಂತರಂಗದ ಗೆಳತಿಯಾಗಿ ಕಂಡಿಲ್ಲದ ಒಡಕಿನ ಭಾವ ಪ್ರತಿಮೆಯಾಗುತ್ತದೆ. ಪಂಚೇಂದ್ರಿಯಗಳನ್ನು ಚುರುಕುಗೊಳಿಸಿಕೊಳ್ಳುವ ಮತ್ತೊಂದು ತಾಣ ಮನೆಯೆಂಬುದನ್ನು ಅರಿಯಬೇಕು. ಮುಖ್ಯವಾಗಿ ಮನೆಯೊಳಗಿನ ಅವಳ ಅಗಾಧ ದುಡಿಮೆ ತಿಳಿವಿಗೆ ತಂದುಕೊಳ್ಳುವ ಮುಕ್ತತೆ ಬೇಕು. ಮಡದಿ- ಮಕ್ಕಳು
ವಿಧವೆಯ ಮದುವೆಯಾಗಿದ್ದ ಪೊಲೀಸ್ ವಿರುದ್ಧ ಡೌರಿ ಕೇಸ್
ಶೇಷಾದ್ರಿಪುರಂ ಠಾಣೆ ಕಾನ್‌ಸ್ಟೇಬಲ್ ಮನೋಜ್ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಾಗಿದೆ. ವಿಧವೆಯಾಗಿದ್ದ ಸಂತ್ರಸ್ತೆಯನ್ನು ಮನೋಜ್ 2024ರ ನ.28 ರಂದು ಮದುವೆ ಆಗಿದ್ದರು. ಮದುವೆಯಾಗಿ ಕ್ವಾಟ್ರಸ್‌ಗೆ ಆಕೆಯನ್ನು ಕರೆ ತಂದಾಗ ಕುಟುಂಬಸ್ಥರು ಅವಾಚ್ಯವಾಗಿ ನಿಂದಿಸಿದ್ದರು. ಬೇರೆಯವರನ್ನು ಮದುವೆಯಾಗಿದ್ದರೆ
ಕಣ್ವ ಅಣೆಕಟ್ಟು ಪ್ರವಾಸೋದ್ಯಮ ತಾಣವಾಗಿ ಅಭಿವೃದ್ಧಿ: ಜನಪ್ರತಿನಿಧಿಗಳ ಸಮಾಲೋಚನೆ
ಕಣ್ವ ಅಣೆಕಟ್ಟು ಪ್ರದೇಶವನ್ನು ಪ್ರವಾಸೋದ್ಯಮ ತಾಣವಾಗಿ ಅಭಿವೃದ್ಧಿ ಮಾಡುವ ಬಗ್ಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಜನಪ್ರತಿನಿಧಿಗಳ ಜತೆ ಸಮಾಲೋಚನೆ ನಡೆಸಿದರು. ಚನ್ನಪಟ್ಟಣ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನ ನಂತರ ಮತದಾರರಿಗೆ ಕೃತಜ್ಞತಾ ಸಮಾವೇಶ ನಡೆಸಿದ ಬಳಿಕ ಡಿಸಿಎಂ ಡಿ.ಕೆ. ಶಿವಕುಮಾರ್ ಕಣ್ವ
ಶಾಲಾ ಆವರಣದಲ್ಲೇ ಬಾಲಕಿಯ ಗ್ಯಾಂಗ್ ರೇಪ್: ಸರ್ಕಾರದ ವಿರುದ್ಧ ಅಶೋಕ್ ಕಿಡಿ
ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ದಿನದಿಂದಲೂ ಮಹಿಳೆಯರಿಗೆ ರಕ್ಷಣೆಯೇ ಇಲ್ಲದಂತಾಗಿದ್ದು ದಿನಕ್ಕೊಂದು ಮಾನಭಂಗ, ಅತ್ಯಾಚಾರ ಪ್ರಕರಣಗಳು ರಾಜ್ಯದ ಜನತೆಯನ್ನು ಬೆಚ್ಚಿ ಬೀಳಿಸುತ್ತಲೇ ಇದೆ. ಮಂಡ್ಯದಲ್ಲಿ 8 ವರ್ಷದ ಬಾಲಕಿಯನ್ನು ಬೆದರಿಸಿ ಸರ್ಕಾರಿ ಶಾಲಾ ಅವರಣದಲ್ಲೇ ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ಮಾಡಿರುವ ಘಟನೆ ರಾಜ್ಯದಲ್ಲಿ




