Menu

ಆನ್‌ಲೈನ್ ಬೆಟ್ಟಿಂಗ್: ಅಲ್ಪಾವಧಿಯಲ್ಲಿ 2000 ಕೋಟಿ ರೂಪಾಯಿ ಲಾಭ ಗಳಿಸಿರುವ ವೀರೇಂದ್ರ ಪಪ್ಪಿ

ಚಿತ್ರದುರ್ಗ ಕಾಂಗ್ರೆಸ್ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಮತ್ತು ಸಹಚರರು ಆನ್‌ಲೈನ್ ಬೆಟ್ಟಿಂಗ್ ಆಪ್‌ಗಳ ಮೂಲಕ ಅಲ್ಪಾವಧಿಯಲ್ಲಿ 2000 ಕೋಟಿ ರೂಪಾಯಿ ಲಾಭ ಗಳಿಸಿರುವ ಆರೋಪವಿದ್ದು, ಈ ಹಣವನ್ನು 262 ಮ್ಯೂಲ್ ಖಾತೆಗಳ ಮೂಲಕ ಸಂಗ್ರಹಿಸಲಾಗಿದೆ ಎಂದು ಇಡಿ ಹೇಳಿದೆ. ಈ ಕಂಪನಿಗಳು ಕಾಲ್‌ಸೆಂಟರ್‌ಗಳ ಮೂಲಕ ಗೇಮಿಂಗ್ ವ್ಯವಹಾರವನ್ನು ನಿರ್ವಹಿಸುತ್ತಿದ್ದವು ಎಂಬುದು ತನಿಖೆಯಲ್ಲಿ ಬಯಲಾಗಿದೆ. ಅಕ್ರಮ ಆನ್ಲೈನ್ ಬೆಟ್ಟಿಂಗ್ ಮತ್ತು ಗೇಮಿಂಗ್ ವ್ಯವಹಾರದ ಆರೋಪದ ಮೇಲೆ ಬಂಧಿತ ವೀರೇಂದ್ರ ಪಪ್ಪಿ

ಧರ್ಮಸ್ಥಳ ಪ್ರಕರಣ: ಚಿನ್ನಯ್ಯ ಪರ ವಕೀಲರ ವಿರುದ್ಧ ಎಸ್‌ಐಟಿಗೆ ದೂರು

ಧರ್ಮಸ್ಥಳ ಅಸಹಜ ಸಾವುಗಳ ತನಿಖೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿನ್ನಯ್ಯ ಜೊತೆ ಇದ್ದ ವಕೀಲರಿಗೆ ಎಸ್‌ಐಟಿ ನೋಟಿಸ್‌ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.  ಚಿನ್ನಯ್ಯ ಪರ ವಕೀಲ ಕೆ.ವಿ.ಧನಂಜಯ್ ಹಾಗೂ ತಂಡದ ವಿರುದ್ಧ ತನಿಖೆ ನಡೆಸುವಂತೆ ಕೋರಿ ಗಾಮಸ್ಥರು ದೂರು ನೀಡಿದ್ದಾರೆ. ವಕೀಲ

ಪೋಕ್ಸೋ ಪ್ರಕರಣ: ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತಕ್ಕೆ ಸಿಕ್ಕಿಬಿದ್ದ ದೇವನಹಳ್ಳಿ ಪೊಲೀಸ್‌

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪೊಲೀಸ್ ಠಾಣೆ ಮೇಲೆ ಲೋಕಾಯುಕ್ತ ದಾಳಿ ನಡೆಸಿದ್ದು, ಪೋಕ್ಸೋ ಪ್ರಕರಣ ಸಂಬಂಧ ಲಂಚ ಪಡೆಯುತ್ತಿದ್ದ ಪಿಸಿ ಅಂಬರೀಷ್ ಎಂಬವರು ರೆಡ್‌ಹ್ಯಾಂಡ್‌ ಆಗಿ ಸಿಕ್ಕಿ ಬಿದ್ದಿದ್ದಾರೆ. ಚಾರ್ಜ್ ಶೀಟ್ ಸ್ಟ್ರಾಂಗ್‌ ಮಾಡಲು ಪಿಎಸ್‌ಐ ಜಗದೇವಿ ಅವರು ಪಿಸಿ

ಜಕ್ಕೂರು ಏರೋಡ್ರೋಂ ವಿಸ್ತರಣೆ ಹಾಗೂ ಸ್ಥಳ ಬಳಕೆಗೆ ಚಿಂತನೆ: ಸಿಎಂ ಸಿದ್ದರಾಮಯ್ಯ

ಜಕ್ಕೂರು ಎರೋಡ್ರೋಂ ರನ್ ವೇ ವಿಸ್ತರಣೆ ಮಾಡುವುದು ಹಾಗೂ ಈ ಜಾಗವನ್ನು ಸಂಪೂರ್ಣವಾಗಿ ಸಾರ್ವಜನಿಕ ಉಪಯೋಗಕ್ಕೆ ಬಳಸಿಕೊಳ್ಳಲು ಸರ್ಕಾರದಿಂದ ಏನು ಮಾಡಬಹುದು ಎನ್ನುವ ಬಗ್ಗೆ ಚಿಂತನೆ ನಡೆದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ  ಹೇಳಿದ್ದಾರೆ. ಅವರು ಜಕ್ಕೂರು ಸರ್ಕಾರಿ ವೈಮಾನಿಕ ತರಬೇತಿ ಶಾಲೆ

ಇನ್ನು ಜಿಎಸ್ಟಿ ಸ್ಲ್ಯಾಬ್ 5%, 18% ಅಷ್ಟೇ: ಸಚಿವೆ ನಿರ್ಮಲಾ ಸೀತಾರಾಮನ್‌

ಜಿಎಸ್‌ಟಿ ಕೌನ್ಸಿಲ್‌ ಎಂಟು ವರ್ಷದ ಬಳಿಕ ಜಿಎಸ್‌ಟಿ ಸ್ಲ್ಯಾಬ್‌ ಪರಿಷ್ಕರಣೆಗೆ ಕ್ರಮ ಕೈಗೊಂಡಿದ್ದು, ದೇಶದಲ್ಲಿ ಎರಡು ಜಿಎಸ್‌ಟಿ ಸ್ಲ್ಯಾಬ್‌ ಇರಲಿದ್ದು ಸೆ.22 ರಿಂದ ನೂತನ ದರಗಳು ಅನ್ವಯವಾಗಲಿದೆ. ನಾಲ್ಕು ಸ್ಲ್ಯಾಬ್ ಬದಲಿಗೆ 5%, 18% ಸ್ಲ್ಯಾಬ್ ಜೊತೆಗೆ ಐಷರಾಮಿ ವಸ್ತುಗಳಿಗೆ 40%

ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3 ಅನುಷ್ಠಾನ: ಮೂರು ದಿನಗಳಲ್ಲಿ ಅಂತಿಮ ತೀರ್ಮಾನವೆಂದ ಡಿಕೆ ಶಿವಕುಮಾರ್‌

ಕೃಷ್ಣಾ ಮೇಲ್ದಂಡೆ ಯೋಜನೆಯ ಹಂತ-3ರ ಅನುಷ್ಠಾನಕ್ಕೆ ಕೇಂದ್ರ ಜಲಶಕ್ತಿ ಸಚಿವರಲ್ಲಿ ಮನವಿ ಮಾಡಿದ್ದೇನೆ. ಅವರು ಸಹ ಈ ಬಗ್ಗೆ ಶೀಘ್ರದಲ್ಲೇ ಸಭೆ ನಿಗದಿ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ. ನಮ್ಮ ಸರ್ಕಾರ ಈ ಯೋಜನೆ ಸಾಕಾರಕ್ಕೆ ಬದ್ಧವಾಗಿದೆ. ಎರಡು- ಮೂರು ದಿನಗಳಲ್ಲಿ

ಜಿಬಿಎ  ನೂತನ ಪಾಲಿಕೆ ಕಚೇರಿಗಳಿಗೆ ನ. 1 ರಂದು ಭೂಮಿಪೂಜೆ, ಐದು ಪಾಲಿಕೆಗಳಿಗೆ 300 ಕೋಟಿ ರೂ. : ಡಿಸಿಎಂ

ಐದು ಪಾಲಿಕೆಗಳ ನೂತನ ಕಚೇರಿಗೆ ಭೂಮಿಪೂಜೆಯನ್ನು ನವೆಂಬರ್ 1 ರಂದು ನೆರವೇರಿಸಲಾಗುವುದು. ಎಲ್ಲಾ ಪಾಲಿಕೆಗಳ ಗಡಿ ಭಾಗಗಳಲ್ಲಿ ಗಡಿ ಗೋಪುರಗಳನ್ನು ನಿರ್ಮಾಣ ಮಾಡಲಾಗುವುದು ಎಂದು ಡಿಸಿಎಂ ಡಿಕೆ ಶಿವಕುಮಾರ್  ತಿಳಿಸಿದರು. ಗ್ರೇಟರ್ ಬೆಂಗಳೂರು ಪ್ರಾಧಿಕಾರ ಕಚೇರಿಯ ನಾಮಫಲಕ ಅನಾವರಣಗೊಳಿಸಿದ ನಂತರ ಶಿವಕುಮಾರ್ 

ಜಿಬಿಎ- ಬೆಳವಣಿಗೆಯ ಮಹಾಮೆಟ್ಟಿಲು, ಸಮತೋಲನ ಮತ್ತು ಪರಿಸರ ಸಾಮರಸ್ಯ ಕಾಪಾಡುವ ದೂರದೃಷ್ಟಿ ಅಗತ್ಯ

ಗ್ರೇಟರ್ ಬೆಂಗಳೂರಿನ ರಚನೆಯಿಂದ ದೇವನಹಳ್ಳಿಯ ದ್ರಾಕ್ಷಿ,ಸಪೋಟಾ, ರಾಮನಗರದ ರೇಷ್ಮೆ, ಚನ್ನಪಟ್ಟಣದ ಕರಕುಶಲಗೊಂಬೆ, ಮಾಗಡಿ, ನೆಲಮಂಗಲ ಹಾಗೂ ದೊಡ್ಡಬಳ್ಳಾಪುರದ ಹೂವು ಮತ್ತು ತರಕಾರಿಗಳಿಗೆ ಮತ್ತಷ್ಟು ಬೇಡಿಕೆ ಉಂಟಾಗುವುದು. ಒಟ್ಟಿನಲ್ಲಿ ರಾಜ್ಯ ಸರ್ಕಾರದ ಈ ಪ್ರಮುಖ ತೀರ್ಮಾನವು ಬೆಂಗಳೂರಿನ ಮತ್ತಷ್ಟು ಪ್ರಗತಿ ಹಾಗೂ ಕೀರ್ತಿಗೆ

ಮಂಡಿಯಲ್ಲಿ ಮಳೆಗೆ ಭೂಕುಸಿತ: ಆರು ಮಂದಿ ಸಾವು

ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಸುಂದರ್‌ನಗರ ಉಪವಿಭಾಗದ ಜಂಗಮ್ ಬಾಗ್‌ನಲ್ಲಿ ವ್ಯಾಪಕ ಮಳೆಯಿಂದಾಗಿ ಭೂಕುಸಿತ ಸಂಭವಿಸಿ ಬಾಲಕಿ ಸೇರಿದಂತೆ ಕನಿಷ್ಠ ಆರು ಜನ ಮೃತಪಟ್ಟಿದ್ದು, ಹಲವರು ಅವಶೇಷಗಳಡಿ ಸಿಲುಕಿದ್ದಾರೆ ಎನ್ನಲಾಗಿದೆ. ಗುಡ್ಡದ ದೊಡ್ಡ ಭಾಗ ಹಠಾತ್ತನೆ ಕುಸಿದು ಎರಡು ಮನೆಗಳು ನಜ್ಜುಗುಜ್ಜಾಗಿದ್ದು,

ಚಿನ್ನ ಕಳ್ಳಸಾಗಣೆ: ಜೈಲಲ್ಲಿರುವ ರನ್ಯಾ ರಾವ್‌ಗೆ 102.55 ಕೋಟಿ ರೂ. ದಂಡ

ಚಿನ್ನ ಕಳ್ಳಸಾಗಣೆ ಆರೋಪದಡಿ ಜೈಲಿನಲ್ಲಿರುವ ನಟಿ ರನ್ಯಾ ರಾವ್‌ ಅವರನ್ನು ಭೇಟಿ ಮಾಡಿರುವ ಡಿಆರ್​ಐ ಅಧಿಕಾರಿಗಳು 102.55 ಕೋಟಿ ರೂ. ದಂಡ ಪಾವತಿಸುವಂತೆ ನೋಟಿಸ್ ನೀಡಿದ್ದಾರೆ. 127.3 ಕೆಜಿ ಚಿನ್ನ ಸಾಗಣೆ ಪ್ರಕರಣ ಸಂಬಂಧ ಡಿಆರ್​ಐ ರನ್ಯಾಗೆ ಶೋಕಾಸ್ ನೋಟಿಸ್​ ನೀಡಿ,