ಹಣಕಾಸು ವ್ಯವಹಾರ: ವ್ಯಕ್ತಿಯ ಕಿಡ್ನ್ಯಾಪ್ ಮಾಡಿ ದೌರ್ಜನ್ಯ
ಬೆಂಗಳೂರಿನ ಕೋರಮಂಗಲದಲ್ಲಿ ಹಣಕಾಸು ವಿಚಾರಕ್ಕೆ ಸಂಬಂಧಿಸಿದ ಮನಸ್ತಾಪ ತೀವ್ರಗೊಂಡು ವ್ಯಕ್ತಿಯನ್ನು ಕಿಡ್ನ್ಯಾಪ್ ಮಾಡಿದ ಗ್ಯಾಂಗ್ ಮರ್ಮಾಂಗಕ್ಕೆ ಸಿಗರೇಟ್ ನಿಂದ ಸುಟ್ಟು ವಿಕೃತಿ ಮೆರೆದಿದೆ. ಗ್ಯಾಂಗ್‌ನಲ್ಲಿದ್ದವರು ಇಂಜೆಕ್ಷನ್ ಚುಚ್ಚಿ ವ್ಯಕ್ತಿಗೆ ಚಿತ್ರಹಿಂಸೆ ನೀಡಿದ್ದು, ಆತ ಕಾರಿನಲ್ಲಿ ಜೋರಾಗಿ ಕೂಗಿದ ಹಿನ್ನಲೆ ಬಚಾವಾಗಿದ್ದಾನೆ. ಸಗಾಯ್ ರಾಜ್ ಎಂಬಾತನಿಗೆ ವಿಕೃತ ಚಿತ್ರಹಿಂಸೆ ನೀಡಿದ ಆರೋಪಿಗಳು. ಈ ಹಿಂದೆ ಆನಂದ್ ಕುಮಾರ್ ಎಂಬಾತನಿಗೆ ಸಗಾಯ್ ರಾಜ್ ಹಣ ನೀಡಿದ್ದ, ತಂದೆಗೆ ಕಿಡ್ನಿ ಫೇಲ್ಯೂರ್ ಎಂದು ಹೇಳಿ
ಜೆಪಿ ಪಾರ್ಕ್‌ನಲ್ಲಿ ನಡಿಗೆ, ಸಾರ್ವಜನಿಕ ಅಹವಾಲು ಆಲಿಸಿದ ಡಿಕೆ ಶಿವಕುಮಾರ್, ನನಗೆ ಆಹ್ವಾನವಿಲ್ಲವೆಂದು ಮುನಿರತ್ನ ಕಿರಿಕ್
ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ನಾಗರಿಕರಿಗೆ ಸ್ಪಂದಿಸುವ ಉದ್ದೇಶದಿಂದ, ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ “ಬೆಂಗಳೂರು ನಡಿಗೆ” ಕಾರ್ಯಕ್ರಮದಡಿ ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಗೊಳಪಡುವ ಮತ್ತಿಕೆರೆಯ ಜಯಪ್ರಕಾಶ್ ನಾರಾಯಣ್ ಉದ್ಯಾನವನದಲ್ಲಿ ನಾಗರಿಕರ ಜೊತೆ ನಡಿಗೆಯಲ್ಲಿ ಪಾಲ್ಗೊಂಡರು.
ಬಸವಕಲ್ಯಾಣದಲ್ಲಿ ಆಟವಾಡುತ್ತಿದ್ದ ಮಗು ಬಾವಿಗೆ ಬಿದ್ದು ಸಾವು
ಬೀದರ್‌ನ ಬಸವಕಲ್ಯಾಣ ಪಟ್ಟಣದ ಈಶ್ವರ ಕಾಲೊನಿಯಲ್ಲಿ ಆಟ ಆಡುವಾಗ ಬಾವಿಗೆ ಬಿದ್ದು ಆರು ವರ್ಷದ ಮಗು ಮೃತಪಟ್ಟಿದೆ. ಬಸವಕಲ್ಯಾಣ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆಯ ಪಕ್ಕದಲ್ಲಿ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಬಾವಿಗೆ ಬಿದ್ದು ಶೇಖ್ ನುಸ್ತಕಿಮ್ ಅಕ್ಬರಲಿ ಎಂಬ ಮಗು ಅಸು
ಋತುಚಕ್ರ ರಜೆ ನೀತಿ: ಕಾನೂನು ಪಾಲನೆ ಮಾಡದವರ ವಿರುದ್ಧ ಕ್ರಮ
ಋತುಚಕ್ರ ರಜೆಯನ್ನು ಸಂಬಂಧಿಸಿದ ಕಂಪನಿಗಳು ಮಹಿಳಾ ಉದ್ಯೋಗಿಗಳಿಗೆ ನೀಡಬೇಕು. ಈ ಸಂಬಂಧ ನಿಯಮ ರೂಪಿಸಲಾಗುವುದು. ಸರ್ಕಾರ ಕಾನೂನು ಮಾಡಿದರೆ ಕಂಪನಿಗಳು ಪಾಲನೆ ಮಾಡಲೇಬೇಕು ಎಂದು ಎಂದು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಎಸ್ ಲಾಡ್ ಹೇಳಿದರು. ಋತುಚಕ್ರ
ಜಿಬಿಎ ಸಭೆಗೆ ಗೈರಾದ ಬಿಜೆಪಿಯವರು ಬೆಂಗಳೂರು ಅಭಿವೃದ್ಧಿಯ ವಿರೋಧಿಗಳು: ಸಿಎಂ ಸಿದ್ದರಾಮಯ್ಯ
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಸಭೆಗೆ ಹಾಜರಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಬಹುದಾಗಿದ್ದರೂ, ಸಭೆಗೆ ಗೈರಾಗುವ ಮೂಲಕ ಬಿಜೆಪಿಯವರು ಬೆಂಗಳೂರಿನ ಅಭಿವೃದ್ಧಿಯ ವಿರೋಧಿಗಳೆಂದು ನಿರೂಪಿಸಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಜಿಬಿಎ ಸಭೆಗೆ ಬಿಜೆಪಿಯವರು ಗೈರಾಗಿದ್ದ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸುತ್ತಾ, ಬಿಜೆಪಿಗರಿಗೆ
ಇತಿಹಾಸ ಪ್ರಸಿದ್ಧ ಹಾಸನಾಂಬ ಜಾತ್ರಾ ಸಂಭ್ರಮ: ಇಂದಿನಿಂದ 3 ದಿನದ ವೇಳಾಪಟ್ಟಿ
ವರ್ಷಕ್ಕೊಮ್ಮೆ ಮಾತ್ರ ಭಕ್ತರಿಗೆ ದೇವಿಯ ದರ್ಶನ ಸಿಗುವ ಇತಿಹಾಸ ಪ್ರಸಿದ್ಧ ಹಾಸನಾಂಬ ಜಾತ್ರೆ ಅಕ್ಟೋಬರ್ 9 ರಿಂದ ಆರಂಭಗೊಂಡಿದ್ದು, ಅ.23ರಂದು ದೇವಾಲಯದ ಬಾಗಿಲು ಮುಚ್ಚಲಿದೆ. ಈಗಾಗಲೇ ಮೂರು ದಿನಗಳ ಸಂಭ್ರಮದ ಜಾತ್ರೆಯಲ್ಲಿ ಹಲವು ಕಾರ್ಯಕ್ರಮಗಳು ನಡೆದಿವೆ, ಮುಂದಿನ ಮೂರು ದಿನಗಳ ಅಕ್ಟೋಬರ್
ದಾವಣಗೆರೆ: 150 ಕೋಟಿ ಕನ್ನ ಹಾಕಿದ ಸೈಬರ್ ವಂಚಕ ಅರೆಸ್ಟ್
ಸಿಸಿಟಿವಿ ಕೆಲಸ ಮಾಡಿಕೊಂಡು ದೇಶದ ನಾನಾ ಬ್ಯಾಂಕ್ ಖಾತೆಗಳಿಂದ 150 ಕೋಟಿ ರೂ. ದೋಚಿದ್ದ ಸೈಬರ್ ವಂಚಕನನ್ನು ದಾವಣೆಗೆರೆ ಸೈಬರ್ ಠಾಣೆ ಪೊಲೀಸರು ಬಂಧಿಸಿದ್ದು, ಇನ್ನಿಬ್ಬರು ತಲೆಮರೆಸಿಕೊಂಡಿದ್ದಾರೆ. ಹಾಸನ ಜಿಲ್ಲೆಯ ಬೇಲೂರು ಟೌನ್ ಶಾಂತಿನಗರ ನಿವಾಸಿ ಸೈಯದ್ ಅರ್ಫಾತ್ (28) ಎಂಬಾತನನ್ನು
ನಿಷೇಧಿತ ಪಿಎಫ್ ಐ ಸಕ್ರಿಯಗೊಳಿಸಲು ಪ್ರಚೋದನೆ ನೀಡುತ್ತಿದ್ದ ಧರ್ಮಗುರು ಅರೆಸ್ಟ್
ನಿಷೇಧಿತ ಪಿಎಫ್‌ಐ ಸಂಘಟನೆ ಸಕ್ರಿಯಗೊಳಿಸಲು ಪ್ರಚೋದನೆ ನೀಡುತ್ತಿದ ಮುಸ್ಲಿಂ ಧರ್ಮಗುರುವನ್ನು ಮಂಗಳೂರಿನಲ್ಲಿ ಬಂಧಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಕಡಬ ನಿವಾಸಿ ಸೈಯ್ಯದ್ ಇಬ್ರಾಹಿಂ ತಂಙಳ್ ಬಂಧಿತ ಆರೋಪಿ. ಭೂಗತರಾಗಿರುವ ಪಿಎಫ್‌ಐ ಸದಸ್ಯರನ್ನು ಸಂಪರ್ಕಿಸಿದ್ದ ಸೈಯ್ಯದ್ ಇಬ್ರಾಹಿಂ ತಂಙಳ್ ಸಲ್ಮಾನ್ ಸಲಾಂ
ಮಂಗಳೂರಿನಲ್ಲಿ ಮಲಯಾಳಂ ನಟ ಜಯಕೃಷ್ಣನ್ ಅರೆಸ್ಟ್!
ಕ್ಯಾಬ್ ಚಾಲಕನಿಗೆ ಟೆರರಿಸ್ಟ್ ಎಂದು ನಿಂದಿಸಿದ ಮಲಯಾಳಂ ಖ್ಯಾತ ನಟ ಜಯಕೃಷ್ಣನ್ ಸೇರಿದಂತೆ ಮೂವರನ್ನು ಮಂಗಳೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ. ಸೆ.9ರಂದು ಮಂಗಳೂರಿಗೆ ಭೇಟಿ ನೀಡಿದ್ದ ಜಯಕೃಷ್ಣನ್, ಸಂತೋಷ್ ಅಬ್ರಾಹಂ, ವಿಮಲ್ ಅವರನ್ನು ಊರ್ವ ಪೊಲೀಸರು ಬಂಧಿಸಿದ್ದಾರೆ. ಜಯಕೃಷ್ಣನ್ ಹಾಗೂ ಸ್ನೇಹಿತರು ಮಂಗಳೂರಿಗೆ
5 ವರ್ಷಗಳಲ್ಲೇ ಗರಿಷ್ಠ ಭಕ್ತರಿಂದ ಹಾಸನಾಂಬೆ ದರ್ಶನ: ಸಚಿವ ಕೃಷ್ಣ ಬೈರೇಗೌಡ
ಹಾಸನ: ವರ್ಷಕ್ಕೊಮ್ಮೆ ಬಾಗಿಲು ತೆರೆಯುವ ಹಾಸನದ ನಾಡದೇವಿ ಹಾಸನಾಂಬೆ ದೇವಿಯ ದರ್ಶನಕ್ಕೆ ಭಕ್ತ ಸಾಗರ ಹರಿದು ಬರುತ್ತಿದ್ದು, ಜಿಲ್ಲಾಡಳಿತದ ವ್ಯವಸ್ಥೆಯಿಂದ ಯಾವುದೇ ಗೊಂದಲವಿಲ್ಲದೇ ಭಕ್ತರು ದರ್ಶನ ಪಡೆಯುತ್ತಿದ್ದಾರೆ. ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಭೈರೇಗೌಡ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಭಕ್ತರು




