Menu

ಹುಣಸೂರಿನಲ್ಲಿ ತಾಯಿಯೊಂದಿಗೆ ಸೆರೆಯಾಗಿದ್ದ ನಾಲ್ಕು ಹುಲಿ ಮರಿಗಳ ಸಾವು

ಹುಣಸೂರು ತಾಲೂಕಿನ ಗೌಡನಕಟ್ಟೆಯಲ್ಲಿ ತಾಯಿಯೊಂದಿಗೆ ಇತ್ತೀಚೆಗೆ ಸೆರೆ ಸಿಕ್ಕಿದ್ದ ನಾಲ್ಕು ಹುಲಿ ಮರಿಗಳು ಮೃತಪಟ್ಟಿವೆ. ತಾಯಿ ಹುಲಿಯನ್ನು ಸೆರೆ ಹಿಡಿದ ಬಳಿಕ ಮರಿಗಳು ಆಹಾರವಿಲ್ಲದೆ ಹೆದರಿ ನಿತ್ರಾಣಗೊಂಡಿದ್ದವು. ಅವುಗಳಿಗೆ ಚಿಕಿತ್ಸೆ ನೀಡುತ್ತಿದ್ದರೂ ಪ್ರಾಣ ಕಳೆದುಕೊಂಡಿವೆ. ಮರಿಗಳ ಸಾವಿಗೆ ನಿಖರ ಕಾರಣ ತಿಳಿಯಲು ಪಶುವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿದ್ದು, ವರದಿ ಬಂದ ಬಳಿಕ ಕಾರಣ ತಿಳಿಯಲಿದೆ. ಗೌಡನಕಟ್ಟೆ ಗ್ರಾಮದಲ್ಲಿ ನವೆಂಬರ್ 28ರಂದು ಈ ನಾಲ್ಕು ಮರಿಗಳ ಜೊತೆಗೆ ತಾಯಿ ಹುಲಿಯೂ ಕಾಣಿಸಿಕೊಂಡಿದ್ದು,

ಬಿಜೆಪಿ ಸಂಸದರು ಸಂಸತ್ತಿನಲ್ಲಿ ಕರ್ನಾಟಕದ ಬಗ್ಗೆ ಯಾಕೆ ಮಾತನಾಡೋಲ್ಲ: ಸಚಿವ ಸಂತೋಷ್‌ ಲಾಡ್‌ ವಾಗ್ದಾಳಿ

ಬಿಜೆಪಿ ಸಂಸದರು ಕರ್ನಾಟಕದ ಬಗ್ಗೆ ಸಂಸತ್ತಿನಲ್ಲಿ ಚಕಾರ ಎತ್ತುವುದಿಲ್ಲ. ಕಳೆದ ಹನ್ನೊಂದು ವರ್ಷದಲ್ಲಿ ಯಾರು ಮಾತನಾಡಿದ್ದಾರೆ, ದೇಶದಲ್ಲಿ ಸಾಲ ಹತ್ತುಪಟ್ಟು ಹೆಚ್ಚಾಗಿದೆ. ಇದರ ಬಗ್ಗೆ ಯಾರೂ ಚಕಾರ ಎತ್ತುವುದಿಲ್ಲ ಎಂದು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಲಾಡ್‌  ವಾಗ್ದಾಳಿ

ಹಳೆ ಪದ್ಧತಿಯಲ್ಲೇ ಇ-ಖಾತೆ ಅರ್ಜಿ ವಿಲೇವಾರಿ: ಡಿಕೆ ಶಿವಕುಮಾರ್‌

“ಖಾತೆ ವಿಲೇವಾರಿಗೆ ತಂದಿದ್ದ ರೌಂಡ್‌ ರಾಬಿನ್‌ ಪದ್ಧತಿಯನ್ನು ರದ್ದು ಮಾಡಲಾಗಿದೆ. ಜಿಬಿಎ ವ್ಯಾಪ್ತಿಯಲ್ಲಿ ಇ-ಖಾತೆ ಹಂಚಿಕೆಗೆ 6,450 ಅರ್ಜಿಗಳು ಮಾತ್ರ ಬಾಕಿಯಿರುವ ಕಾರಣಕ್ಕೆ ಹಳೆ ಪದ್ಧತಿಯಲ್ಲಿಯೇ ಅರ್ಜಿಗಳನ್ನು ವಿಲೇವಾರಿ ಮಾಡಲಾಗು ವುದು” ಎಂದು ಡಿಸಿಎಂ ಡಿಕೆ ಶಿವಕುಮಾರ್‌ ಹೇಳಿದ್ದಾರೆ. ಬೆಳಗಾವಿ ಸುವರ್ಣ

ರಮೇಶ್ ಬಾಬು, ಅರತಿ ಕೃಷ್ಣ, ಜಕ್ಕಪ್ಪನವರ, ಶಿವಕುಮಾರ್ ನೇಮಕ: ಮೇಲ್ಮನೆಯಲ್ಲಿ ಕಾಂಗ್ರೆಸ್ ಬಲ ಹೆಚ್ಚಳ

ಬೆಳಗಾವಿ: ರಮೇಶ್ ಬಾಬು,ಅರತಿ ಕೃಷ್ಣ ಸೇರಿ ನಾಲ್ವರು ಸದಸ್ಯರನ್ನು ನಾಮನಿರ್ದೇಶನ ಮಾಡಿರುವ ಹಿನ್ನೆಲೆಯಲ್ಲಿ ಮೇಲ್ಮನೆಯಲ್ಲಿ ಕಾಂಗ್ರೆಸ್‌‍ ತನ್ನ ಬಲವನ್ನು ವೃದ್ಧಿಸಿಕೊಂಡಿದೆ. 75 ಸದಸ್ಯ ಬಲದ ವಿಧಾನಪರಿಷತ್‌ನಲ್ಲಿ ಹೊಸದಾಗಿ ನಾಲ್ವರು ನಾಮನಿರ್ದೇಶಿತ ಸದಸ್ಯರು ನೇಮಕವಾಗಿರುವುದರಿಂದ ಕಾಂಗ್ರೆಸ್‌‍ 37, ಬಿಜೆಪಿ, 29, ಜೆಡಿಎಸ್‌‍ 7

ಐಪಿಎಲ್ ಹರಾಜು ಪಟ್ಟಿಯಿಂದ 1005 ಆಟಗಾರರಿಗೆ ಕೊಕ್!

ಮುಂಬೈ: ಐಪಿಎಲ್ ಹರಾಜು ಪಟ್ಟಿಯಿಂದ 1005 ಆಟಗಾರರನ್ನು ಹೊರಗಿಟ್ಟ ಬಿಸಿಸಿಐ ಹೊಸದಾಗಿ 35 ಆಟಗಾರರನ್ನು ಸೇರ್ಪಡೆಗೊಳಿಸಿ ಅಚ್ಚರಿ ಮೂಡಿಸಿದೆ. ಐಪಿಎಲ್ ಹರಾಜಿನ ಅಂತಿಮ ಪಟ್ಟಿಯನ್ನು ಇತ್ತೀಚೆಗಷ್ಟೇ ಬಿಡುಗಡೆ ಮಾಡಿದ್ದ ಬಿಸಿಸಿಐ ಇದೀಗ ಫ್ರಾಂಚೈಸಿಗಳ ಬೇಡಿಕೆ ಮೇರೆಗೆ ಪಟ್ಟಿಯಲ್ಲಿ ಇಲ್ಲದ 35 ಆಟಗಾರರನ್ನು

ಮೈಸೂರಿನಲ್ಲಿ ಹೊಸ ಬಡಾವಣೆ ನಿರ್ಮಾಣಕ್ಕಾಗಿ 300 ಎಕರೆ ಭೂಮಿ ಮೀಸಲು: ಸಚಿವ ಬೈರತಿ ಸುರೇಶ್

ಸುವರ್ಣವಿಧಾನಪರಿಷತ್ತು: ಅರಮನೆ ನಗರಿ ಮೈಸೂರಿನಲ್ಲಿ 300 ಎಕರೆ ಪ್ರದೇಶದಲ್ಲಿ ನೂತನ ಬಡಾವಣೆ ನಿರ್ಮಾಣ ಮಾಡಲಾಗುತ್ತದೆ ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ. ಮಂಗಳವಾರ ವಿಧಾನಪರಿಷತ್ತಿನಲ್ಲಿ ಸದಸ್ಯ ಕೆ.ಶಿವಕುಮಾರ್ ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ಸಮಗ್ರ

ಭೂ ಲೂಟಿಕೋರ ಜೊತೆ ಶಾಮೀಲು 24 ಅಧಿಕಾರಿಗಳ ವಿರುದ್ಧ ದೋಷಾರೋಪ ಪಟ್ಟಿ: ಸಚಿವ ಕೃಷ್ಣ ಬೈರೇಗೌಡ

ಬೆಳಗಾವಿ: ಬಗರ್ ಹುಕುಂ ಫಾರ್ಮ್ 50-53 ರಲ್ಲಿ ಜಮೀನು ಮಂಜೂರು ಪ್ರಕರಣಗಳಲ್ಲಿ ಪ್ರಾಮಾಣಿಕರು ಹಾಗೂ ಅಮಾಯಕರಿಗೆ ತೊಂದರೆ ನೀಡಲ್ಲ. ಆದರೆ, ಅಕ್ರಮವಾಗಿ ಭೂ ಮಂಜೂರಾತಿ ಪಡೆದ ಲೂಟಿ ಕೋರರು ಹಾಗೂ ಅಕ್ರಮದಲ್ಲಿ ಶಾಮೀಲಾದ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು

ಮೇ 17ರಿಂದ ಜೆಇಇ ಅಡ್ವಾನ್ಸ್ ಪರೀಕ್ಷೆ: ಐಐಟಿ ರೂರ್ಕಿಗೆ ಪರೀಕ್ಷಾ ಜವಾಬ್ದಾರಿ!

ದೇಶದ ಅತ್ಯಂತ ಪ್ರತಿಷ್ಠಿತ ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆ ಮತ್ತು ವಿಶ್ವದ ಎರಡನೇ ಅತ್ಯಂತ ಕಠಿಣ ಪರೀಕ್ಷೆ ಎಂದು ಕರೆಯಲಾಗುವ ಜೆಇಇ 2026ರ ಜಂಟಿ ಪ್ರವೇಶ ಪರೀಕ್ಷೆ ಅಡ್ವಾನ್ಸ್ಡ್​​ ಮೇ 17ರಂದು ನಡೆಯಲಿದ್ದು, ಈ ಬಾರಿ ಪರೀಕ್ಷೆ ಆಯೋಜಿಸುವ ಹೊಣೆಯನ್ನು ಐಐಟಿ ರೂರ್ಕಿಗೆ

ಗಂಡನಿಂದ ಮೋಸ: ಕಬಡ್ಡಿ ಆಟಗಾರ್ತಿ ಆತ್ಮಹತ್ಯೆ

ಮದುವೆ ಆದ ಮೇಲೆ ಕೆಲಸ ಕೊಡಿಸುವುದಾಗಿ ನಂಬಿಸಿ ಮದುವೆ ಆಗಿದ್ದ ಪತಿ ಮಾಡಿದ ವಂಚನೆ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಕಬಡ್ಡಿ ಆಟಗಾರ್ತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ. 29 ವರ್ಷದ ಕಬಡ್ಡಿ ಕಿರಣ್ ಸೂರಜ್ ದಾಧೆ

ಬಿಜೆಪಿ ಪ್ರತಿಭಟನೆ ಮಾಡಬೇಕಿರುವುದು ಕೇಂದ್ರ ಸರ್ಕಾರದ ವಿರುದ್ಧ: ಡಿಕೆ ಶಿವಕುಮಾರ್

“ರಾಜ್ಯಕ್ಕೆ ಅನ್ಯಾಯ ಆಗಿರುವುದು ಕೇಂದ್ರ ಸರ್ಕಾರದಿಂದ. ಹೀಗಾಗಿ ಬಿಜೆಪಿಯು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಬೇಕು” ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿರುಗೇಟು ನೀಡಿದರು. ರಾಜ್ಯ ಸರ್ಕಾರ ವಿರುದ್ಧ ಬಿಜೆಪಿಯ ಪ್ರತಿಭಟನೆ ಬಗ್ಗೆ ಕೇಳಿದಾಗ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ. ಬೆಳಗಾವಿ