Menu

ನೆಲಮಂಗಲ: ಪಿಡಿಒ ಕಿರುಕುಳಕ್ಕೆ ನೊಂದ ಲೈಬ್ರೆರಿಯನ್ ಆತ್ಮಹತ್ಯೆ

ನೆಲಮಂಗಲ ತಾಲೂಕಿನ ಕಳಲುಘಟ್ಟ ಪಂಚಾಯತ್ ವ್ಯಾಪ್ತಿಯಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಯ ಕಿರುಕುಳದಿಂದ ಬೇಸತ್ತ ಲೈಬ್ರೆರಿಯನ್ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಆರೋಪ ಕೇಳಿ ಬಂದಿದೆ. ಗ್ರಾಮ ಪಂಚಾಯತ್‌ ಲೈಬ್ರೆರಿಯನ್ ಆಗಿದ್ದ ರಾಮಚಂದ್ರಯ್ಯ ಆತ್ಮಹತ್ಯೆ ಮಾಡಿಕೊಂಡವರು, ಇವರು 25 ವರ್ಷದಿಂದ ಅರೆಕಾಲಿಕ ಗ್ರಂಥಾಲಯ ಮೇಲ್ವಿಚಾರಕರಾಗಿ ಕೆಲಸ ಮಾಡುತ್ತಿದ್ದರು. ಕಳಲುಘಟ್ಟ ಪಿಡಿಒ ಗೀತಾಮಣಿ ರಾಮಚಂದ್ರಯ್ಯನವರಿಗೆ ಮೂರು ತಿಂಗಳಿಂದ ಸಂಬಳ ನೀಡದೇ ಕಿರುಕುಳ ನೀಡುತ್ತಿದ್ದರು. ಬಯೋಮೆಟ್ರಿಕ್ ಹಾಜರಾತಿ ಹಾಕದೆ ಇಸಲ್ಲದ ಕಾರಣ ಹೇಳಿ ಕಿರುಕುಳ

ಆರೆಸ್ಸೆಸ್‌ಗೆ ನಿರ್ಬಂಧ: ಹಿಟ್ಲರ್ ಕಾಂಗ್ರೆಸ್ ಸರ್ಕಾರಕ್ಕೆ ಹೈಕೋರ್ಟ್ ಛಡಿಯೇಟು ಎಂದ ಆರ್‌ ಅಶೋಕ

RSS ಪಥಸಂಚನಲಕ್ಕೆ ಅವಕಾಶ ನೀಡದಿರುವ @INCKarnataka ಸರ್ಕಾರದ ನಿರಂಕುಶವಾದಿ ನಡೆಗೆ  ಹೈಕೋರ್ಟ್ ಛೀಮಾರಿ ಹಾಕಿದ್ದು, ಸಂವಿಧಾನದತ್ತ ಮೂಲಭೂತ ಹಕ್ಕುಗಳ ಉಲ್ಲಂಘನೆ ಆಗುತ್ತದೆ ಎಂದು ಸ್ಪಷ್ಟವಾಗಿ ಹೇಳಿದೆ. ಈ ಮೂಲಕ ಹಿಟ್ಲರ್ ಕಾಂಗ್ರೆಸ್ ಸರ್ಕಾರಕ್ಕೆ ಹೈಕೋರ್ಟ್ ಛಡಿಯೇಟು  ನೀಡಿದೆ ಎಂದು ಪ್ರತಿಪಕ್ಷ ನಾಯಕ

ವಿಜಯಪುರ ರಸ್ತೆ ಬದಿ ಯುವಕನ ಶವ ಪತ್ತೆ

ವಿಜಯಪುರ ಜಿಲ್ಲೆ ಆಲಮೇಲ ತಾಲೂಕಿನ ತಾರಾಪೂರ ಗ್ರಾಮದ ಬಳಿ ರಸ್ತೆಯಲ್ಲಿ ಯುವಕನ ಶವ ಪತ್ತೆಯಾಗಿದೆ. ಸಂತೋಷ ಬಿರಾದಾರ (36) ಶವವಾಗಿ ಪತ್ತೆಯಾಗಿರುವ ಯುವಕ. ತಾರಾಪೂರ ಗ್ರಾಮ ಪಂಚಾಯತಿ ಸದಸ್ಯನಾಗಿರುವ ಸಂತೋಷ ಬೈಕ್ ಮೇಲಿಂದ ಬಿದ್ದು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ, ತಲೆಗೆ ಏಟು

ಡ್ಯೂಟಿ ಬಿಟ್ಟು ಹಣ ವಸೂಲಿಗೆ ಬಾಡಿಗೆ ಕಾರಲ್ಲಿ ಬಂದು ವ್ಯಕ್ತಿ ಮೇಲೆ ದೌರ್ಜನ್ಯ: ಸರಗೂರು ಪೊಲೀಸ್‌ ವಿರುದ್ಧ ದೂರು

ಮೈಸೂರಿನ ಮೇಟಗಳ್ಳಿಯಲ್ಲಿ ಸರಗೂರು ಪೊಲೀಸ್ ಪೇದೆಗಳು ಹಣ ಸೆಟ್ಲಮೆಂಟ್‌ ಡೀಲ್‌ನಲ್ಲಿ ತೊಡಗಿದ್ದು, ಡ್ಯೂಟಿ ಬಿಟ್ಟು ಹಣ ವಸೂಲಿಗೆ ಬಾಡಿಗೆ ಕಾರಲ್ಲಿ ಬಂದು ದೌರ್ಜನ್ಯ ನಡೆಸುತ್ತಿರುವುದಾಗಿ ಆರೋಪ ಕೇಳಿ ಬಂದಿದೆ. ಸರಗೂರು ಪೊಲೀಸ್ ಠಾಣೆ ಪೇದೆಗಳಾದ ಕೃಷ್ಣಯ್ಯ, ಸುನೀಲ್ ಎಂಬವರು ಮೇಟಗಳ್ಳಿಯಲ್ಲಿ ಬಾಡಿಗೆ

ಹುಣಸೂರಿನಲ್ಲಿ ವಿದ್ಯುತ್‌ ತಂತಿ ತಗುಲಿ ತಾಯಿ, ಮಗ ಸಾವು

ಹುಣಸೂರು ತಾಲೂಕಿನ ಎಮ್ಮೆಕೊಪ್ಪಲು ಗ್ರಾಮದಲ್ಲಿ ವಿದ್ಯುತ್ ತಂತಿ ತಗುಲಿ ತಾಯಿ ಮತ್ತು ಮಗ ಮೃತಪಟ್ಟಿದ್ದಾರೆ. ನೀಲಮ್ಮ (39) ಮತ್ತು ಹರೀಶ್ (19) ಮೃತ ದುರ್ದೈವಿಗಳು. ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ನೀಲಮ್ಮ ವಿದ್ಯುತ್ ಸ್ಪರ್ಶಕ್ಕೆ ಸಿಲುಕಿಕೊಂಡು ಒದ್ದಾಡುತ್ತಿರುವಾಗ ರಕ್ಷಿಸಲು ಹೋದ ಮಗ ಕೂಡ

ಧಾರವಾಡ ಜಿಲ್ಲೆ ಜನತಾದರ್ಶನ: ಈವರೆಗೆ ಮೂರು ಸಾವಿರ ಅರ್ಜಿ ವಿಲೇವಾರಿ ಎಂದ ಸಚಿವ ಲಾಡ್‌

ಜಿಲ್ಲೆಯ ಜನರ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವ ನಿಟ್ಟಿನಲ್ಲಿ ಜನತಾ ದರ್ಶನವನ್ನು ಆಯೋಜನೆ ಮಾಡಲಾಗುತ್ತಿದ್ದು, ಈವರೆಗೆ 3 ಸಾವಿರಕ್ಕೂ ಅಧಿಕ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಈಗಾಗಲೇ 17 ಜನತಾ ದರ್ಶನ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದಿದ್ದು, ಇದು 18ನೇ ಜನತಾ ದರ್ಶನ ಕಾರ್ಯಕ್ರಮವಾಗಿದೆ. ಜನರ

ಕಾರು ಬಿಟ್ಟು ಸಾರ್ವಜನಿಕ ಸಾರಿಗೆ ಬಳಸಲು ಕ್ಷೇತ್ರದ ಜನರಿಗೆ ತೇಜಸ್ವಿ ಸೂರ್ಯ ಕರೆ ನೀಡಲಿ

ಸಂಸದ  ತೇಜಸ್ವಿ ಸೂರ್ಯರು ತಮ್ಮ ಕ್ಷೇತ್ರದ ಜನರಿಗೆ, ನೀವು ನಿಮ್ಮ ಕಾರುಗಳನ್ನು ಮನೆಯಲ್ಲೇ ನಿಲ್ಲಿಸಿ, ಸಾರ್ವಜನಿಕ ಸಾರಿಗೆಯಲ್ಲಿ ಸಂಚಾರ ಮಾಡಿ ಕರೆ ನೀಡಲಿ. ಆಗ ಯಾರು ಪಾಲನೆ ಮಾಡುತ್ತಾರೆ ನೋಡೋಣ. ಕಾರಿಲ್ಲದ ಹುಡುಗನ ಮನೆಗೆ ಹೆಣ್ಣು ನೀಡಲು ಹಿಂದೇಟು ಹಾಕುತ್ತಾರೆ. ಇಂತಹ

ಯಾವುದೇ ಕಾರಣಕ್ಕೂ ಪೊಲೀಸರು ರಾಜಕೀಯ ಹಿಂಬಾಲಕರಾಗಬೇಡಿ: ಡಿಕೆ ಶಿವಕುಮಾರ್‌

“ಯಾವುದೇ ಸರ್ಕಾರ ಬಂದರೂ ನಿಮ್ಮ ಆತ್ಮ ವಿಶ್ವಾಸ ಹಾಗೂ ಕರ್ತವ್ಯ ನಿಷ್ಠೆಯಲ್ಲಿ ರಾಜಿಯಾಗಬಾರದು. ಒಂದು ವೇಳೆ ರಾಜಿ ಮಾಡಿಕೊಂಡರೆ ಸಂಪೂರ್ಣವಾಗಿ ವ್ಯವಸ್ಥೆ ಕುಸಿಯಲಿದೆ” ಎಂದು ಡಿಸಿಎಂ ಡಿಕೆ ಶಿವಕುಮಾರ್  ಪೊಲೀಸ್ ಅಧಿಕಾರಿಗಳಿಗೆ ಕಿವಿ ಮಾತು ಹೇಳಿದರು. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ

ಅಲ್ ಖೈದಾ ಸಂಪರ್ಕ ಆರೋಪ: ಪುಣೆಯಲ್ಲಿ ಟೆಕ್ಕಿ ಅರೆಸ್ಟ್‌

ಅಲ್ ಖೈದಾ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವ ಆರೋಪದ ಮೇಲೆ ಪುಣೆಯ ಕೊಂಧ್ವಾದಲ್ಲಿ ಟೆಕ್ಕಿಯೊಬ್ಬನನ್ನು ಭಯೋತ್ಪಾದನಾ ನಿಗ್ರಹ ದಳ ಬಂಧಿಸಿದೆ. ಜುಬೈರ್ ಹಂಗರ್ಗೇಕರ್ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಈತನ ಮೇಲೆ ಕಳೆದ ತಿಂಗಳಿನಿಂದ ಎಟಿಎಸ್ ಸಿಬ್ಬಂದಿ ತೀವ್ರ ನಿಗಾ ಇಟ್ಟಿದ್ದರು. 

ಹಿಟ್‌ ಅಂಡ್‌ ರನ್‌: ದೊಡ್ಡಬಳ್ಳಾಪುರದಲ್ಲಿ ಯುವಕರಿಬ್ಬರು ಬಲಿ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ರಾಮಯ್ಯನಪಾಳ್ಯ ಬಳಿ ಹಿಟ್​ ಅಂಡ್‌ ರನ್‌ಗೆ ಬೈಕ್​ ಸವಾರರಿಬ್ಬರು ಬಲಿಯಾಗಿದ್ದಾರೆ.  ಅಪರಿಚಿತ ವಾಹನ ಡಿಕ್ಕಿಯಾಗಿ ಬೈಕ್​ನಲ್ಲಿದ್ದ ಇಬ್ಬರು ಯುವಕರು ಪ್ರಾಣ ಕಳೆದುಕೊಂಡಿದ್ದಾರೆ. ತೂಬಗೆರೆ ನಿವಾಸಿ ನಂದನ್ ಕುಮಾರ್(22) ಮತ್ತು ದೊಡ್ಡತಿಮ್ಮನಹಳ್ಳಿಯ ರವಿಕುಮಾರ್(24) ಮೃತ ಯುವಕರು.