Menu

ಕೋಟಿ ರೂ. ವಿಮೆ ಹಣ ಪಡೆಯಲು ಅಮಾಯಕನನ್ನು ತನ್ನ ಕಾರಲ್ಲಿ ಸುಟ್ಟು ಹಾಕಿದಾತ ಅರೆಸ್ಟ್‌

ಮಹಾರಾಷ್ಟ್ರದ ಲಾತೂರಿನಲ್ಲಿ ಒಂದು ಕೋಟಿ ರೂ. ವಿಮೆ ಹಣ ಪಡೆಯಲು ಲಿಫ್ಟ್‌ ಕೊಡೋದಾಗಿ ನಂಬಿಸಿ ವ್ಯಕ್ತಿಯೊಬ್ಬನನ್ನು ಕರೆದೊಯ್ದು ಕಾರಲ್ಲಿ ಸುಟ್ಟು ಹಾಕಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬ್ಯಾಂಕ್ ವಸೂಲಾತಿ ಏಜೆಂಟ್ ಗಣೇಶ್ ಚೌಹಾಣ್​ ಬಂಧಿತ ಆರೋಪಿ. ಆತ ಒಂದು ಕೋಟಿ ರೂ. ವಿಮೆ ಹಣವನ್ನು ಪಡೆಯುವ ಉದ್ದೇಶಕ್ಕ್ಕಾಗಿ ತಾನೇ ಸತ್ತಿರುವುದೆಂದು ನಂಬಿಸಲು ಮತ್ತೊಬ್ಬ ವ್ಯಕ್ತಿಗೆ ತನ್ನ ಕಾರಿನಲ್ಲೇ ಬೆಂಕಿ ಹಚ್ಚಿ ಪರಾರಿಯಾಗಿದ್ದ. ತುಳಜಾಪುರ ಸಮೀಪ ಭಾನುವಾರ ಕಾರು ಸುಟ್ಟುಕರಕಲಾಗಿ ಪತ್ತೆಯಾಗಿತ್ತು,

ಸಿಡ್ನಿ ಬೀಚ್ ಶೂಟರ್ಸ್ ಹಣ್ಣಿನ ಅಂಗಡಿ ವ್ಯಾಪಾರಿ ಅಪ್ಪ, ನಿರುದ್ಯೋಗಿ ಮಗ!

ಆಸ್ಟ್ರೇಲಿಯಾದ ರಾಜಧಾನಿ ಸಿಡ್ನಿಯ ಬೋಂಡಿ ಕಡಲ ತೀರದಲ್ಲಿ ಯಹೂದಿ ಹನುಕ್ಕಾ ಆಚರಣೆಯ ವೇಳೆ ಯದ್ವಾತದ್ವಾ ಗುಂಡು ಹಾರಿಸಿ 15 ಮಂದಿ ಕೊಲೆಗೈದ ಶೂಟರ್ ಗಳು ತಂದೆ-ಮಗ ಆಗಿದ್ದು, ತಂದೆ ಹಣ್ಣಿನ ಅಂಗಡಿ ವ್ಯಾಪಾರಿ ಆಗಿದ್ದರೆ, ಮಗ ನಿರುದ್ಯೋಗಿ ಎಂಬುದು ತಿಳಿದು ಬಂದಿದೆ.

ವೋಟ್‌ ಚೋರಿ ನೆಪದಲ್ಲಿ ಸುಳ್ಳು ಕಥೆ ಸೃಷ್ಟಿ: ಪ್ರತಿಪಕ್ಷಗಳ ವಿರುದ್ಧ ಹೆಚ್.ಡಿ. ದೇವೇಗೌಡ ವಾಗ್ದಾಳಿ

ನವದೆಹಲಿ: ವೋಟ್‌ ಚೋರಿ ಹೆಸರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸರಕಾರ ಹಾಗೂ ಸಾಂವಿಧಾನಿಕ ಸಂಸ್ಥೆಗಳ ವಿರುದ್ಧ ಸುಳ್ಳಿನ ಸಂಕಥನ ಸೃಷ್ಟಿಸುತ್ತಿರುವ ಪ್ರತಿಪಕ್ಷಗಳು ಭವಿಷ್ಯದಲ್ಲಿ ಘೋರ ಪರಿಣಾಮ ಅನುಭವಿಸುತ್ತವೆ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಗಂಭೀರ ಎಚ್ಚರಿಕೆ ನೀಡಿದರು. ರಾಜ್ಯಸಭೆಯಲ್ಲಿ

ಪತ್ನಿ ಸಮಾಧಿ ಪಕ್ಕ ಮಣ್ಣಾದ ಕಾಂಗ್ರೆಸ್ ಹಿರಿಯ ಮುಖಂಡ ಶಾಮನೂರು ಶಿವಶಂಕರಪ್ಪ

ಮಾಜಿ ಸಚಿವ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ಶಾಮನೂರು ಶಿವಶಂಕರಪ್ಪ ಅವರ ಅಂತ್ಯಕ್ರಿಯೆ ಲಿಂಗಾಯತ- ವೀರಶೈವ ಸಂಪ್ರದಾಯದಂತೆ ನೆರವೇರಿತು. ವಯೋ ಸಹಜ ಅನಾರೋಗ್ಯದಿಂದ ಭಾನುವಾರ ನಿಧನರಾದ ಶಾಮನೂರು ಶಿವಶಂಕರಪ್ಪ ಅವರ ಅಂತ್ಯಕ್ರಿಯೆ ಕಲ್ಲೇಶ್ವರ ಮಿಲ್ ಆವರಣದಲ್ಲಿ ಪತ್ನಿ ಸಮಾಧಿ ಪಕ್ಕ ಮಣ್ಣು

ಕುತೂಹಲ ಮೂಡಿಸಿದ ಪ್ರಿಯಾಂಕಾ- ಪ್ರಶಾಂತ್ ಕಿಶೋರ್ ಭೇಟಿ

ನವದೆಹಲಿ:  ಕಾಂಗ್ರೆಸ್‌ ಸಂಸದೆ ಪ್ರಿಯಾಂಕಾ ವಾದ್ರಾ ಮತ್ತು ಚುನಾವಣಾ ತಂತ್ರಗಾರ ಹಾಗೂ ಜನ ಸುರಾಜ್ ಪಕ್ಷದ ಸಂಸ್ಥಾಪಕ ಪ್ರಶಾಂತ್‌ ಕಿಶೋರ್‌ ಬಿಹಾರ ಚುನಾವಣೆ ನಂತರ ಭೇಟಿ ಮಾಡಿ ಮಾತುಕತೆ ನಡೆಸಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ. ಪ್ರಿಯಾಂಕಾ ಗಾಂಧಿ ಮತ್ತು ಪ್ರಶಾಂತ್

ಗದಗ ಜಿಲ್ಲಾಧಿಕಾರಿ, ಮಂಗಳೂರು ಆರ್‌ಟಿಓ ಕಚೇರಿಗೆ ಬಾಂಬ್ ಬೆದರಿಕೆ

ಗದಗ ಜಿಲ್ಲಾಧಿಕಾರಿ ಕಚೇರಿ ಹಾಗೂ ಮಂಗಳೂರು ಆರ್ ಟಿಓ ಕಚೇರಿಗಳಿಗೆ ಬಾಂಬ್ ಹಾಕುವುದಾಗಿ ಬೆದರಿಕೆ ಕರೆಗಳು ಬಂದಿವೆ. ಗದಗ ಜಿಲ್ಲಾಡಳಿತ ಭವನದ ಮೇಲೆ 5 ಬಾಂಬ್‌ ಎಸೆಯುವುದಾಗಿ ಬೆದರಿಕೆ ಇ-ಮೇಲ್ ಸಂದೇಶ ಬಂದಿದ್ದು, ಕೆಲಕಾಲ ನಗರದಲ್ಲಿ ಆತಂಕದ ವಾತಾವರಣ ನಿರ್ಮಾಣವಾದ ಘಟನೆ

ಕೋಮು ಭಾವನೆ ಕೆರಳಿಸುವ ಪೋಸ್ಟ್‌: ಸೌದಿಯಿಂದ ಬಂದಿಳಿದ ಬಂಟ್ವಾಳದ ಯುವಕ ಅರೆಸ್ಟ್‌

ಸೌದಿ ಅರೇಬಿಯಾದಲ್ಲಿರುವ ಬಂಟ್ವಾಳದ ಯುವಕ ಮಂಗಳೂರಿನಲ್ಲಿ ಕೋಮು ಭಾವನೆ ಕೆರಳಿಸುವಂತಹ ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡುತ್ತಿದ್ದ ಪ್ರಕರಣದಡಿ ಆತ ಭಾರತಕ್ಕೆ ಬಂದಿಳಿದ ತಕ್ಷಣ ಪೊಲೀಸರು ಬಂಧಿಸಿದ್ದಾರೆ. ಬಂಟ್ವಾಳ ಪಾಣೆಮಂಗಳೂರಿನ 27 ವರ್ಷದ ಅಬ್ದುಲ್ ಖಾದರ್ ನೇಹಾದ್ ಬಂಧಿತ ಆರೋಪಿ. ಆತ

ದಾಂಪತ್ಯಕ್ಕೆ ಕಾಲಿಟ್ಟ ಬ್ರಹ್ಮಗಂಟು ಖ್ಯಾತಿಯ ಕಿರುತೆರೆ ನಟಿ ಭಾರತಿ!

`ಬ್ರಹ್ಮಗಂಟು’ ಧಾರಾವಾಹಿ ಖ್ಯಾತಿಯ ನಟಿ ಗೀತಾ ಭಾರತಿ ಭಟ್ ಸದ್ದುಗದ್ದಲವಿಲ್ಲದೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬ್ರಹ್ಮಗಂಟು ಧಾರವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಭಾರತಿ ಭಟ್ ಜೀ ಟಿವಿಯಲ್ಲೊ ಪ್ರಸಾರವಾಗುತ್ತಿರುವ ಅಮೃತವರ್ಷಿಣಿ ಧಾರವಾಹಿಯಲ್ಲಿ ನಟಿಸುತ್ತಿದ್ದಾರೆ. ಅಲ್ಲದೇ ಬಿಗ್ ಬಾಸ್ ಸೀಸನ್ 8ರಲ್ಲಿ ಸ್ಪರ್ಧಿಯೂ

ಅನ್ಯ ಜಾತಿ ಯುವತಿಯ ಮದುವೆಯಾದ ಮಗ: ತಾಯಿಯನ್ನು ಥಳಿಸಿದ ಪೊಲೀಸ್‌

ಮಗ ಅನ್ಯ ಜಾತಿಯ ಯುವತಿಯನ್ನು ಮದುವೆ ಆಗಿದ್ದಕ್ಕೆ ಆತನ ತಾಯಿ ಮೇಲೆ ಧಾರವಾಡದ ಕುಂದಗೋಳ ಠಾಣೆಯ ಪೊಲೀಸರು ಮನ ಬಂದಂತೆ ಥಳಿಸಿರುವ ಆರೋಪ ಕೇಳಿ ಬಂದಿದೆ. ಧಾರವಾಡದ ಕುಂದಗೋಳ ತಾಲೂಕಿನ ಮುಳ್ಳಳಿ ಗ್ರಾಮದ ಯುವಕ ದೇವರಾಜ್ ಎದುರು ಮನೆ ಯುವತಿ ಜೊತೆ

MGNREGA ಯೋಜನೆಯಲ್ಲಿ ಮಹತ್ವದ ಬದಲಾವಣೆಗೆ ಮುಂದಾದ ಕೇಂದ್ರ ಸರ್ಕಾರ

ನವದೆಹಲಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ (MGNREGA) ಸಮಗ್ರ ಬದಲಾವಣೆ ಮೂಲಕ ಹೊಸದಾಗಿ ಗ್ರಾಮೀಣ ಉದ್ಯೋಗ ಯೋಜನೆ ಕಾನೂನು ಜಾರಿಗೆ ಕೇಂದ್ರ ಸರ್ಕಾರ ಮುಂದಾಗಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (MGNREGA) ಯೋಜನೆಯ