Menu

ಮೃತ ರಾಜಶೇಖರ್ ದೇಹಕ್ಕೆ ಎರಡು ಬಾರಿ ಮರಣೋತ್ತರ ಪರೀಕ್ಷೆ: ಸಚಿವ ಹೆಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ

ಬೆಂಗಳೂರು: ಬಳ್ಳಾರಿ ಶಾಸಕ ನಾರಾ ಭರತ್ ರೆಡ್ಡಿ ಆಪ್ತನ ಗನ್ ಮ್ಯಾನ್ ನಡೆಸಿದ ಗುಂಡಿನ ದಾಳಿಗೆ ಬಲಿಯಾದ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಕಾನೂನುಬಾಹಿರವಾಗಿ ಎರಡು ಬಾರಿ ನಡೆಸಲಾಗಿದೆ. ಹೀಗಾಗಿ ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ರಾಜ್ಯ ಸರ್ಕಾರವನ್ನು ಒತ್ತಾಯ ಮಾಡಿದರು. ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವರು; ಕಾರ್ಯಕರ್ತ ರಾಜಶೇಖರ್ ಹತ್ಯೆ

ಮುಷ್ಫಿಕರ್ ಹೊರಹಾಕಿದ ಬೆನ್ನಲ್ಲೇ ಐಪಿಎಲ್ ಪ್ರಸಾರಕ್ಕೆ ಬಾಂಗ್ಲಾದೇಶ ನಿಷೇಧ

ಮುಷ್ಫಿಕರ್ ರಹೀಂ ಅವರನ್ನು ಐಪಿಎಲ್ ತಂಡದಿಂದ ಹೊಗೆ ಹಾಕಿದ್ದಕ್ಕೆ ಪ್ರತೀಕಾರವಾಗಿ ಬಾಂಗ್ಲಾದೇಶ ಸರ್ಕಾರ ಐಪಿಎಲ್ ಟಿ-20 ಟೂರ್ನಿಯ ಪ್ರಸಾರವನ್ನು ನಿಷೇಧಿಸಿದೆ. ಬಾಂಗ್ಲಾದೇಶದಲ್ಲಿ ರಾಜಕೀಯ ಬೆಳವಣಿಗೆ ಹಿನ್ನೆಲೆಯಲ್ಲಿ ಆ ದೇಶದ ಆಟಗಾರ ಮುಷ್ಫಿಕರ್ ರಹೀಂ ಅವರನ್ನು ಕೋಲ್ಕತಾ ನೈಟ್ ರೈಡರ್ಸ್ ತಂಡದಿಂದ ಹೊರಹಾಕುವಂತೆ

ಇಂದಿನಿಂದ ಹುಲಿ ಗಣತಿ ಅಂದಾಜು: ಸಚಿವ ಈಶ್ವರ ಖಂಡ್ರೆ

ಬೀದರ್: ಕಾಳಿ, ಭದ್ರಾ, ನಾಗರಹೊಳೆ, ಬಂಡೀಪುರ, ಬಿ.ಆರ್.ಟಿ. ಹುಲಿ ಸಂರಕ್ಷಿತ ಧಾಮ ಸೇರಿದಂತೆ ರಾಜ್ಯದ ಎಲ್ಲ ಅರಣ್ಯ ಪ್ರದೇಶದಲ್ಲಿ ಇಂದಿನಿಂದ ಹುಲಿ ಹಾಗೂ ಮಾಂಸಹಾರಿ ಪ್ರಾಣಿಗಳ ಗಣತಿ ಪ್ರಕ್ರಿಯೆ ಆರಂಭವಾಗಲಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ

ಸುದೀರ್ಘ ಅವಧಿಗೆ ಸಿಎಂ ಎಂಬ ದಾಖಲೆ, ಜನರ ಆಶೀರ್ವಾದಿಂದ ಸಾಧ್ಯ: ಸಿದ್ದರಾಮಯ್ಯ

ಮೈಸೂರು: ಮಾಜಿ ಸಿಎಂ ದಿವಂಗತ ದೇವರಾಜ್ ಅರಸ್ ಅವರ ಮುಖ್ಯಮಂತ್ರಿಯ ಸುದೀರ್ಘ ಅವಧಿಯ ದಾಖಲೆ ಮುರಿದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನರ ಆಶೀರ್ವಾದದಿಂದ ಇದು ಸಾಧ್ಯವಾಗಿದೆ ಎಂದು ತಿಳಿಸಿದರು. ಅವರು ಇಂದು ಮೈಸೂರಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಮಾಜಿ ಸಿಎಂ

ಕನ್ನಡಿಗರಿಗೆ ಸೇರಿದ ಕೋಗಿಲು ಜಮೀನು ಬಾಂಗ್ಲಾದವರಿಗೆ ನೀಡಲು ಬಿಡುವುದಿಲ್ಲ: ಬಿಜೆಪಿ

ಬಾಂಗ್ಲಾದೇಶದ ಜನರಿಗೆ ಕೋಗಿಲು ಕ್ರಾಸ್‌ನಲ್ಲಿ ಒಂದು ಮನೆ ನೀಡಿದರೂ ಅದು ಕೆಟ್ಟ ಪರಂಪರೆಗೆ ನಾಂದಿ ಹಾಡಲಿದೆ. ಕನ್ನಡಿಗರಿಗೆ ಸೇರಿದ ಜಮೀನನ್ನು ಬಾಂಗ್ಲಾ ಜನರಿಗೆ ನೀಡಲು ಅವಕಾಶ ಮಾಡಿಕೊಡುವುದಿಲ್ಲ ಎಂದು ಪ್ರತಿಪಕ್ಷ ನಾಯಕ ಆರ್‌ ಅಶೋಕ ಎಚ್ಚರಿಕೆ ನೀಡಿದರು. ಕೋಗಿಲು ಕ್ರಾಸ್‌ ಬಳಿ

ತಮಿಳುನಾಡು ಸರ್ಕಾರದಿಂದ ಮೂರು ಸಾವಿರ ರೂ., ಬಟ್ಟೆ ಸೇರಿದಂತೆ ಭರ್ಜರಿ ಪೊಂಗಲ್‌ ಗಿಫ್ಟ್‌

ಪೊಂಗಲ್ ಹಬ್ಬಕ್ಕೆ ತಮಿಳುನಾಡಿನ 2.22 ಕೋಟಿ ಪಡಿತರ ಚೀಟಿದಾರರಿಗೆ ಮತ್ತು ಶ್ರೀಲಂಕಾದ ತಮಿಳರ ಪುನರ್ವಸತಿ ಶಿಬಿರಗಳಲ್ಲಿ ವಾಸಿಸುತ್ತಿರುವ ಎಲ್ಲಾ ಕುಟುಂಬಗಳಿಗೆ ಸರ್ಕಾರವು ತಲಾ ಮೂರು ಸಾವಿರ ರೂ., ಕಬ್ಬು, ಒಂದು ಕೆ.ಜಿ ಅಕ್ಕಿ, ತುಪ್ಪ ಹಾಗೂ ಸಕ್ಕರೆ ಒಳಗೊಂಡಿರುವ ಪೊಂಗಲ್ ಗಿಫ್ಟ್

21 ಎಕರೆ ಸರ್ಕಾರಿ ಭೂಮಿ ಕಬಳಿಕೆ ಆರೋಪ : ಕೃಷ್ಣಭೈರೇಗೌಡರ ವಿರುದ್ಧ ಲೋಕಾಯುಕ್ತಕ್ಕೆ ಬಿಜೆಪಿ ದೂರು

ಕೋಲಾರದ ನರಸಪುರ ಹೋಬಳಿಯ ಗರುಡನಪಾಳ್ಯದಲ್ಲಿ 21 ಎಕರೆ ಸರ್ಕಾರಿ ಖರಾಬು ಭೂಮಿ ಕಬಳಿಕೆ ಮಾಡಿದ್ದಾರೆಂದು ಆರೋಪಿಸಿ ಕಂದಾಯ ಸಚಿವ ಕೃಷ್ಣ ಭೈರೇಗೌಡ ವಿರುದ್ಧ ಬಿಜೆಪಿ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದೆ. ಜಿಲ್ಲಾ ಬಿಜೆಪಿ ಅಧ್ಯಕ್ಷ‌ ಓಂ ಶಕ್ತಿ ಚಲಪತಿ ನೇತೃತ್ವದಲ್ಲಿ ದೂರು ನೀಡಿ

ದೇವರಾಯನದುರ್ಗದಲ್ಲಿ ಮಂಗಗಳ ಸಾಮೂಹಿಕ ಸಾವು: ವಿಷ ಪ್ರಾಷನ ಶಂಕೆ

ತುಮಕೂರಿನ ದೇವರಾಯನದುರ್ಗ ಅರಣ್ಯ ಪ್ರದೇಶದಲ್ಲಿ ಎರಡು ದಿನದಲ್ಲಿ 11 ಮಂಗಗಳು ನಿಗೂಢವಾಗಿ ಮೃತಪಟ್ಟಿವೆ. ಈ ಹಿನ್ನೆಲೆ ಅರಣ್ಯ ಪ್ರದೇಶದಲ್ಲಿ ಎರಡು ದಿನ ಶೋಧ ಕಾರ್ಯ ನಡೆಸಿದ್ದು, ಕೋತಿಗಳು ಯಾವುದೇ ಕಾಯಿಲೆಯಿಂದ ಮೃತಪಟ್ಟಿಲ್ಲ ಎಂಬುದು ತಿಳಿದುಬಂದಿದೆ. ವಿಷ ಪ್ರಾಷನದಿಂದ ಮಂಗಗಳು ಮೃತಪಟ್ಟಿರುವ ಅನುಮಾನ

ದಾಳಿ ಮಾಡಲು ಬಂದ ಚಿರತೆ ಮತ್ತು ರೈತ ಬಾವಿಗೆ ಬಿದ್ದು ಸಾವು

ನಾಸಿಕ್ ಸವ್ತಾ ಮಲಿ ಗ್ರಾಮದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ಚಿರತೆ ದಾಳಿ ಮಾಡಿದ ವೇಳೆ ತಪ್ಪಿಸಿಕೊಳ್ಳಲೆತ್ನಿಸಿದ ರೈತ ಮತ್ತು ಚಿರತೆ ಬಾವಿಗೆ ಬಿದ್ದು ಪ್ರಾಣ ಹೋಗಿದೆ. ಸವ್ತಾ ಮಲಿ ಗ್ರಾಮದ ನಿವಾಸಿ ಗೋರಖ್ ಜಾಧವ್ ಮೃತಪಟ್ಟವರು. ಮಧ್ಯಾಹ್ನ ಬೆಳೆಗೆ

ಕಾಂಗ್ರೆಸ್‌ ಆಡಳಿತದಲ್ಲಿ ಗೂಂಡಾ ರಾಜ್ಯ: ಆರ್‌ ಅಶೋಕ

ಅತ್ತ ಸಿಎಂ @siddaramaiah ನವರು ಅತ್ಯಂತ ದೀರ್ಘಾವಧಿ ಮುಖ್ಯಮಂತ್ರಿ ಎಂಬ ದಾಖಲೆ ಮಾಡುವ ಕನಸು ಕಾಣುತ್ತ ಔತಣಕೂಟ, ಸಮಾವೇಶ ಎಂದು ಸಂಭ್ರಮ ಪಡುತ್ತಿದ್ದರೆ, ಇತ್ತ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟು ಹೊಸ ವರ್ಷದ ಮೊದಲ ವಾರದಲ್ಲೇ ರಾಜ್ಯದಲ್ಲಿ ಗುಂಡಾರಾಜ್ಯದ ಗದ್ದಲ ಸದ್ದು