Menu

ಕಾಂಗ್ರೆಸ್‌ ಆಡಳಿತದಲ್ಲಿ ಗೂಂಡಾ ರಾಜ್ಯ: ಆರ್‌ ಅಶೋಕ

ಅತ್ತ ಸಿಎಂ @siddaramaiah ನವರು ಅತ್ಯಂತ ದೀರ್ಘಾವಧಿ ಮುಖ್ಯಮಂತ್ರಿ ಎಂಬ ದಾಖಲೆ ಮಾಡುವ ಕನಸು ಕಾಣುತ್ತ ಔತಣಕೂಟ, ಸಮಾವೇಶ ಎಂದು ಸಂಭ್ರಮ ಪಡುತ್ತಿದ್ದರೆ, ಇತ್ತ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟು ಹೊಸ ವರ್ಷದ ಮೊದಲ ವಾರದಲ್ಲೇ ರಾಜ್ಯದಲ್ಲಿ ಗುಂಡಾರಾಜ್ಯದ ಗದ್ದಲ ಸದ್ದು ಮಾಡುತ್ತಿದೆ ಎಂದು ಪ್ರತಿಪಕ್ಷ ನಾಯಕ ಆರ್‌ ಅಶೋಕ ಕಿಡಿ ಕಾರಿದ್ದಾರೆ. ಸಾಮಾಝಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಅವರು,  ಬಳ್ಳಾರಿಯಲ್ಲಿ ಬಿಜೆಪಿ ಶಾಸಕ ಜನಾರ್ದನ ರೆಡ್ಡಿ ಅವರ

ಮದುವೆ ಸಮಾರಂಭದಲ್ಲಿ ಎಎಪಿ ನಾಯಕ ಜರ್ನೈಲ್ ಸಿಂಗ್ ಹತ್ಯೆ

ಅಮೃತ್‌ಸರ ಎಎಪಿ ನಾಯಕ ಜರ್ನೈಲ್ ಸಿಂಗ್‌ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾಗ ಅತಿಥಿಗಳ ಸಮ್ಮುಖವೇ ಅಪರಿಚಿತ ಬಂದೂಕುಧಾರಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಜರ್ನೈಲ್ ಸಿಂಗ್ ತರಣ್ ತರಣ್ ಜಿಲ್ಲೆಯ ವಲ್ಥೋವಾ ಗ್ರಾಮದ ನಿವಾಸಿ. ಅಮೃತಸರದಲ್ಲಿ ಮದುವೆಯೊಂದರಲ್ಲಿ ಭಾಗಿಯಾಗಿದ್ದಾಗ ದುಷ್ಕರ್ಮಿಗಳು ಸಮೀಪದಿಂದಲೇ ಗುಂಡು ಹಾರಿಸಿ

ಸುಳ್ಯದ ತಾಯಿ ಮಗು ಶವ ಕೆರೆಯಲ್ಲಿ ಪತ್ತೆ: ಆತ್ಮಹತ್ಯೆ ಶಂಕೆ

ಸುಳ್ಯ ತಾಲೂಕಿನ ಕೊಡಿಯಾಲ ಗ್ರಾಮದ ಮನೆಯೊಂದರಲ್ಲಿ ರಾತ್ರಿ ಮಲಗಿದ್ದ ತಾಯಿ ಮತ್ತು ಮೂರು ವರ್ಷದ ಮಗುವಿನ ಶವ ಸಮೀಪದ ಕೆರೆಯಲ್ಲಿ ಪತ್ತೆಯಾಗಿದೆ. ಆರ್ವಾರ ಹರೀಶ್ ಎಂಬವರ ಪತ್ನಿ ಮಧುಶ್ರೀ (34) ಹಾಗೂ ಅವರ ಮಗು ಧನ್ವಿ (3) ಮೃತಪಟ್ಟವರು. ಹರೀಶ್ ಅವರು

ದ್ವಿತೀಯ ಪಿಯು ಪರೀಕ್ಷೆ ಜನವರಿ 27- ಮಾರ್ಚ್ 17

2026 ರ ದ್ವಿತೀಯ ಪಿಯು ಪರೀಕ್ಷೆಗಳ ವೇಳಾಪಟ್ಟಿಯನ್ನು ಕೆಎಸ್ಇಎಬಿ (ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ) ಪ್ರಕಟಿಸಿದೆ, ಪ್ರಾಯೋಗಿಕ ಪರೀಕ್ಷೆಗಳು ಜನವರಿ 27 ರಿಂದ ಪ್ರಾರಂಭವಾಗಿ ಫೆಬ್ರವರಿ 2ರವರೆಗೆ ನಡೆಯಲಿದೆ. ಬಳಿಕ ಮುಖ್ಯ ಥಿಯರಿ  ಪರೀಕ್ಷೆಗಳು 2026 ಫೆಬ್ರವರಿ 28

ಬೆಂಗಳೂರಿನಲ್ಲಿ ಓಂ ಶಕ್ತಿ ಭಕ್ತರ ಮೇಲೆ ಕಲ್ಲೆಸೆತ: ನಾಲ್ವರು ಬಾಲಕರ ಬಂಧನ

ಚಾಮರಾಜಪೇಟೆ ಬಳಿಯ ಜೆಜೆ ನಗರ ಠಾಣೆ ವ್ಯಾಪ್ತಿಯಲ್ಲಿ ದೇವಿಯ ತೇರು ಎಳೆಯುತ್ತಿದ್ದ ಓಂ ಶಕ್ತಿ ಮಾಲಾಧಾರಿಗಳ ಮೇಲೆ ದುಷ್ಕರ್ಮಿಗಳು ಕಲ್ಲು ತೂರಿರುವ ಘಟನೆ ನಡೆದಿದ್ದು, ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ಪ್ರಕರಣ ಸಂಬಂಧ ನಾಲ್ಕು ಬಾಲಕರನ್ನು ಬಂಧಿಸಲಾಗಿದೆ. ವಿ.ಎಸ್ ಗಾರ್ಡಡ್‌ನ ಓಂ

“ತಿಥಿ” ಖ್ಯಾತಿಯ ಸೆಂಚುರಿ ಗೌಡ ಇನ್ನಿಲ್ಲ

ತಿಥಿ ಸಿನಿಮಾದಲ್ಲಿ ಸೆಂಚುರಿ ಗೌಡ ಪಾತ್ರ ನಿರ್ವಹಿಸಿ ಜನಮನ ಗೆದ್ದಿದ್ದ  ಪಾಂಡವಪುರ ತಾಲೂಕಿನ  ಸಿಂಗ್ರೆಗೌಡ ನಿಧನರಾಗಿದ್ದಾರೆ. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಸಿಂಗ್ರೆಗೌಡನ ಕೊಪ್ಪಲು ಗ್ರಾಮದಲ್ಲಿ ನೆಲೆಸಿದ್ದ ಅವರು ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು. 100 ವರ್ಷ ದಾಟಿದ್ದ ಅವರು ಸಿನಿಮಾದಲ್ಲೂ

ಪ್ರೀತಿಸಿದ ಹುಡುಗನ ವಶೀಕರಣ: ಗುರೂಜಿ ಸೋಗಿನಲ್ಲಿ ಯುವತಿಗೆ 2.05 ಲಕ್ಷ ರೂ. ವಂಚನೆ

ಬೆಂಗಳೂರಿನ ಆಡುಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪಿಜಿಯಲ್ಲಿ ವಾಸವಾಗಿದ್ದ ಯುವತಿಗೆ ಆನ್‌ಲೈನ್‌ ಮೂಲಕ ಭವಿಷ್ಯ ಹೇಳುವುದಾಗಿ ಗುರೂಜಿ ಸೋಗಿನಲ್ಲಿ ನಂಬಿಸಿದ ವ್ಯಕ್ತಿಯೊಬ್ಬ 2.05 ಲಕ್ಷ ರೂ. ವಂಚಿಸಿರುವ ಘಟನೆ ನಡೆದಿದೆ. ಆಡುಗೋಡಿ ನಿವಾಸಿಯಾಗಿರುವ ಯುವತಿ ಚಂದ್ರಶೇಖರ್ ಸುಗತ್ ಗುರೂಜಿ ಎಂಬಾತನ ವಿರುದ್ಧ

ಜನಾರ್ಧನ ರೆಡ್ಡಿ ಅಮೆರಿಕದಿಂದ ಸೆಕ್ಯೂರಿಟಿ ತರಿಸಿಕೊಳ್ಳಲಿ, ಬೇಡ ಅಂದವರು ಯಾರು: ಡಿಸಿಎಂ 

ಜನಾರ್ಧನ ರೆಡ್ಡಿ ಇರಾನ್, ಅಮೆರಿಕದಿಂದಾದರೂ ಸೆಕ್ಯುರಿಟಿ ತೆಗೆದುಕೊಂಡು ಬರಲಿ.‌ ಯಾರನ್ನಾದರೂ ನೇಮಿಸಿಕೊಳ್ಳಲಿ. ಬೇಡ ಎಂದವರು ಯಾರು  ಎಂದು ಡಿಸಿಎಂ ಡಿಕೆ ಶಿವಕುಮಾರ್‌ ಪ್ರಶ್ನಿಸಿದ್ದಾರೆ. ಬಳ್ಳಾರಿ ಬ್ಯಾನರ್‌ ಗಲಾಟೆ ಬಳಿಕ ಝಡ್ ಪ್ಲಸ್ ಸೆಕ್ಯುರಿಟಿ ನೀಡಿ ಎಂದು ಜನಾರ್ದನ ರೆಡ್ಡಿ ಅವರು ಪತ್ರ ಬರೆದಿರುವ

ಉಪಜಾತಿಗಳಲ್ಲಿ ವಿಭಜನೆಯಾಗದೆ ಒಂದೇ ಶಕ್ತಿಯಾಗಿ ಸಂಘಟಿತರಾಗಿ: ಮುಖ್ಯಮಂತ್ರಿ

ಹಿಂದುಳಿದವರು ಸಂಘಟಿಸಿದರೆ ಜಾತೀಯತೆಯಾಗುವುದಿಲ್ಲ. ಉಪಜಾತಿಗಳಲ್ಲಿ ವಿಭಜಿಸದೇ ಒಂದೇ ಶಕ್ತಿಯಾಗಿ ಸಂಘಟಿತರಾಗಿ ಎಂದು ಸಮುದಾಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಬೆಂಗಳೂರು ದೇವಾಂಗ ಸಂಘದಿಂದ ವತಿಯಿಂದ ಆಯೋಜಿಸಲಾಗಿದ್ದ ದೇವಾಂಗ ಸಂಘದ ಶತಮಾನೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ದೇವಾಂಗ ಸಮುದಾಯದವರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವ ಸಂಘವು ನೂರು

ಬೆಂಗಳೂರು ನಗರ ಮೂಲ ಸೌಕರ್ಯ ಅಭಿವೃದ್ಧಿಗೆ 1.5 ಲಕ್ಷ ಕೋಟಿ ರೂ. ಹೂಡಿಕೆ:  ಡಿಕೆ ಶಿವಕುಮಾರ್

ಬೆಂಗಳೂರು ನಗರದ ಜನಸಂಖ್ಯೆ ಮುಂದಿನ 20 ರಿಂದ 25 ವರ್ಷಗಳಲ್ಲಿನ ದ್ವಿಗುಣಗೊಳ್ಳಲಿದ್ದು, ನಗರದ ಮೂಲ ಸೌಕರ್ಯ ಕೊರತೆ ನಿವಾರಿಸಲು 1.5 ಲಕ್ಷ ಕೋಟಿ ರೂ ವೆಚ್ಚ ಮಾಡಲು ತೀರ್ಮಾನಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಪ್ರಕಟಿಸಿದ್ದಾರೆ. ನಗರದ ಅರಮನೆ ಮೈದಾನದಲ್ಲಿ ಶ್ರೀ