Menu

10,000 ಕ್ಯಾಲೊರಿ ಜಂಕ್ ಫುಡ್ ತಿಂದ ಫಿಟ್ನೇಸ್ ಕೋಚ್ ಸಾವು

ರಷ್ಯಾದ ಫಿಟ್ನೆಸ್ ಕೋಚ್ ಹಾಗೂ ಇನ್ ಫ್ಲ್ಯೂಯೆನ್ಸರ್ ತೂಕ ಇಳಿಕೆ ಕಾರ್ಯಕ್ರಮದಲ್ಲಿ ಜಂಕ್ ಫುಡ್ ತಿನ್ನುವ ಸ್ಪರ್ಧೆ ನಂತರ ರಾತ್ರಿ ಮಲಗಿದ್ದಾಗ ಚಿರನಿದ್ರೆಗೆ ಜಾರಿದ್ದಾರೆ. 30 ವರ್ಷದ ರಷ್ಯಾದ ಫಿಟ್ನೆಸ್ ಕೋಚ್ ಡಿಮಿಟ್ರಿ ನ್ಯೂಯಾಜಿನ್ ರಷ್ಯಾದ ಓರೆನ್ ಬರ್ಗ್ ನಗರದಲ್ಲಿ ಜಂಕ್ ಫುಡ್ ತಿಂದು 25 ಕೆಜಿ ಹೆಚ್ಚಿಸಿಕೊಳ್ಳುವ ಸವಾಲು ಸ್ವೀಕರಿಸಿದ್ದರು. ಸವಾಲಿನ ಅಂಗವಾಗಿ ತೂಕ ಹೆಚ್ಚಿಸಿಕೊಳ್ಳಲು ಪ್ರತಿದಿನ ಬಿಂಗೆ ಚಿಪ್ಸ್ ಮುಂತಾದ 10,000 ಕ್ಯಾಲೋರಿಯಷ್ಟು ಜಂಕ್ ಫುಡ್ ಗಳನ್ನು

ಶ್ರೀಲಂಕಾದಲ್ಲಿ ಭೀಕರ ಮಳೆ, ಭೂಕುಸಿತಕ್ಕೆ 56 ಮಂದಿ ಬಲಿ

ಶ್ರೀಲಂಕಾದಲ್ಲಿ ನಿರಂತರವಾಗಿ ಧಾರಾಕಾರ ಮಳೆ ಸುರಿಯುತ್ತಿದ್ದು, ಹಲವೆಡೆ ಪ್ರವಾಹ, ಅಲ್ಲಲ್ಲಿ ಭೂಕುಸಿತಗಳುಂಟಾಗಿ 56 ಮಂದಿ ಮೃತಪಟ್ಟಿದ್ದಾರೆ. ಜನಜೀವನ ದುಸ್ತರವಾಗಿ ಪರಿಣಮಿಸಿದೆ. ನಿರಂತರ ಮಳೆಯಿಂದಾಗಿ ಎಲ್ಲೆಡೆ ನೀರು ಆವರಿಸಿದ್ದು, 600ಕ್ಕೂ ಹೆಚ್ಚು ಮನೆಗಳು ತೀವ್ರ ಹಾನಿಗೊಂಡಿವೆ. ಶುಕ್ರವಾರ ಎಲ್ಲಾ ಸರ್ಕಾರಿ ಕಚೇರಿಗಳು ಮತ್ತು

ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಬ್ಯಾನ್‌ ಆಗುತ್ತಾ?

ರಾಜ್ಯ ಸರ್ಕಾರ ನೇಮಿಸಿದ ತಜ್ಞರ ಸಮಿತಿ ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ನಿಷೇಧಕ್ಕೆ ಶಿಫಾರಸು ಮಾಡಿ ವರದಿ ಸಲ್ಲಿಕೆ ಮಾಡಿದೆ. ಬೈಕ್ ಟ್ಯಾಕ್ಸಿ ಸೇವೆ ಬಗ್ಗೆ ವರದಿ ನೀಡುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದ ಬೆನ್ನಲ್ಲೇ ಸಮಿತಿ ರಚಿಸಲಾಗಿತ್ತು. ಸಮಿತಿಯಿಂದ ಬೈಕ್

ಹಿರಿಯೂರಿನಲ್ಲಿ ರಸ್ತೆ ಅಪಘಾತ: ಇಬ್ಬರ ಸಾವು

ಚಿತ್ರದುರ್ಗದ ಹಿರಿಯೂರು ತಾಲೂಕಿನ ಇಂಡಸ್‌ ಕಟ್ಟೆಯಲ್ಲಿ ಕಬ್ಬಿಣ ತುಂಬಿದ ಲಾರಿಗೆ ಹಿಂಬದಿಯಿಂದ ಕೋಳಿ ತುಂಬಿದ ಬುಲೆರೊ ವಾಹನ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತುಮಕೂರಿನ ತಿಪಟೂರು ನಿವಾಸಿಗಳಾದ ಚಂದನ್ ಗೌಡ( 22), ಕುಮಾರ್ (17) ಮೃತಪಟ್ಟವರು. ಬುಲೆರೊ ಚಾಲಕನ ಅತಿ ವೇಗ

ಬೆಂಗಳೂರಿನಲ್ಲಿ ಲಾಕಪ್ ಡೆತ್: ಹೊಡೆದು ಮದ್ಯ ರಿಹ್ಯಾಬ್ ಸೆಂಟರ್‌ಗೆ ಸೇರಿಸಿದ್ದರಾ ಪೊಲೀಸರು?

ಬೆಂಗಳೂರಿನ ವಿವೇಕ ನಗರ ಪೊಲೀಸ್‌ ಕಸ್ಟಡಿಯಲ್ಲಿ ಪೊಲೀಸರಿಂದ ತೀವ್ರ ಹಲ್ಲೆಗೆ ಒಳಗಾಗಿದ್ದ ವ್ಯಕ್ತಿ ಮದ್ಯ ರಿಹ್ಯಾಬ್ ಸೆಂಟರ್‌ನಲ್ಲಿ ಮೃತಪಟ್ಟಿದ್ದಾರೆ. ಸಿಂಗಮಲೆ ಮೃತಪಟ್ಟವರು. ಕಸ್ಟಡಿಯಲ್ಲಿರುವಾಗ ಪೊಲೀಸರು ಸಂಗಮಲೆಗೆ ಹೊಡೆದಿದ್ದು, ಬಳಿಕ ಮಾದಕನಾಯಕಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮದ್ಯ ರಿಹ್ಯಾಬ್ ಸೆಂಟರ್‌ಗೆ ದಾಖಲಿಸಿದ್ದರು. ಅಲ್ಲಿಗೆ

ಕೋಲಾರದಲ್ಲಿ ಶಿಕ್ಷಕಿಗೆ ಆನ್‌ಲೈನ್‌ನಲ್ಲಿ 20 ಲಕ್ಷ ರೂ. ವಂಚಿಸಿದ ದಂಪತಿ ಆರೆಸ್ಟ್‌

ಕೋಲಾರದ ಮಾಲೂರಿನ ಖಾಸಗಿ ಶಾಲಾ ಶಿಕ್ಷಕಿಯೊಬ್ಬರಿಗೆ ಆನ್‌ಲೈನ್‌ನಲ್ಲಿ 20 ಲಕ್ಷ ರೂಪಾಯಿ ವಂಚನೆ ಮಾಡಿರುವ ವಂಚಕ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೋಲಾರ ಸೈಬರ್ ಕ್ರೈಮ್ ಪೊಲೀಸರು ಕಾರ್ಯಾಚರಣೆ‌ ನಡೆಸಿ ವಂಚಕ ದಂಪತಿಯನ್ನು ಅರೆಸ್ಟ್‌ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಗಳೂರಿನ ರಾಧ/ಪಾವನ ಹಾಗೂ ಸತೀಶ್

ಕಗ್ಗಲಿಪುರದಲ್ಲಿ ಬಾಲಕಿಯ ಕೊಲೆ

ಬೆಂಗಳೂರು ದಕ್ಷಿಣ ತಾಲೂಕಿನ ಬೋಳಾರೆ ಗ್ರಾಮದ ಬಳಿ 15 ವರ್ಷದ ಬಾಲಕಿಯನ್ನು ಬರ್ಬರ ಹತ್ಯೆ ಮಾಡಿರುವ ಘಟನೆ ನಡೆದಿದೆ. ಗುರುವಾರ ಮಧ್ಯಾಹ್ನ ಮನೆಯ ಸಮೀಪ ಬಹಿರ್ದೆಸೆಗೆ ಹೋಗಿದ್ದ ಕವನಳನ್ನು ಕತ್ತು ಹಿಸುಕಿ ಕೊಲೆ ಮಾಡಿರುವುದು ಪತ್ತೆಯಾಗಿದೆ. ಕವನ ಸಂಜೆಯಾದರೂ ಮನೆಗೆ ವಾಪಸ್

ಎಸ್ಟಿಗಳಿಗೆ ಹಕ್ಕು ಪತ್ರ ವಿತರಣೆಗೆ ತೊಡಕು: ಸಚಿವ ಸಂತೋಷ್‌ ಲಾಡ್‌ ಚರ್ಚೆ

ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಅಳ್ನಾವರ ಹಾಗೂ ಕಲಘಟಗಿ ಕಂದಾಯ ಉಪ ಗ್ರಾಮಗಳಲ್ಲಿನ ಪರಿಶಿಷ್ಟ ಪಂಗಡದವರಿಗೆ ಹಕ್ಕು ಪತ್ರಗಳ ವಿತರಣೆಗೆ ಉಂಟಾಗಿರುವ ತೊಂದರೆಗಳ ಬಗ್ಗೆ ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್‌ ಎಸ್‌ ಲಾಡ್‌ ಅವರು ಬೆಂಗಳೂರು  ವಿಕಾಸಸೌಧದಲ್ಲಿ

‘ಬೃಹತ್ ಮೈಸೂರು ಮಹಾನಗರ ಪಾಲಿಕೆ’ ಘೋಷಣೆಗೆ ಸಚಿವ ಸಂಪುಟ ನಿರ್ಣಯ

ಕರ್ನಾಟಕ ಮಹಾನಗರ ಪಾಲಿಕೆಗಳ ಅಧಿನಿಯಮ 1976ರ ಸೆಕ್ಷನ್-3, 4, 500 ಮತ್ತು 501ರನ್ವಯ ಶೆಡ್ಯೂಲ್-ಎ”ನಲ್ಲಿ ಒಳಗೊಂಡ ಪ್ರದೇಶಗಳನ್ನು ಶೆಡ್ಯೂಲ್-ಬಿ ಯಲ್ಲಿ ಆ ಪ್ರದೇಶದ ಗಡಿರೇಖೆ ಗುರುತಿಸಲಾಗಿರುವಂತೆ ಹಾಲಿ ಮೈಸೂರು ಮಹಾನಗರ ಪಾಲಿಕೆಯ ವ್ಯಾಪ್ತಿಗೆ ಸೇರ್ಪಡೆಗೊಳಿಸಲು ಹಾಗೂ ಒಟ್ಟಾರೆ ಪ್ರದೇಶವನ್ನು ‘ಬೃಹತ್ ಮೈಸೂರು

ಸ್ಪೀಕರ್ ಯುಟಿ ಖಾದರ್‌ಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ

ಬೆಂಗಳೂರು ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್‌ ಬೆಂಗಳೂರು ವಿಶ್ವವಿದ್ಯಾಲಯ ವತಿಯಿಂದ ವಿಧಾನಸಭೆಯ ಸಭಾಧ್ಯಕ್ಷರಾದ ಯು.ಟಿ.ಖಾದರ್ ಫರೀದ್‌ರವರಿಗೆ ಗೌರವಾನ್ವಿತ ಡಾಕ್ಟರೇಟ್ ಪದವಿ ಪ್ರದಾನ ಮಾಡಿದರು. ರಾಜಭವನದ ಬ್ಯಾಂಕ್ವೇಟ್ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೌರವ ಪದವಿ ಪ್ರದಾನ ಮಾಡಲಾಯಿತು. ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸಿ