ಪಾಕ್ ಮೇಲೆ ಭಾರತ ದಾಳಿ ನಡೆಸಲು ಬಿಡುವುದಿಲ್ಲವೆಂದ ಖಲಿಸ್ತಾನಿ ಉಗ್ರ ಪನ್ನು
ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನು ಪಾಕಿಸ್ತಾನಕ್ಕೆ ತನ್ನ ಬೆಂಬಲವನ್ನು ಪ್ರಕಟಿಸಿದ್ದಾನೆ. ಭಾರತೀಯ ಸೇನೆ ಪಾಕಿಸ್ತಾನದ ಮೇಲೆ ದಾಳಿ ನಡೆಸಲು ಬಿಡುವುದಿಲ್ಲ, ಪಾಕಿಸ್ತಾನದ ವಿರುದ್ಧ ಹೋರಾಡುವ ಧೈರ್ಯ ಭಾರತಕ್ಕೆ ಇಲ್ಲ ಎಂದು ಹೇಳಿದ್ದಾನೆ. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋ ತ್ಪಾದಕ ದಾಳಿಯ ನಂತರ ಭಾರತ ತನ್ನ ಮೇಲೆ ದಾಳಿ ಮಾಡಬಹುದು ಎಂದು ಪಾಕಿಸ್ತಾನ ಅನುಮಾನ ವ್ಯಕ್ತಪಡಿಸುತ್ತಿರುವ ಹಿನ್ನೆಲೆಯಲ್ಲಿ ಈ ಹೇಳಿಕೆ ನೀಡಿದ್ದಾನೆ. ಭಾರತೀಯ ಸೇನೆ ಪಂಜಾಬ್ ಮೂಲಕ
ಅಲ್ಪಾವಧಿ ವೀಸಾ ಹೊಂದಿದ್ದ ನಾಲ್ವರು ಪಾಕ್ ಪ್ರಜೆಗಳು ರಾಜ್ಯದಿಂದ ಗಡಿಪಾರು
ಪಹಲ್ಗಾಮ್ ದಾಳಿ ಬಳಿಕ ಅಲ್ಪಾವಧಿ ವೀಸಾ ಹೊಂದಿದ್ದ ನಾಲ್ವರು ಪಾಕ್ ಪ್ರಜೆಗಳನ್ನು ರಾಜ್ಯದಿಂದ ಗಡಿಪಾರು ಮಾಡಲಾಗಿದೆ. ದೀರ್ಘಾವಧಿ ವೀಸಾ ಹೊಂದಿ ರುವ 91 ಮಂದಿ ಪಾಕ್ ಪ್ರಜೆಗಳು ಇನ್ನೂ ಕರ್ನಾಟಕದಲ್ಲೇ ಇದ್ದಾರೆ. ರಾಜ್ಯದ ನಾನಾ ಜಿಲ್ಲೆಗಳಲ್ಲಿ 91 ಮಂದಿ ವಾಸವಾಗಿದ್ದಾರೆ ಎಂದು
ಮಂಗಳಸೂತ್ರ, ಜನಿವಾರ ನಿಷೇಧ ಕೇಂದ್ರ ಹಿಂಪಡೆಯಲಿ: ಡಿ.ಕೆ.ಶಿವಕುಮಾರ್
ಈ ಬಿಜೆಪಿಯವರು ಹೇಳುವುದು ಒಂದು ಮಾಡುವುದು ಇನ್ನೊಂದು. ಇದೇ ಅವರ ಮುಖವಾಡ. ರೈಲ್ವೆ ಪರೀಕ್ಷೆಯಲ್ಲಿ ಮಂಗಳಸೂತ್ರ, ಜನಿವಾರ ತೆಗೆಯಬೇಕು ಎಂದು ಹೇಳಿರುವುದು ಸರಿಯಲ್ಲ. ಇದನ್ನು ಹಿಂಪಡೆಯಬೇಕು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಆಗ್ರಹಿಸಿದರು. ಸದಾಶಿವನಗರದ ನಿವಾಸದ ಬಳಿ ಶಿವಕುಮಾರ್ ಅವರು ಮಾಧ್ಯಮಗಳ ಪ್ರಶ್ನೆಗಳಿಗೆ
ಆಸ್ಟ್ರೇಲಿಯಾ ವಿವಿಗಳಲ್ಲಿ ಭಾರತೀಯ ವಿದ್ಯಾರ್ಥಿಗಳಿಗೆ ವೀಸಾ ಕಡಿತ
ಅಮೆರಿಕ ಸರ್ಕಾರ ಭಾರತಕ್ಕೆ ನೀಡುತ್ತಿದ್ದ ವೀಸಾ ಗಣನೀಯವಾಗಿ ಕಡಿತಗೊಳಿಸಿದ್ದು, ಈಗ ಆಸ್ಟ್ರೇಲಿಯಾದ ಕೆಲವು ವಿಶ್ವವಿದ್ಯಾಲಯಗಳು ಭಾರತೀಯ ವಿದ್ಯಾರ್ಥಿಗಳ ವೀಸಾ ಕಡಿತಗೊಳಿಸಲು ಮುಂದಾಗಿವೆ. ಆಸ್ಟ್ರೇಲಿಯಾದ ಕೆಲವು ಪ್ರಮುಖ ವಿಶ್ವವಿದ್ಯಾಲಯಗಳು ಭಾರತದ ಆರು ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದ ವಿದ್ಯಾರ್ಥಿಗಳ ವೀಸಾ ಅರ್ಜಿಯನ್ನು
ಜೀವನ ಸುಲಭ, ನಾವೇಕೆ ಅದನ್ನು ಇಷ್ಟೊಂದು ಕಠಿಣಗೊಳಿಸುತ್ತೇವೆ?
ಸಾಫ್ಟ್‌ವೇರ್ ಉದ್ಯೋಗದಲ್ಲಿ ವರ್ಷಪೂರಾ ದುಡಿದು ಹಣ ಗಳಿಸಿಯೂ ನೆಮ್ಮದಿಯಿಂದ ಇರಲಾಗದು, ಆದರೆ ಜಾನ್‌ರವರು ವರ್ಷದಲ್ಲಿ ಕೆಲವು ತಿಂಗಳು ಮಾತ್ರ ಹಾಗೂ ದಿನದಲ್ಲಿ ಕೆಲವು ಗಂಟೆ ಮಾತ್ರ ಕೆಲಸ ಮಾಡಿ ಸ್ವಾವಲಂಬಿ ಹಾಗೂ ನೆಮ್ಮದಿಯಾಗಿ ಇದ್ದಾರೆ, ತಾವು ಮಾತ್ರ ಇರದೆ ಇತರರಿಗೂ ತರಬೇತಿ
ರಾಜ್ಯದಲ್ಲಿ ಅಕ್ರಮ ಶಾಲೆಗಳಿಗೆ ಸಕ್ರಮ ಅವಕಾಶ
ಬೆಂಗಳೂರು: ರಾಜ್ಯದಲ್ಲಿ ಅನಧಿಕೃತವಾಗಿ ನಡೆಯುತ್ತಿರುವ ಖಾಸಗಿ ಶಾಲೆಗಳನ್ನು ಸಕ್ರಮಗೊಳಿಸಲು ಸರ್ಕಾರವು ಅವಕಾಶ ಕಲ್ಪಿಸಿದೆ. 2023-24 ಮತ್ತು ಅದಕ್ಕೂ ಹಿಂದಿನ ವರ್ಷಗಳಲ್ಲಿ ಮಾನ್ಯತೆಯೇ ಇಲ್ಲದೆ ಅಥವಾ ಮಾನ್ಯತೆ ನವೀಕರಣ ಮಾಡಿಕೊಳ್ಳದೆ ನಡೆಯುತ್ತಿರುವ ಖಾಸಗಿ ಶಾಲೆಗಳು ಬಾಕಿ ಇರುವ ಹಿಂದಿನ ಎಲ್ಲ ವರ್ಷಗಳಿಗೆ ಮತ್ತೆ
ಕೊಹ್ಲಿ-ಕೃನಾಲ್ ಅಮೋಘ ಜೊತೆಯಾಟ: ಡೆಲ್ಲಿ ವಿರುದ್ಧ ಬೆಂಗಳೂರಿನ ಸೋಲಿಗೆ ಸೇಡು ತೀರಿಸಿಕೊಂಡ ಆರ್ ಸಿಬಿ!
ನವದೆಹಲಿ: ದಾಖಲೆಗಳ ವೀರ ವಿರಾಟ್ ಕೊಹ್ಲಿ ಮತ್ತು ಆಲ್ ರೌಂಡರ್ ಕೃನಾಲ್ ಪಾಂಡ್ಯ ಅಮೋಘ ಜೊತೆಯಾಟದ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು 6 ವಿಕೆಟ್ ಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸಿತು. ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್
ಭಾರತದ ನೌಕಾಪಡೆಯಿಂದ ಅರಬ್ಬಿ ಸಮುದ್ರದಲ್ಲಿ ಯುದ್ಧನೌಕೆಗಳ ಯಶಸ್ವಿ ಕ್ಷಿಪಣಿ ಪರೀಕ್ಷೆ!
ನವದೆಹಲಿ: ಭಾರತೀಯ ಯುದ್ಧ ನೌಕೆಗಳು ಅರಬ್ಬಿ ಸಮುದ್ರದಲ್ಲಿ ದೂರಗಾಮಿ ನೌಕೆಗಳನ್ನು ಹೊಡೆದುರುಳಿಸುವ ತರಬೇತಿಯನ್ನು ನಡೆಸಿವೆ. ರಾಷ್ಟ್ರದ ಭದ್ರತೆ ಕುರಿತು ನೌಕಾಪಡೆ ತಮ್ಮ ಬಳಿ ಇರುವ ಯುದ್ಧ ನೌಕೆಗಳ ಸಾಮರ್ಥ್ಯವನ್ನು ಹಲವು ರೀತಿಯಲ್ಲಿ ಪರೀಕ್ಷೆ ನಡೆಸಿತು. ಅರಬ್ಬಿ ಸಮುದ್ರದ ಮಧ್ಯಭಾಗದಲ್ಲಿ ನೆಲದಿಂದ ನೆಲದ ಮೇಲೆ
ಕಬಡ್ಡಿ ಪಂದ್ಯದ ವೇಳೆ ಪ್ರೇಕ್ಷಕರ ಗ್ಯಾಲರಿ ಕುಸಿದು ಬಿದ್ದು ಓರ್ವ ಸಾವು 13 ಮಂದಿಗೆ ಗಾಯ
ಮಂಡ್ಯ: ಕಬಡ್ಡಿ ಪಂದ್ಯಕ್ಕಾಗಿ ಹಾಕಲಾಗಿದ್ದ ಪ್ರೇಕ್ಷಕರ ಗ್ಯಾಲರಿ ದಿಢೀರ್ ಕುಸಿದು ಬಿದ್ದು ಓರ್ವ ಸಾವನ್ನಪ್ಪಿ13 ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ದುರ್ಘಟನೆ ಮಲ್ಲನಾಯಕನಕಟ್ಟೆ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ. ಮಲ್ಲನಾಯಕನಕಟ್ಟೆಯ ಪಾಪಣ್ಣಚಾರಿ ಮೃತಪಟ್ಟವರು,ಕಬಡ್ಡಿ ಪಂದ್ಯವನ್ನು ಸಾಕಷ್ಟು ವೀಕ್ಷಿಸುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ವೀಕ್ಷಕರ
ಬೆಂಗಳೂರಿನಲ್ಲಿ ಕ್ಯಾಬ್ ಚಾಲಕನ ಅಪಹರಿಸಿ ಕಗ್ಗೊಲೆ
ಬೆಂಗಳೂರು:ಕ್ಯಾಬ್ ಚಾಲಕರೊಬ್ಬರನ್ನು ದುಷ್ಕರ್ಮಿಗಳು ಅಪಹರಿಸಿ ಕತ್ತು ಕೊಯ್ದು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಸಾತನೂರಿನ ಕಬ್ಬಾಳು ಸಮೀಪದ ಅರೆಕಟ್ಟೆದೊಡ್ಡಿ ಬಳಿ ಶನಿವಾರ ರಾತ್ರಿ ನಡೆದಿದೆ. ಸೋಲದೇವನಹಳ್ಳಿಯ ಚಿಕ್ಕಬ್ಯಾಲಕೆರೆಯ ಚಂದ್ರಶೇಖರ (39) ಕೊಲೆಯಾದವರು, ನಗರದಲ್ಲಿ ಕ್ಯಾಬ್ ಚಾಲಕರಾಗಿದ್ದ ಚಂದ್ರಶೇಖರ ಅವರನ್ನು ರಾತ್ರಿ ದುಷ್ಕರ್ಮಿಗಳು ವಾಹನವೊಂದರಲ್ಲಿ