Saturday, October 31, 2026
Menu

ಪ್ರೀತಿ ನಿರಾಕರಣೆ, ಪ್ರಿಯತಮೆ ಕುಟುಂಬದಿಂದ ಹಲ್ಲೆ: ವಿಷ ಸೇವಿಸಿ ಯುವಕ ಸುಸೈಡ್‌

ಪ್ರಿಯತಮೆಯಿಂದ ಪ್ರೀತಿ ನಿರಾಕರಣೆ ಹಾಗೂ ಆಕೆಯ ಕುಟುಂಬದವರಿಂದ ಹಲ್ಲೆಗೆ ಒಳಗಾಗಿ ನೊಂದ ಯುವಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಶಿಕಾರಿಪುರ ನಿವಾಸಿ ಶಬರೀಶ್ (28) ಆತ್ಮಹತ್ಯೆ ಮಾಡಿಕೊಂಡವ. ರ್ಥಹಳ್ಳಿಯಲ್ಲಿ ಟೈಲ್ಸ್ ಕೆಲಸ ಮಾಡುತ್ತಿದ್ದ ಆತ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದು ಮನೆಯವರು ವಿರೋಧಿಸಿದ್ದರು. ಯುವತಿ ಶಬರೀಶ್‌ಗೆ ಕರೆ ಮಾಡಿ, ನಿನ್ನ ಬಳಿ ಮಾತನಾಡಬೇಕು. ಶಿವಮೊಗ್ಗದ ಬಸ್ ನಿಲ್ದಾಣಕ್ಕೆ ಬಾ ಎಂದಿದ್ದಳು. ಶಬರೀಶ್ ಹೋದಾಗ ಮಾತಿನ ಜಗಳ ನಡೆದಿದ್ದು, ಸಂಬಂಧಿಕರೊಂದಿಗೆ

ಕುಡಿಯುವ ನೀರಿನ ಸಮಸ್ಯೆ: ಡಿಸಿಗಳೇ ನೇರ ಹೊಣೆಯೆಂದು ಸಿಎಂ ಎಚ್ಚರಿಕೆ

ರಾಜ್ಯದ ಹಲವು ಜಿಲ್ಲೆಗಳಲ್ಲಿ ಬೇಸಿಗೆ ತಾಪ ತೀವ್ರಗೊಂಡಿದ್ದು, ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸುತ್ತಿರುವುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಭೀರವಾಗಿ ಪರಿಗಣಿಸಿದ್ದಾರೆ. ಜನರಿಗೆ ಕುಡಿಯುವ ನೀರಿನ ತೊಂದರೆಯಾದರೆ ಆಯಾ ಜಿಲ್ಲಾಧಿಕಾರಿಗಳೇ ನೇರ ಹೊಣೆ ಎಂದು ಎಚ್ಚರಿಕೆ ನೀಡಿದ್ದಾರೆ. ಕುಡಿಯುವ ನೀರಿನ ಪೂರೈಕೆಗಾಗಿ ಈಗಾಗಲೇ ಸರ್ಕಾರ

ಯೋಗೇಶ್ ಗೌಡ ಕೊಲೆ ಕೇಸ್‌: ಜೀವಾವಧಿ ಶಿಕ್ಷೆ ತಡೆ ಕೋರಿ ವಿನಯ್ ಕುಲಕರ್ಣಿ ಹೈಕೋರ್ಟ್‌ಗೆ

ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ತಡೆ ಕೋರಿ ಶಾಸಕ ವಿನಯ್ ಕುಲಕರ್ಣಿ ಸೇರಿ ಇಬ್ಬರು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಜನಪ್ರತಿನಿಧಿಗಳ ನ್ಯಾಯಾಲಯದ ಆದೇಶ ಪ್ರಶ್ನಿಸಿ ಅಪರಾಧಿ ವಿನಯ್ ಕುಲಕರ್ಣಿ ಮತ್ತು ಚಂದ್ರಶೇಖರ್ ಇಂಡಿ

ಮದುವೆಗಳಿಗೆ ಅತಿಥಿಯಂತೆ ಹೋಗಿ ಮಕ್ಕಳ ಮುದ್ದಿಸಿ ಚಿನ್ನ ಎಗರಿಸುತ್ತಿದ್ದಾತ ಅರೆಸ್ಟ್‌

ಮದುವೆಗಳಿಗೆ ಅತಿಥಿಯಂತೆ ಹೋಗಿ ಮಕ್ಕಳನ್ನು ಮಾತನಾಡಿಸಿ ಮುದ್ದು ಮಾಡಿ ಚಿನ್ನ ಎಗರಿಸುತ್ತಿದ್ದ ಕಳ್ಳನನ್ನು ಬೆಂಗಳೂರಿನ ಸಂಪಿಗೆಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪೀಣ್ಯ ಎರಡನೇ ಹಂತದ ನಿವಾಸಿ ಎಚ್‌.ಕೆ. ಬಾಬು ಅಲಿಯಾಸ್ ಪಲ್ಸರ್ ಬಾಬು ಬಂಧಿತ. ಆರೋಪಿಯಿಂದ 5.5 ಲಕ್ಷ ರೂ.. ಮೌಲ್ಯದ

ನನಗೆ ಸಿಕ್ಕಂಥ ತಂದೆ ಬೇರೆ ಯಾರಿಗೂ ಸಿಗದಿರಲಿ, ತಂದೆ ನನ್ನ ದೇಹ ಮುಟ್ಟದಿರಲಿ: ಡೆತ್‌ ನೋಟ್‌ ಬರೆದಿಟ್ಟು ಯುವ ವಕೀಲ ಆತ್ಮಹತ್ಯೆ

ತಂದೆಯ ನಿರಂತರ ಮಾನಸಿಕ ಕಿರುಕುಳ ಹಾಗೂ ಅತಿ ಕಟ್ಟುನಿಟ್ಟುಗಳಿಂದ ಬೇಸತ್ತ ಯುವ ವಕೀಲ ಪ್ರಿಯಾಂಶು ಶ್ರೀವಾಸ್ತವ ಕಾನ್ಪುರ ನ್ಯಾಯಾಲಯ ಸಂಕೀರ್ಣದ ಐದನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. “ಅಪ್ಪಾ, ಕೊನೆಗೂ ನೀವು ಗೆದ್ದಿರಿ, ನಾನು ಸೋತುಹೋಗಿದ್ದೇನೆ. ನಿಮಗೆ ಅಭಿನಂದನೆಗಳು…” ಎಂದು ಯುವ

ಗ್ರೇಟರ್ ಬೆಂಗಳೂರು ಚುನಾವಣೆಗೆ ಹಣ, ಸಿಬ್ಬಂದಿ ಕೊರತೆ: ಸುಪ್ರೀಂಗೆ ಇಸಿ ಮಾಹಿತಿ

ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮತ್ತು ಐದು ನಗರ ಪಾಲಿಕೆಗಳ ಚುನಾವಣೆ ಜೂನ್ 30ರೊಳಗೆ ಚುನಾವಣೆ ನಡೆಸಬೇಕೆಂಬ ಸುಪ್ರೀಂ ಕೋರ್ಟ್ ಆದೇಶವಿದ್ದರೂ ಸದ್ಯದ ಪರಿಸ್ಥಿತಿಯಲ್ಲಿ  ಅಸಾಧ್ಯ ಎಂದು ರಾಜ್ಯ ಚುನಾವಣಾ ಆಯೋಗ ನ್ಯಾಯಾಲಯಕ್ಕೆ ತಿಳಿಸಿದೆ. ಚುನಾವಣಾ ಪ್ರಕ್ರಿಯೆ ನಡೆಸಲು ಆಯೋಗದ ಬಳಿ ಹಣದ

ಒಳಮೀಸಲಾತಿ ಹಂಚಿಕೆಯಲ್ಲಿ ಸಿಎಂ ಸಿದ್ದರಾಮಯ್ಯ ಎಸ್ಕೇಪ್‌ ಸೂತ್ರ: ಆರ್‌ ಅಶೋಕ

ಒಳಮೀಸಲಾತಿಯನ್ನು ಹಂಚಿಕೆ ಮಾಡುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಸ್ಕೇಪ್‌ ಸೂತ್ರ ಅನುಸರಿಸಿದ್ದಾರೆ. ಇದರಿಂದ ಯಾವುದೇ ಸಮುದಾಯಕ್ಕೆ ಪ್ರಯೋಜನ ಸಿಗುವುದಿಲ್ಲ ಎಂದು ಪ್ರತಿಪಕ್ಷ ನಾಯಕ ಆರ್‌ ಅಶೋಕ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಳಮೀಸಲಾತಿಯನ್ನು ಹಂಚಿಕೆ ಮಾಡುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಫಲರಾಗಿದ್ದಾರೆ. ಒಂದು ಕಡೆ

ಬೆಂಗಳೂರು ಅಭಿವೃದ್ಧಿ ಯೋಜನೆಗಳಿಗೆ ಭೂಮಿ ನೀಡುವಂತೆ ರಕ್ಷಣಾ ಇಲಾಖೆಗೆ ಡಿಕೆ ಶಿವಕುಮಾರ್‌ ಮನವಿ

ರಕ್ಷಣಾ ಇಲಾಖೆಯು ಬೆಂಗಳೂರಿನ  ವಿಮಾನ ನಿಲ್ದಾಣಗಳ ಸುತ್ತಮುತ್ತಲ ಪ್ರದೇಶದಲ್ಲಿ ವಿಧಿಸಲಾಗಿರುವ ಕಟ್ಟಡಗಳ ಎತ್ತರದ ನಿರ್ಬಂಧಗಳ ಸಡಿಲಿಕೆ, ಅವಳಿ ಸುರಂಗ ಮಾರ್ಗ, ರೋಟರಿ ಮೇಲ್ಸೇತುವೆ ಸೇರಿದಂತೆ ವಿವಿಧ ಯೋಜನೆ ಜಾರಿಗೆ ರಕ್ಷಣಾ ಇಲಾಖೆ ಜಾಗಗಳನ್ನು ನೀಡುವಂತೆ ಹಾಗೂ ಸುರಕ್ಷತೆ ಹಾಗೂ ಪ್ರಗತಿಯ ವಿಚಾರವನ್ನು

ಒಳಮೀಸಲಾತಿ: ಎಡಗೈ 5.25%, ಬಲಗೈ 5.25 % ಇತರ ಸಮುದಾಯಗಳಿಗೆ 4.5% ಮೀಸಲಾತಿ: ಸಿಎಂ

ಪರಿಶಿಷ್ಟ ಜಾತಿಯ ಎಲ್ಲ ಸಮುದಾಯಗಳಿಗೂ ನ್ಯಾಯ ಒದಗಿಸುವ ನಿಟ್ಟಿನಲ್ಲಿ  ಸಚಿವ ಸಂಪುಟ ಸಭೆ ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಂಡಿದ್ದು, ಎಡ, ಬಲ ಹಾಗೂ ಇತರೇ ಸಮುದಾಯಗಳಿಗೆ 5.25, 5.25, 4.5 ಮೀಸಲಾತಿ ಕಲ್ಪಿಸಲು ಸರ್ವಾನುಮತದಿಂದ ಒಪ್ಪಿಗೆ ನೀಡಿದೆ. ಒಳಮೀಸಲಾತಿಗೆ ಸಂಬಂಧಿಸಿದಂತೆ ಡೆದ ಸಂಪುಟ

ಕೊರಳಿಗೆ ಸುತ್ತಿಕೊಂಡ ಜೋಕಾಲಿಗೆ ಶಿವಮೊಗ್ಗದಲ್ಲಿ ಬಾಲಕಿ ಬಲಿ

ಶಿವಮೊಗ್ಗ ತಾಲೂಕಿನ ಲಕ್ಕಿನಕೊಪ್ಪದಲ್ಲಿ ಜೋಕಾಲಿ ಆಡುತ್ತಿದ್ದಾಗ ಕುಣಿಗೆ ಕುತ್ತಿಗೆಗೆ ಬಿಗಿದು ಬಾಲಕಿಯೊಬ್ಬಳು ಮೃತಪಟ್ಟಿದ್ದಾಳೆ. ಮೂರು ದಿನಗಳ ಹಿಂದೆ ಈ ದುರಂತ ಸಂಭವಿಸಿದು, ತಡವಾಗಿ ಬಹಿರಂಗಗೊಂಡಿದೆ. ಒಂಬತ್ತು ವರ್ಷದ ಪ್ರಣಮ್ಯ ಮೃತಪಟ್ಟ ಬಾಲಕಿ. ಬೇಸಿಗೆ ರಜೆಯ ಕಾರಣ ವಿದ್ಯಾನಗರದಿಂದ ಲಕ್ಕಿನಕೊಪ್ಪದ ಚಿಕ್ಕಮ್ಮನ ಮನೆಗೆ