Menu

ಇರಾನ್‌ ಹಡಗುಗಳನ್ನು ಮುಳುಗಿಸುವುದೇ ಮಜಾವೆಂದ ಅಮೆರಿಕ ಸೇನೆ

ಇರಾನ್ ಹಡಗುಗಳನ್ನು ಮುಳುಗಿಸುವುದೇ ನಮಗೆ ಮಜಾ ಎಂದು ಅಮೆರಿಕ ಸೇನೆ ಹೇಳಿಕೊಂಡಿದ್ದಾಗಿ ಡೋರಲ್‌ನಲ್ಲಿ ನಡೆದ ನ್ಯಾಷನಲ್ ರಿಪಬ್ಲಿಕನ್ ಸಭೆಯಲ್ಲಿ ಅಮೆರಿಕ ಅಧ್ಯಕ್ಷ್ಯ ಡೊನಾಲ್ಡ್‌ ಟ್ರಂಪ್‌ ಮಾಹಿತಿ ನೀಡಿದ್ದಾರೆ. ಅಮೆರಿಕ ಮತ್ತು ಇಸ್ರೇಲ್ ದಾಳಿಯಲ್ಲಿ ಇರಾನ್‌ನ ನೌಕಾಪಡೆಗೆ ದೊಡ್ಡ ಪ್ರಮಾಣದ ಹಾನಿಯುಂಟಾಗಿದೆ. ಅಮೆರಿಕ ನೌಕಾಪಡೆಯು ಮೂರುವರೆ ದಿನಗಳಲ್ಲಿ 46 ಇರಾನ್ ನೌಕಾಪಡೆಯ ಹಡಗುಗಳನ್ನು ಮುಳುಗಿಸಿದೆ. ಇರಾನ್‌ನ ಹಡಗುಗಳು ಉತ್ತಮ ಗುಣಮಟ್ಟದವು, ಅವುಗಳನ್ನು ಏಕೆ ವಶಕ್ಕೆ ಪಡೆದು ಬಳಸಬಾರದು, ಅವುಗಳನ್ನು ನಾವು ಬಳಸಬಹುದಿತ್ತು,

ಸುಪ್ರೀಂಕೋರ್ಟ್‌ನ ಕ್ಷಮೆ ಯಾಚಿಸಿ ಪಠ್ಯ ಪುಸ್ತಕ ವಾಪಸ್‌ ಪಡೆದ ಎನ್​ಸಿಆರ್​ಟಿ

8ನೇ ತರಗತಿಯ ಹೊಸ ಸಮಾಜ ವಿಜ್ಞಾನ ಪುಸ್ತಕದ ಒಂದು ಅಧ್ಯಾಯದಲ್ಲಿ ನ್ಯಾಯಾಂಗದಲ್ಲಿನ ಭ್ರಷ್ಟಾಚಾರ ಎಂಬ ವಿಷಯ ಉಲ್ಲೇಖಕ್ಕೆ ಸಂಬಂಧಿಸಿದಂತೆ ಎನ್​ಸಿಆರ್​ಟಿ ಸುಪ್ರೀಂಕೋರ್ಟ್‌ನ ಕ್ಷಮೆ ಯಾಚಿಸಿ, ಇಡೀ ಪುಸ್ತಕವನ್ನೇ ವಾಪಸ್‌ ಪಡೆದಿದೆ. ಪುಸ್ತಕದಲ್ಲಿ ನ್ಯಾಯಾಂಗದಲ್ಲಿನ ಭ್ರಷ್ಟಾಚಾರ ಎಂಬ ವಿಷಯವನ್ನು ಉಲ್ಲೇಖಿಸಿರುವುದು ಕೋಲಾಹಲಕ್ಕೆ ಕಾರಣವಾಗಿತ್ತು.

ಇರಾನ್‌ ಇಸ್ರೇಲ್‌ ಸಂಘರ್ಷದಿಂದ ಎಲ್‌ಪಿಜಿ ಕೊರತೆ: ಹೋಟೆಲ್‌ ಬಂದ್‌ ಆತಂಕ

ಇರಾನ್-ಇಸ್ರೇಲ್ ಯುದ್ಧ ಜಾಗತಿಕವಾಗಿ ಹಲವು ಸಮಸ್ಯೆಗಳನ್ನು ತಂದೊಡ್ಡಿದೆ. ಇರಾನ್‌ಗೆ ಬೇರೆ ದೇಶಗಳಿಂದ ರಫ್ತು ಆಗುತ್ತಿದ್ದ ವಸ್ತುಗಳು ರಫ್ತು ಆಗುತ್ತಿಲ್ಲ, ವಿಮಾನ ಸಂಚಾರ ಸ್ಥಗಿತಗೊಂಡಿದೆ. ಪ್ರಮುಖವಾಗಿ ಹಲವು ದೇಶಗಳಲ್ಲಿ ತೈಲ ಸಮಸ್ಯೆ ಎದುರಾಗಿದ್ದು, ಬಿಕ್ಕಟ್ಟು ಸೃಷ್ಟಿಯಾಗಿದೆ. ಎಲ್‌ಪಿಜಿ ಪೂರೈಕೆ ವ್ಯತ್ಯಯಗೊಂಡು ಮುಂಬೈನಲ್ಲಿ 20%

ಬಿಜೆಪಿ ಸಂಸದರು ಅನಿಲ ಸಿಲಿಂಡರ್ ಬೆಲೆ ಏರಿಕೆ ಬಗ್ಗೆ ಮಾತನಾಡಲಿ: ಡಿಕೆ ಶಿವಕುಮಾರ್

“ಅಂತರರಾಷ್ಟ್ರೀಯ ಮಹಿಳಾ ದಿನದಂದೆ ಗ್ಯಾಸ್ ಸಿಲಿಂಡರ್ ಬೆಲೆಯನ್ನ ಕೇಂದ್ರ ಸರ್ಕಾರ 60 ರೂಪಾಯಿ ಏರಿಕೆ ಮಾಡಿದೆ. ಬಿಜೆಪಿ ಸಂಸದರುಗಳು ಈ ಬೆಲೆ ಏರಿಕೆ ಬಗ್ಗೆ ಮಾತನಾಡಲಿ. ಎಲ್ಲಾದಕ್ಕೂ ಬಹಳ ವಿಚಿತ್ರವಾಗಿ ದನಿ ಎತ್ತುತ್ತಾರೆ. ಇದರ ಬಗ್ಗೆಯೂ ಮಾತನಾಡಲಿ” ಎಂದು ಡಿಸಿಎಂ ಡಿಕೆ

ಯುದ್ಧ ನಿಲ್ಲಿಸುವುದು ಅಮೆರಿಕವಲ್ಲ, ಇರಾನ್‌: ಟ್ರಂಪ್‌ಗೆ ತಿರುಗೇಟು

ಯುದ್ಧ ನಿಲ್ಲಿಸುವುದು ಅಮೆರಿಕದ ನಿರ್ಧಾರವಲ್ಲ, ಅದು ನಮ್ಮ ನಿರ್ಧಾರ ಎಂದು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಪಡೆ ಅಮೆರಿಕ ಅಧ್ಯಕ್ಷ ಟ್ರಂಪ್‌ಗೆ ತಿರುಗೇಟು ನೀಡಿದೆ. ಯುದ್ಧ ಶೀಘ್ರದಲ್ಲೇ ಕೊನೆಗೊಳ್ಳಲಿದೆ ಎಂಬ ಟ್ರಂಪ್‌ ಹೇಳಿಕೆಗೆ ಐಆರ್‌ಜಿಸಿ ಪಡೆ ಹೀಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ.

ರಾಷ್ಟ್ರಪತಿ ಅಗ್ಗದ ಪ್ರಚಾರ ವಸ್ತುವಲ್ಲ

ರಾಜ್ಯಪಾಲ ಮತ್ತು ರಾಷ್ಟ್ರಪತಿ ಹುದ್ದೆಗಳನ್ನು ಚುನಾವಣೆಗಳ ಸಂದರ್ಭದಲ್ಲಿ ಎಳೆದು ತಂದು ಮತಗಳನ್ನು ಬಾಚಬೇಕೆಂಬ ಹಿಡನ್ ಅಜೆಂಡಾ ಯಾವ ರಾಜಕೀಯ ಪಕ್ಷಕ್ಕೂ ಶೋಭಿತವಲ್ಲ. ಸಾಂವಿಧಾನಿಕ ಹುದ್ದೆಗಳಲ್ಲಿರುವವರು, ಜಾತಿ, ಧರ್ಮ ಮತ್ತು ವಿವಿಧ ಆಮಿಷಗಳನ್ನು ಒಡ್ಡುವ ಭಾಷಣ ಮತ್ತು ಪ್ರಚಾರಗಳ ಮೇಲೆ ಚುನಾವಣೆ ಆಯೋಗವು

ಅಡ್ರೆಸ್ ಕೇಳುವ ನೆಪದಲ್ಲಿ ಸರಗಳ್ಳತನ: ಏಳು ಪ್ರಕರಣದ ಮೂರು ಆರೋಪಿಗಳು ಅರೆಸ್ಟ್‌

ಮಾಗಡಿ ತಾಲೂಕಿನ ಕುದೂರು ಸಮೀಪದ ಕಳ್ಳಿಪಾಳ್ಯದಲ್ಲಿ ಅಡ್ರೆಸ್ ಕೇಳುವ ನೆಪದಲ್ಲಿ ಒಂದೇ ದಿನ ಮೂರು ಕಡೆ ಸರಗಳ್ಳತನ ಮಾಡಿದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಭು (39), ವಸಂತಿ (37) ಮತ್ತು ಜ್ಯೋತಿ (32) ಬಂಧಿತ ಆರೋಪಿಗಳಾಗಿದ್ದಾರೆ. ಮಾ.3ರಂದು ಕುದೂರು ಸಮೀಪದ

ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಐಎಎಸ್‌, ಐಪಿಎಸ್‌ಗಳಾಗಲಿ: ಸಿಎಂ ಆಶಯ

ದೊರೆತ ಅವಕಾಶಗಳನ್ನು ಪೂರ್ಣ ಸದುಪಯೋಗ ಪಡಿಸಿಕೊಂಡು, ಶೈಕ್ಷಣಿಕವಾಗಿ, ಔದ್ಯೋಗಿಕವಾಗಿ ಸಾಧನೆ ಮಾಡುವ ವಿಚಾರದಲ್ಲಿ ಪುರುಷರಿಗಿಂತ ಮಹಿಳೆಯರೆ ಮುಂದಿದ್ದಾರೆ ಎನ್ನುವ ಅಂಶವನ್ನು ನಾವು ಒಪ್ಪಿಕೊಳ್ಳಲೇಬೇಕು. ಇತ್ತೀಚಿನ ಯುಪಿಎಸ್.ಸಿ ಪರೀಕ್ಷೆಯಲ್ಲಿ 25ಕ್ಕೂ ಹೆಚ್ಚು ಮಂದಿ ಕನ್ನಡಿಗರು ಆಯ್ಕೆಯಾಗಿದ್ದು, ಇವರಲ್ಲಿ ಮಹಿಳೆಯರು ಕೂಡ ಉತ್ತಮ ಅಂಕಗಳೊಂದಿಗೆ

ಚಲಿಸುತ್ತಿದ್ದ ಲಾರಿಗೆ ಕಾರಿ ಡಿಕ್ಕಿ: ಮೂವರು ಸ್ಥಳದಲ್ಲೇ ಸಾವು

ಬೆಂಗಳೂರು-ಕನಕಪುರ ಮುಖ್ಯರಸ್ತೆಯ ಕಗ್ಗಲೀಪುರದ ಆಗರ ಕ್ರಾಸ್ ಬಳಿ ಭಾನುವಾರ ಬೆಳಗಿನ ಜಾವ ಕಾರು ಲಾರಿಗೆ ಡಿಕ್ಕಿ ಹೊಡೆದಿದ್ದು, ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರನ್ನು ಸೈಯದ್ ಪಾಷ (22), ಯೂನಿಫ್ ಬಾನ್ (23), ಅಜರ್ ಪಾಷ (22) ಎಂದು ಗುರುತಿಸಲಾಗಿದೆ. ಫರಾಜ್

ಬಳ್ಳಾರಿ ಖಾಸಗಿ ಶಾಲೆ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಯಿಂದ ಹಲವರ ಮೇಲೆ ಹಲ್ಲೆ, ಒಬ್ಬನ ಸಾವು

ಬಳ್ಳಾರಿಯ ಖಾಸಗಿ ಶಾಲೆಯ ಹಾಸ್ಟೆಲ್​ನಲ್ಲಿ ವಾರ್ಡನ್​​ ಸೇರಿ ಹಲವು ಬಾಲಕರ ಮೇಲೆ ಒಂಬತ್ತನೇ ತರಗತಿ ವಿದ್ಯಾರ್ಥಿಯು ರಾಡ್​​ನಿಂದ ಹಲ್ಲೆ ನಡೆಸಿದ್ದು, ಒಬ್ಬ ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಘಟನೆಯಲ್ಲಿ ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಹಲ್ಲೆ ನಡೆಸಿ ಬಾಲಕ ಪರಾರಿಯಾಗಿದ್ದು, ಗಾಯಾಳುಗಳನ್ನು ಬಳ್ಳಾರಿಯ