ಅಪರಾಧ
ಅಸಹಜ ಲೈಂಗಿಕ ದೌರ್ಜನ್ಯ ಕೇಸ್: ಸೂರಜ್ ರೇವಣ್ಣ ಅರ್ಜಿ ವಜಾಗೊಳಿಸಿದ ಕೋರ್ಟ್
ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಿಂದ ಕೈಬಿಡುವಂತೆ ಕೋರಿ ಜೆಡಿಎಸ್ ಎಂಎಲ್ಸಿ ಸೂರಜ್ ರೇವಣ್ಣ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ. ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಿಂದ ತಮ್ಮನ್ನು ಕೈಬಿಡುವಂತೆ ಕೋರಿ ಸೂರಜ್ ರೇವಣ್ಣ ಅರ್ಜಿ ಸಲ್ಲಿಸಿದ್ದರು, ಆ ಅರ್ಜಿಯನ್ನು ವಜಾ ಮಾಡಿ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಜಡ್ಜ್ ಸಂತೋಷ್ ಗಜಾನನ ಭಟ್ ಆದೇಶ ಹೊರಡಿಸಿದ್ದಾರೆ. ಜೆಡಿಎಸ್ ಕಾರ್ಯಕರ್ತನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಡಾ.ಸೂರಜ್ ರೇವಣ್ಣ ಅವರನ್ನು
ಕೆಲಸಕ್ಕಿದ್ದ ಮನೆಯಿಂದ 220 ಗ್ರಾಂ ಚಿನ್ನ ಕಳವುಗೈದ ಮಹಿಳೆ ಅರೆಸ್ಟ್
ಬೆಂಗಳೂರಿನ ಕೋಣನಕುಂಟೆಯ ಮನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಅಲ್ಲಿಂದ ಒಂದೊಂದೇ ಚಿನ್ನಾಭರಣ ಎಗರಿಸಿ ಒಟ್ಟು ೨೨೦ ಗ್ರಾಂ ಚಿನ್ನವನ್ನು ಕದ್ದು ಈಗ ಪೊಲೀಸರ ಅತಿಥಿಯಾಗಿದ್ದಾಳೆ. ಕೆಲಸ ಮಾಡುತ್ತಿದ್ದ ಮನೆಯಲ್ಲೇ ಚಿನ್ನಾಭರಣ ಕಳವು ಮಾಡಿ ಅದರಿಂದ ತಮಿಳುನಾಡಿನಲ್ಲಿ ಸೈಟ್ ಖರೀದಿಸಿದ್ದಾಳೆಂದು ಹೇಳಲಾಗಿದೆ. ಆಕೆಯನ್ನು
ರಸ್ತೆ ದಾಟುತ್ತಿದ್ದಾಗ ಬೈಕ್ ಡಿಕ್ಕಿ: ಬೆಂಗಳೂರಿನಲ್ಲಿ ಯುವತಿ ಸಾವು
ಬೆಂಗಳೂರಿನ ರಾಜ್‌ಕುಮಾರ್ ರಸ್ತೆಯ ಹೆಚ್‌ಡಿಎಫ್‌ಸಿ ಬ್ಯಾಂಕ್ ಬಳಿ ರಸ್ತೆ ದಾಟುತ್ತಿದ್ದ ಯುವತಿಗೆ ಅತಿ ವೇಗವಾಗಿ ಬಂದ ಬೈಕ್ ಡಿಕ್ಕಿಯಾಗಿದ್ದು, ಆಕೆ ಮೃತಪಟ್ಟಿದ್ದಾರೆ. ಅತಿ ವೇಗವಾಗಿ ಬುಲೆಟ್ ಬೈಕ್ ಚಲಾಯಿಸಿಕೊಂಡು ಬಂದ ಸವಾರನ ಅತಿರೇಕಕ್ಕೆ ಯುವತಿಯ ಪ್ರಾಣ ಹೋಗಿದೆ. ಸೋಮವಾರ ಮಧ್ಯಾಹ್ನ 27
ಅಮೆರಿಕ ಹಾಕಿ ಕ್ರೀಡಾಂಗಣದಲ್ಲಿ ಗುಂಡಿನ ದಾಳಿಗೆ ಮೂವರು ಬಲಿ
ಅಮೆರಿಕದ ಹಾಕಿ ಕ್ರೀಡಾಂಗಣದಲ್ಲಿ ನಡೆದ ಗುಂಡಿನ ದಾಳಿಗೆ ಮೂವರು ಬಲಿಯಾಗಿದ್ದಾರೆ. ರೋಡ್ ಐಲೆಂಡ್ ರಾಜ್ಯದ ಪಾವ್‌ಟಕೆಟ್‌ನ ಡೆನ್ನಿಸ್ ಎಂ. ಲಿಂಚ್ ಅರೆನಾದ ಕ್ರೀಡಾಂಗಣದಲ್ಲಿ ನಡೆದ ಈ ಘಟನೆ ಭೀತಿ ಸೃಷ್ಟಿಸಿದೆ. ದಾಳಿಯಲ್ಲಿ ಶಂಕಿತ ದಾಳಿಕೋರ ಸೇರಿ ಮೂವರು ಪ್ರಾಣ ಕಳೆದುಕೊಂಡಿದ್ದರೆ, ಮೂವರು
ನಟಿಯ ಖಾಸಗಿ ವೀಡಿಯೊ ವೈರಲ್ ಬೆದರಿಕೆಯೊಡ್ಡಿ ಹಣಕ್ಕೆ ಬೇಡಿಕೆ
ರಿಯಾಲಿಟಿ ಶೋದಲ್ಲಿ ಗುರುತಿಸಿಕೊಂಡಿರುವ ನಟಿಯೊಬ್ಬರ ಖಾಸಗಿ ವೀಡಿಯೊ ಚಿತ್ರೀಕರಿಸಿ, ಹಣಕ್ಕಾಗಿ ಬೇಡಿಕೆಯಿಟ್ಟು ಬ್ಲ್ಯಾಕ್‌ಮೇಲ್ ಮಾಡುತ್ತಿರುವ ಪ್ರಕರಣ ಬೆಂಗಳೂರು ನಗರದಲ್ಲಿ ಬೆಳಕಿಗೆ ಬಂದಿದೆ. ಬೆಂಗಳೂರಿನ ಕೋರಮಂಗಲ ಇಂಡೋರ್ ಸ್ಟೇಡಿಯಂನಲ್ಲಿ ಇತ್ತೀಚೆಗೆ ‘ಮಹಿಳಾ ಸೆಲೆಬ್ರೆಟಿ ಕ್ರಿಕೆಟ್ ಟೂರ್ನಿ’ ಆಯೋಜಿಸಲಾಗಿತ್ತು. ಈ ಟೂರ್ನಿಯಲ್ಲಿ ಭಾಗವಹಿಸಿದ್ದ ನಟಿಯೊಬ್ಬರು
ಕೌಟುಂಬಿಕ ಬಿಕ್ಕಟ್ಟು: ಕುಷ್ಟಗಿಯಲ್ಲಿ ಗ್ರಾ. ಪಂ ನೌಕರ ಆತ್ಮಹತ್ಯೆ
ಕೊಪ್ಪಳದ ಕುಷ್ಟಗಿ ತಾಲೂಕಿನ ಜಮಲಾಪೂರ ಗ್ರಾಮದಲ್ಲಿ ಗ್ರಾಮ ಪಂಚಾಯತ್ ಡಿ ಗ್ರೂಪ್ ನೌಕರ ಕಚೇರಿಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ರಮೇಶ್ ದಂಡಿನ (35) ಆತ್ಮಹತ್ಯೆ ಮಾಡಿಕೊಂಡವರು. ತಾವರಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಸ್ತಿ ವಿಚಾರಕ್ಕೆ ಕಳೆದ
400 ಕೋಟಿ ರೂಪಾಯಿಗಳಿದ್ದ ಕಂಟೈನರ್ ಕೇಸ್ ಮುಚ್ಚಿ ಹಾಕುವ ಹುನ್ನಾರ?
ಕೆಲವೇ ದಿನಗಳ ಹಿಂದೆ 400 ಕೋಟಿ ರೂಪಾಯಿಗಳ ನೋಟುಗಳಿದ್ದ ಕಂಟೈನರ್ ಬಂದಿದ್ದು ಎಲ್ಲಿಂದ? ಇದರ ವಾರಸುದಾರರು ಯಾರು ? ಇದರಲ್ಲಿದ್ದ ಹಣ ಯಾರಿಗೆ ಸೇರಿದ್ದು ? ಕಂಟೈನರ್‌ನಲ್ಲಿ ಹಣವನ್ನು ರವಾನಿಸಲು ಅನುಮತಿ ಕೊಟ್ಟವರು ಯಾರು ? ಅಸಲಿಗೆ ಇದೊಂದು ಕ್ರಿಮಿನಲ್ ಕೃತ್ಯವಾಗಿದ್ದು
ಬೆಂಗಳೂರಿನಲ್ಲಿ ರಸ್ತೆ ದುರಸ್ತಿ ಕಾಮಗಾರಿ: ಎರಡು ವರ್ಷದ ಮಗು ಸಾವು
ಬೆಂಗಳೂರಿನ ಮಹದೇವಪುರದಲ್ಲಿ ರಸ್ತೆ ದುರಸ್ತಿ ಕಾಮಗಾರಿ ವಿಳಂಬದಿಂದ ಎರಡು ವರ್ಷದ ಮಗುವಿನ ಪ್ರಾಣ ಹೋಗಿದೆ. ಆರು ತಿಂಗಳಿಂದ ಈ ರಸ್ತೆ ದುರಸ್ತಿ ಕಾಮಗಾರಿ ನಡೆಯುತ್ತಿದ್ದು, ವಾಹನ ಸಂಚಾರಕ್ಕೆ ದುಸ್ತರವಾಗಿ ಪರಿಣಮಿಸಿದೆ. ಹಿಂದಿನಿಂದ ಬಂದ ಕಾರು ಬೈಕ್‌ಗೆ ಡಿಕ್ಕಿ ಹೊಡೆದಿದ್ದು, ಕೆಳಗೆ ಬಿದ್ದ
ಪಿಯು, ಡಿಗ್ರಿ ಮುಗಿಸಿದ ನಕಲಿ ವೈದ್ಯರಿಂದ ಸಿಸೇರಿಯನ್: ಮಹಿಳೆ ಸಾವು
ಉತ್ತರ ಪ್ರದೇಶದ ಲಕ್ನೋದ ಅಂಬೇಡ್ಕರ್ ನಗರದಲ್ಲಿ ಪಿಯುಸಿ ವಿದ್ಯಾರ್ಥಿ ಮತ್ತು ಬಿಎ ಪದವೀಧರ ಐದು ವರ್ಷಗಳಿಂದ ಅಕ್ರಮ ಆಸ್ಪತ್ರೆಯೊಂದರಲ್ಲಿ ವೈದ್ಯರಾಗಿದ್ದು, ಗರ್ಭಿಣಿಗೆ ಸಿಸೇರಿಯನ್ ಮಾಡಲು ಹೋಗಿ ಪ್ರಾಣ ಕಸಿದಿದ್ದಾರೆ. ಪೊಲೀಸರು ಈ ಆರೋಪಿಗಳನ್ನು ಬಂಧಿಸಿದ್ದಾರೆ. ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಗೆ ಸೆ-ಸೆಕ್ಷನ್
ಅಕ್ರಮ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ: ಏಳು ಕಾರ್ಮಿಕರು ಸಜೀವ ದಹನ
ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಭಿವಾಡಿ ಕೈಗಾರಿಕಾ ಪ್ರದೇಶದಲ್ಲಿ ಅಕ್ರಮ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿ ಕನಿಷ್ಠ ಏಳು ಕಾರ್ಮಿಕರು ಸಜೀವ ದಹನಗೊಂಡಿದ್ದಾರೆ. ಕಾರ್ಖಾನೆಯೊಳಗೆ ಇಬ್ಬರು ಕಾರ್ಮಿಕರು ಸಿಲುಕಿಕೊಂಡಿರುವ ಶಂಕೆಯಿದೆ. ಘಟನೆ ನಡೆದಾಗ 25 ಕಾರ್ಮಿಕರು ಸ್ಥಳದಲ್ಲಿದ್ದರು ಎನ್ನಲಾಗಿದೆ. ಈ ಕಾರ್ಖಾನೆಯನ್ನು ವ್ಯಕ್ತಿಯೊಬ್ಬರು




