Tuesday, December 30, 2025
Menu

97 ಲಕ್ಷ ರೂ. ಸಮೇತ ಚಾಲಕ ಪರಾರಿ: ಕೆಲವೇ ಗಂಟೆಗಳಲ್ಲಿ ಬಂಧಿಸಿದ ಚಳ್ಳಕೆರೆ ಪೊಲೀಸ್‌

ಬಾಡಿಗೆ ಕಾರು ಚಾಲಕನೊಬ್ಬ ಸಿಬಿಐ ನಿವೃತ್ತ ಎಸ್​​ಪಿಯನ್ನು ಯಾಮಾರಿಸಿ 97 ಲಕ್ಷ ರೂ. ಸಮೇತ ಪರಾರಿಯಾಗಿದ್ದು, ಕೆಲವೇ ಗಂಟೆಯಲ್ಲಿ ಚಳ್ಳಕೆರೆ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನವರರಾದ ಸಿಬಿಐನ ನಿವೃತ್ತ ಎಸ್​​ಪಿ ಗುರುಪ್ರಸಾದ್ ಪತ್ನಿ ಲಲಿತಾ ಜತೆ ಬಾಡಿಗೆ ಕಾರಿನಲ್ಲಿ ಬಳ್ಳಾರಿಗೆ ಹೋಗಿ ಜಮೀನು ಮಾರಾಟ ಮಾಡಿ 97ಲಕ್ಷ ರೂ. ಪಡೆದಿದ್ದರು. ಅದೇ ಕಾರಲ್ಲಿ ವಾಪಸ್ ಬೆಂಗಳೂರಿಗೆ ಹೊರಟಿದ್ದಾಗ ಮಧ್ಯಾಹ್ನ ಚಳ್ಳಕೆರೆ ಪಟ್ಟಣದ ಹೋಟೆಲ್ ಬಳಿ ಊಟ ಮಾಡಿದ್ದರು. ಬೇಗನೆ ಊಟ ಮುಗಿಸಿದ

Suicide death- ಬೆಂಗಳೂರಿನಲ್ಲಿ ಟೆಕ್ಕಿ ಆತ್ಮಹತ್ಯೆ: ಪತಿ ಅರೆಸ್ಟ್‌

ಬೆಂಗಳೂರಿನ ಎಸ್‍ಜಿ.ಪಾಳ್ಯದಲ್ಲಿ ಮಹಿಳಾ ಟೆಕ್ಕಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಿಲ್ಪಾ ಆತ್ಮಹತ್ಯೆ ಮಾಡಿಕೊಂಡವರು. ಶಿಲ್ಪಾ ಅವರು ಪ್ರವೀಣ್ ಎಂಬಾತನನ್ನು ಎರಡು ವರ್ಷದ ಹಿಂದೆ ಮದುವೆಯಾಗಿದ್ದರು. ಈ ದಂಪತಿಗೆ ಒಂದೂವರೆ ವರ್ಷದ ಮಗುವಿದೆ. ಶಿಲ್ಪಾಳನ್ನು ಕೊಲೆ ಮಾಡಿ ಆತ್ಮಹತ್ಯೆ ಎಂದು ಪ್ರವೀಣ್ ಬಿಂಬಿಸುತ್ತಿದ್ದಾನೆ ಎಂದು

Suicide death- ಬೀದರ್‌ ಸಾರಿಗೆ ಸಂಸ್ಥೆ ಬಸ್‌ನಲ್ಲೇ ಚಾಲಕ ಆತ್ಮಹತ್ಯೆ: ಮ್ಯಾನೇಜರ್‌ ಕಿರುಕುಳ ಕಾರಣವೆಂದ ಕುಟುಂಬ

ರಾಜ್ಯ ಸಾರಿಗೆ ಸಂಸ್ಥೆಯ ಬೀದರ್ ಡಿಪೋ ನಂ.1ರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬಸ್ ಚಾಲಕರೊಬ್ಬರು ಮ್ಯಾನೇಜರ್‌ ಕಿರುಕುಳಕ್ಕೆ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಣದೂರು ಗ್ರಾಮದ ನಿವಾಸಿ ರಾಜಪ್ಪ (59) ಬಳ್ಳಾರಿ–ಬೀದರ್ ಮಾರ್ಗದ ಸ್ಲಿಪರ್ ಕೋಚ್ ಬಸ್‌ನಲ್ಲಿ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದರು. ಅವರು ಕರ್ತವ್ಯ ನಿರ್ವಹಿಸುತ್ತಿದ್ದ

41 ದಿನ ಐದು ದೇಶ ಸುತ್ತಿ ಸಿಐಡಿಗೆ ಲಾಕ್ ಆದ ಬಿಕ್ಲ ಶಿವ ಕೊಲೆ ಆರೋಪಿ ಜಗ್ಗ

ರೌಡಿಶೀಟರ್‌ ಬಿಕ್ಲ ಶಿವ ಕೊಲೆ ಆರೋಪಿ ಜಗದೀಶ್ ಅಲಿಯಾಸ್ ಜಗ್ಗ ಎಂಬಾತನನ್ನು ದೆಹಲಿಯ ಏರ್ ಪೋರ್ಟ್‌ನಲ್ಲಿ ಸಿಐಡಿ ತಂಡ ಬಂಧಿಸಿದೆ. ಕೊಲೆ ಬಳಿಕ ಆರೋಪಿ ಜಗದೀಶ್ 41 ದಿನ ಐದು ದೇಶ ಸುತ್ತಿ ಬಂದ ಬಳಿಕ ಸಿಐಡಿಯಿಂದ ಸೆರೆಯಾಗಿದ್ದಾನೆ. ಜುಲೈ 15

ನೆಲಮಂಗಲದಲ್ಲಿ ರೈಲು ಡಿಕ್ಕಿಯಾಗಿ ಬಾಲಕ ಸಾವು

ನೆಲಮಂಗಲ ತಾಲೂಕಿನ ಅಲ್ಪಯ್ಯನಪಾಳ್ಯದಲ್ಲಿ ಹಳಿ ದಾಟುವ ವೇಳೆ ತಂದೆ-ಮಗನಿಗೆ ರೈಲು ಡಿಕ್ಕಿಯಾಗಿದ್ದು, ಬಿಹಾರ ಮೂಲದ ಸೌರವ್(8) ಮೃತಪಟ್ಟಿದ್ದಾನೆ. ಆತನ ತಂದೆ ನಿತಿನ್(40) ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದಾಬಸ್ ಪೇಟೆಯಿಂದ ಅಲ್ಪಯ್ಯನಪಾಳ್ಯಕ್ಕೆ ತೆರಳುವಾಗ ಈ ದುರಂತ ನಡೆದಿದೆ. ಯಶವಂತಪುರ ರೈಲ್ವೆ

Accident Deaths: ಹಿರೇಬಾಗೇವಾಡಿಯಲ್ಲಿ ರಸ್ತೆ ಅಪಘಾತಕ್ಕೆ ಇಬ್ಬರು ಬಲಿ

ಬೆಳಗಾವಿ ಹಿರೇಬಾಗೇವಾಡಿ ಬಳಿಯ ಬಡೇಕೊಳ್ಳ ಮಠದ ಘಾಟ್‌ನಲ್ಲಿ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಹುಬ್ಬಳ್ಳಿಯಿಂದ ಪುಣೆಗೆ ಸಂಚರಿಸುತ್ತಿದ್ದ ಬಸ್ ಚಾಲಕನ ಅಜಾಗರೂಕತೆಯಿಂದಾಗಿ ಈ ದುರಂತ ನಡೆದಿದೆ ಎನ್ನಲಾಗಿದೆ. ಬಸ್‌ನಲ್ಲಿ 12 ಪ್ರಯಾಣಿಕರಿದ್ದರು. ದುರ್ಘಟನೆಯಲ್ಲಿ ಮಹಿಳೆ

ದಾವಣಗೆರೆ ಶಿಕ್ಷಕಿಯಿಂದ 22.40 ಲಕ್ಷ ರೂ. ಸುಲಿಗೆ : ಸೈಬರ್‌ ವಂಚಕ ಅರೆಸ್ಟ್‌

ದಾವಣಗೆರೆಯ ಶಾಲಾ ಶಿಕ್ಷಕಿಯೊಬ್ಬರನ್ನು ಡಿಜಿಟಲ್ ಅರೆಸ್ಟ್ ಎಂದು ಬೆದರಿಸಿ 22.40 ಲಕ್ಷ ರೂ. ಸುಲಿಗೆ ಮಾಡಿದ್ದ ಆರೋಪದಲ್ಲಿ ಪೊಲೀಸರು ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಹಾಸನದ ಬೇಲೂರು ತಾಲೂಕಿನ ಕೋರಟಿಕೆರೆ ಗ್ರಾಮದ ಅರುಣ್ ಕುಮಾರ್(35) ಬಂಧಿತ. ಬಂಧಿತನ ಬ್ಯಾಂಕ್ ಖಾತೆಯನ್ನು ಫ್ರೀಝ್‌ ಮಾಡಲಾಗಿದೆ.

ಸಾಲದ ಸುಳಿ: ಮಗುವಿಗೆ ವಿಷವುಣಿಸಿ ಆತ್ಮಹತ್ಯೆ ಮಾಡಿಕೊಂಡ ದಂಪತಿ

ನಾಲ್ಕು ವರ್ಷದ ಮಗನಿಗೆ ವಿಷವುಣಿಸಿದ ಬಳಿಕ ಉದ್ಯಮಿ ಹಾಗೂ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಹಜಹಾನ್ಪುರದಲ್ಲಿ ನಡೆದಿದೆ. ರೋಜಾ ಪೊಲೀಸ್ ಠಾಣೆ ವ್ಯಾಪ್ತಿಯ ದುರ್ಗಾ ಎನ್‌ಕ್ಲೇವ್ ಕಾಲೊನಿಯಲ್ಲಿ ಮಗು ಹಾಸಿಗೆಯ ಮೇಲೆ ಶವವಾಗಿ ಪತ್ತೆಯಾಗಿದ್ದು, ಪೋಷಕರಾದ ಸಚಿನ್ ಗ್ರೋವರ್ ಮತ್ತು ಪತ್ನಿ

ಹೈದರಾಬಾದ್‌ ನಲ್ಲಿ ಅಗ್ನಿ ದುರಂತಕ್ಕೆ 17 ಮಂದಿ ಬಲಿ

ಹೈದರಾಬಾದ್‌ನ ಚಾರ್ಮಿನಾರ್ ಬಳಿಯ ಕಟ್ಟಡವೊಂದರಲ್ಲಿ ಇಂದು ಬೆಳಿಗ್ಗೆ ಸಂಭವಿಸಿದ ಭಾರಿ ಬೆಂಕಿ ಅವಘಡದಲ್ಲಿ ಎಂಟು ಮಕ್ಕಳು ಮತ್ತು ಐದು ಮಹಿಳೆಯರು ಸೇರಿದಂತೆ ಕನಿಷ್ಠ 17 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಈ ದುರಂತಕ್ಕೆ ಕಾರಣ ಇನ್ನೂ ದೃಢಪಟ್ಟಿಲ್ಲ, ಶಾರ್ಟ್ ಸರ್ಕ್ಯೂಟ್ ದುರಂತಕ್ಕೆ ಕಾರಣವಾಗಿರ

ಅಂದು ರಸ್ತೆಯಲ್ಲಿದ್ದ ಅನಾಥ ಹೆಣ್ಣು ಮಗುವೇ ಇಂದು ಸಾಕು ತಾಯಿಯ ಕೊಲೆಗಾರ್ತಿ

ರಸ್ತೆಯಲ್ಲಿ ದಿಕ್ಕಿಲ್ಲದೆ ಅನಾಥವಾಗಿ ಬಿದ್ದಿದ್ದ ಮೂರು ವರ್ಷದ ಹೆಣ್ಣುಮಗುವನ್ನು ತಂಂದು ಸಾಕಿ ಬೆಳೆಸಿದ ಮಹಿಳೆಯನ್ನು ಅದೇ ಬಾಲಕಿ ಕೊಲೆ ಮಾಡಿರುವ ಘಟನೆ ಒಡಿಶಾದಲ್ಲಿ ನಡೆದಿದೆ. 54 ವರ್ಷದ ರಾಜಲಕ್ಷ್ಮೀ ಕೌರ್ ಕೊಲೆಯಾದ ಮಹಿಳೆ. ರಾಜಲಕ್ಷ್ಮೀ 10 ವರ್ಷ ಸಾಕಿ ಬೆಳೆಸಿದ ಬಾಲಕಿಗೆ