Sunday, September 27, 2026
Menu

ನೀರಿನ ವಿಚಾರಕ್ಕೆ ಸಮುದಾಯಗಳ ಮಧ್ಯೆ ಗಲಾಟೆ: ಗದಗಲ್ಲಿ 21 ಮಂದಿಯ ಬಂಧನ

ಗದಗ ಮುಂಡರಗಿ ತಾಲೂಕಿನ ಚಿಕ್ಕ ವಡ್ಡಟ್ಟಿ ಗ್ರಾಮದಲ್ಲಿ ಎರಡು ಸಮುದಾಯಗಳ ನಡುವೆ ನೀರಿನ ವಿಚಾರಕ್ಕೆ ನಡೆದ ಗಲಾಟೆಗೆ ಸಂಬಂಧಿಸಿದಂತೆ 21 ಮಂದಿಯನ್ನು ಬಂಧಿಸಲಾಗಿದೆ. ಎಸ್‌ಟಿ ಸಮುದಾಯದ ರೈತನ ಜಮೀನಿನಲ್ಲಿ ಎಸ್‌ಸಿ ವ್ಯಕ್ತಿ ನೀರಿನ ಬಳಕೆ ಮಾಡಿದ ವಿಚಾರಕ್ಕೆ ಗಲಾಟೆ ನಡೆದಿತ್ತು. ಎರಡು ಗುಂಪಿನ 21 ಜನರನ್ನು ಬಂಧಿಸಿರುವುದಾಗಿ ಎಸ್ಪಿ ರೋಹನ್ ಜಗದೀಶ್ ಹೇಳಿದ್ದಾರೆ. ಎಸ್‌ಟಿ ರೈತನ ಜಮೀನಿನಲ್ಲಿ ನೀರಿನ ಹೊಂಡ ಇದೆ. ಅದರಲ್ಲಿ ಎಸ್‌ಸಿ ಯುವಕರು ಈಜಲು ಹೋಗಿದ್ದರು. ಬೇಸಿಗೆಯಲ್ಲಿ

ಬಳ್ಳಾರಿಯ ಕೆಐಎಡಿಬಿ ಕಚೇರಿಯಲ್ಲಿ ನಕಲಿ ಸಹಿ ಬಳಸಿ 16 ಕೋಟಿ ರೂ. ಅಕ್ರಮ

ಬಳ್ಳಾರಿಯ ಕೆಐಎಡಿಬಿ ಕಚೇರಿಯಲ್ಲಿ 16 ಕೋಟಿ ರೂ.ಗೂ ಅವ್ಯವಹಾರ ನಡೆದಿದ್ದು, ನಾಲ್ಕು ವರ್ಷಗಳಲ್ಲಿ ಅಧಿಕಾರಿಗಳ ನಕಲಿ ಸಹಿ ಬಳಸಿ ಹಣ ಅಕ್ರಮ ವರ್ಗಾವಣೆ ಆಗಿದೆ ಎಂದು ಆರೋಪಿಸಿ ಏಳು ಮಂದಿ ವಿರುದ್ಧ ಎಫ್​ಐಆರ್ ದಾಖಲಾಗಿದೆ. ಆಂತರಿಕ ಆಡಿಟ್ ಮೂಲಕ ಈ ಹಗರಣ

ಡಿಜಿಟಲ್ ಅರೆಸ್ಟ್: ಐದು ಕೋಟಿ ರೂ. ಕಳೆದುಕೊಂಡ ನಿವೃತ್ತ ಸಂಶೋಧಕ

ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಸೈಬರ್ ವಂಚಕರು ಉದ್ಯಮಿಗೆ 15 ಕೋಟಿ ರೂ. ವಂಚಿಸಿದ್ದ ಪ್ರಕರಣ ಬಹಿರಂಗಗೊಂಡಿದ್ದು, ಇದೀಗ ಬೆಂಗಳೂರಿನ ನಿವೃತ್ತ ಸಂಶೋಧಕರೊಬ್ಬರಿಗೆ ಐದು ಕೋಟಿ ರೂ. ವಂಚಿಸಿದ್ದಾರೆ. ಮಾನವ ಕಳ್ಳಸಾಗಣೆ ಪ್ರಕರಣದ ಬೆದರಿಕೆ ಹಾಗೂ ನಕಲಿ ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ಈ

ಕೋರ್ಟ್‌ನಲ್ಲಿ ಕೆಲಸದ ಆಮಿಷ: ಜಡ್ಜ್‌ ಸಹಿ ನಕಲು ಮಾಡಿ 25 ಕೋಟಿ ರೂ. ವಂಚಿಸಿದ ದಂಪತಿ

ಕೋರ್ಟ್‍ನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ 500ಕ್ಕೂ ಹೆಚ್ಚು ಜನರಿಂದ 25 ಕೋಟಿ ರೂ.ಗೂ ಹೆಚ್ಚಿನ ಹಣ ಪಡೆದು ವಂಚಿಸಿದ ದಂಪತಿಯನ್ನು ಬೆಂಗಳೂರಿನಲ್ಲಿ  ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.  ಬಂಧಿತ ಆರೋಪಿಗಳನ್ನು ಜೈಸನ್ ಡಿಸೋಜಾ ಮತ್ತು ಲವೀನಾ ಎಂದು ಗುರುತಿಸಲಾಗಿದೆ. ಇವರು ನಿರೋದ್ಯೋಗಿಗಳು ಮತ್ತು

ಬೆಂಗಳೂರು-ಮೈಸೂರು ಹೆದ್ದಾರಿ ಡಿವೈಡರ್‌ಗೆ ಬಸ್‌ ಡಿಕ್ಕಿ: ನಾಲ್ವರ ಸಾವು

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಡಿವೈಡರ್‌ಗೆ ಬಸ್‌ ಡಿಕ್ಕಿಯಾಗಿ ನಾಲ್ವರು ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರನ್ನು ಕೇರಳದ ಮಹಮ್ಮದ್ ಪರಾನ್ (22), ರಫೀಜ್ (45) ಹಾಗೂ ಬೆಂಗಳೂರು ಮೂಲದ ರಶೀದ್‌ (45), ಸಕೀರ್ (27) ಎಂದು ಗುರುತಿಸಲಾಗಿದೆ. ಕೇರಳ ಮೂಲದ ಟ್ರಾವೆಲ್ಸ್ ಕಂಪನಿಗೆ ಸೇರಿದ

ಅರಸೀಕೆರೆಯಲ್ಲಿ ಜೂಜು ಅಡ್ಡೆಗೆ ಪೊಲೀಸ್‌ ದಾಳಿ: ತಪ್ಪಿಸಿಕೊಳ್ಳುವಾಗ ಬಿದ್ದು ವ್ಯಕ್ತಿ ಸಾವು

ಹಾಸನದ ಅರಸೀಕೆರೆಯ ಅರೆಕೆರೆ ಗ್ರಾಮದಲ್ಲಿ ಜೂಜು ಅಡ್ಡೆಯ ಮೇಲೆ ಪೊಲೀಸರು ದಾಳಿ ನಡೆಸಿದ್ದು, ತಪ್ಪಿಸಿಕೊಂಡು ಓಡುವ ವೇಳೆ ಆಯತಪ್ಪಿ ಬಿದ್ದು ವ್ಯಕ್ತಿ ಮೃತಪಟ್ಟಿರುವ ಘಟನೆ ನಡೆದಿದೆ. ಪ್ರವೀಣ್ (34) ಮೃತಪಟ್ಟ ವ್ಯಕ್ತಿ. ಯುಗಾದಿ ಹಬ್ಬದ ಸಂಭ್ರಮದಲ್ಲಿ ತಾವರೆಹಳ್ಳಿ ನಿರ್ಜನ ಪ್ರದೇಶದಲ್ಲಿ ಯುವಕರ

ಪಾವಗಡದಲ್ಲಿ ಇಲಾಖೆ ಜಂಟಿ ನಿರ್ದೇಶಕನ ಕಿರುಕುಳ ಆರೋಪ: ಅಧಿಕಾರಿ ಆತ್ಮಹತ್ಯೆ

ತುಮಕೂರಿನ ಪಾವಗಡದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ ಕಚೇರಿಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಲಾಖೆಯ ಜಂಟಿ ನಿರ್ದೇಶಕ ಕೃಷ್ಣಪ್ಪ ಅವರ  ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಡೆತ್‌ನೋಟ್‌ನಲ್ಲಿ ಆರೋಪಿಸಿದ್ದು, ಸಂಬಂಧಿಸಿದ ವೀಡಿಯೊ ಸಹೋದ್ಯೋಗಿಗಳಿಗೆ ಕಳಿಸಿದ್ದು ವೈರಲ್‌ ಆಗಿದೆ. ಪೊಲೀಸರು

ಸೈಬರ್‌ ವಂಚನೆ: 15 ಕೋಟಿ ರೂ. ಕಳೆದುಕೊಂಡ ಉದ್ಯಮಿ

ವೃದ್ಧ ಉದ್ಯಮಿಯೊಬ್ಬರು ಸೈಬರ್‌ ವಂಚಕರ ಜಾಲಕ್ಕೆ ಸಿಲುಕಿ ೧5 ಕೋಟಿ ರೂ. ಕಳೆದುಕೊಂಡಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಉದ್ಯಮಿಗೆ ವಿಡಿಯೋ ಕಾಲ್ ಮಾಡಿದ್ದ ಸೈಬರ್‌ ವಂಚಕರು, ನಿಮ್ಮ ಬ್ಯಾಂಕ್ ಖಾತೆ ಮನಿ ಲಾಂಡ್ರಿಂಗ್ ಫ್ರಾಡ್‌ ಲಿಸ್ಟ್‌ನಲ್ಲಿ ತೋರಿಸುತ್ತಿದೆ. ನೀವು ಮನಿ ಲಾಡ್ರಿಂಗ್

ಹೆಣ್ಣುಮಗುವೆಂದು ವಿಷವುಣಿಸಿ ಕೊಂದ ತಂದೆಯ ಬಂಧನ

15 ದಿನದ ಹೆಣ್ಣು ಶಿಶು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಹೆಣ್ಣುಮಗು ಎಂಬ ಕಾರಣಕ್ಕೆ ತಂದೆಯೇ ವಿಷವುಣಿಸಿರುವುದನ್ನು ಖಚಿತಪಡಿಸಿಕೊಂಡು ಆತನನ್ನು ಬಂಧಿಸಿದ್ದಾರೆ. ಕಾಕತಿ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಭೀಮರಾಯ ಚಿಪ್ಪಾಡೆ ಬಂಧಿತ ತಂದೆ. ಮಾ.17ರಂದು ಬೆಳಗಾವಿ ತಾಲೂಕಿನ

ತುಮಕೂರು ಲಾಕಪ್‌ ಡೆತ್‌ ಸಿಐಡಿಗೆ ಎಂದ ಸಚಿವ ಪರಮೇಶ್ವರ್‌

ತುಮಕೂರಿನಲ್ಲಿ ನಡೆದಿರುವ ಲಾಕಪ್ ಡೆತ್ ಕೇಸ್‌ನ ಸಿಐಡಿ ತನಿಖೆಗೆ ಆದೇಶಿಸಿರುವುದಾಗಿ ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ. ಬೆಂಗಳೂರಲ್ಲಿ ಮಾತನಾಡಿದ ಅವರು, ಗುರುವಾರ ವಿಚಾರಣೆ ಮಾಡುವಾಗಲೇ ವ್ಯಕ್ತಿಯ ಸಾವು ಆಗಿದ್ದು, ಕಾರಣವೇನು ಎಂಬುದು ಗೊತ್ತಾಗಿಲ್ಲ. ಅದಕ್ಕಾಗಿ ಸಿಐಡಿ ತನಿಖೆಗೆ ಆದೇಶ ಮಾಡಿರುವುದಾಗಿ ತಿಳಿಸಿದ್ದಾರೆ.