Menu

ತುಮಕೂರಿನಲ್ಲೂ ಕಾಡಿಯಾ ಗ್ಯಾಂಗ್ ಕಳ್ಳರ ಕಾಟ: ಆರು ಮಂದಿ ಅರೆಸ್ಟ್‌

ಬ್ಯಾಂಕ್‌ಗಳನ್ನೇ ಹಾಟ್ ಸ್ಪಾಟ್ ಆಗಿಸಿಕೊಂಡು ವೃದ್ಧರನ್ನೇ ಟಾರ್ಗೆಟ್ ಮಾಡಿಕೊಂಡು ಹಣ ದೋಚುವ ಮಹಿಳೆಯರ ಗುಂಪು ತುಮಕೂರಿನಲ್ಲೂ ಕಾರ್ಯಾಚರಿಸುತ್ತಿದ್ದು, ಪೊಲೀಸರು ಗ್ಯಾಂಗ್‌ನ ಆರು ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಧ್ಯಪ್ರದೇಶದ ಕಾಡಿಯೂ ಎಂಬ ಊರಿನ ಈ ಮಹಿಳಾ ಕಳವು ಗ್ಯಾಂಗ್‌ ಎಷ್ಟೇ ಜಾಗರೂಕರಾಗಿದ್ದರೂ ಜನರನ್ನು ಯಾಮಾರಿಸಿ ಹಣ ಎಗರಿಸಿ ಪರಾರಿಯಾಗುತ್ತದೆ. ಇತ್ತೀಚೆಗೆ ನಿವೃತ್ತ ಶಿಕ್ಷಕ ಗಂಗಪ್ಪ ಎಂಬವರು ಬ್ಯಾಂಕ್‌ಗೆ ಹಣ ಕಟ್ಟುವಾಗ 1 ಲಕ್ಷದ 75 ಸಾವಿರ ರೂಪಾಯಿ ಎಗರಿಸಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು.

ಮುಕಳೆಪ್ಪನ ಮದುವೆ ಕಥೆಲಿ ವಿಲನ್ಗಳ್ಯಾರು! ಮಗಳಿಗೆ ಬ್ರೈನ್ ವಾಶ್ ಆಗಿದೆ ಎಂದ ತಾಯಿ! ನಮ್ದು ಲವ್ ಜಿಹಾದ್ ಅಲ್ಲವೆಂದ ಗಾಯತ್ರಿ

ಬಹಳ ಕುತೂಹಲ ಮೂಡಿಸಿರುವ ಕನ್ನಡದ ಖ್ಯಾತ ಯೂಟ್ಯೂಬರ್ ಕ್ವಾಜಾ ಶಿರಹಟ್ಟಿ ಅಲಿಯಾಸ್ ಮುಕಳೆಪ್ಪ ಮದುವೆ ಸುದ್ದಿ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ನನ್ನ ವಿವಾಹ ಪ್ರೇಮದಿಂದಾಗಿದೆ, ಯಾರ ಒತ್ತಡವೂ ಇಲ್ಲ ಎಂದು ಮುಕಳೆಪ್ಪ ಪತ್ನಿ ಗಾಯತ್ರಿ ಸ್ಪಷ್ಟಪಡಿಸಿದ ಕೆಲವೇ ಕ್ಷಣಗಳಲ್ಲಿ, ಆಕೆಯ ಪೋಷಕರು

ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ: ಸ್ವಾಮೀಜಿ ವಿರುದ್ಧ ಪ್ರಕರಣ

ದೆಹಲಿಯ ವಸಂತ್ ಕುಂಜ್‌ನಲ್ಲಿರುವ ಆಶ್ರಮದ ನಿರ್ದೇಶಕ, ಸ್ವಯಂ ಘೋಷಿತ ದೇವಮಾನವ ಸ್ವಾಮಿ ಚೈತನ್ಯಾನಂದ ಸರಸ್ವತಿಯ ವಿರುದ್ಧ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದಡಿ ಪ್ರಕರಣ ದಾಖಲಾಗಿದೆ. ಚೈತನ್ಯಾನಂದ ಸರಸ್ವತಿಯ ಬೇಡಿಕೆಗಳನ್ನು ಈಡೇರಿಸುವಂತೆ ಅಲ್ಲಿ ಅಧ್ಯಾಪಕರು/ನಿರ್ವಾಹಕರಾಗಿ ಕೆಲಸ ಮಾಡುವ ಮಹಿಳೆಯರು ಒತ್ತಡ ಹೇರಿದ್ದಾರೆ

ಅಂಗವಿಕಲ ಕೋಟಾದಡಿ ಮೆಡಿಕಲ್‌ ಸೀಟ್‌ಗಾಗಿ ನಕಲಿ ದಾಖಲೆ ಸೃಷ್ಟಿಸಿ ಮಾರಿದ ಇಬ್ಬರು ವೈದ್ಯರು ಅರೆಸ್ಟ್‌

ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ನಕಲಿ ವೈದ್ಯಕೀಯ ದಾಖಲೆ ಸಲ್ಲಿಸಿ, ಅಂಗವಿಕಲ ಮೀಸಲು ಕೋಟಾದಡಿ ಸರ್ಕಾರಿ ವೈದ್ಯಕೀಯ ಸೀಟು ಪಡೆಯಲು 21 ವಿದ್ಯಾರ್ಥಿಗಳಿಗೆ ನಕಲಿ ಪ್ರಮಾಣಪತ್ರಗಳನ್ನು ಸೃಷ್ಟಿಸಿದ ಆರೋಪ ಮೇಲೆ ಇಬ್ಬರು ಸರ್ಕಾರಿ ವೈದ್ಯರು ಸೇರಿ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ನಂದಿನಿ

ಪ್ರೀತಿಸುತ್ತಿದ್ದ ಜೋಡಿ ಮನೆಯವರ ವಿರೋಧಕ್ಕೆ ನೊಂದು ಆತ್ಮಹತ್ಯೆ ಯತ್ನ: ಯುವತಿ ಸಾವು

ಭದ್ರಾವತಿ ತಾಲೂಕಿನ ಅಂತರಗಂಗೆಯಲ್ಲಿ ಪ್ರೀತಿಗೆ ಕುಟುಂಬದವರು ವಿರೋಧಿಸುತ್ತಿದ್ದಾರೆಂದು ಮನನೊಂದ ಯುವಜೋಡಿ ಸಾಯಲೆಂದು ಕಾಲುವೆಗೆ ಹಾರಿದ್ದು, ಯುವತಿ ಮೃತಪಟ್ಟರೆ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಸ್ವಾತಿ (19) ಮೃತಪಟ್ಟ ಯುವತಿ. ಈಕೆಯೊಂದಿಗೆ ಆತ್ಮಹತ್ಯೆಗೆ ಯತ್ನಿಸಿ ಸೂರ್ಯ (20) ಬದುಕುಳಿದಿದ್ದು ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಪೊನ್ನಂಪೇಟೆಯಲ್ಲಿ ಪತ್ನಿಗೆ ಗುಂಡು ಹಾರಿಸಿದ ಯೋಧ

ಪೊನ್ನಂಪೇಟೆ ತಾಲೂಕಿನ ಹುದಿಕೇರಿ ಸಮೀಪದ ಕೊಣಗೇರಿಯಲ್ಲಿ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಭಾರತೀಯ ಸೇನೆಯ ಯೋಧನೊಬ್ಬ ಪತ್ನಿಯ ಮೇಲೆ ಗುಂಡು ಹಾರಿಸಿದ್ದು, ತೀವ್ರವಾಗಿ ಗಾಯಗೊಂಡಿರುವ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವಿನು ಕಾರ್ಯಪ್ಪ ಗುಂಡಿಕ್ಕಿದ ಆರೋಪಿ, ಆತನ ಪತ್ನಿ ದೀಪಿಕಾ ದೇಚಮ್ಮ (32) ಗುಂಡೇಟಿನಿಂದ

ಟ್ಯೂಷನ್‌ ಶಿಕ್ಷಕನಿಂದ ಗರ್ಭಿಣಿ: ಗರ್ಭಪಾತ ಮಾತ್ರೆ ತೆಗೆದುಕೊಂಡ ವಿದ್ಯಾರ್ಥಿನಿ ಸಾವು

ಮಹಾರಾಷ್ಟ್ರದ ಯವತ್ಮಾಳ ಜಿಲ್ಲೆಯ ಪುಸದ್ ಪಟ್ಟಣದಲ್ಲಿ ಟ್ಯೂಷನ್‌ ಶಿಕ್ಷಕನಿಂದ ಅತ್ಯಾಚಾರಕ್ಕೆ ಒಳಗಾಗಿ ಗರ್ಭಪಾತಕ್ಕೆ ಮಾತ್ರೆ ಸೇವಿಸಿದ ನಂತರ 12 ನೇ ತರಗತಿಯ ಅಪ್ರಾಪ್ತ ವಯಸ್ಕ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ. ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿದ ಟ್ಯೂಷನ್ ಶಿಕ್ಷಕ ಸಂತೋಷ್ ಗುಂಡೇಕರ್‌ನನ್ನು ಪೊಲೀಸರು ಬಂಧಿಸಿದ್ದು,

ಪಿಇಎಸ್‌ ಸಂಸ್ಥೆಗಳ ಮೇಲೆ ಐಟಿ ದಾಳಿ

ಬೆಂಗಳೂರಿನಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬುಧವಾರ ಬೆಳಗ್ಗೆಯೇ ಉದ್ಯಮಿಗಳ ಮನೆಗಳು ಮತ್ತು ಶಿಕ್ಷಣ ಸಂಸ್ಥೆಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ತೆರಿಗೆ ವಂಚನೆ ಆರೋಪದ ಹಿನ್ನೆಲೆಯಲ್ಲಿ ನಡೆದ ಈ ದಾಳಿಯಲ್ಲಿ ಹೊಸಕೆರೆಹಳ್ಳಿ, ಹನುಮಂತನಗರ, ಎಲೆಕ್ಟ್ರಾನಿಕ್ ಸಿಟಿ ಮತ್ತು ಬನಶಂಕರಿಯ ಬಿಡಿಎ

ಚೆನ್ನೈ ಮೂಲದ ಕನ್ಯಾಡಿ ಸ್ವಾಮೀಜಿಯ ಜಾಗ ಧರ್ಮಸ್ಥಳದವರ ಪಾಲಾಯ್ತಾ?

ಧರ್ಮಸ್ಥಳದಲ್ಲಿ ನಡೆದಿರುವ ಸೌಜನ್ಯ ಸಾವಿನ ತನಿಖೆಗೆ ಸಂಬಂಧಿಸಿದಂತೆ ಹಲವು ವರ್ಷಗಳಿಂದ ಹೋರಾಟ ನಡೆಸುತ್ತ ಬಂದಿರುವ ತಿಮರೋಡಿ ಮಹೇಶ್‌ ಶೆಟ್ಟಿಯವರ ಜೊತೆ ಅವರ ಮನೆಯಲ್ಲೇ ಈಗ ಎಸ್‌ಐಟಿ ವಿಚಾರಣೆಯಲ್ಲಿರುವ ಚಿನ್ನಯ್ಯ 2023 ರ ಆಗಸ್ಟ್ ನಲ್ಲಿ ಮಾತನಾಡಿರುವ ವೀಡಿಯೊ ಸಂಚಲನ ಸೃಷ್ಟಿಸಿದೆ. ಆಗ

ಪ್ರವೀಣ್‌ ಭಟ್‌ ಬೆಳಗ್ಗೆ ದೇಗುಲದಲ್ಲಿ ಅರ್ಚಕ, ರಾತ್ರಿ ದೇಗುಲ ಕಳ್ಳ: ಈಗ ಪೊಲೀಸ್‌ ಅತಿಥಿ

ಬೆಳಗ್ಗೆಯಿಂದ ದೇವಾಲಯಗಳಲ್ಲಿ ಅರ್ಚಕನಾಗಿ ಪೂಜೆ, ಹೋಮ, ಹವನ ಮಾಡುತ್ತಿದ್ದು, ರಾತ್ರಿಯಾದರೆ ದೇಗುಲದಲ್ಲಿ ಚಿನ್ನಾಭರಣ ಕಳವು ಮಾಡುತ್ತಿದ್ದ ವ್ಯಕ್ತಿ ಮತ್ತು ಸಹಚರನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಈ ಅರ್ಚಕ ಜೈಲಿನಲ್ಲಿ ಪರಿಚಯವಾದ ಮತ್ತೊಬ್ಬ ಕಳ್ಳನ ಸಹವಾಸದಿಂದ ಚಿನ್ನಾಭರಣ ಕದ್ದು ಮಾರಾಟ ಮಾಡುತ್ತಿದ್ದ. ಪ್ರತಿಸಲ