Saturday, February 14, 2026
Menu

ಬೆಂಗಳೂರಿನಲ್ಲಿ 7 ಕೋಟಿ ರೂ. ದರೋಡೆ: ತಿರುಪತಿಯಲ್ಲಿ ಆರೋಪಿಗಳ ಬಂಧನ

ಬೆಂಗಳೂರಿನಲ್ಲಿ ಬುಧವಾರ ಎಟಿಎಂಗೆ ಹಣ ಹಾಕುವ ಕಾರು ತಡೆದು 7 ಕೋಟಿ ರೂ. ದರೋಡೆ ಪ್ರಕರಣದ ಇಬ್ಬರು ಆರೋಪಿಗಳನ್ನು ಪೊಲೀಸರು ತಿರುಪತಿಯಲ್ಲಿ ಬಂಧಿಸಿದ್ದಾರೆ.  ಹೇಮಂತ್, ಸುನೀಲ್  ಬಂಧಿತ ಆರೋಪಿಗಳಾಗಿದ್ದು, ದರೋಡೆಗೆ ಬಳಸಿದ್ದಾರೆ ಎನ್ನಲಾದ ಕಾರನ್ನು ಕೂಡ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಜಯನಗರದ ಅಶೋಕ ಪಿಲ್ಲರ್ ಬಳಿ ಎಟಿಎಂ ವಾಹನ ಅಡ್ಡಗಟ್ಟಿ ನಾವು ಆರ್‌ಬಿಐನವರು ಎಂದು ಹೇಳಿಕೊಂಡು ನೀವು ನಿಯಮ ಉಲ್ಲಂಘಿಸಿದ್ದೀರಿ. ಠಾಣೆಗೆ ಬನ್ನಿ ಎಂದು ಹೇಳಿ ಆರೋಪಿಗಳು ಎಟಿಎಂ ವಾಹನ ಹೈಜಾಕ್

ಬೆಳ್ತಂಗಡಿಯಲ್ಲಿ ಸ್ಕೂಟಿಗೆ ಕಾರು ಡಿಕ್ಕಿ: ಎಂಜಿನಿಯರಿಂಗ್‌ ವಿದ್ಯಾರ್ಥಿನಿ ಸಾವು

ಬೆಳ್ತಂಗಡಿ ತಾಲೂಕಿನ ಪುಂಜಾಲಕಟ್ಟೆ ಬಳಿ ಕಾರು ಹಾಗೂ ಸ್ಕೂಟಿ ಮಧ್ಯೆ ನಡೆದ ಅಪಘಾತವೊಂದರಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿನಿ ಮೃತಪಟ್ಟಿದ್ದಾರೆ. ಅಂತಿಮ ವರ್ಷದ ಎಂಜಿನಿಯರಿಂಗ್ ಓದುತ್ತಿದ್ದ 21 ವರ್ಷದ ಅನನ್ಯಾ ಮೃತಪಟ್ಟ ವಿದ್ಯಾರ್ಥಿನಿ. ಈಕೆ ಕಡಬದ ಸುನೀಲ್ ಎಂಬವರ ಪುತ್ರಿ. ಸ್ಕೂಟಿಯಲ್ಲಿದ್ದ ಮತ್ತೊಬ್ಬ ವಿದ್ಯಾರ್ಥಿನಿ

ಗಣಿ ಅಧಿಕಾರಿಯಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಕಾರಿಗೆ ಸಿಲುಕಿ ಟಿಪ್ಪರ್‌ ಚಾಲಕ ಸಾವು

ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಕ್ರಾಸ್‌ನ ಕೃಷ್ಣ ಕನ್ವೆನ್ಷನ್‌ ಸೆಂಟರ್ ಬಳಿ ಗಣಿ ಅಧಿಕಾರಿಗೆ ಹೆದರಿ ಓಡಿ ಹೋಗುವಾಗ ಕಾರಿಗೆ ಅಡ್ಡ ಸಿಕ್ಕಿ ಟಿಪ್ಪರ್‌ ಚಾಲಕ ಮೃತಪಟ್ಟಿರುವ ಘಟನೆಯೊಂದು ನಡೆದಿದೆ. ರಾಯಚೂರು ಲಿಂಗಸೂರಿನ ರಮೇಶ್ (35) ಮೃತಪಟ್ಟಿರುವ ಚಾಲಕ. ಟಿಪ್ಪರ್ ಲಾರಿ ಚೇಸ್

ಬೇಲೂರಿನ ಮನೆಯೊಂದರಲ್ಲಿ ಮಹಿಳೆಯ ನಗ್ನ ಶವ ಪತ್ತೆ

ಬೇಲೂರು ಪಟ್ಟಣದ ಗಾಣಿಗರ ಬೀದಿಯ ಮನೆಯೊಂದರಲ್ಲಿ ಮಹಿಳೆಯ ಶವ ನಗ್ನ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತ ಮಹಿಳೆಯನ್ನು ಚಿಕ್ಕಮಗಳೂರಿನ ಮಲ್ಲೇನಹಳ್ಳಿ ಗ್ರಾಮದ ಸ್ಪಂದನ (34) ಎಂದು ಗುರುತಿಸಲಾಗಿದೆ. ಈ ಮಹಿಳೆ ಪತಿಯಿಂದ ದೂರಾಗಿ ಎಂಟು ದಿನಗಳ ಹಿಂದೆ ಬೇಲೂರಿನಲ್ಲಿ ಬಾಡಿಗೆ ಮನೆಗೆ ಬಂದು

ಬಂಟ್ವಾಳ: ಮಾರುವೇಷದಲ್ಲಿ ಬಂದು ಗಂಡನ ಕೊಲೆಗೆ ಯತ್ನಿಸಿದ ಪತ್ನಿ

ಬಂಟ್ವಾಳದ ಬಿಸಿ ರೋಡ್‌ನಲ್ಲಿರುವ ಟೆಕ್ಸ್ ಟೈಲ್ ಅಂಗಡಿಗೆ ಬುರ್ಖಾ ಧರಿಸಿಕೊಂಡು ಬಂದ ಮಹಿಳೆ ಗಂಡನಿಗೆ ಕತ್ತಿಯಿಂದ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದು, ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ. ಕೃಷ್ಣ ಕುಮಾರ್ ಸೋಮಯಾಜಿ ಅವರು ತಮ್ಮ ಟೆಕ್ಸ್ ಟೈಲ್ ಅಂಗಡಿಯ ಕ್ಯಾಶ್‌ ಕೌಂಟರ್‌ನಲ್ಲಿ

ಬೆಂಗಳೂರಿನಲ್ಲಿ 7.11 ಕೋಟಿ ದರೋಡೆ: ಶಂಕಿತರ ಭಾವಚಿತ್ರ ಬಿಡುಗಡೆ

ಬೆಂಗಳೂರಿನಲ್ಲಿ ಹಾಡಹಾಗಲೇ 7 ಕೋಟಿ 11 ಲಕ್ಷ ರೂ. ದರೋಡೆ ಮಾಡಿದ ಶಂಕಿತ ಆರೋಪಿಗಳ ಭಾವಚಿತ್ರವನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ. ಬೆಂಗಳೂರಿನ ಡೇರಿ ಸರ್ಕಲ್ ಮೇಲ್ಸುತುವೆ ಬಳಿ ಆರ್ ಬಿಐ ಅಧಿಕಾರಿಗಳ ಸೋಗಿನಲ್ಲಿ ಸಿಎಂಎಸ್ ವಾಹನ ತಡೆಗಟ್ಟಿದ 7ರಿಂದ 8 ಮಂದಿಯ

ಚಳಿ ತಡೆಯಲಾಗುತ್ತಿಲ್ಲ, ಬೆಡ್‌ಶೀಟ್‌ ಕೊಡಿಸಿ: ನಟ ದರ್ಶನ್‌ ಜಡ್ಜ್‌ಗೆ ಮನವಿ

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಯಾಗಿ ಜೈಲಿನಲ್ಲಿರುವ ನಟ ದರ್ಶನ್‌ ಬೆಡ್‌ಶೀಟ್‌ಗಾಗಿ ಕೋರ್ಟ್‌ನಲ್ಲಿ ಬೇಡಿಕೆ ಇಟ್ಟಿದ್ದಾರೆ. ಚಳಿ ತಡೆಯಲಾಗುತ್ತಿಲ್ಲ, ಈ ಕಾರಣ ನಿದ್ದೆ ಬರುತ್ತಿಲ್ಲ, ಬೆಡ್‌ಶೀಟ್‌ ಕೊಡಿಸಿ ಎಂದು ನ್ಯಾಯಾಧೀಶರ ಮುಂದೆ ಮನವಿ ಮಾಡಿಕೊಂಡಿದ್ದಾರೆ. ಪ್ರಕರಣದ ವಿಚಾರಣೆ ಸಂಬಂಧ ಪರಪ್ಪನ ಅಗ್ರಹಾರ

ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ: 11 ಜನರ ಸಾವಿಗೆ ಆರ್‌ಸಿಬಿಯೇ ಹೊಣೆಯೆಂದು ಸಿಐಡಿ ಚಾರ್ಜ್‌ಶೀಟ್‌

ಆರ್‌ಸಿಬಿ ವಿಜಯೋತ್ಸವ ವೇಳೆ ಬೆಂಗಳೂರಿನ  ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಲ್ತುಳಿತದಿಂದ 11 ಜನ ಮೃತಪಟ್ಟ ಪ್ರಕರಣದ ತನಿಖೆ ಮುಗಿಸಿ ಚಾರ್ಜ್​ಶೀಟ್ ಸಲ್ಲಿಕೆಗೆ ಸಿಐಡಿ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಚಾರ್ಜ್ ಶೀಟ್ ಸಲ್ಲಿಕೆಗೆ ಹೈಕೋರ್ಟ್ ಸಮ್ಮತಿಸಿದೆ. 2,200ಕ್ಕೂ ಅಧಿಕ ಪುಟಗಳ ಚಾರ್ಜ್‌ಶೀಟ್‌ನಲ್ಲಿ ಈ ಸಾವುಗಳಿಗೆ

ಬೆಂಗಳೂರಿನಲ್ಲಿ ಹಾಡುಹಗಲೇ 7.11 ಕೋಟಿ ರೂ. ಬ್ಯಾಂಕ್ ಹಣ ದರೋಡೆ

ಬೆಂಗಳೂರಿನಲ್ಲಿ ಹಾಡುಹಗಲೇ ದುಷ್ಕರ್ಮಿಗಳು 7.11 ಕೋಟಿ ರೂ. ನಗದು ದರೋಡೆ ಮಾಡಿರುವ ಘಟನೆ ನಡೆದಿದೆ. ಬೆಂಗಳೂರಿನ ಜಯದೇವ ಡೇರಿ ಸರ್ಕಲ್ ಬಳಿ ಮಂಗಳವಾರ ಒಂದು ವಾಹನದಿಂದ ಮತ್ತೊಂದು ವಾಹನಕ್ಕೆ ಹಣ ಶಿಫ್ಟ್ ಮಾಡಿಕೊಂಡು ದುಷ್ಕರ್ಮಿಗಳ ಗುಂಪು ಹಣ ದರೋಡೆ ಮಾಡಿ ಪರಾರಿಯಾಗಿದೆ.

ಮಗನಿಗೆ ಐಸಿಸ್‌ ಸೇರಲು ಬ್ರಿಟನ್‌ನಲ್ಲಿರುವ ಕೇರಳ ನರ್ಸ್‌ ಒತ್ತಾಯ: ದೂರು ದಾಖಲು

ಬ್ರಿಟನ್‌ನಲ್ಲಿ ನರ್ಸ್ ಆಗಿರುವ ಕೇರಳದ ಮಹಿಳೆ ತನ್ನ ಮಗನಿಗೆ ಸ್ನೇಹಿತನ ಜೊತೆ ಐಸಿಸ್‌ಗೆ ಸೇರಲು ಒತ್ತಾಯಿಸಿದ್ದ ಆರೋಪ ಕೇಳಿ ಬಂದಿದೆ. ಬಾಲಕ ಬ್ರಿಟನ್‌ನಿಂದ ಕೇರಳಕ್ಕೆ ಹಿಂದಿರುಗಿದ್ದು ಚಿಕ್ಕಪ್ಪನಿಗೆ ವಿಷಯ ತಿಳಿಸಿ, ತನ್ನ ತಾಯಿಯ ಸ್ನೇಹಿತ ಐಸಿಸ್ ಸಂಬಂಧಿತ ವೀಡಿಯೊಗಳನ್ನು ತೋರಿಸಿದ್ದಾನೆ ಮತ್ತು