Friday, September 25, 2026
Menu

ಚೀನಾ ಶೂ ಕಾರ್ಖಾನೆಯಲ್ಲಿ ಅಗ್ನಿ ದುರಂತ: 28ಕಾರ್ಮಿಕರ ಸಾವು, ಹಲವರು ನಾಪತ್ತೆ

ಚೀನಾದ ಜಿಂಜಿಯಾಂಗ್‌ನಲ್ಲಿ ಇರುವ ಶೂ ಕಾರ್ಖಾನೆಯಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಕನಿಷ್ಠ 28 ಮಂದಿ ಮೃತಪಟ್ಟಿದ್ದು, ದುರಂತದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಕಾರ್ಖಾನೆಯಿಂದ ಮುಗಿಲಲೆತ್ತರ ದಟ್ಟ ಹೊಗೆ ಆವರಿಸಿಕೊಂಡು ಕಟ್ಟಡದ ಮೇಲ್ಚಾವಣಿಯಲ್ಲಿ ಕೆಲವರು ಸಿಲುಕಿಕೊಂಡಿರುವುದು ವೀಡಿಯೊಗಳಲ್ಲಿ ಕಂಡುಬಂದಿದೆ. ಬೆಂಕಿ ಹೊತ್ತಿಕೊಂಡ ಸಮಯದಲ್ಲಿ ಕಾರ್ಖಾನೆಯಲ್ಲಿ 240 ಮಂದಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಹಲವರು ಸುರಕ್ಷಿತವಾಗಿ ಹೊರಬಂದಿದ್ದರೆ, ಕೆಲವರು ನಾಪತ್ತೆಯಾಗಿದ್ದಾರೆ. ತುರ್ತು ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದ್ದು, 200ಕ್ಕೂ ಹೆಚ್ಚು ಮಂದಿಯನ್ನು

ಅಯೋಧ್ಯೆ ರಾಮನ ಹಣ ಹದ್ದು ಶೇರ್‌ ಮಾರ್ಕೆಟ್‌ನಲ್ಲೂ ಹೂಡಿಕೆ

ರಾಮ ಮಂದಿರದ ದೇಣಿಗೆ ಹಣ ದುರುಪಯೋಗ ಪ್ರಕರಣದ ಆರೋಪಿಗಳು ನಾನಾ ಬಗೆಯ ಆಸ್ತಿಗಳಲ್ಲಿ ಹೂಡಿಕೆ ಮಾಡಿರುವ ಜೊತೆಗೆ ಕದ್ದ ಹಣದ ಒಂದು ಭಾಗವನ್ನು ಷೇರು ಮಾರುಕಟ್ಟೆ ಹಾಗೂ ಇತರ ಹಣಕಾಸು ಯೋಜನೆಗಳಲ್ಲಿ ಹೂಡಿಕೆ ಮಾಡಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಹಣದ ಮೂಲ ಮರೆಮಾಚುವ

ಕಳ್ಳನೋಟು ದಂಧೆ: ತುಮಕೂರಿನಲ್ಲಿ ಆರು ಆರೋಪಿಗಳ ಬಂಧನ

ತುಮಕೂರಿನ ಚಿಕ್ಕನಾಯಕನಹಳ್ಳಿ ಪೊಲೀಸರು ರಾಜ್ಯವ್ಯಾಪಿ ಕಾರ್ಯನಿರ್ವಹಿಸುತ್ತಿದ್ದ ಖೋಟಾ ನೋಟಿನ ಜಾಲವನ್ನು ಭೇದಿಸಿ, ಆರು ಆರೋಪಿಗಳನ್ನು ಬಂಧಿಸಿದ್ದಾರೆ. ಒಂದು 500 ರೂಪಾಯಿ ಮುಖಬೆಲೆಯ ನಕಲಿ ನೋಟಿನ ಸುಳಿವು ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ಬೆಂಗಳೂರು ಮತ್ತು ಮೈಸೂರು ಸೇರಿದಂತೆ ರಾಜ್ಯದ ನಾನಾ ಕಡೆ

ಶಿಕ್ಷಕಿ ಬೈದಿದ್ದಕ್ಕೆ ಡೆತ್‌ ನೋಟ್‌ ಬರೆದಿಟ್ಟು ಬಾಲಕಿ ಆತ್ಮಹತ್ಯೆ

ಶಿಕ್ಷಕಿ ಬೈದಿದ್ದಕ್ಕೆ ನೊಂದ ಆನೇಕಲ್‌ನ ಮರಸೂರು ಸರ್ಕಾರಿ ಶಾಲೆಯ ೮ನೇ ತರಗತಿ ವಿದ್ಯಾರ್ಥಿನಿ ಮಧುಶ್ರೀ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆತ್ಮಹತ್ಯೆಗೂ ಮೊದಲು ಬಾಲಕಿ ಡೆತ್‌ನೋಟ್‌ ಬರೆದಿಟ್ಟಿದ್ದು, ಸೂರ್ಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಾಲೆಯಲ್ಲಿ ನಡೆದ ಘಟನೆ ತನಗೆ ಬಹಳ

ಲೋಕಾಯುಕ್ತ ವಿರುದ್ಧ ಅವಹೇಳನಕಾರಿ ಕಾಮೆಂಟ್‌: ಆರೋಪಿ ವೈದ್ಯರಿಬ್ಬರ ವಿರುದ್ಧ ಪ್ರಕರಣ

ಲೋಕಾಯುಕ್ತ ಸಂಸ್ಥೆ ಹಾಗೂ ಉಪ ಲೋಕಾಯುಕ್ತರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಕಾಮೆಂಟ್‌ಗಳನ್ನು ಮಾಡಿದ್ದ ಆರೋಪದಡಿ ಇಬ್ಬರು ವೈದ್ಯರ ವಿರುದ್ಧ ಲೋಕಾಯುಕ್ತ ಪೊಲೀಸರು ಪ್ರತ್ಯೇಕ ಪ್ರಕರಣ ದಾಖಲಿಸಿದ್ದಾರೆ. ವಿಜಯಪುರ ಆದರ್ಶ ನಗರ ನಿವಾಸಿ ಡಾ. ಅಮಿತ್ ಪುಂಡಲೀಕ್ ಕಾಳೆ ಹಾಗೂ ಬೀದರ್

ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಭಾವನ ಕೊಲೆ ಮಾಡಿಸಿದ ನಾದಿನಿ

ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದಾನೆಂದು ಭಾವನನ್ನು ನಾದಿನಿಯೇ ಕೊಲೆ ಮಾಡಿಸಿರುವ ಪ್ರಕರಣವನ್ನು ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು ಬಯಲಿಗೆಳೆದಿದ್ದಾರೆ.  ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು, ಒಬ್ಬ ಆರೋಪಿಗಾಗಿ ಪೊಲೀಸರು ಶೋಧ ಕಾರ್ಯ ತೀವ್ರಗೊಳಿಸಿದ್ದಾರೆ. ಚಳ್ಳಕೆರೆ ತಾಲೂಕಿನ ಚೌಳೂರು ಗ್ರಾಮದ ನಿವಾಸಿ ಶಿವಮೂರ್ತಿ (49)

ಮದುವೆಯಾಗಿ ನಾಲ್ಕು ತಿಂಗಳಿಗೆ ಅಮೆರಿಕದಲ್ಲಿ ಪತ್ನಿಯ ಕೊಲೆ: ಭಾರತದಲ್ಲಿರುವ ಪ್ರೇಯಸಿಗೆ ಮೃತದೇಹದ ಪೋಟೊ

ಅಮೆರಿಕದ ವಾಷಿಂಗ್ಟನ್‌ನಲ್ಲಿ ತೆಲಂಗಾಣದ ಭಾರತೀಯ ಎಂಜಿನಿಯರ್‌ವೊಬ್ಬ ಮದುವೆಯಾಗಿ ನಾಲ್ಕು ತಿಂಗಳಿಗೆ ಪತ್ನಿಯನ್ನು ಕೊಲೆ ಮಾಡಿದ್ದಾನೆ. ಅವಿನಾಶ್ ನಾರ್ನೆ ಕೊಲೆ ಆರೋಪಿ, ಆತನ ಹೆಂಡತಿ ರಾಜಿತಾ ಸಬ್ಬಿನೇನಿ ಕೊಲೆಯಾದವರು. ಆರೋಪಿ ಪತ್ನಿಯ ಕತ್ತು ಹಿಚುಕಿ ಕೊಲೆ ಮಾಡಿ, ಮೃತದೇಹದ ಫೋಟೊವನ್ನು ಗೆಳತಿಗೆ ಕಳಿಸಿರುವ

ಹಾಸನ ಚನ್ನಕೇಶವನ ಹುಂಡಿ ಎಣಿಕೆ: ಹಣ ಕದ್ದ ವೀಡಿಯೊಗ್ರಾಫರ್‌

ಹಾಸನದಲ್ಲಿ ಚನ್ನಕೇಶವ ದೇವಾಲಯದ ಹುಂಡಿ‌ ಎಣಿಕೆ ವೇಳೆ ಹಣ ಕಳವು ಮಾಡಿರುವ ಆರೋಪದಡಿ ಪೊಲೀಸರು ವಿಡಿಯೋಗ್ರಾಫರ್ ನೀಲಕಂಠ ಎಂಬಾತನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ. ಹುಂಡಿಕ ಎಣಿಕೆ ವೇಳೆ ವಿಡಿಯೋಗ್ರಾಫರ್ ಹಣ ಕದ್ದ ಆರೋಪವಿದ್ದು, ಇದರ ಹಿಂದೆ ಅಧಿಕಾರಿಗಳ ಪಾತ್ರ ಇದೆಯಾ

ಯಲ್ಲಾಪುರದಲ್ಲಿ ಲಾರಿ-ಕ್ರೂಸರ್‌ ಡಿಕ್ಕಿ: ಆರು ಮಂದಿ ಸಾವು

ಲಾರಿ ಮತ್ತು ಕ್ರೂಸರ್‌ ಡಿಕ್ಕಿಯಾಗಿ ಆರು ಮಂದಿ ಸ್ಥಳದಲ್ಲೇ ಮೃತಪಟ್ಟ ಘಟನೆ ಉತ್ತರ ಕನ್ನಡದ ಯಲ್ಲಾಪುರ ತಾಲೂಕಿನ ಆರತಿಬೈಲಿನಲ್ಲಿ ನಡೆದಿದೆ. ಕ್ರೂಸರ್ ಧಾರವಾಡದಿಂದ ಅಂಕೋಲಾ ಕಡೆ ತೆರಳುತ್ತಿದ್ದು, ಲಾರಿ ಯಲ್ಲಾಪುರದಿಂದ ಅಂಕೋಲಾ ಕಡೆ ಸಂಚರಿಸುತ್ತಿದ್ದಾಗ ಈ ದುರಂತ ಸಂಭವಿಸಿದೆ. ಕ್ರೂಸರ್‌ನಲ್ಲಿ ಇದ್ದ

ವಸತಿ ಶಾಲೆಯಲ್ಲಿ ದೈಹಿಕ ಶಿಕ್ಷಕರ ಹಲ್ಲೆಗೆ ವಿದ್ಯಾರ್ಥಿ ಬಲಿ: ಪೋಷಕರ ಆರೋಪ

ಬೆಂಗಳೂರು ನಗರ ಹೊರವಲಯದ ಕಾಡಯರಪ್ಪನಹಳ್ಳಿ ಬಳಿಯ ಖಾಸಗಿ ವಸತಿ ಶಾಲೆಯಲ್ಲಿ 12 ವರ್ಷದ ವಿದ್ಯಾರ್ಥಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ನಡೆದಿದೆ. ಮಗನ ಸಾವಿಗೆ ಶಾಲೆಯ ದೈಹಿಕ ಶಿಕ್ಷಕರ ಹಲ್ಲೆ ಹಾಗೂ ಒತ್ತಡವೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಯಲಹಂಕ ತಾಲೂಕಿನ ಸುಬೇದಾರ್