Thursday, January 30, 2025
Menu

ದಾವೂದ್ ನಂಟಿಗಾಗಿ ಸಿದ್ದಿಕಿ ಕೊಂದೆ: ಆರೋಪಿ ಒಪ್ಪಿಗೆ

ಮುಂಬೈ: ಕಳೆದ ವರ್ಷ ನ್ಯಾಷನಾಲಿಸ್ಟ್ ಕಾಂಗ್ರೆಸ್ ಪಕ್ಷದ ನಾಯಕ ಬಾಬಾ ಸಿದ್ದಿಕಿ ಹತ್ಯೆ ಮಾಡಿಸಿದ್ದೇಕೆ ಎಂಬುದರ ಕುರಿತು ಆರೋಪಿ ಶೂಟರ್ ಶಿವಕುಮಾರ್ ಗೌತಮ್ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.

ಬಾಬಾ ಸಿದ್ದಿಕಿ ದಾವೂದ್ ಇಬ್ರಾಹಿಂ ಜತೆಗೆ ಸಂಪರ್ಕ ಹೊಂದಿದ್ದರು, 1993ರಲ್ಲಿ ಮುಂಬೈ ಸ್ಫೋಟದಲ್ಲಿ ಭಾಗಿಯಾಗಿದ್ದಕ್ಕಾಗಿ ಬಿಷ್ಣೋಯ್ ನಮಗೆ ಸಿದ್ದಿಕಿಯನ್ನು ಕೊಲೆ ಮಾಡುವಂತೆ ಸೂಚನೆ ಕೊಟ್ಟಿದ್ದಾಗಿ ತಿಳಿಸಿದ್ದಾನೆ.

ಅಕ್ಟೋಬರ್ 12 ರಂದು ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕಿ ಹತ್ಯೆಗೆ ಸಂಬಂಧಿಸಿದಂತೆ ಸಲ್ಲಿಸಲಾದ ಚಾರ್ಜ್ ಶೀಟಲ್ಲಿ ಗೌತಮ್ ತಪ್ಪೊಪ್ಪಿಗೆ ನೀಡಿದ್ದಾನೆ.

ಮುಂಬೈನ ಬಾಂದ್ರಾ ಈಸ್ಟ್ ಏರಿಯಾದಲ್ಲಿ ಸಿದ್ದಿಕಿ (66) ಅವರನ್ನು ಅವರ ಮಗ ಜೀಶನ್ ಸಿದ್ದಿಕಿ ಅವರ ಕಚೇರಿಯ ಹೊರಗೆ ಮೂವರು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ.

ಆರೋಪಿಗಳು ಉಳಿದುಕೊಳ್ಳಲು ಸ್ಕ್ರ್ಯಾಪ್ ಅಂಗಡಿ ನಡೆಸುತ್ತಿದ್ದ ಕಶ್ಯಪ್ ವ್ಯವಸ್ಥೆ ಮಾಡಿದ್ದ, ಈ ವೇಳೆ ಪ್ರವೀಣ್ ಲೊಂಕರ್ ಹಾಗೂ ಆತನ ಸಹೋದರ ಶುಭಂ ಲೊಂಕರ್ ಪರಿಚಯವಾಯಿತು ಎಂದು ಪೊಲೀಸರಿಗೆ ತಿಳಿಸಿದ್ದಾರೆ.

ಜೂನ್ 2024 ರಲ್ಲಿ ಶುಭಂ ಲೋಂಕರ್ (ಶುಬ್ಬು) ನನಗೆ ಮತ್ತು ಧರ್ಮರಾಜ್ ಕಶ್ಯಪ್ (ಸಹ ಶೂಟರ್) ಅವರ ಸೂಚನೆಯಂತೆ ಕೆಲಸ ಮಾಡಿದರೆ ನಮಗೆ 10 ರಿಂದ 15 ಲಕ್ಷ ರೂಪಾಯಿ ಕೊಡುವುದಾಗಿ ಹೇಳಿದ್ದರು.

Related Posts

Leave a Reply

Your email address will not be published. Required fields are marked *