Tuesday, September 15, 2026
Menu

ಯಾದಗಿರಿ ಗಣೇಶ ಮೆರವಣಿಗೆಯಲ್ಲಿ ಗಲಾಟೆ: 19 ಜನರ ವಿರುದ್ಧ ಎಫ್‌ಐಆರ್

ಯಾದಗಿರಿ ನಗರದ ದುರ್ಗಾದೇವಿ ಮಂದಿರ ಬಳಿ ಗಣೇಶ   ಮೆರವಣಿಗೆ ವೇಳೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದು 19 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಗಣೇಶ ಉತ್ಸವದ ಮೆರವಣಿಗೆ ವೇಳೆ ಒಂದು ಗುಂಪಿನ ಯುವಕನ ಮೇಲೆ ಬೈಕ್‌ ಹಾದು ಹೋಗಿದೆ, ಆಗ ಮಾತಿಗೆ ಮಾತು ಬೆಳೆದು ಪರಸ್ಪರ ಗಲಾಟೆ ಆರಂಭಿಸಿದ್ದಾರೆ. ಅದೇ ಗಲಾಟೆ ಮುಂದುವರಿದು, ನಮ್ಮ ಏರಿಯಾದಲ್ಲಿ ಗಣೇಶ ಮೂರ್ತಿಯನ್ನು ಹೇಗೆ ಪ್ರತಿಷ್ಠಾಪನೆ ಮಾಡ್ತೀರಾ ನೋಡ್ತೇವೆ, ನಾವು ಹೇಳಿದಂತೆಯೇ ನಡೆಯಬೇಕು ಎಂದು ಒಂದು ಗುಂಪು ಬೆದರಿಕೆ ಹಾಕಿದೆ.

ವಾಗ್ವಾದ ಮುಂದುವರಿದು ಕಲ್ಲುತೂರಾಟ ನಡೆದು, ಹೊಡೆದಾಟ ನಡೆದಿದೆ. ಘಟನೆಯಲ್ಲಿ ಮೂವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.ದ್ಯ ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ 19 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣವಿದ್ದು, ಅಹಿತಕರ ಘಟನೆಗಳು ನಡೆದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳದಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ.

Related Posts

Leave a Reply

Your email address will not be published. Required fields are marked *