Wednesday, September 02, 2026
Menu

ರಾಜ್ಯದಲ್ಲಿ ಮೋಡ ಬಿತ್ತನೆ ವ್ಯರ್ಥ ಸಾಧ್ಯತೆ: ತಜ್ಞರ ಹೇಳಿಕೆ

ರಾಜ್ಯದಲ್ಲಿ ಬರ ಉಂಟಾಗಿರುವ ಹಿನ್ನೆಲೆ ಸರ್ಕಾರವು ಕೆಲವು ಭಾಗಗಳಲ್ಲಿ ಮೋಡ ಬಿತ್ತನೆಗಾಗಿ ಎರಡು ಸಮಿತಿ ರಚಿಸಿದೆ. ಆದರೆ ಸದ್ಯದ ಹವಾಮಾನ  ಮೋಡ ಬಿತ್ತನೆಗೆ ಅನುಕೂಲವಾಗಿಲ್ಲ, ಹೀಗಾಗಿ ಪ್ರಯತ್ನ ವ್ಯರ್ಥ ಆಗಬಹುದು ಎಂದು ತಜ್ಞರು ಹೇಳಿದ್ದಾರೆ.

ಸೆಪ್ಟೆಂಬರ್ 20ರಿಂದ ಮೋಡ ಬಿತ್ತನೆ ನಡೆಸುವ ಯೋಜನೆಯನ್ನು ಅಕ್ಟೋಬರ್‌ವರೆಗೆ ಮುಂದೂಡುವಂತೆ ಹವಾಮಾನ ತಜ್ಞರು ಸಲಹೆ ನೀಡಿದ್ದಾರೆ. ಆಗ ಪರಿಸ್ಥಿತಿ ಅನುಕೂಲಕರವಾಗುವ ಸಾಧ್ಯತೆಯಿದೆ. ನೈಋತ್ಯ ಮುಂಗಾರು ಅಕ್ಟೋಬರ್ 10ರವರೆಗೆ ಮುಂದುವರಿಯಲಿರುವುದರಿಂದ ಮೋಡ ಬಿತ್ತನೆಗೆ ಹೆಚ್ಚಿನ ಕಾಲಾವಕಾಶವಿದೆ ಎಂದು ಹೇಳಿದ್ದಾರೆ.

ಸಮಿತಿಯ ಸಭೆಯಲ್ಲಿ ಭಾಗವಹಿಸಿದ್ದ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರದ ಅಧಿಕಾರಿ, ಸೂಕ್ತವಾದ ಮೋಡಗಳು ಕಂಡುಬಂದಾಗ ಮಾತ್ರ ಮೋಡ ಬಿತ್ತನೆ ನಡೆಸಲು ಸಾಧ್ಯ ಎಂದು ತಿಳಿಸಿದ್ದಾರೆ.

ಸದ್ಯ ಆಕಾಶದಲ್ಲಿ ತೇಲಾಡುವ ಮೋಡಗಳೇ ಇಲ್ಲ. ಮುಂದಿನ ಕೆಲವು ವಾರಗಳಲ್ಲೂ ಅನುಕೂಲಕರ ಮುನ್ಸೂಚನೆ ಇಲ್ಲ. ಮೋಡಗಳ ರಚನೆಗೆ ಬೇಕಾದ ಯಾವುದೇ ಬೆಳವಣಿಗೆ ಸಾಗರದಲ್ಲಿ ರೂಪುಗೊಳ್ಳದಿದ್ದರೆ ಮೋಡಗಳನ್ನು ಪತ್ತೆಹಚ್ಚುವ ಕಾರ್ಯ ವ್ಯರ್ಥವಾಗಬಹುದು ಎಂದು ಹೇಳಿದ್ದಾರೆ.

ಕರ್ನಾಟಕ ನೀರಾವರಿ ನಿಗಮ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಭಾರತೀಯ ಹವಾಮಾನ ಇಲಾಖೆ, ಭಾರತೀಯ ವಿಜ್ಞಾನ ಸಂಸ್ಥೆ , ಭಾರತೀಯ ಉಷ್ಣವಲಯ ಹವಾಮಾನಶಾಸ್ತ್ರ ಸಂಸ್ಥೆ, ಜಲಸಂಪನ್ಮೂಲ ಇಲಾಖೆ, ನಿವೃತ್ತ ತಜ್ಞರು ಹಾಗೂ ಹವಾಮಾನ ಪರಿಣಿತರು ಸಭೆಯಲ್ಲಿ ಭಾಗವಹಿಸಿದ್ದರು.

Related Posts

Leave a Reply

Your email address will not be published. Required fields are marked *