Menu

ಕೆಪಿಎಸ್ಸಿ ಅಕ್ರಮದಲ್ಲಿ ಬಿಜೆಪಿಯವರೂ ಭಾಗಿ: ಸಾಮಾಜಿಕ ಕಾರ್ಯಕರ್ತ ಶರಣು ಆರೋಪ

ಕೆಪಿಎಸ್ಸಿ ಪಶು ವೈದ್ಯಕೀಯ ನೇಮಕದಲ್ಲಿ ನಡೆದ ಅಕ್ರಮಕ್ಕೆ ಸಂಬಂಧಿಸಿದಂತೆ   ಸಿಐಡಿ ಅಧಿಕಾರಿಗಳು  ಬಿಜೆಪಿ ಕಾರ್ಯಕರ್ತ ಬಸವರಾಜ  ಕನ್ನಾಳೆ ಅವರನ್ನು ಬಂಧಿಸಿದ್ದು,  ಈ ಅಕ್ರಮದಲ್ಲಿ  ಬಿಜೆಪಿಯವರೂ ಭಾಗಿಗಳಾಗಿದ್ದಾರೆ ಎಂದು  ಕಲಬುರಗಿಯ ಸಾಮಾಜಿಕ ಕಾರ್ಯಕರ್ತ ಶರಣು ಐಟಿ ಹೇಳಿದ್ದಾರೆ.

ಕಲಬುರಗಿಯಲ್ಲಿ  ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಸವರಾಜ್ ಕನ್ನಾಳೆ ಬಿಜೆಪಿಯ ರಾಜ್ಯ ಮತ್ತು ಕೇಂದ್ರ ನಾಯಕರ ಜೊತೆ ಒಳ್ಳೆಯ ಸಂಪರ್ಕ ಹೊಂದಿದ್ದಾನೆ.  ಡಿವೈಎಸ್‌ಪಿ ನೇಮಕದಲ್ಲಿ  ಹಗರಣ ಮಾಡಿದ್ದಾನೆ. ಜೊತೆಗೆ ಗ್ರೇಡ್ 1 ಜೊತೆಗೆ ಕೆಪಿಎಸ್‌ಸಿ ನೇಮಕದಲ್ಲಿ ಅಕ್ರಮ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ.

ಬಿಜೆಪಿ ಸರ್ಕಾರದಲ್ಲಿ ಮಿನಿಸ್ಟರ್ ಜೊತೆ ಒಳ್ಳೆಯ ಸಂಪರ್ಕ ಹೊಂದಿದ್ದರಿಂದ  ಅಕ್ರಮ ಎಸಗಿದ್ದಾನೆ. ಅಕ್ರಮದ ದುಡ್ಡಲ್ಲೆ ಎರಡು ಬಸ್ ಖರೀದಿ ಮಾಡಿದ್ದಾನೆ. ಆ ಬಸ್ ಒಪನಿಂಗ್ ಕಾರ್ಯಕ್ರಮಕ್ಕೆ ಛಲವಾದಿ ನಾರಾಯಣ ಸ್ವಾಮಿ ಮತ್ತಿತರ ಶಾಸಕರು ಹೋಗಿದ್ದಾರೆ. ಬಸವರಾಜ್  ಕಾರು ತಗೊಂಡಾಗ ಶೋಭಾ ಕರಂದ್ಲಾಜೆ ಕಾರ್ ಪೂಜೆ ಮಾಡಿದ್ದಾರೆ. ಹೀಗಾಗಿ, ಅಕ್ರಮದಲ್ಲಿ ಬಿಜೆಪಿ ನಾಯಕರು ಕೂಡ ಪಾರ್ಟ್ನರ್ಸ್ ಎಂದು ಆರೋಪಿಸಿ  ಬಿಜೆಪಿ ನಾಯಕರೊಂದಿಗೆ  ಬಸವರಾಜ ಇರುವ ಫೋಟೋ ಸಮೇತ ಶರಣು ಐಟಿ ಆರೋಪಿಸಿದ್ದಾರೆ.

ಕೆಪಿಎಸ್‌ಸಿ ಪರೀಕ್ಷೆ ಬರೆಯಲು ಭಾಲ್ಕಿಯಿಂದ ಬೆಂಗಳೂರಿಗೆ ಬಂದಿಳಿದಿದ್ದ ಬಸವರಾಜ್ ಕನ್ನಾಳೆ ಪರೀಕ್ಷೆ ಪಾಸಾಗದೆ ಕೋಟ್ಯಾಧಿಪತಿಯಾಗಿರುವುದು ಪತ್ತೆಯಾಗಿದೆ. ಬಿಜೆಪಿ, ಕಾಂಗ್ರೆಸ್ ನಾಯಕರ ಜೊತೆ ಒಟನಾಟ ಇರಿಸಿಕೊಂಡು ಮಧ್ಯವರ್ತಿ ಕೆಲಸ ಪ್ರಾರಂಭ ಮಾಡಿದ್ದಾನೆ.

ರಾಜಕೀಯ ನಾಯಕರ ಜೊತೆ ಇರುವ ಪೋಟೊ ತೋರಿಸಿ ಆತ ಪರೀಕ್ಷಾರ್ಥಿಗಳನ್ನು ಬಲೆಗೆ ಬೀಳಿಸುತ್ತಿದ್ದ ಎನ್ನಲಾಗಿದೆ. ಬೆಂಗಳೂರಿನಲ್ಲಿ ಸ್ವಂತ ಮನೆ, ಭಾಲ್ಕಿ ಪಟ್ಟಣದಲ್ಲಿ ಬೃಹತ್ ನಿವಾಸ,ಕೋಟ್ಯಂತರ ಮೌಲ್ಯದ ಜಮೀನು ಖರೀದಿ ಮಾಡಿದ್ದಾನೆ ಎಂದು ಹೇಳಲಾಗಿದೆ.

ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಪರೀಕ್ಷಾರ್ಥಿಗಳಿಂದ ಹಣ ಪಡೆದುಕೊಂಡು ಪ್ರಶ್ನೆಪತ್ರಿಕೆ ಸೋರಿಕೆ ಆರೋಪಿ ಐಎಎಸ್ ಅಧಿಕಾರಿ ಗ್ಯಾನೇಂದ್ರ ಕುಮಾರ್ ಕನ್ನಾಳೆ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಗ್ಯಾನೇಂದ್ರ ಕುಮಾರ್ ಜೊತೆ 12 ಪರೀಕ್ಷಾರ್ಥಗಳ ಜೊತೆ ಸಂಪರ್ಕ ಹೊಂದಿದ್ದ. ಸಿಐಡಿ ಪೊಲೀಸರು ತನಿಖೆ ಮಾಡಿದ ಬಳಿಕಇನ್ನಷ್ಟು ವಿಚಾರಗಳು ಹೊರ ಬರಲಿದೆ.

Related Posts

Leave a Reply

Your email address will not be published. Required fields are marked *