Saturday, October 10, 2026
Menu

ರೇಣುಕಾಸ್ವಾಮಿ ಕೊಲೆ ಕೇಸ್‌: ಪ್ರದೋಷ್‌ ಮಾಫಿ ಸಾಕ್ಷಿ ಅರ್ಜಿಗೆ ಕೋರ್ಟ್‌ ಸಮ್ಮತಿ

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಆರೋಪಿಗಳಲ್ಲಿ ಒಬ್ಬನಾಗಿರುವ ಪ್ರದೋಷ್‌ ಮಾಪಿ ಸಾಕ್ಷಿಯಾಗುವುದಾಗಿ ಸಲ್ಲಿಸಿದ ಅರ್ಜಿಯನ್ನು ಕೋರ್ಟ್‌ ಪುರಸ್ಕರಿಸಿದೆ.

ಆರೋಪಿ ಪ್ರದೋಷ್​ ಮಾಫಿ ಸಾಕ್ಷಿಯಾಗಲು ಸಮ್ಮತಿಸಿ 59ನೇ ಸೆಷನ್ಸ್ ಕೋರ್ಟ್ ನ್ಯಾ. ಸುಜಾತ ಎಂ. ಸಂಬ್ರಾಣಿ ಅವರಿಂದ ಆದೇಶ ಪ್ರಕಟವಾಗಿದೆ. ಈ ಬೆಳವಣಿಗೆಯಿಂದ ನಟ ದರ್ಶನ್ , ಪವಿತ್ರಾಗೌಡ ಸೇರಿದಂತೆ 16 ಆರೋಪಿಗಳ ಸಂಕಷ್ಟ ಹೆಚ್ಚಲಿದೆ.

ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಾಫಿ ಸಾಕ್ಷಿ ನುಡಿಯಲು ಕೋರ್ಟ್ ಒಪ್ಪಿಗೆ ನೀಡಿದೆ. ಪ್ರಕರಣದ 14ನೇ ಆರೋಪಿ ಪ್ರದೋಷ್​ ಮಾಫಿ ಸಾಕ್ಷಿಯಾಗಿ ದರ್ಶನ್ ಮತ್ತು ಇತರ ಆರೋಪಿಗಳ ವಿರುದ್ಧ ಸಾಕ್ಷಿ ನುಡಿಯಲಿದ್ದಾರೆ.

ಪ್ರಕರಣದ ವಿಚಾರಣೆ ನಡೆಸಿದ 59ನೇ ಸೆಷನ್ಸ್ ಕೋರ್ಟ್ ನ್ಯಾ. ಸುಜಾತ ಎಂ. ಸಂಬ್ರಾಣಿ, ಆರೋಪಿಯು ಪ್ರಕರಣಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ನೀಡಬೇಕು. ವಿಚಾರಣೆ ಮುಗಿಯುವವರೆಗೂ ಜೆಸಿಯಲ್ಲೇ ಇರಬೇಕು. ಸರಿಯಾದ ಮಾಹಿತಿ ನೀಡದಿದ್ದಲ್ಲಿ ಆರೋಪಿ ಎಂದು ಮತ್ತೆ ಪರಿಗಣನೆ ಮಾಡಲಾಗುವುದು. ಸಂಪೂರ್ಣ ಮಾಹಿತಿ ಹೇಳದಿದ್ದಲ್ಲಿ ಆರೋಪಿಯಾಗಿ ಮುಂದುವರಿಯಬೇಕು. ನ್ಯಾಯಾಂಗ ಬಂಧನದಲ್ಲಿ ಇರಬೇಕು ಎಂದು ಆದೇಶಿಸಿದ್ದಾರೆ.

Related Posts

Leave a Reply

Your email address will not be published. Required fields are marked *