ಅಣ್ಣನ ಪ್ರೀತಿ ನಿರಾಕರಿಸಿದ ಯುವತಿಯನ್ನು ತಮ್ಮ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಕೋಡಿಹಳ್ಳಿಯ ಹೆಚ್ಎಎಲ್ ರಸ್ತೆಯಲ್ಲಿ ನಡೆದಿದೆ. ಅಮೃತ ಕೊಲೆಯಾದ ಯುವತಿ.
ಓಂ ಶಕ್ತಿ ಮಾಲೆ ಹಾಕುವ ವೇಳೆ ಎರಡು ಕುಟುಂಬಗಳು ಪರಿಚಿತರಾಗಿ ಧನುಷ್ ಮತ್ತು ಅಮೃತ ಆತ್ಮೀಯರಾಗಿ ಬಳಿಕ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಧನುಷ್ಗೆ ಮದುವೆಯಾಗಿ ವಿಚ್ಛೇದನ ಪಡೆದಿದ್ದ. ಆತನಿಗೆ ಒಂದು ಮಗು ಇತ್ತು. ಈ ವಿಚಾರವನ್ನು ಅಮೃತಳಿಂದ ಮುಚ್ಚಿಟ್ಟಿದ್ದ. ಈ ವಿಚಾರ ಗೊತ್ತಾದ ಬಳಿಕ ಆಕೆ ಆತನಿಂದ ದೂರವಾಗಿದ್ದಳು. ಅಮೃತ ಕಾನೂನು ವಿದ್ಯಾರ್ಥಿನಿಯಾಗಿದ್ದು, ಪಿಜ್ಜಾ ಶಾಪ್ನಲ್ಲಿ ಕೆಲಸ ಕೂಡ ಮಾಡುತ್ತಿದ್ದಳು ಎನ್ನಲಾಗಿದೆ.
ಇದಕ್ಕೆ ಸಿಟ್ಟಿಗೆದ್ದ ಧನುಷ್ ತಮ್ಮ ಯುವತಿಯ ಮನೆಯ ಬಳಿ ತೆರಳಿ ಗಲಾಟೆ ಮಾಡಿ ಆಕೆಯ ಬೆನ್ನು ಹಾಗೂ ಎದೆಗೆ ಇರಿದಿದ್ದ. ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ.
ಆರೋಪಿಗಳಾದ ಸೂರ್ಯ ಹಾಗೂ ಧನುಷ್ ವಿರುದ್ಧ ಜೀವನ ಭೀಮಾನಗರ ಠಾಣೆ ಪೊಲೀಸರು ಎಫ್ಐಆರ್ ದಾಖಲಿಸಿ ಬಂಧಿಸಿದ್ದಾರೆ.
ಲಿಫ್ಟ್ನಲ್ಲಿ ತಲೆ ಸಿಲುಕಿ ಯುವಕನ ಸಾವು
ಬೆಂಗಳೂರಿನ ಜಯನಗರದ ಹೋಟೆಲ್ನ ಲಿಫ್ಟ್ನಲ್ಲಿ ತಲೆ ಸಿಲುಕಿಕೊಂಡು ಯುವಕ ಮೃತಪಟ್ಟ ಘಟನೆ ನಡೆದಿದೆ. ಧಾರವಾಡದ ರಾಜೇಶ್ (22) ಮೃತಪಟ್ಟ ಯುವಕ. ಆತ ಸರಕು ಶಿಫ್ಟ್ ಮಾಡಲು ಬಂದಿದ್ದಾಗ ಈ ದುರಂತ ನಡೆದಿದೆ.
ಲಿಫ್ಟ್ ಓಪನ್ ಆಗುವಾಗ ಹೊರಗಡೆ ಬರಲು ಮುಂದಾಗಿದ್ದ. ಆಗ ಇದ್ದಕ್ಕಿದ್ದಂತೆ ಲಿಫ್ಟ್ ಆಪರೇಟ್ ಆಗಿ ತಲೆ ಸಿಕ್ಕಿಕೊಂಡು ಮೇಲೆ ಇದ್ದ ಸಜ್ಜಾಕ್ಕೆ ಬಡಿದಿದ್ದು, ತಲೆ ಒಡೆದು ರಾಜೇಶ್ ಸ್ಥಳದಲ್ಲೇ ಅಸು ನೀಗಿದ್ದಾನೆ. ವಿಷಯ ತಿಳಿದು ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು, ಸಿಸಿಟಿವಿ ದೃಶ್ಯಗಳ ಪರಿಶೀಲನೆ ನಡೆಸುತ್ತಿದ್ದಾರೆ.


