Menu

ಬಿಡದಿ ರೈತರ ಒಪ್ಪಿಗೆಯಿದ್ದರೆ ಭೂಮಿ ತೆಗೆದುಕೊಳ್ಳಿ: ನಿಖಿಲ್‌ ಕುಮಾರಸ್ವಾಮಿ

ರೈತರ ಭಾವನೆಗಳ ವಿರುದ್ದ ಸರಕಾರ ಹೋಗುತ್ತಿದೆ,  ಬಿಡದಿಯಲ್ಲಿ 9 ರೆವೆನ್ಯೂ ಗ್ರಾಮಗಳಿದ್ದು, 26 ಹಳ್ಳಿಗಳು ಬರುತ್ತವೆ. ಶೇ. 80  ರೈತರಿಂದ ಒಪ್ಪಿಗೆ ಪಡೆದಿದ್ದೇವೆಂದು ಸರಕಾರ ಹೇಳುತ್ತಿದೆ. ಆದರೆ ಇಲ್ಲಿನ ಶೇ. 90 ರಿಂದ 95  ಜನ ರೈತರು ಸರಕಾರಕ್ಕೆ ಭೂಮಿ ನೀಡಿಲ್ಲ. ಆದರೂ ಸರಕಾರ ರೈತರಿಂದ ಭೂಮಿ ಕಸಿದುಕೊಳ್ಳುವ ಕೆಲಸ ಮಾಡುತ್ತಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆರೋಪಿಸಿದ್ದಾರೆ.

ಕಲಬುರಗಿ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಡದಿ ಪ್ರಕರಣದಲ್ಲಿ ಅಧಿಕಾರಿಗಳಿಗೆ ಆಕ್ರೋಶಗೊಂಡ ರೈತರು ಪೊರಕೆ ಏಟು ನೀಡಿದ್ದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇದು ರೈತರಿಗೆ ಎಚ್ಚರಿಕೆಯ ಗಂಟೆ ಎಂದರು.

ಒಂದು ಎಕರೆಗಿಂತ ಕಡಿಮೆ ಜಮೀನು ಹೊಂದಿರುವ ರೈತರು ಇಲ್ಲಿ ಸಾಕಷ್ಟು ಜನರಿದ್ದಾರೆ. ಅವರ ಭಾವನೆಗಳನ್ನು ಅರ್ಥ ಮಾಡಿಕೊಂಡು ರಾಜ್ಯ ಸರ್ಕಾರ ನಡೆದುಕೊಳ್ಳಬೇಕು. ಕೆಲವೇ ಕೆಲವು ರಿಯಲ್ ಎಸ್ಟೇಟ್ ಗಳ ಹಣತೆಯಂತೆ ನಡೆದುಕೊಳ್ಳದೇ ಮುಖ್ಯಮಂತ್ರಿಗಳು, ರೈತರ ಮರಣ ಶಾಸನ ಬರೆಯುವಂತ ಕಾರ್ಯಕ್ಕೆ ಕೈಹಾಕಬಾರದು ಎಂದು ನಿಖಿಲ್‌ ಎಚ್ಚರಿಕೆ ನೀಡಿದ್ದಾರೆ.

ಬಿಡದಿ ಟೌನ್ಸಿಪ್ ವಿರೋಧಿಸಿ ಸಾಕಷ್ಟು ಜನ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಇಲ್ಲಿತನಕ ಸರಕಾರವಾಗಲಿ ಅಥವಾ ಅಧಿಕಾರಿಗಳಾಗಲಿ ರೈತರ ಸಮಸ್ಯೆ ಹೇಳುವ ಗೋಜಿಗೆ ಹೋಗಿಲ್ಲ ಎಂದು ಕಿಡಿಕಾರಿದ, ನಿಖಿಲ್ ಕುಮಾರಸ್ವಾಮಿ, ನಾನು ಸ್ಪಷ್ಟವಾಗಿ ಸರಕಾರಕ್ಕೆ ಎಚ್ಚರಿಕೆ ಕೊಡುತ್ತಿದ್ದೇನೆ. ರೈತರ ಒಪ್ಪಿಗೆ ಇದ್ದರೆ ಭೂಮಿ ತೆಗೆದುಕೊಳ್ಳಿ. ಒಂದು ರೈತರು ವಿರೋಧ ಮಾಡುತ್ತಿದ್ದರೆ, ಆ ಕೆಲಸ ಕೈಬಿಡಿ ಎಂದು  ಹೇಳಿದ್ದಾರೆ.

Related Posts

Leave a Reply

Your email address will not be published. Required fields are marked *