Menu

ಯುವ ಕರ್ನಾಟಕ ನಿರ್ಮಾಣ ಯೋಜನೆಗೆ ಸಿಎಂ ಸಿದ್ಧತೆ: ಪ್ರಿಯಾಂಕ್‌ ಖರ್ಗೆ

ಯುವ ಕರ್ನಾಟಕದ ನಿರ್ಮಾಣ ಸರ್ಕಾರದ‌ ಸಂಕಲ್ಪವಾಗಿದೆ. ಮುಂದಿನ ಭವಿಷ್ಯ ಯುವಕರ ಕೈಯಲ್ಲಿ ಇರುವುದರಿಂದಾಗಿ ಯುವಕರಿಗಾಗಿ ಯೋಜನೆಗಳನ್ನು ತರಲು ಸಿಎಂ ಡಿಕೆಶಿವಕುಮಾರ್ ಮುಂದಾಗಿದ್ದಾರೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಕಲಬುರಗಿ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಿತ್ತೂರು ಹಾಗೂ ಕಲ್ಯಾಣ ಕರ್ನಾಟಕದ ಅಭಿವೃದ್ದಿ ಹಾಗೂ ಆರ್ಥಿಕ‌ ಪ್ರಗತಿಗಾಗಿ ಕೈಗೊಳ್ಳಬೇಕಾದ ಕಾರ್ಯಕ್ರಮ ಹಾಗೂ ಯೋಜನೆಗಳ ನೀಲಿನಕ್ಷೆ ತಯಾರಿಸಲು ಈಗಾಗಲೇ ಹೇಳಿದ್ದಾರೆ ಎಂದರು.

ಸೂಪರ್ ಎಲ್ ನೀನೋ ಎಫೆಕ್ಟ್ ನಿಂದಾಗಿ ಮಳೆ ಕೊರತೆಯಾಗುತ್ತದೆ. ಬೆಳೆಗಳಿಗೆ ಸಂಕಷ್ಟವಾಗಲಿದೆ. ಹಾಗಾಗಿ ಸಿಎಂ‌ ಎರಡು ಸಲ ಸಭೆ ನಡೆಸಿ ಕುಡಿಯುವ ನೀರು,‌ ಮೇವು ಹಾಗೂ ಬರದ ಬಗ್ಗೆ ತಿಳಿಯಲು ಬೆಂಗಳೂರಿನಲ್ಲಿ ಸಭೆ ನಡೆಸಿದ್ದಾರೆ. ಈಗ ಮತ್ತೆ ಕಂದಾಯ ವಿಭಾಗದ ಸಭೆ ಕಲಬುರಗಿಯಲ್ಲಿ  ನಡೆಸಲಿದ್ದು ಬರ ಪರಿಸ್ಥಿತಿ ಹಾಗೂ ಬರ ಎದುರಿಸಲು ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಸುರ್ದೀರ್ಘ ಚರ್ಚೆ ನಡೆಸಲಿದ್ದಾರೆ.‌ ನಂತರ,‌ ಮಾಧ್ಯಮಗಳಿಗೆ ವಿವರಣೆ‌ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.

ಈ ಭಾಗದಲ್ಲಿ ಆಣೆಕಟ್ಟುಗಳ ಭೇಟಿಗೆ ಸಿಎಂ ಅವರಿಂದ ಯಾವುದೇ ಭೇಟಿ ನಿಗದಿಯಾಗಿಲ್ಲ. ಎನ್ ಡಿ ಆರ್ ಎಫ್ ಪ್ರಕಾರ 35% ಮಳೆ ಕೊರತೆಯಾಗಿದೆ.  ತೊಗರಿ, ಸೂರ್ಯಕಾಂತಿ ಯನ್ನು ಜುಲೈ ಕೊನೆಯ ವಾರದ‌ವರೆಗೆ ಬಿತ್ತನೆ ಮಾಡಬಹುದಾಗಿದೆ. ಮೋಡ ಬಿತ್ತನೆಗೆ ಸಂಬಂಧಿಸಿದಂತೆ ಚರ್ಚೆ ನಡೆದಿಲ್ಲ. ಯಾವುದೇ ಕ್ರಮವಹಿಸಿದರೂ ಅದು ವೈಜ್ಞಾನಿಕವಾಗಿ ನಡೆಸಬೇಕಾಗುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಜಿಲ್ಲೆಯಲ್ಲಿ ಕುಡಿಯುವ‌ ನೀರಿನ ಸಮಸ್ಯೆ ಇದೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಸಚಿವರು,‌ಸಧ್ಯಕ್ಕೆ‌ ಲಭ್ಯವಿರುವ ನೀರು ಮುಂದಿನ 45 ದಿನಗಳವರೆಗೆ ಸಾಕಾಗಬಹುದು.ರಾಜ್ಯ ಸರ್ಕಾರ ನೆರೆ‌ ರಾಜ್ಯಗಳಿಂದ ನಮ್ಮ ರಾಜ್ಯಕ್ಕೆ ಕುಡಿಯುವ‌ ನೀರು ಒದಗಿಸುವ‌ ಕುರಿತಂತೆ ಕೋರಿ ಪತ್ರಬರೆಯಲಾಗಿದೆ ಈ ಬಗ್ಗೆ ಮಂಗಳವಾರ ಸಿಎಂ ಚರ್ಚೆ ನಡೆಸಲಿದ್ದಾರೆ ಎಂದರು.

ಎಸ್ ಐ ಆರ್ ಸರಿಯಾಗಿ ನಡೆಯುತ್ತಿಲ್ಲ ಕಲ್ಯಾಣ ಮಂಟಪದಲ್ಲಿ, ದರ್ಗಾದಲ್ಲಿ‌ ನಡೆಯುತ್ತಿದೆ ಎಂದರೆ ಅದರ‌ ಜವಾಬ್ದಾರಿ ಚುನಾವಣೆ ಆಯೋಗದ್ದೆ ಹೊರತು‌ ಸರ್ಕಾರದಲ್ಲ‌ ಎಂದು ಸ್ಪಷ್ಟಪಡಿಸಿದ‌ ಸಚಿವರು, ಸರ್ಕಾರದ ‌ಅಧಿಕಾರಿಗಳನ್ನು ನಾವು ಆಯೋಗಕ್ಕೆ‌ ಕೊಟ್ಟಿದ್ದೇವೆ. ಅದರಲ್ಲಿ ನಮ್ಮ ಯಾವುದೇ ಪಾತ್ರವಿಲ್ಲ. ಎಸ್ ಐ ಆರ್ ಕುರಿತಂತೆ ಪಾರದರ್ಶಕ ವಾಗಿ ನಡೆಸಲು‌ ಚುನಾವಣೆ ಆಯೋಗಕ್ಕೆ ನಾನೇ ಖುದ್ದಾಗಿ 12 ಪ್ರಶ್ನೆ ಕೇಳಿದ್ದೇನೆ. ಅದಕ್ಕೆ‌ ಅವರು ನಮಗೆ ಸಮಯ ಕೊಟ್ಟಿಲ್ಲ. ಆದರೆ ವಿಜಯೇಂದ್ರ ಅವರಿಗೆ ಸಮಯಾವಕಾಶ ಕೊಟ್ಟಿದ್ದಾರೆ. ಹಾಗಾದರೆ ಆಯೋಗ ಯಾರ ಅಡಿಯಲ್ಲಿ ಕೆಲಸ‌ ನಡೆಸುತ್ತಿದೆ ಎಂದು ಪ್ರಶ್ನಿಸಿದರು.

ಎಸ್ ಐ ಆರ್ ರದ್ದು ಮಾಡುವಂತೆ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರ ಹೇಳಿಕೆಯನ್ನು‌ ಪುಷ್ಠಿಕರಿಸಿದ ಸಚಿವ ಪ್ರಿಯಾಂಕ್ ಖರ್ಗೆ, ಎಸ್ ಐ ಆರ್ ಸರಿಯಾಗಿ ನಡೆಸುವಂತೆ ನಾವೂ ಒತ್ತಾಯಿಸುತ್ತಿದ್ದೇವೆ. ನಾವು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿ ಸರಿಯಾಗಿ ನಡೆಸಲಿ ಎಂದರು.

ಗೃಹ ಇಲಾಖೆಯ ಕುರಿತಂತೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ‌ ಸಚಿವರು, ಅಗತ್ಯವಿರುವ ಕಡೆ ನೂತನ ಪೊಲೀಸ್ ಠಾಣೆ ಸ್ಥಾಪನೆ ಸೇರಿದಂತೆ ತರಬಹುದಾದ ಬದಲಾವಣೆಗಳ ಬಗ್ಗೆ ಒಂದು ವಾರದ ನಂತರ ವಿವರವಾಗಿ ಚರ್ಚಿಸುವುದಾಗಿ ಸಚಿವರು ಹೇಳಿದರು.

ಹೊರರಾಜ್ಯದ ಅಧಿಕಾರಿಗಳನ್ನು ರಾಜ್ಯದಲ್ಲಿ ಬಳಸಿಕೊಳ್ಳುವಂತೆ ಬಿಜೆಪಿ ಒತ್ತಾಯಿಸುತ್ತಿರುವುದಕ್ಕೆ ತೀಕ್ಷ್ಣ ಪ್ರತಿಕ್ರಿಯಿಸಿದ ಸಚಿವ ಶರಣಪ್ರಕಾಶ್ ಪಾಟೀಲ್, ಬೇರೆ ರಾಜ್ಯದ ಅಧಿಕಾರಿಗಳ ಮೂಲಕ ಇಡೀ ಪ್ರಕ್ರಿಯೆಯನ್ನು ದುರ್ಬಳಕೆ ಮಾಡಿಕೊಳ್ಳುವ ಹುನ್ನಾರ ಬಿಜೆಪಿ ನಡೆಸಿದೆ ಎಂದು  ಆರೋಪಿಸಿದರು.

ತನಿಖಾ‌ ಸಂಸ್ಥೆಗಳು ನಡೆಸಿದ ದಾಳಿಗೆ ಒಳಗಾದವರು ಬಿಜೆಪಿಗೆ ದೇಣಿಗೆ ನೀಡಿದ್ದಾರೆ ಎಂದ ಪಾಟೀಲ್, ಕೇಂದ್ರ ಚುನಾವಣೆ ಆಯೋಗದ ಕಮೀಷನರ್ ನೇಮಕ ಪ್ರಕ್ರಿಯೆಯನ್ನು ಸಂಪೂರ್ಣ ಬದಲಾವಣೆಯನ್ನು ಕೇಂದ್ರ ಸರಕಾರ ಮಾಡಿದೆ. ನೇಮಕ ಸಮಿತಿಯಿಂದ ನ್ಯಾಯಮೂರ್ತಿಗಳನ್ನು ಹೊರಗಡೆ ಇಡಲಾಗಿದೆ ಎಂದರು.

Related Posts

Leave a Reply

Your email address will not be published. Required fields are marked *