Menu

ರೈತರ ಸಮಸ್ಯೆಗಿಂತ ಆರ್‌ಎಸ್‌ಎಸ್ ನೋಂದಣಿ ಸಮಸ್ಯೆ ದೊಡ್ಡದಾಗಿದೆ: ಎಂಎಲ್ಸಿ ರವಿಕುಮಾರ್ ಕಿಡಿ

ರಾಜ್ಯದಲ್ಲಿ ರೈತರ ಸಮಸ್ಯೆಗಿಂತ ಆರ್‌ಎಸ್‌ಎಸ್ ರಿಜಿಸ್ಟ್ರೆಷನ್ ಸಮಸ್ಯೆ ದೊಡ್ಡದಾಗಿದೆ ಎಂದು ವಿಧಾನ ಪರಿಷತ್ ಸದಸ್ಯರಾದ ಎನ್ ರವಿಕುಮಾರ್ ಹೇಳಿದರು.

ಕಲಬುರಗಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,ಪ್ರಿಯಾಂಕ್ ಖರ್ಗೆಗೆ ಆರ್‌ಎಸ್‌ಎಸ್ ರೆಜಿಸ್ಟ್ರೆಷನ್ ದೇಶದಲ್ಲಿ ನಂ 1 ಸಮಸ್ಯೆ ಆಗಿದೆ ಎಂದು ಕಿಡಿಕಾರಿದರು. ರಾಜ್ಯದಲ್ಲಿ ಬರಗಾಲ ಆವರಿಸಿದೆ, ಆದರೆ ರೈತರ ಬವಣೆ ಕೇಳೊರಿಲ್ಲ.ರೈತರು ಗೋಳು ಹಾಕೋತ್ತಿದ್ದಾರೆ, ಅದ್ಯಾವುದು ಸರ್ಕಾರಕ್ಕೆ ಕಾಣಿಸುತ್ತಿಲ್ಲ ಎಂದು ಆರೋಪಿಸಿದರು.

ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ  ಸಂಪೂರ್ಣ ಕುಸಿದು ಹೋಗಿದೆ.140 ಕ್ಕೂ ಅಧಿಕ ತಾಲೂಕಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೂರಿದೆ. 14 ಡ್ಯಾಂಗಳು ಸಂಪೂರ್ಣ ಖಾಲಿಯಾಗೋ ಹಂತಕ್ಕೆ ಬಂದಿವೆ. ಪಶು ಪಕ್ಷಿಗಳಿಗೆ, ಜಾನುವಾರುಗಳಿಗೆ, ಜನರಿಗೆ ಕುಡಿಯುವ ನೀರಿಲ್ಲ. ಜನರ ಬವಣೆ ಕೇಳೊಕೆ ಮಂತ್ರಿಗಳಿಲ್ಲ, ಇರೋ 14 ಜನ ಸಚಿವರು ಅಸಮರ್ಥರು. ರಾಜ್ಯವನ್ನು  ತಕ್ಷಣ ಬರಪಿಡೀತ ರಾಜ್ಯವನ್ನಾಗಿ ಘೋಷಣೆ ಮಾಡಬೇಕು. ಸರ್ವಪಕ್ಷಗಳ ಸಭೆ ಕರೆದು ರಾಜ್ಯದ ರೈತರ ನೆರವಿಗೆ ಧಾವಿಸಬೇಕು ಎಂದರು.

ಬಂಡೆ ಕುಸಿದು 7 ಜನ ಕಾರ್ಮಿಕರು ದುರ್ಮರಣ ಪ್ರಕರಣದ ಕುರಿತು ಮಾತನಾಡಿದ ಅವರು, ಘಟನೆಯಲ್ಲಿ ಯಾದಗಿರಿ ಕಾರ್ಮಿಕ ಮೃತಪಟ್ಟಿದ್ದಾನೆ. ಮೃತ ಯಾದಗಿರಿ ಕಾರ್ಮಿಕನ ಕುಟುಂಬಕ್ಕೆ 25 ಲಕ್ಷ ಪರಿಹಾರ, ಸರ್ಕಾರಿ ಹುದ್ದೆ ಕೊಡಬೇಕು. ಮೃತ ಹೊರ ರಾಜ್ಯದ ಕಾರ್ಮಿಕ ಕುಟುಂಬಕ್ಕೆ ತಲಾ 50 ಲಕ್ಷ ಪರಿಹಾರ ಕೊಡಬೇಕೆಂದು ಆಗ್ರಹಿಸಿದರು. ಇದುವರೆಗೆ ಆ ಕ್ರಷರ್ ಮಾಲೀಕನ ಬಂಧಿಸಿಲ್ಲ, ಬಂಧಿಸಿ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದರು.

ಅಫಜಲಪುರ ಪೊಲೀಸ್ ಠಾಣೆಯಿಂದ ಪೋಕ್ಸೋ ಆರೋಪಿ ಪರಾರಿ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಅವರು,14 ವರ್ಷದ ಬಾಲಕಿಯನ್ನ 24 ವರ್ಷದ ಯುವಕ ಓಡಿಸಿಕೊಂಡು ಹೋಗಿದ್ದಾನೆ.ಅರೆಸ್ಟ್ ಆದ ಆರೋಪಿಯನ್ನ ಕೈಕೋಳ ಹಾಕಿ ಬಂಧಿಸಿದ್ದರು.ಬಂಧಿತ ಆರೋಪಿ ಠಾಣೆಯಿಂದಲೇ ಹೇಗೆ ಪರಾರಿಯಾದ?ಈ ಬಗ್ಗೆ ಹೋಮ್ ಮಿನಿಸ್ಟರ್ ಯಾಕೆ ಪ್ರತಿಕ್ರಿಯೆ ನೀಡ್ತಿಲ್ಲ? ಘಟನೆ ಸಂಬಂಧಪಟ್ಟ ಠಾಣೆ ಇನ್ಸ್ಪೆಕ್ಟರ್‌ರನ್ನ ಅಮಾನತು ಮಾಡಿ ತನಿಖೆ ಮಾಡಬೇಕು ಎಂದು ಒತ್ತಾಯ ಮಾಡಿದರು.

ಲಾಡ್ಲೇ ಮಶಾಕ್ ದರ್ಗಾ ಕೇಸ್‌ ವಾಪಸ್‌ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಪ್ರಕರಣ ವಾಪಸ್‌ ವಿಚಾರದಲ್ಲಿ  ಸರ್ಕಾರಕ್ಕೆ ಹೈಕೋರ್ಟ್ ಕಪಾಳಮೋಕ್ಷ ಮಾಡಿದೆ. ಕೇಸ್ ವಾಪಸ್‌ ಕ್ರಮ ಸರಿಯಲ್ಲಎಂದು  ಹೈಕೋರ್ಟ್ ಛೀಮಾರಿ ಹಾಕಿದೆ. ಇದಕ್ಕೆ ಪ್ರಿಯಾಂಕ್ ಖರ್ಗೆ ಎನ್ ಹೇಳ್ತಾರೆ?, ಕೊಲೆ, ಕ್ರಿಮಿನಲ್ ಆರೋಪಿಗಳ ಕೇಸ್ಹಿಂ‌ ವಾಪಸ್ದೂ‌ ಪಡೆಯುವುದು, ಹಿಂದುಗಳ ಮೇಲೆ ಮತ್ತಷ್ಟು ಕೇಸ್‌ ಹಾಕಿ ಒಳಗೆ ಹಾಕೋ ಕೆಲಸ ನಡೆದಿದೆ. ರಾಜ್ಯದಲ್ಲಿ ಮುಸ್ಲಿಂ ತುಷ್ಟೀಕರಣ ಎಲ್ಲೆ ಮೀರುತ್ತಿದೆ. ಹೋಮ್ ಮಿನಿಸ್ಟರ್ ತುಷ್ಟೀಕರಣ  ನೀತಿ ಅನುಸರಿಸುತ್ತಿದ್ದಾರೆ. ನಮ್ಮ ನಿರಂತರ ಹೋರಾಟಕ್ಕೆ ಜಯ ಸಿಕ್ಕಿದೆ ಎಂದರು.

ಗೃಹಲಕ್ಷ್ಮೀ 5000 ಕೋಟಿ ಹಗರಣ ಪ್ರಕರಣದ ಬಗ್ಗೆ ಮಾತನಾಡಿದ ರವಿಕುಮಾರ, ಗೃಹಲಕ್ಷ್ಮೀ 5 ಸಾವಿರ ಕೋಟಿ ಹಣ ಎಲ್ಲಿ ಹೋಗಿದೆ?, 19 ಸಾವಿರ ಜನರ ಹಣ ಒಂದೇ ಅಕೌಂಟಿಂಗೆ ಹೋಗಿದೆ. ಏಕಾಏಕಿ 10 ಲಕ್ಷ ಜನರ ಅಕೌಂಟ್ ನಂಬರ್ ಬದಲಾಗಿದೆ. ಇದರ ಹಿಂದಿನ ಕುತಂತ್ರ ಬಗ್ಗೆ ಸರ್ಕಾರ ಸೂಕ್ತ ತನಿಖೆ ನಡೆಸಬೇಕು. ಗೃಹಲಕ್ಷ್ಮೀ ಹಗರಣ ಸಿಬಿಐಗೆ ವಹಿಸಿ ಹಿಂದಿನ ಸಚಿವರನ್ನು ತನಿಖೆಗೊಳಪಡಿಸಬೇಕು ಎಂದು ಆಗ್ರಹಿಸಿದರು.

ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ರವಿಕುಮಾರ, ರಾಜ್ಯದ ಖಜಾನೆ ಸಂಪೂರ್ಣ ಖಾಲಿಯಾಗಿದೆ. ಈ ಸರ್ಕಾರ ಭ್ರಷ್ಟಾಚಾರದ ಮುಂದುವರಿದ ಎರಡನೇ ಅಧ್ಯಾಯವಾಗಿದೆ. ಬರೀ ಗ್ಯಾರಂಟಿ ಯೋಜನೆ ಮಾತ್ರ ಮುನ್ನಡೆಸಿಕೊಂಡು ಹೋಗ್ತಿದೆ ಎಂದು ಹೇಳಿದರು.

Related Posts

Leave a Reply

Your email address will not be published. Required fields are marked *