Menu

17 ಕೋಟಿ ವೆಚ್ಚದಲ್ಲಿ ಜೈಪುರ ಅರಮನೆಯಲ್ಲಿ ಮದುವೆ ನಿಗದಿ: ಪ್ರಿಯಕರನೊಂದಿಗೆ ಸೇರಿ ಭಾವಿ ಪತಿಯ ಕೊಲೆಗೈದ ಯುವತಿ

ಮಹಾರಾಷ್ಟ್ರದ ಉದ್ಯಮಿ ವಿಶಾಲ್ ಅಗರ್ವಾಲ್ ಮಗ ಕೇತನ್ ಅಗರ್ವಾಲ್ ಪುಣೆಯ ಲೋಹಗಢ ಕೋಟೆಯಿಂದ ಪ್ರಪಾತಕ್ಕೆ ಬಿದ್ದು ಕೊಲೆಯಾಗಿರುವ ಪ್ರಕರಣ ಆಕಸ್ಮಿಕವಲ್ಲ ಕೊಲೆ ಎಂಬುದು ಬಯಲಾಗಿದೆ. ಉದ್ಯಮಿಯ ಮಗಳು ಸಿಯಾ ಎಂಬಾಕೆ ಪ್ರಿಯಕರನೊಂದಿಗೆ ಸೇರಿ ತಾನು ಮದುವೆಯಾಗಬೇಕಿದ್ದ ಯುವಕ ಕೇತನ್ ಅಗರ್ವಾಲ್ ನನ್ನು ಪ್ರಪಾತಕ್ಕೆ ತಳ್ಳಿ ಕೊಲೆ ಮಾಡಿದ್ದಾಳೆ ಎಂಬುದು ಪತ್ತೆಯಾಗಿದೆ.

ಪುಣೆಯ ಉದ್ಯಮಿಯ ಮಗಳಾದ ಸಿಯಾ ಗೋಯಲ್ ಜೊತೆ ಕೇತನ್ ಅಗರ್​ವಾಲ್ ಮದುವೆ ನಿಶ್ಚಯವಾಗಿತ್ತು. ಎರಡೂ ಕುಟುಂಬದವರು ಅದ್ಧೂರಿಯಾಗಿ ಮದುವೆ ಮಾಡಬೇಕೆಂದು ನಿಶ್ಚಯಿ 17 ಕೋಟಿ ರೂ. ವೆಚ್ಚದಲ್ಲಿ ಜೈಪುರದಲ್ಲಿ ಅರಮನೆ ಬುಕ್ ಮಾಡಿದ್ದರು. ನವೆಂಬರ್​​ನಲ್ಲಿ ಮದುವೆ ನಡೆಯಬೇಕಿತ್ತು. ಅತಿಥಿಗಳನ್ನು ಕರೆದೊಯ್ಯಲು ಎರಡು ಖಾಸಗಿ ವಿಮಾನಗಳ ವ್ಯವಸ್ಥೆ ಸೇರಿದಂತೆ ಸಿದ್ಧರೆ ಭರದಿಂದ ನಡೆಯುತ್ತಿತ್ತು.

ಮದುವೆಯಾಗಲಿರುವ ಹುಡುಗಿ ಸಿಯಾ ಜೊತೆ ಆಕೆಯ ಬರ್ತಡೇ ಸೆಲಬ್ರೇಷನ್​ಗೆ ಟ್ರೆಕಿಂಗ್ ಹೋಗಿದ್ದ ಕೇತನ್ ಆಕೆಯ ಜೊತೆ ಫೋಟೋಶೂಟ್ ಮಾಡಿಕೊಂಡಿದ್ದರು. ಫೋಟೋಗೆ ಪೋಸ್ ನೀಡುವಾಗ ಕಾಲುಜಾರಿ ಪ್ರಪಾತದಿಂದ ಬಿದ್ದು, ಪ್ರಾಣ ಹೋಗಿತ್ತು. ಫೋಟೋ ಕ್ಲಿಕ್ಕಿಸುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದ್ದಾರೆ ಎಂದು ಪೊಲೀಸರು ಕೇಸ್ ದಾಖಲಿಸಿದ್ದರು.

ಅಪಘಾತ ಎಂದು ಪ್ರಕರಣ ದಾಖಲಿಸಿಕೊಂಡಿದ್ದ ಲೋನಾವಾಲಾ ಗ್ರಾಮಾಂತರ ಪೊಲೀಸರಿಗೆ ಸಿಯಾ ನೀಡಿದ ಹೇಳಿಕೆಗಳ ಮೇಲೆ ಅನುಮಾನ ಮೂಡಿತು. ಕೇತನ್​ನ ಅಪ್ಪನಿಗೆ ಸಿಯಾ ಮೇಲೆ ಸಣ್ಣದೊಂದು ಅನುಮಾನ ಮೂಡಿತ್ತು. ಕೇತನ್ ಪರಿಣಿತ ಟ್ರೆಕ್ಕರ್ ಆಗಿದ್ದರಿಂದ ಆಕಸ್ಮಿಕವಾಗಿ ಬೀಳಲು ಸಾಧ್ಯವಿಲ್ಲ ಎಂದು ಕುಟುಂಬಸ್ಥರು ಹೇಳಿದ್ದರು.

ಪೊಲೀಸರು ಸಿಯಾಳ ಮೊಬೈಲ್ ಡೇಟಾ, ಕರೆ ದಾಖಲೆಗಳು ಮತ್ತು ಘಟನಾ ಸ್ಥಳದಲ್ಲಿದ್ದ ತಾಂತ್ರಿಕ ಸಾಕ್ಷ್ಯಗಳನ್ನು ಪರಿಶೀಲಿಸಿದಾಗ ಆಕೆಯು ಪ್ರಿಯಕರ ಚೇತನ್ ಚೌಧರಿಯ ಜೊತೆ ಸೇರಿ ಹತ್ಯೆಗೆ ಸಂಚು ರೂಪಿಸಿರುವುದು ಬಹಿರಂಗಗೊಂಡಿದೆ. ಫೋಟೋಶೂಟ್ ನೆಪದಲ್ಲಿ ಕೇತನ್​ನನ್ನು ಕೋಟೆಯ ತುದಿಗೆ ಕರೆದುಕೊಂಡು ಹೋಗಿದ್ದ ಸಿಯಾ ಆತನನ್ನು ಅಲ್ಲಿಂದ ತಳ್ಳಿದ್ದಳು, ಚೇತನ್ ಕೂಡ ಕೈ ಜೋಡಿಸಿದ್ದ.

20 ವರ್ಷದ ಸಿಯಾ ಗೋಯಲ್‌ಗೆ ಕುಟುಂಬದವರು ನಿಶ್ಚಯಿಸಿದ್ದ ಕೇತನ್‌ನನ್ನು ಮದುವೆಯಾಗಲು ಇಷ್ಟವಿರಲಿಲ್ಲ. ಆಕೆ ಚೇತನ್ ಚೌಧರಿಯನ್ನು ಪ್ರೀತಿಸುತ್ತಿದ್ದಳು. ಕೇತನ್‌ನನ್ನು ಶಾಶ್ವತವಾಗಿ ಮುಗಿಸಲು ಇಬ್ಬರೂ ಪ್ಲಾನ್ ಮಾಡಿ ವಿದೇಶಕ್ಕೆ ಹೋಗಬೇಕಿದ್ದ ಟ್ರಿಪ್ ಅನ್ನು ಕೇತನ್‌ನ ಪಾಸ್‌ಪೋರ್ಟ್ ಕದ್ದು ಸಿಯಾ ಹಾಳು ಮಾಡಿದ್ದಳು ಎನ್ನಲಾಗಿದೆ.

ಈ ಮೊದಲು ಜೂನ್ 14ರಂದು ಸಿಯಾ ಮತ್ತು ಕೇತನ್ ಲೋಹಗಡ್ ಕೋಟೆಗೆ ಹೋಗಿದ್ದರು. ಕೇತನ್ ಹತ್ಯೆಗೆ ಸಂಚು ರೂಪಿಸಿ ಆಕೆ ಆತನನ್ನು ಪ್ರಪಾತಕ್ಕೆ ದೂಡಿದ್ದಳು, ಆತ ಗಿಡವೊಂದನ್ನು ಹಿಡಿದುಕೊಂಡು ಬಚಾವಾಗಿದ್ದ, ಆಗ ನಾಟಕವಾಡಿ ಸಿಯಾ ಹಅವು, ಹಾವು ಎಂದು ಕಿರುಚಿಕೊಂಡು ಆತನನ್ನು ಅಪ್ಪಿಕೊಂಡಿದ್ದಳು, ಆದರೆ ಕೇತನ್‌ಗೆ ಇದು ಆಕೆಯ ಸಂಚು, ನಾಟಕ ಎಂಬುದು ಅರಿವಿಗೆ ಬಂದಿರಲಿಲ್ಲ ಎನ್ನಲಾಗಿದೆ.

Related Posts

Leave a Reply

Your email address will not be published. Required fields are marked *