ಟಿವಿಕೆ ಸ್ಥಾಪಕ, ನಟ, ತಮಿಳುನಾಡು ಮುಖ್ಯಮಂತ್ರಿ ವಿಜಯ್ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಗೆ ಕಾರಣವಾಗಿರುವ ಎಲ್‌ಟಿಟಿಇ ಸಂಘಟನೆಯ ಮುಖ್ಯಸ್ಥ ವೇಲುಪಿಳ್ಳೈ ಪ್ರಭಾಕರನ್‌ನನ್ನು ಸ್ಮರಿಸಿದ್ದು, ಈ ರಾಜಕೀಯ ನಡೆ ಭಾರಿ ಸಂಚಲನ ಸೃಷ್ಟಿಸಿದೆ. ವಿಜಯ್, ವೇಲುಪಿಳ್ಳೈ ಪ್ರಭಾಕರನ್‌ನ ‘ತಾಯಿ ಹೃದಯಕ್ಕೆ’ ಹೋಲಿಸಿದ್ದಾರೆ.
ಮುಲ್ಲಿವೈಕಲ್ ಹತ್ಯಾಕಾಂಡದ ಕುರಿತು ಮಾತನಾಡುವ ಮೂಲಕ ವಿಜಯ್ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. 2008ರ ಶ್ರೀಲಂಕಾ ಯುದ್ಧದ ಸಮಯದಲ್ಲೇ ತಮಿಳರ ಬೆಂಬಲಕ್ಕೆ ಉಪವಾಸ ಕೂತು ‘ನಾವು ಹುಲಿ ಮರಿಗಳು’ ಎಂದು ಪ್ರಭಾಕರನ್ ಅಬ್ಬರಿಸಿದ್ದನ್ನು ನೆನಪಿಸಿದ್ದಾರೆ.
ವಿಜಯ್ ನಡೆ ತಮಿಳುನಾಡು ಸರ್ಕಾರದಲ್ಲಿ ಪಾಲುದಾರನಾಗಿರುವ ಕಾಂಗ್ರೆಸ್ ಪಕ್ಷವನ್ನು ತೀವ್ರ ಇಕ್ಕಟ್ಟಿಗೆ ಸಿಲುಕಿಸಿದೆ. ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್‌ಗೆ ರೋಧಿಸಲೂ ಆಗದ ಸಹಿಸಲೂ ಆಗದ ಸ್ಥಿತಿ ನಿರ್ಮಾಣಗೊಂಡಿದೆ. ಈ ಬೆಳವಣಿಗೆ ವಿರೋಧ ಪಕ್ಷಗಳಿಗೆ ದೊಡ್ಡ ರಾಜಕೀಯ ಅಸ್ತ್ರ ಸಿಕ್ಕಂತಾಗಿದೆ.


