Tuesday, September 22, 2026
Menu

ಸಿಎಂ ಕುರ್ಚಿ ಗುಂಗಿನಲ್ಲಿ ಡಿಸಿಎಂ: ರಸ್ತೆಯಲ್ಲಿ ಬಿದ್ದಿರುವ ಮರಗಳು, ಪಾದಚಾರಿ ಮಾರ್ಗ ಬಂದ್‌ ಎಂದು ಆರ್‌ ಅಶೋಕ ಕಿಡಿ

ಏಪ್ರಿಲ್ 29ರ ಮಳೆಗೆ 500ಕ್ಕೂ ಹೆಚ್ಚು ಮರಗಳು ನೆಲಕ್ಕುರುಳಿವೆ. ವಾರ ಕಳೆದರೂ 1,305ಕ್ಕೂ ಹೆಚ್ಚು ಮರ-ಕೊಂಬೆಗಳು ಇನ್ನೂ ರಸ್ತೆ ಬದಿಯಲ್ಲೇ ಕೊಳೆಯುತ್ತಿವೆ. ಪಾದಚಾರಿ ಮಾರ್ಗಗಳು ಬಂದ್ ಆಗಿವೆ. ಜನ ಜೀವ ಕೈಯಲ್ಲಿ ಹಿಡಿದು ರಸ್ತೆಗಳಲ್ಲಿ ನಡೆಯುವ ಪರಿಸ್ಥಿತಿ. ಆದರೆ ಡಿಸಿಎಂ @DKShivakumar ಅವರು ಎಲ್ಲಿದ್ದಾರೆ ಎಂದು ಆರ್‌ ಅಶೋಕ ಪ್ರಶ್ನಿಸಿದ್ದಾರೆ.

ಮರ ತೆರವುಗಿಂತ, ಸಿಎಂ ಕುರ್ಚಿ ತೆರವುಗೊಳಿಸುವ ರಾಜಕೀಯದಲ್ಲಿ ಬ್ಯುಸಿಯಾಗಿದ್ದಾರೆ. ಹೈಕಮಾಂಡ್ ದೆಹಲಿಗೆ ಕರೆದು “ಶುಭ ಸುದ್ದಿ” ಕೊಡುತ್ತಾರೆ ಎಂದು ಹಗಲುಗನಸು ಕಾಣುತ್ತಿದ್ದಾರೆ. “30 ತಂಡಗಳನ್ನು ನಿಯೋಜಿಸಿದ್ದೇವೆ” ಎಂದು ಸರ್ಕಾರ ಘೋಷಣೆ ಮಾಡುತ್ತದೆ. ಆದರೆ ವಾಸ್ತವದಲ್ಲಿ ಕಾಣಿಸುವುದು ಏನು ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಫ್ಲೆಕ್ಸ್‌ಗಳಲ್ಲಿ, ಜಾಹೀರಾತುಗಳಲ್ಲಿ “Brand Bengaluru” ಕಟ್ಟುವ ಸರ್ಕಾರಕ್ಕೆ, ರಸ್ತೆಯ ಮೇಲೆ ಬಿದ್ದ ಒಂದು ಮರ ತೆರವುಗೊಳಿಸುವ ಸಾಮರ್ಥ್ಯ ಇಲ್ಲವೇ ಎಂದು ಕೇಳಿದ್ದು,  ಇದು ಕೇವಲ ಆಡಳಿತ ವೈಫಲ್ಯವಲ್ಲ, ಇದು ಬೆಂಗಳೂರಿನ ಜನರ ಸುರಕ್ಷತೆಯ ಮೇಲಿನ ನಿರ್ಲಕ್ಷ್ಯ ಎಂದಿದ್ದಾರೆ.

ಇದಕ್ಕೆಲ್ಲ ಬಜೆಟ್ ಇಲ್ಲವೇ?, ಇಚ್ಛಾಶಕ್ತಿ ಇಲ್ಲವೇ?, ಅಥವಾ ಮರ ತೆರವಿಗೂ “ಕಮಿಷನ್” ಬೇಕೇ?, ಬೆಂಗಳೂರು ಎಲ್ಲವನ್ನೂ ನೋಡುತ್ತಿದೆ. ಜನ ಉತ್ತರ ಕೇಳುತ್ತಿದ್ದಾರೆ ಎಂದು ಹೇಳಿದ್ದಾರೆ.

Related Posts

Leave a Reply

Your email address will not be published. Required fields are marked *