ಬೆಂಗಳೂರಿನಲ್ಲಿ ಪೂಜೆ, ಮಾಟ, ಮಂತ್ರ ನೆಪದಲ್ಲಿ ಜ್ಯೋತಿಷಿಯೊಬ್ಬ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದಾನೆ. ರಾಜಾಜಿನಗರದಲ್ಲಿ ಬ್ಯೂಟಿಷಿಯನ್ ಟ್ರೈನಿಂಗ್ ಸೆಂಟರ್ ನಡೆಸುತ್ತಿರುವ ಮಹಿಳೆಯುಇ ಜ್ಯೋತಿಷಿ ವಿರುದ್ಧ ಸಿ.ಕೆ ಅಚ್ಚುಕಟ್ಟು ಠಾಣೆಗೆ ದೂರು ನೀಡಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸುತ್ತಿದ್ದಂತೆಯೇ ಜ್ಯೋತಿಷಿ ಮೋಹನ ಕುಮಾರು ಪರಾರಿಯಾಗಿದ್ದಾನೆ. ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. 2025ರ ಜನವರಿಯಲ್ಲಿ ಮಹಿಳೆಯ ಟ್ರೈನಿಂಗ್ ಸೆಂಟರ್‌ಗೆ ಬಂದಿದ್ದ ಜ್ಯೋತಿಷಿ ಮೋಹನ ಕುಮಾರ್ ಸಹೋದರಿಗೆ ಬ್ಯೂಟಿಷಿಯನ್ ಟ್ರೈನಿಂಗ್ ಸೆಂಟರ್‌ನಲ್ಲಿ ಅಡ್ಮಿಷನ್ ಬೇಕು ಎಂದು ಹೇಳಿದ್ದ. ಜ್ಯೋತಿಷಿ ಎಂದು ಆಕೆ ಗೌರವದಿಂದ ನೋಡಿಕೊಂಡಿದ್ದಾರೆ. ಇದನ್ನೇ ನೆಪವಾಗಿಟ್ಟುಕೊಂಡು ಜ್ಯೋತಿಷಿ ಟ್ರೈನಿಂಗ್ ಸೆಂಟರ್ ಆರ್ಥಿಕವಾಗಿ ಅಭಿವೃದ್ಧಿಯಾಗಲು ಪೂಜೆಯ ಅವಶ್ಯಕತೆ ಇದೆ ಎಂದು ಹೇಳಿದ್ದಾನೆ.
ಪೂಜೆ ಹೆಸೆರು ಹೇಳಿ ಮಹಿಳೆಯನ್ನು ಮೋಹನ ಕುಮಾರ ರಾಮನಗರದ ಪಿರಮಿಡ್ ವ್ಯಾಲಿಗೆ ಕರೆದುಕೊಂಡು ಹೋಗಿ ರಾತ್ರಿಯಾಗುತ್ತಿದ್ದಂತೆ ಕಾರಿನಲ್ಲಿ ಮರಳುವಾಗ ನಿರ್ಜಜನ ಪ್ರದೇಶದಲ್ಲಿ ನಿಲ್ಲಿಸಿ ಮಹಿಳೆ ಮೇಲೈ ಲೈ0ಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದಾನೆ. ಇದನ್ನು ವಿರೋಧಿಸಿದಾಗ ಮಹಿಳೆಯನ್ನು ಮರಳಿ ತಂದು ಬಿಟ್ಟಿದ್ದಾನೆ.
ಮತ್ತೆ ಚಾಮುಂಡಿ ಬೆಟ್ಟಕ್ಕೆ ಮಹಿಳೆಯನ್ನು ಪೂಜೆ ನೆಪದಲ್ಲಿ ಕರೆದೊಯ್ದಿದ್ದ ಜ್ಯೋತಿಷಿ, ವಾಪಸಾಗುವಾಗ ಕಾರಿನಲ್ಲಿ ಲೈ0ಗಿಕ ದೌರ್ಜನ್ಯ ಎಸಗಿದ್ದಾನೆ. ಯಾರಿಗಾದರೂ ಹೇಳಿದರೆ ಗಂಡ, ಮಗನ ಮೇಲೆ ವಾಮಾಚಾರ ಮಾಡಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಜ್ಯೋತಿಷಿ ಬೆದರಿಕೆಗೆ ಹೆದರಿದ ಮಹಿಳೆ ಪ್ರತಿಭಟಿಸಲು ಆಗಿರಲಿಲ್ಲ ಎಂದು ದೂರಿನಲ್ಲಿ ವಿವರಿಸಲಾಗಿದೆ.
ದೀಕ್ಷೆ ಕೊಡಬೇಕು ಎಂದು ಮಹಿಳೆ ಮನೆಗೆ ಬಂದಿದ್ದ ಆತ ಆಕೆಯ ಗಂಡ ಮಗನನ್ನು ಮನೆಯಿಂದ ಹೊರಗೆ ಕಳುಹಿಸಿ ಒಂದೂವರೆ ಗಂಟೆ ಮನೆ ಒಳಗೆ ಬರದಂತೆ ಹೇಳಿದ್ದ. ಮನೆಯಲ್ಲಿ ಲೈಂಗಿಕ ಕ್ರಿಯೆಗೆ ಸಹಕರಿಸಲು ಬೆದರಿಕೆ ಹಾಕಿದ್ದಾನೆ. ಗಂಡ ಹಾಗೂ ಮಗ ರಕ್ತ ಕಾರಿ ಸಾಯುವಂತೆ ಮಾಡುತ್ತೇನೆ ಎಂದು ಬೆದರಿಸಿ ಬಳಸಿಕೊಂಡಿದ್ದ. ಲೈಂಗಿಕ ಕಿರುಕುಳ ಹೆಚ್ಚಾದ ಹಿನ್ನಲೆಯಲ್ಲಿ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾಳೆ.


