ಹುಬ್ಬಳ್ಳಿ ನಗರದ ಉದಯನಗರದಲ್ಲಿ ಮೊಬೈಲ್ ಕೊಡಲಿಲ್ಲವೆಂಬ ಕಾರಣಕ್ಕೆ ಬಾಲಕನೊಬ್ಬ ತಾಯಿಯ ಸೀರೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಬಾಲಕ ಪ್ರೀ ಫೈರ್ ಗೇಮ್‌ನ ಚಟದಲ್ಲಿದ್ದ. ಇದನ್ನು ನೋಡಿದ ಪೋಷಕರು ಬುದ್ಧಿ ಹೇಳಿದ್ದರು. ಅದೇ ರೀತಿ ಗುರುವಾರ ರಾತ್ರಿ ಬಾಲಕನ ತಾಯಿ ಮಗನಿಗೆ ಮೊಬೈಲ್ ಗೇಮ್ ಆಡಬೇಡ ಅಂದಿದ್ದಾರೆ. ಇದಕ್ಕೆ ನೊಂದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರಾತ್ರಿ ಕೋಣೆಗೆ ಹೋದ ಬಾಲಕ ತಾಯಿಯ ಸೀರೆಯಿಂದ ನೇಣು ಬಿಗಿದುಕೊಂಡಿದ್ದಾನೆ. ಹುಬ್ಬಳ್ಳಿಯ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇತ್ತೀಚೆಗೆ ಸಣ್ಣ ಮಕ್ಕಳು ಮೊಬೈಲ್ ಗೇಮ್, ರೀಲ್ಸ್ ವ್ಯಸನಿಗಳಾಗುತ್ತಿರುವ ಜೊತೆಗೆ ಚಿಕ್ಕಪುಟ್ಟ ವಿಷಯಗಳಿಗಙೂ ಆತ್ಮಹತ್ಯೆ ಮಾಡಿಕೊಳ್ಳುವಂತ ಪ್ರವೃತ್ತಿ ಹೆಚ್ಚುತ್ತಿದೆ. ಈ ಬೆಳವಣಿಗೆ ಆತಂಕಾರಿಯಾಗಿದ್ದು, ಶಿಕ್ಷಣ ತಜ್ಞರು, ವೈದ್ಯರು, ಸಾಮಾಜಿಕ ಕಾರ್ಯಕರ್ತರು ಈ ನಿಟ್ಟಿನಲ್ಲಿ ಗಂಭೀರ ಚಿಂತನೆ ನಡೆಸಬೇಕಾದ ಸನ್ನಿವೇಶ ನಿರ್ಮಾಣಗೊಂಡಿದೆ. ಮಕ್ಕಳು ಮೊಬೈಲ್ ಹೊರತುಪಡಿಸಿದ ಆಟಪಾಠ ಜಗತ್ತು, ವ್ಯಕ್ತಿತ್ವ ವಿಕಸನ ಚಟುವಟಿಕೆಗಳತ್ತ ಹೊರಳುವಂಥ ವ್ಯವಸ್ಥೆ ರೂಪಿಸುವ ಅಗತ್ಯವಿದೆ.


