ಬೀದರ್ ಬಸವಕಲ್ಯಾಣದಲ್ಲಿ ನಡೆದ ಬಸವೇಶ್ವರ ಜಾತ್ರೆಯಲ್ಲಿ ರಥದ ಚಕ್ರಕ್ಕೆ ಸಿಲುಕಿ ವ್ಯಕ್ತಿಯ ಎರಡೂ ಕಾಲು ಕಟ್ ಆಗಿದ್ದು, ಇಬ್ಬರ ಕಾಲಿಗೆ ಗಂಭೀರ ಗಾಯಗಳಾಗಿವೆ. ನಗರದ ತೇರು ಎಳೆಯುವ ಮೈದಾನದಲ್ಲಿ ಈ ದುರಂತ ನಡೆದಿದೆ.
ಬಸವೇಶ್ವರ ಜಾತ್ರಾ ರಥದಡಿ ಸಿಲುಕಿ ಧನರಾಜ್ ಎಂಬವರ ಎರಡೂ ಕಾಲು ಕಟ್ ಆಗಿವೆ, ಇಬ್ಬರ ಕಾಲಿಗೆ ಗಂಭೀರ ಗಾಯವಾಗಿದೆ. ಭೀಮಾಶಂಕರ ಎಂಬಾತನಿಗೆ ಸಣ್ಣಪುಟ್ಟ ಗಾಯವಾಗಿದೆ.
ಮೈದಾನದಲ್ಲಿ ತೇರು ನೋಡಲು ಲಕ್ಷಾಂತರ ಭಕ್ತರು ಸೇರಿದ್ದರು. ರಥ ನಿಯಂತ್ರಣ ಕಳೆದುಕೊಂಡಿದ್ದು, ಕೆಲವರ ಕಾಲಿನ ಮೇಲೆ ಹರಿದು ಹೋಗಿದೆ. ಗಾಯಾಳುಗಳನ್ನು ಬಸವಕಲ್ಯಾಣ ಆಸ್ಪತ್ರೆಗೆ ಕಲಬುರಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಜಾತ್ರೆಯಲ್ಲಿ ಜನಸಂದಣಿ ನಿಯಂತ್ರಣ ಕಷ್ಟವಾಗಿತ್ತು, ರಥ ಎಳೆಯುವ ವೇಳೆಯಲ್ಲಿ ಸರಿಯಾದ ಅಂತರ ಮತ್ತು ಎಚ್ಚರಿಕೆ ಕಾಪಾಡದಿರುವುದು ಈ ದುರಂತಕ್ಕೆ ಕಾರಣವಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.


