ಸೂಪರ್ ಸ್ಟಾರ್ ಶ್ರೀದೇವಿ 2018 ರಲ್ಲಿ ನಿಗೂಢವಾಗಿ ಮೃತಪಟ್ಟಿದ್ದು, ಅವರ ಸಾವು ಅಪಘಾತವಲ್ಲ, ಕೊಲೆ. ಕೊಲೆ ಮಾಡಿದ ವ್ಯಕ್ತಿ ಬೋನಿ ಕಪೂರ್ ಎಂದು ಆಕೆಯ ಆತ್ಮವೇ ಹೇಳಿದೆ ಎಂಬ ಮಾಹಿತಿಯನ್ನು ಅತೀಂದ್ರಿಯ ಸಂಶೋಧಕ ಸೌರಭ್ ಪೂನಿಯಾ ಬಹಿರಂಗ ಮಾಡಿದ್ದಾರೆ.
ಪ್ಯಾರಾನಾರ್ಮಲ್ ತನಿಖೆ ನಡೆಸಿ ಶ್ರೀದೇವಿ ಆತ್ಮವನ್ನು ಮಾತನಾಡಿಸಿರುವುದಾಗಿ ಸೌರಭ್ ಪೂನಿಯಾ ಇತ್ತೀಚೆಗೆ ಯೂಟ್ಯೂಬ್ ಚಾನೆಲ್‌ನಲ್ಲಿ ವೀಡಿಯೊ ಬಿಡುಗಡೆ ಮಾಡಿದ್ದಾರೆ. ಆ ವೀಡಿಯೊದಲ್ಲಿ ಅವರು ಹೇಳುವ ಪ್ರಕಾರ, ಆರಂಭದಲ್ಲಿ ಶ್ರೀದೇವಿ ಆತ್ಮ ಹೇಳಲು ನಿರಾಕರಿಸಿತಂತೆ. “ನಿಮಗೆ ಯಾರು ಹೊಡೆದು ಬಾತ್‌ಟಬ್‌ನಲ್ಲಿ ಮುಳುಗಿಸಿದ್ದಾರೆ?” ಎಂದು ಪದೇ ಪದೆ ಕೇಳಿದಾಗ, ಆತ್ಮವು “ಬೋನಿ ಕಪೂರ್” ಎಂದು ಸ್ಪಷ್ಟವಾಗಿ ಹೇಳಿದೆಯಂತೆ.
ನಾನು ಇದನ್ನೆಲ್ಲ ಹೇಳಿದರೆ ಯಾರೂ ನಂಬುವುದಿಲ್ಲ, ನನ್ನ ಬಳಿ ಆಡಿಯೋ ರೆಕಾರ್ಡಿಂಗ್ ಇದೆ ಎಂದು ಸೌರಭ್ ಪೂನಿಯಾ ಹೇಳಿದ್ದಾರೆ. ಅವರ ಪ್ರಕಾರ, ಶ್ರೀದೇವಿ ಸಾವಿನ ಹಿಂದೆ ಅವರ ಪತಿ ಬೋನಿ ಕಪೂರ್ ಇದ್ದಾರೆ.
ಕೆಲವರು ಪೂನಿಯಾ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸುತ್ತಿದ್ದರೆ, ಕೆಲವರು ಗಮನ ಸೆಳೆಯುವ ತಂತ್ರ ಎಂದು ತಳ್ಳಿಹಾಕುತ್ತಿದ್ದಾರೆ. ಬೋನಿ ಕಪೂರ್ ಅಥವಾ ಕಪೂರ್ ಕುಟುಂಬದ ಯಾರೂ ಈ ಆರೋಪಕ್ಕೆ ಸಾರ್ವಜನಿಕವಾಗಿ ಪ್ರತಿಕ್ರಿಯಿಸಿಲ್ಲ. ದುಬೈ ಪೊಲೀಸರ ತನಿಖೆ ಅಂತಿಮವಾಗಿ ಈ ಸಾವು ಅಪಘಾತ ಎಂದು ತೀರ್ಮಾನಿಸಿತ್ತು. ಆದರೆ ಅಭಿಮಾನಿಗಳಲ್ಲಿ ಇಂದಿಗೂ ಅನೇಕ ಪ್ರಶ್ನೆಗಳಿವೆ, ಇನ್ನೂ ಉತ್ತರ ಸಿಕ್ಕಿಲ್ಲ.
ಪ್ಯಾರಾನಾರ್ಮಲ್ ತನಿಖೆಗಳು ವೈಜ್ಞಾನಿಕವಾಗಿ ಸಾಬೀತಾಗಿಲ್ಲವಾದರೂ ಸೌರಭ್ ಆಡಿಯೋ ರೆಕಾರ್ಡಿಂಗ್ ಅಸ್ತಿತ್ವದಲ್ಲಿದ್ದರೆ ಅದು ಪ್ರಕರಣದ ಮರುತನಿಖೆಗೆ ಸಹಕಾರಿ ಆಗಬಹುದು. 2018 ಫೆಬ್ರವರಿ 24ರಂದು ದುಬೈನ ಜುಮೈರಾ ಎಮಿರೇಟ್ಸ್ ಟವರ್ಸ್ ಹೋಟೆಲ್‌ನ ಕೋಣೆಯಲ್ಲಿ ಶ್ರೀದೇವಿ ಮೃತದೇಹ ಪತ್ತೆಯಾಗಿತ್ತು. ಸ್ನಾನದ ಟಬ್‌ನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡುಬಂದ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದರು. ಅವರು ಮದ್ಯಪಾನ ಮಾಡಿದ್ದರು, ಟಬ್‌ನಲ್ಲಿ ಜಾರಿ ಬಿದ್ದು ನೀರು ತುಂಬಿಕೊಂಡು ಮುಳುಗಿ ಸಾವನ್ನಪ್ಪಿದ್ದರು ಎಂದು ಹೇಳಲಾಗಿತ್ತು.


