Menu

ಇಲ್ಲದ ಕಾರ್ಪೋರೇಷನ್‌ಗೆ ಜಮೀನು: ರದ್ದುಗೊಳಿಸಿ ಕೇಸ್‌ ಸಿಬಿಐಗೆ ವಹಿಸಿದ ಹೈಕೋರ್ಟ್‌

ಬೆಂಗಳೂರು ಉತ್ತರ ತಾಲೂಕಿನ ಹೆಬ್ಬಾಳ ಮತ್ತು ಅಮಾನಿಕೆರೆ ಕಂದಾಯ ಗ್ರಾಮಗಳ ವ್ಯಾಪ್ತಿಯಲ್ಲಿ ಜಮೀನುಗಳನ್ನು ಕೆಐಎಡಿಬಿಯಿಂದ ಸ್ವಾಧೀನಪಡಿಸಿಕೊಂಡು ಅಸ್ತಿತ್ವದಲ್ಲೇ ಇಲ್ಲದ ‘ಲೇಕ್‌ವ್ಯೂ ಟೂರಿಸಂ ಕಾರ್ಪೊರೇಷನ್‌’ಗೆ ನೀಡಿರುವುದನ್ನು ಕರ್ನಾಟಕ ಹೈಕೋರ್ಟ್‌ ರದ್ದುಗೊಳಿಸಿದೆ. ಈ ಅಕ್ರಮದ ಸಂಬಂಧ ಸಿಬಿಐ ತನಿಖೆ ನಡೆಸುವಂತೆ ಆದೇಶಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದ ಭೂಸ್ವಾಧೀನ ಪ್ರಕ್ರಿಯೆಯನ್ನು ಹೈಕೋರ್ಟ್‌ಏಕ ಸದಸ್ಯ ನ್ಯಾಯಪೀಠ ಎತ್ತಿ ಹಿಡಿದಿದೆ. ಈ ಆದೇಶ ರದ್ದುಪಡಿಸುವಂತೆ ಕೋರಿ ದಿ.ಕೃಷ್ಣಾರೆಡ್ಡಿ ಅವರ ಕಾನೂನಾತ್ಮಕ ವಾರಸುದಾರರು ಹಾಗೂ ಮತ್ತಿತರರು 2013 ರಲ್ಲಿ ಮೂರು ಪ್ರತ್ಯೇಕ ರಿಟ್‌ಸಲ್ಲಿಸಿದ್ದರು.

ಪುರಸ್ಕರಿಸಿರುವ ನ್ಯಾಯಮೂರ್ತಿ ಡಿ.ಕೆ.ಸಿಂಗ್‌ನೇತೃತ್ವದ ವಿಭಾಗೀಯ ನ್ಯಾಯಪೀಠವು ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ತೀರ್ಪು ನೀಡಿದೆ. ರಾಜ್ಯವು ಈ ವಂಚನೆಯಲ್ಲಿ ಭಾಗಿಯಾಗಿದೆ. ಪ್ರಕರಣದ ನಿಷ್ಪಕ್ಷಪಾತ ತನಿಖೆಯನ್ನು ರಾಜ್ಯದ ತನಿಖಾ ಸಂಸ್ಥೆಗಳಿಂದ ನಿರೀಕ್ಷಿಸಲು ಸಾಧ್ಯವಿಲ್ಲ. ಪ್ರಕರಣವನ್ನು ಸಿಬಿಐಗೆ ವಹಿಸುವುದೇ ಸೂಕ್ತ ಎಂದು ನ್ಯಾಯಪೀಠ ತೀರ್ಪಿನಲ್ಲಿ ಹೇಳಿದೆ.

ಭೂಸ್ವಾಧೀನ ಪ್ರಕ್ರಿಯೆಯು ಅಸ್ತಿತ್ವದಲ್ಲೇ ಇಲ್ಲದ ಘಟಕವೊಂದರ ಆದೇಶದ ಮೇಲೆ ನಡೆದಿದೆ ನ್ಯಾಯಪೀಠ, ಭೂಸ್ವಾಧೀನ ಪ್ರಕ್ರಿಯೆಯನ್ನು ರದ್ದುಪಡಿಸಿ ಪ್ರತಿವಾದಿ ಮತ್ತು ಲೇಕ್‌ವ್ಯೂ ಟೂರಿಸಂ ಕಾರ್ಪೊರೇಷನ್‌ಗೆ 10 ಲಕ್ಷ ರೂ. ದಂಡ ವಿಧಿಸಿದೆ.

ರೆಸಾರ್ಟ್‌, ಪಂಚತಾರಾ ಹೋಟೆಲ್ ಮನೋರಂಜನಾ ಉದ್ಯಾನ ಇತ್ಯಾದಿಗಳನ್ನು ಒಳಗೊಂಡ ‘ಯೂನಿಕೇರ್‌ಪ್ರವಾಸಿ ಕೇಂದ್ರ’ ಸ್ಥಾಪಿಸಲು ಜಮೀನು ಸ್ವಾಧೀನಪಡಿಸಿಕೊಳ್ಳಬೇಕು ಎಂದು ನಿರ್ದಿಷ್ಟ ಸರ್ವೆ ನಂಬರ್‌ಉಲ್ಲೇಖಿಸಿ ಪಿ.ಸತೀಶ್‌ಪೈ ಎಂಬ ಉದ್ಯಮಿ ಸರಕಾರಕ್ಕೆ ಮನವಿ ಸಲ್ಲಿಸಿದ್ದರು. ಪ್ರವರ್ತಕರನ್ನಾಗಿ ಡಾ.ರಾಮದಾಸ್‌ಪೈ, ಸೈಯದ್‌ಮೊಹಮ್ಮದ್‌ಸಲಾವುದ್ದೀನ್‌, ಪಿ.ದಯಾನಂದ ಪೈ ಮತ್ತು ಪಿ.ಸತೀಶ್‌ಪೈ ಅವರನ್ನು ಹೆಸರಿಸಲಾಗಿತ್ತು.

ಕೆಐಎಡಿಬಿ, ಭೂಸ್ವಾಧೀನಕ್ಕೆ ಕ್ರಮವಾಗಿ 2002 ಮತ್ತು 2004 ರಲ್ಲಿ ಪ್ರಾಥಮಿಕ ಹಾಗೂ ಅಂತಿಮ ಅಧಿಸೂಚನೆ ಹೊರಡಿಸಿತ್ತು. 2002 – 2004 ರಲ್ಲಿ ಹೆಬ್ಬಾಳ ಮತ್ತು ಹೆಬ್ಬಾಳ ಅಮಾನಿಕೆರೆ ಗ್ರಾಮಗಳಲ್ಲಿ 55 ಎಕರೆ ಜಮೀನು ಸ್ವಾಧೀನ ಪಡಿಸಿತ್ತು.  2023 ರಲ್ಲಿ ಪಟ್ಟಣ ಮತ್ತು ಇತರ ಯೋಜನೆಗಳಿಗೆ ಭೂಬಳಕೆಯನ್ನು ಪರಿವರ್ತಿಸಲು ಅನುಮತಿ ನೀಡಲಾಗಿತ್ತು.

Related Posts

Leave a Reply

Your email address will not be published. Required fields are marked *