Menu

ಜನಗಣತಿ ಆಶಯ ಜನತೆಗೂ ತಿಳಿಯಲಿ

ಜನಗಣತಿಗೆ ಸರ್ಕಾರಗಳಿಂದು ಸಮೂಹ ಮಾಧ್ಯಮ ಮತ್ತು ಸಮೂಹ ಸಾರಿಗೆಯಲ್ಲದೆ ಸ್ವಯಂ ಸೇವಾ ಸಂಸ್ಥೆಗಳ ನೆರವು ಪಡೆಯುವ ಅಗತ್ಯವಿದೆ. ರಾಜ್ಯದ ಭವಿಷ್ಯಕ್ಕೆ ಬುನಾದಿ ಆಗಿರುವ ಈ ಪ್ರಕ್ರಿಯೆಗೆ ಆಧುನಿಕ ತಂತ್ರಜ್ಞಾನದ ಬಳಕೆಯೂ ಅಗತ್ಯ.

ಕರ್ನಾಟಕವೂ ಸೇರಿದಂತೆ ದೇಶದ ಏಳು ರಾಜ್ಯಗಳಲ್ಲಿ ಜನಗಣತಿ ಬುಧವಾರದಿಂದ ಆರಂಭವಾಗುತ್ತಿದೆ. ಈ ಸಂಬಂಧ ಕೇಂದ್ರ ಜನಗಣತಿ ಆಯುಕ್ತರು ಅಧಿಕೃತ ಪ್ರಕಟಣೆ ನೀಡಿರುವುದು ಗಮನಾರ್ಹ. ಜನ ಗಣತಿ ಎಂಬುದು ದೇಶದ ಪ್ರಸಕ್ತ ಜನಸಂಖ್ಯೆಯ ಒಂದು ಮಾಹಿತಿ. ಇದು ಲೆಕ್ಕವೂ ಹೌದು. ಈ ಪ್ರಕ್ರಿಯೆ ಅತಿ ಮುಖ್ಯ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಅತ್ಯಗತ್ಯವಾದ ಮಹತ್ತರ ಅಂಶ. ಈ ದೇಶದ ಭವಿಷ್ಯ ಅಡಗಿರುವುದೂ ಈ ಜನಗಣತಿಯಲ್ಲಿಯೇ. ಅಲ್ಲದೆ ಪ್ರಜಾಪ್ರತಿನಿಧಿಗಳ ಭವಿಷ್ಯವಲ್ಲದೆ ದೇಶದ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಯೋಜನೆಗಳ ನೀಲನಕ್ಷೆ ರೂಪುರೇಷೆಗಳಿಗೆ ಇದುವೇ ಒಂದು ಪ್ರಮುಖ ಸರ್ಕಾರಿ ದಾಖಲೆ.

ಗ್ರಾಮೀಣ ಮತ್ತು ಪಟ್ಟಣಗಳಲ್ಲಿ ಜನಗಣತಿ ಇಂದು, ಸರ್ಕಾರ ವಿಧಿಸಿರುವ ಮಾನದಂಡಗಳ ಅನುಸಾರ ಮುಂದುವರಿಯಬೇಕಾಗುತ್ತೆ . ಈ ಪ್ರಕ್ರಿಯೆಯಲ್ಲಿ ತೊಡಗುವ ಸಿಬ್ಬಂದಿಗೆ ಹಲವು ಹತ್ತು ವಾಸ್ತವಿಕ ಸವಾಲುಗಳು ಎದುರಾಗುವುದು ಖಂಡಿತ, ಅದರಲ್ಲಿಯೂ ಮುಖ್ಯವಾಗಿ ಪಟ್ಟಣ ಪ್ರದೇಶಗಳಲ್ಲಿ ಜನಗಣತಿಗೆ ದೊಡ್ಡ ಸವಾಲು ಇದೆ. ಮಾಮೂಲಿ ದಿನಗಳಲ್ಲಿ ಮನೆಗಳಲ್ಲಿ ಜನ ಲಭ್ಯ ಅತಿಕಷ್ಟ. ಬೆಂಗಳೂರಿನಂತಹ ಮಹಾನಗರದಲ್ಲಿ ಈ ಜನಗಣತಿ ಕರಾರುವಾಕ್ ಆಗಿ ನಡೆಸಲು ಸರ್ಕಾರಗಳ ಬಳಿ ಇರುವ ಮೆಕಾನಿಸಂ ಏನು ?

ಗಣತಿಯ ಕಾರ್ಯಕ್ಕೆ ದೇಶದ ಎಲ್ಲ ಜನತೆ ಸಹಕರಿಸುವುದು ಅಗತ್ಯ. ಇದು ಅನಿವಾರ್ಯ ಕೂಡಾ. ಪ್ರಸಕ್ತ ಕರ್ನಾಟಕದಲ್ಲಿ ಇದು ಆರಂಭವಾಗಲಿದ್ದು , ಕ್ರಮೇಣ ಬೇರೆ ರಾಜ್ಯಗಳಲ್ಲಿಯೂ ಗಣತಿ ಮುಂದುವರಿಯಲಿದೆ. ಜನಗಣತಿಯು ಜನವಸತಿ ಮತ್ತು ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳ ಪ್ರತೀಕ. ಸಹಜವಾಗಿ ಇಂತಹ ಗಣತಿ ನಡೆಯುವ ಸಮಯದಲ್ಲಿ ಕೆಲವರು ವಾಸ್ತವಿಕ ಸಂಗತಿಗಳನ್ನು ಮರೆಮಾಚುತ್ತಾರೆ. ಸರ್ಕಾರಗಳಿಗೆ ತಾವು ತಮ್ಮ ಕುಟುಂಬದ ಬಗ್ಗೆ ಎಲ್ಲವನ್ನೂ ಸರಿಯಾಗಿ ತಿಳಿಸಿಬಿಟ್ಟರೆ ಮುಂದೆ ತಮಗೆ ಹಲವು ವಿಧಗಳಲ್ಲಿ ತೊಂದರೆಯಾಗಬಹುದು ಎಂಬ ಭಯ ಮತ್ತು ಆತಂಕವೂ ಜನತೆಯ ಮನದಲ್ಲಿದೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಜನತೆಗೆ ಪೂರ್ವಭಾವಿಯಾಗಿ ಸರಿಯಾದ ಮಾಹಿತಿಯನ್ನು ನೀಡುವ ಅವಶ್ಯಕವಿದೆ. ಜನಗಣತಿ ಅಥವಾ ಜಾತಿ ಮತ್ತು ಸಮುದಾಯಗಳ ಸಮೀಕ್ಷೆ ವಿಚಾರದಲ್ಲಿ ಜನತೆ ಕೂಡಾ ಮಾಹಿತಿ ನೀಡುವ ಸಮಯದಲ್ಲಿ ಪಾರದರ್ಶಕತೆ ಮತ್ತು ಪ್ರಾಮಾಣಿಕವಾಗಿರಬೇಕು. ಸರ್ಕಾರ ಕೂಡಾ.

ದೇಶದ ಬಹುತೇಕ ಮಂದಿಗೆ ಇದರ ಉದ್ದೇಶ ಮತ್ತು ಪ್ರಯೋಜನಗಳ ಬಗ್ಗೆ ಸರಿಯಾದ ತಿಳಿವಳಿಕೆಯನ್ನು ಹೊಂದಿಲ್ಲ. ವಿದ್ಯಾವಂತರು ಮತ್ತು ಸುಶಿಕ್ಷಿತರು ವಾಸಿಸುವಂತಹ ಮಹಾನಗರಗಳ ನಾಗರಿಕ ಬಡಾವಣೆಗಳಲ್ಲಿ ವಾಸವಾಗಿರುವ ಮಂದಿಗೇ ಇಂದು ಜನಗಣತಿಯ ಮಹತ್ವ ಮತ್ತದರ ಉಪಯೋಗ ಏನೆಂಬುದು ಗೊತ್ತಿಲ್ಲ. ಜನಗಣತಿ ಸಂಪೂರ್ಣವಾಗಿ ಯಶಸ್ಸು ಕಾಣಲು, ಸರ್ಕಾರಗಳಿಂದು ಸಮೂಹ ಮಾಧ್ಯಮ ಮತ್ತು ಸಮೂಹ ಸಾರಿಗೆಯಲ್ಲದೆ ಸ್ವಯಂ ಸೇವಾ ಸಂಸ್ಥೆಗಳ ನೆರವು ಪಡೆಯುವ ಅಗತ್ಯವಿದೆ. ರಾಜ್ಯದ ಭವಿಷ್ಯಕ್ಕೆ ಬುನಾದಿಯೂ ಆಗಿರುವ ಈ ಪ್ರಕ್ರಿಯೆಗೆ ಆಧುನಿಕ ತಂತ್ರಜ್ಞಾನದ ಬಳಕೆಯೂ ಅಗತ್ಯ ಈ ವಿಚಾರದಲ್ಲಿ ಯಾವುದೇ ಬಗೆಯ ಪಕ್ಷ ರಾಜಕೀಯ ಸಲ್ಲದು.

Related Posts

Leave a Reply

Your email address will not be published. Required fields are marked *