ರಾಜ್ಯ ಸರ್ಕಾರ ಸಚಿವ ಸಂಪುಟ ರಚನೆ ಮಾಡಿದರೆ ಈ ಬಾರಿ ನನ್ನನ್ನು ಗಮನದಲ್ಲಿ ಇಟ್ಟುಕೊಳ್ಳುತ್ತಾರೆ, ಸಚಿವ ಸ್ಥಾನದ ಆಕಾಂಕ್ಷಿ ನಾನು ಇದ್ದೇನೆ. ಕೊಡುವ ನಿರೀಕ್ಷೆಯ ಗ್ಯಾರಂಟಿಯಲ್ಲಿ ಇದ್ದೇನೆ ಎಂದು ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.
ಸಿಂಧನೂರು ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಮಾತನಾಡಿ ಜಿಲ್ಲೆಯ ಹಿರಿಯ ಶಾಸಕರನ್ನು ಈ ಬಾರಿ ಸಚಿವ ಸಂಪುಟಕ್ಕೆ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿಕೊಂಡಿದ್ದೇವೆ ಮತ್ತು ರಾಜ್ಯ ನಾಯಕರ ಮತ್ತು ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಿದ್ದೇವೆ ಈ ಬಾರಿ ಸಂಪುಟ ವಿಸ್ತರಣೆ ಮಾಡಿದರೆ ನಿಮಗೆ ಸಚಿವ ಸ್ಥಾನ ನೀಡುತ್ತೇವೆ ಎಂದು ಭರವಸೆ ನೀಡಿದ್ದಾರೆ, ಒಂದು ವೇಳೆ ಸಚಿವ ಸಂಪುಟ ನಡೆದರೆ ನನಗೆ ಹಣ್ಣು ಸಿಗುವ ಆಸೆಯಲ್ಲಿ ಇದ್ದೇವೆ, ಹಿರಿಯ ಶಾಸಕರನ್ನು ಪರಿಗಣಿಸುವ ಕೆಲಸ ಕಾಂಗ್ರೆಸ್ ಸರ್ಕಾರದಲ್ಲಿ ಆಗುತ್ತದೆ ಎಂದರು.
ಏಪ್ರಿಲ್ 11ರಂದು ದೆಹಲಿ ಚಲೋ : 20 ಹಿರಿಯ ಶಾಸಕರನ್ನು ಸಚಿವ ಸಂಪುಟಕೆ ತೆಗೆದುಕೊಳ್ಳಬೇಕು ಎಂದು ಈಗಾಗಲೇ ಮನವಿ ಸಲ್ಲಿಸಿದ್ದೇವೆ, ಮತ್ತೊಂದು ಬಾರಿ ಮುಂದಿನ ತಿಂಗಳು ಏ.11ರಂದು ಎಲ್ಲಾ ಶಾಸಕರು ದೆಹಲಿ ತರಳಿ ಅಲ್ಲಿಯ ರಾಷ್ಟ್ರೀಯ ನಾಯಕರ ಜೊತೆಗೆ ಚರ್ಚೆ ನಡೆಸಿ ಮನವಿ ಮಾಡಿಕೊಳ್ಳುತ್ತೇವೆ ಎಂದು ಹೇಳಿದರು.
ಸಂಸದ ಹಿಟ್ನಾಳ್ ಸಹಕಾರ ನೀಡುತ್ತಿದ್ದಾರೆ : ಕೊಪ್ಪಳ ಸಂಸದರು ಕ್ಷೇತ್ರದಿಂದ ದೂರ ಇದ್ದರೆ ಎಂಬ ಕೇಳಿದ ಪ್ರಶ್ನೆಗೆ ಶಾಸಕರು ಮಾತನಾಡಿ ಕೊಪ್ಪಳ ಸಂಸದ ರಾಜಶೇಖರ ಹಿಟ್ಟಾಳ್ ಅನೇಕ ಅಭಿವೃದ್ಧಿ ಕಾರ್ಯಗಳು ಮಾಡಿದ್ದಾರೆ ಮತ್ತು ನಮ್ಮ ಕ್ಷೇತ್ರಕ್ಕೆ ಒಳ್ಳೆಯ ರೀತಿಯ ಸಹಕಾರ ನೀಡುತ್ತಿದ್ದಾರೆ, ಕೇಂದ್ರ ಸರ್ಕಾರದಿಂದ ಬರುವ ಯೋಜನೆಗಳು ಜಾರಿಗೆ ತರುವ ಕೆಲಸ ಮಾಡುತ್ತಿದ್ದಾರೆ, ವೈಯಕ್ತಿಕ ಏನಾದರೂ ವಿಷಯಗಳು ಇದ್ದರೆ ಅದು ಅವರ ಬಳಿ ಕೇಳಬಹುದು ಎಂದರು.


