Menu

ಗರ್ಭಿಣಿ ಫೋಟೊ ಶೂಟ್ ವೇಳೆ ಮೊದಲ ಮಗು ನೀರಿಗೆ ಬಿದ್ದು ಸಾವು

ನೆಲಮಂಗಲ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿ ಗಿಡ್ಡೆನಹಳ್ಳಿಯಲ್ಲಿ ಗರ್ಭಿಣಿ ಫೋಟೊ ಶೂಟ್ ವೇಳೆ ಆಟವಾಡುತ್ತಿದ್ದ ಮೂರು ವರ್ಷವಾಗಿದ್ದ ಮೊದಲ ಮಗು ನೀರಿನ ತೊಟ್ಟಿಗೆ ಬಿದ್ದು ಮೃತಪಟ್ಟಿದೆ.

ಎಂಟು ತಿಂಗಳ ಗರ್ಭಿಣಿಯ ಫೋಟೋ ಶೂಟ್ ಮಾಡಿಸಲು ದಂಪತಿ ತೆರಳಿದ್ದರು. ಈ ವೇಳೆ ಆಟವಾಡುತ್ತಿದ್ದ ಮಗು ನೀರಿನ ತೊಟ್ಟಿಗೆ ಬಿದ್ದು ಅಸು ನೀಗಿದೆ. ಮಾದನಾಯಕನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಮಗುವಿನ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ನೆಲಮಂಗಲ ಸರ್ಕಾರಿ ಆಸ್ಪತ್ರಗೆ ಕಳಿಸಲಾಗಿದೆ.

ಅಪಘಾತಕ್ಕೆ ಬೆಂಗಳೂರಿನ ಟೆಕ್ಕಿ ಬಲಿ

ಸರಕು ಸಾಗಾಣಿಕಾ ಕಂಟೇನರ್ ಲಾರಿಯೊಂದು ಅಪಘಾತ ತಪ್ಪಿಸಲು ಹೋಗಿ ಕಾರಿನ ಮೇಲೆ ಬಿದ್ದಿದ್ದು, ಕಾರಿನಲ್ಲಿದ್ದ ಬೆಂಗಳೂರು ಮೂಲದ ಟೆಕ್ಕಿ ಭೀಕರ ಸಾವನ್ನಪ್ಪಿದ್ದಾರೆ.

ಆಂಧ್ರ ಪ್ರದೇಶದ ಚಿತ್ತೂರು-ಬೆಂಗಳೂರಿನಲ್ಲಿ ಹೈವೇಯಲ್ಲಿ ಸರಕು ಸಾಗಾಣಿಕಾ ಕಂಟೇನರ್ ಲಾರಿಯೊಂದು ಅಪಘಾತ ತಪ್ಪಿಸಲು ಹೋಗಿ ಕಾರಿನ ಮೇಲೆ ಬಿದ್ದಿದ್ದು, ಕಾರಿನಲ್ಲಿದ್ದ ಬೆಂಗಳೂರು ಮೂಲದ ಟೆಕ್ಕಿ ಪ್ರಾಣ ಕಳೆದುಕೊಂಡಿದ್ದಾರೆ.

ಕಾರಿನ ಮೇಲೆ ಕಂಟೇನರ್ ಲಾರಿ ಮಗುಚಿ ಬಿದ್ದು ಕಾರು ಅಪ್ಪಚ್ಚಿಯಾಗಿ ಒಳಗಿದ್ದ ಟೆಕ್ಕಿ ಅಸು ನೀಗಿದ್ದು, ಅವರನ್ನು 28 ವರ್ಷದ ವಿಪ್ರೋ ಸಿಬ್ಬಂದಿ ಅನುದೀಪಕ್ ಎಂದು ಗುರುತಿಸಲಾಗಿದೆ. ಚಿತ್ತೂರಿನ ಗುಡಿಪಾಲ ಮಂಡಲದ ರಾಮಪುರಂ ಗ್ರಾಮದ ನಿವಾಸಿ ಅನುದೀಪಕ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಮತ್ತೊಂದು ಮಾರ್ಗದಲ್ಲಿ ಬರುತ್ತಿದ್ದ ಕಂಟೇನರ್ ಲಾರಿಗೆ ಸರ್ಕಲ್ ನಲ್ಲಿ ಬೈಕ್​ ಅಡ್ಡಬಂದಿದೆ. ಚಾಲಕ ಬೈಕ್‌ಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಬಲಕ್ಕೆ ತಿರುಗಿಸಿದ್ದಾನೆ. ಲಾರಿ ನಿಯಂತ್ರಣ ತಪ್ಪಿ ಮಗುಚಿದೆ. ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.

Related Posts

Leave a Reply

Your email address will not be published. Required fields are marked *