Menu

Union Budget 2026-27: ಮೂರು ಬಯೋಫಾರ್ಮಾ ಕಾಲೇಜು, ಭಾರತ ಬಯೋಫಾರ್ಮಾ ಹಬ್‌ ಘೋಷಣೆ, 10,000 ಕೋಟಿ ರೂ. ಮೀಸಲು

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು 2026-27 ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ  ಮೂರು ಬಯೋಫಾರ್ಮಾ ಕಾಲೇಜು ಘೋಷಣೆ ಮಾಡಿದ್ದು, ಮುಂದಿನ ಐದು ವರ್ಷದಲ್ಲಿ ಭಾರತ ಬಯೋಫಾರ್ಮಾ ಹಬ್‌ ಆಗಲಿದೆ ಎಂದು ಪ್ರಕಟಿಸಿದ್ದಾರೆ. ಈ ಯೋಜನೆಗಾಗಿ ಐದು ವರ್ಷಗಳ ಅವಧಿಗೆ 10,000 ಕೋಟಿ ರೂ. ಅನುದಾನವನ್ನು ಸರ್ಕಾರ ಮೀಸಲಿಟ್ಟಿದೆ ಎಂದು ತಿಳಿಸಿದ್ದಾರೆ.

ಈ ವರ್ಷ ಚುನಾವಣೆ ಎದುರಿಸಲಿರುವ ಕೇರಳ, ತಮಿಳುನಾಡು ಮತ್ತು ಒಡಿಶಾ ಹಾಗೂ ಆಂಧ್ರ ಪ್ರದೇಶಗಳಿಗೆ ಕೇಂದ್ರ ಬಜೆಟ್‌ನಲ್ಲಿ ಅರ್ಥ್‌ ಮಿನರಲ್‌ ಕಾರಿಡಾರ್‌ ಘೋಷಣೆ ಜೊತೆಗೆ ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡಲು ಕ್ರಮ ಕೈಗೊಳ್ಳಲಾಗಿದೆ.

ಭಾರತ ಸೆಮಿಕಂಡಕ್ಟರ್‌ ೨.೦ ಆರಂಭ ಘೋಷಣೆ ಮಾಡಲಾಗಿದ್ದು, ತಂತ್ರಜ್ಞಾನ ಹಾಗೂ ನುರಿತ ಕಾರ್ಯಪಡೆಯನ್ನು ಅಭಿವೃದ್ಧಿಪಡಿಸಲು ಉದ್ಯಮ-ನೇತೃತ್ವದ ಸಂಶೋಧನೆ ಮತ್ತು ತರಬೇತಿ ಕೇಂದ್ರಗಳ ಮೇಲೆ ಕೇಂದ್ರೀಕರಿಸುತ್ತೇವೆ ಎಂದು ಸಚಿವೆ ಹೇಳಿದ್ದಾರೆ.

ಸಣ್ಣ ಮತ್ತು  ಮಧ್ಯಮ  ಕೈಗಾರಿಕೆಗಳಿಗೆ ಬೂಸ್ಟ್‌ ನೀಡಿದ್ದು, ಹಣಕಾಸು ಹಂಚಿಕೆಗೆ ಕ್ರೆಕ್ರೆಡಿಟ್‌ ಗ್ಯಾರಂಟಿ ಯೋಜನೆ ಘೋಷಿಸಲಾಗಿದ್ದು, ಎರಡನೇ ಹಾಗೂ ಮೂರನೇ ಹಂತದ ನಗರಗಳ ಅಭಿವೃದ್ಧಿಗೆ ಒತ್ತು ನೀಡಲಾಗುವುದು. ಮೂರು ಹೊಸ ಅಖಿಲ ಭಾರತ ಆಯುರ್ವೇದ ಸಂಸ್ಥೆಗಳ ಸ್ಥಾಪನೆ ಎಂದು ಬಜೆಟ್‌ನಲ್ಲಿ ಘೋಷಿಸಲಾಗಿದೆ.

ದೇಶಾದ್ಯಂತ ಇರುವ 2000 ಹಳೆಯ ಕೈಗಾರಿಕಾ ಕ್ಲಸ್ಟರ್‌ಗಳನ್ನು ಆಧುನೀಕರಿಸಲು ಮತ್ತು ಅವುಗಳಿಗೆ ಮರುಜೀವ ನೀಡಲು ನಿರ್ಧಾರ ಪ್ರಕಟಿಸಲಾಗಿದೆ. ಸಣ್ಣ ಉದ್ಯಮಗಳ ವಿಸ್ತರಣೆ ಮತ್ತು ಅಭಿವೃದ್ಧಿಗಾಗಿ 10,000 ಕೋಟಿ ರೂಪಾಯಿಗಳ ನಿಧಿಗೆ ಬಜೆಟ್‌ ಪ್ರಸ್ತಾವನೆ ಇದೆ.  ಸಂಸತ್‌ನಲ್ಲಿ ಒಂಬತ್ತನೇ ಬಜೆಟ್‌ ಮಂಡಿಸುತ್ತಿರುವ ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮನ್‌ ಇದೊಂದು ಆತ್ಮ ನಿರ್ಭರತೆಯ ಬಜೆಟ್‌, ಬಜೆಟ್‌ನ ಗಾತ್ರ ಅಂದಾಜು 11 ಲಕ್ಷ ಕೋಟಿ ಎಂದು ತಿಳಿಸಿದ್ದಾರೆ.

 

 

 

 

Related Posts

Leave a Reply

Your email address will not be published. Required fields are marked *