Friday, September 11, 2026
Menu

ತುಂಗಭದ್ರಾ ಕಲುಷಿತ: ನೀರು ಸೇವಿಸದಂತೆ ಗ್ರಾಮಗಳಲ್ಲಿ ಜಿಲ್ಲಾಡಳಿತ ಡಂಗೂರ

ಸರ್ಕಾರಿ ಇಲಾಖೆಗಳು ನೀಡಿರುವ ವರದಿಗಳ ಪ್ರಕಾರ ಆರು ಜಿಲ್ಲೆಯ ಜನರ ಪಾಲಿನ ಜೀವ ನದಿ ತುಂಗಭದ್ರಾ ನೀರು ಈಗ ಕುಡಿಯಲು ಯೋಗ್ಯ ಇಲ್ಲ. ನದಿ ತೀರದ ಗ್ರಾಮಗಳ ಮೇಲೆ ಆರೋಗ್ಯ ಇಲಾಖೆ ನಿಗಾ ವಹಿಸಿದೆ.

ಇಲಾಖೆಗಳ ವರದಿ ಬಳಿಕ ಗದಗ ಜಿಲ್ಲಾಡಳಿತ ತುಂಗಭದ್ರಾ ನದಿಯಿಂದ ನೇರವಾಗಿ ಗ್ರಾಮಗಳಿಗೆ ನೀರು ಸರಬರಾಜು ಮಾಡದಂತೆ ಸೂಚನೆ ನೀಡಿದೆ. ಜನ ಹಾಗೂ ಜಾನುವಾರುಗಳಿಗೆ ನೀರು ಸೇವನೆ ಮಾಡದಂತೆ ನದಿ ವ್ಯಾಪ್ತಿಯ ಗ್ರಾಮಗಳಲ್ಲಿ ಡಂಗೂರ ಮೂಲಕ ಗ್ರಾಮಸ್ಥರಿಗೆ ಕಟ್ಟುನಿಟ್ಟಿನ ಆದೇಶ ನೀಡಿದೆ.

ನದಿ ನೀರು ಹಸಿರಾಗಿದೆ. ಈ ಸ್ಥಿತಿಗೆ ಗಂಗಾಪುರ ಗ್ರಾಮದ ಬಳಿಯ ಸಕ್ಕರೆ ಕಾರ್ಖಾನೆ ಕಾರಣ ಎಂಬ ಅನುಮಾನವಿದೆ ಎಂದು ಎಸಿ ಹೇಳಿದ್ದಾರೆ. ಧಾರವಾಡ ಜಿಲ್ಲೆಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳ ತಂಡ ನದಿ ತೀರದ ಗ್ರಾಮಗಳಿಗೆ ಭೇಟಿ ನೀಡಿ ನೀರು ಪರಿಶೀಲನೆ ಮಾಡಿದೆ. ಹೀಗಾಗಿ ಸಕ್ಕರೆ ಕಾರ್ಖಾನೆ ತ್ಯಾಜ್ಯವನ್ನು ಅಧಿಕಾರಿಗಳು ತಪಾಸಣೆಗೆ ಕಳುಹಿಸಿದ್ದಾರೆ. ವರದಿಯಲ್ಲಿ ಸಕ್ಕರೆ ಕಾರ್ಖಾನೆಯ ತಪ್ಪು ಕಂಡು ಬಂದಲ್ಲಿ ಕ್ರಮ ಕೈಗೊಳ್ಳುವುದಾಗಿ ಎಸಿ ಗಂಗಪ್ಪ ಹೇಳಿದ್ದಾರೆ.

15 ದಿನಗಳಿಂದ ಹಸಿರು ಬಣ್ಣಕ್ಕೆ ತಿರುಗಿದ ನದಿ ನೀರು ಕುಡಿದ ಜನರು ಹೊಟ್ಟೆ ನೋಡು, ವಾಂತಿ, ಜ್ವರದಿಂದ ಬಳಲುತ್ತಿದ್ದಾರೆ. ಜಿಲ್ಲಾಡಳಿತ ನದಿ ನೀರು ಪರೀಕ್ಷೆಗೆ ಕಳುಹಿಸಿಕೊಟ್ಟಿತ್ತು. ಇಲಾಖೆಗಳು ವರದಿ ನೀಡಿದ್ದು, ತುಂಗಭದ್ರಾ ನದಿ ನೀರು ಕುಡಿಯಲು ಯೋಗ್ಯವಿಲ್ಲ ಎಂದು ಹೇಳಿವೆ.

Related Posts

Leave a Reply

Your email address will not be published. Required fields are marked *