Menu

ಗೆಳತಿಯ ಕೊಂದು ಆತ್ಮಹತ್ಯೆ ಮಾಡಿಕೊಂಡ ಯುವಕ

ಯುವಕನೊಬ್ಬ ಸಣ್ಣ ಜಗಳಕ್ಕೆ ಗೆಳತಿಯನ್ನು ಕೊಲೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪುಣೆಯಲ್ಲಿ ನಡೆದಿದೆ. 20 ವರ್ಷದ ದಿವ್ಯಾ ನಿಗೋಟ್ ಕೊಲೆಯಾದ ಯುವತಿ. ಬೀಡ್ ಜಿಲ್ಲೆಯ 21 ವರ್ಷದ ಗಣೇಶ್ ಕೇಲ್ ಕೊಲೆಗೈದ ಬಳಿಕ ಆತ್ಮಹತ್ಯೆ ಮಾಡಿಕೊಂಡಾತ.

ಇಬ್ಬರೂ ಪುಣೆಯ ರೂಬಿ ಹಾಲ್ ಕ್ಲಿನಿಕ್‌ನಲ್ಲಿ ಕೆಲಸ ಮಾಡುತ್ತಿದ್ದರು. ಯುವಕ ಟೆಕ್ನಿಷಿಯನ್ ಆಗಿದ್ದ, ಯುವತಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದಳು. ದಿವ್ಯಾ ಕುಟುಂಬವು ನಾಪತ್ತೆ ದೂರು ದಾಖಲಿ ಸಿತ್ತು. ಪೊಲೀಸರು ಶೋಧ ನಡೆಸಿದಾಗ ಸಂಗಮವಾಡಿ ಪ್ರದೇಶದ ವ್ಯಕ್ತಿಯ ಮನೆಯಲ್ಲಿ ದಿವ್ಯಾ ಮೃತದೇಹ ಪತ್ತೆಯಾಗಿದೆ. ತಲೆಗಾಂವ್ ರೈಲ್ವೆ ಹಳಿಯ ಬಳಿ ಯುವಕನ ಮೃತದೇಹ ಪತ್ತೆ ಯಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: ಉಪನ್ಯಾಸಕನ ಬಂಧನ

ಎರಡು ವರ್ಷಗಳಿಂದ ವಿದ್ಯಾರ್ಥಿನಿ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿದ ಆರೋಪದಡಿ ಬೆಳಗಾವಿಯ ಖಾಸಗಿ ಕಾಲೇಜಿನ ಉಪನ್ಯಾಸಕ ನಾಗೇಶ್ವರ ಎಂಬಾತನನ್ನು ಪೊಲೀಸರು ಅರೆಸ್ಟ್‌ ಮಾಡಿ ಕ್ಯಾಂಪ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಿಸಿದ್ದಾರೆ.

ಗೇಶ್ವರ್ ವಿದ್ಯಾರ್ಥಿನಿ ಮೇಲೆ ಎರಡು ವರ್ಷಗಳಿಂದಅತ್ಯಾಚಾರ ಎಸಗುತ್ತಿದ್ದನು. ಈ ವಿಚಾರ ಯಾರಿಗಾದರೂ ಹೇಳಿದರೆ ಕೊಲೆ ಮಾಡುವ ಬೆದರಿಕೆ ಹಾಕಿದ್ದನು. ನಾನು ಕರೆದಾಗ ಬರಬೇಕು. ಲಿವ್ ಇನ್ ರಿಲೇಶನ್ ಶಿಪ್ ಇಟ್ಟುಕೊಳ್ಳುವಂತೆ ಒತ್ತಾಯಿಸುತ್ತಿದ್ದನು. ವಿದ್ಯಾರ್ಥಿನಿಯನ್ನು ಲೈಂಗಿಕವಾಗಿ ಬಳಸಿಕೊಳ್ಳುವ ಸಲುವಾಗಿ ಬಾಡಿಗೆ ಮನೆಯೊಂದನ್ನು ಮಾಡಿಕೊಂಡಿದ್ದನು ಎಂದು ಸಂತ್ರಸ್ತ ಬಾಲಕಿ ಪೋಷಕರ ಬಳಿ ಹೇಳಿಕೊಂಡಿದ್ದಳು.

Related Posts

Leave a Reply

Your email address will not be published. Required fields are marked *