ಬೆಂಗಳೂರು: ಮನೆಯೊಂದರ ನಾಲ್ಕನೇ ಮಹಡಿಯಿಂದ ಬಿದ್ದು ಯುವಕನೊಬ್ಬ ಮೃತಪಟ್ಟಿರುವ ಘಟನೆ ಕೆಜಿ ಹಳ್ಳಿಯಲ್ಲಿ ಬುಧವಾರ ಸಂಜೆ ನಡೆದಿದೆ.
ಕೆಜಿ ಹಳ್ಳಿಯ ಮುಸ್ಲಿಂ ಕಾಲೋನಿಯ ಅಹಮದ್ (25) ಮೃತಪಟ್ಟವರು, ಸಂಜೆ 4.30 ರ ಸುಮಾರಿಗೆ ಈತ ಬಿಎಂ ಲೇಔಟ್‌ನ ಮನೆಯೊಂದಕ್ಕೆ ಹೋಗಿದ್ದು, ನಾಲ್ಕನೇ ಮಹಡಿಯ ಟೆರೇಸ್‌ನಿಂದ ಬಿದ್ದು ಗಾಯಗೊಂಡಿದ್ದನು.ತಕ್ಷಣ ಆತನನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ.
ಯಾವ ಕಾರಣಕ್ಕೆ ಬಿಎಂ ಲೇಔಟ್‌ನ ಆ ಮನೆಗೆ ಹೋಗಿದ್ದನು, ಟೆರೇಸ್‌ನಿಂದ ಆಯತಪ್ಪಿ ಬಿದ್ದಿದ್ದಾನೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಪ್ರಯಾಣಿಕರ ದಟ್ಟಣೆ:
ದೀಪಾವಳಿ ಹಬ್ಬದ ಸಾಲುಸಾಲು ರಜೆ ಮುಗಿಸಿಕೊಂಡು ಮುಗಿಸಿಕೊಂಡು ನಗರಕ್ಕೆ ಸಾವಿರಾರು ಮಂದಿ ನಗರಕ್ಕೆ ವಾಪಸಾದ ಹಿನ್ನೆಲೆಯಲ್ಲಿ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಗುರುವಾರ ಪ್ರಯಾಣಿಕರ ದಟ್ಟಣೆ ಉಂಟಾಗಿತ್ತು.
ದೀಪಾವಳಿಗೆ ಸಾಲುಸಾಲು ರಜೆ ಹಿನ್ನೆಲೆ ಕಳೆದ ಅ.19ರಂದು ಜನರು ತಮ್ಮತಮ್ಮ ಊರಿನತ್ತ ಹೊರಟಿದ್ದು,ಹಬ್ಬ ಮುಗಿಸಿ ಬೆಂಗಳೂರಿಗೆ ವಾಪಸಾಗಿದ್ದಾರೆ. ಈ ಹಿನ್ನೆಲೆ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ರಷ್ ಉಂಟಾಗಿದೆ.
ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ ಉಂಟಾಗಿದ್ದು, ಮೆಟ್ರೋಗಾಗಿ ಜನ ಕ್ಯೂ ನಿಂತಿದ್ದಾರೆ. ಮೆಟ್ರೋ ನಿಲ್ದಾಣ ಒಳ ಭಾಗದಲ್ಲೂ ಜನದಟ್ಟಣೆ ಉಂಟಾಗಿದೆ. ಇನ್ನು ಮೆಜೆಸ್ಟಿಕ್ ಮೆಟ್ರೋ ಪ್ರಯಾಣಿಕರಿಂದ ತುಂಬಿಕೊಂಡಿದೆ. ಮೆಟ್ರೋ ಒಳಭಾಗದಲ್ಲೂ ಪ್ರಯಾಣಿಕರ ದಟ್ಟಣೆ ಉಂಟಾಗಿದೆ.